ಇಲ್ಲಿರುವ ದೇವರು ಮಾನವ ದೇಹದ ದೇವರು..ಈ ವಿಗ್ರಹಕ್ಕೆ ಮನುಷ್ಯರಂತೆ ಚರ್ಮ ಮತ್ತು ಕೂದಲು ಇದೆಯಂತೆ ವಿಚಿತ್ರವಾದ್ರೂ ಸತ್ಯ !!!

21

ಇಂದಿನ ಮಾಹಿತಿಯಲ್ಲಿ ಒಂದು ಅತ್ಯಪೂರ್ವವಾದ ದೇವಾಲಯದ ಬಗ್ಗೆ ಅಚ್ಚರಿಕರವಾದ ವಿಚಾರಗಳನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ, ನಮ್ಮ ಪಕ್ಕದ ರಾಜ್ಯವಾದ ತೆಲಂಗಾಣದ ವಾರಂಗಲ್ ನಿಂದ ಸುಮಾರು ನೂರ ಮೂವತ್ತು ಕಿಲೋಮೀಟರ್ ದೂರದಲ್ಲಿರುವ, ಈ ದೇವಾಲಯದಲ್ಲಿ ಒಂದು ಅಚ್ಚರಿ ಈಗಲೂ ಕೂಡ ನಡೆಯುತ್ತಿದೆ.

ಈ ದೇವಾಲಯವನ್ನು ಕುರಿತು ಇನ್ನೂ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಸ್ಥಳ ಪುರಾಣಗಳನ್ನು ಕೂಡ ತಿಳಿಯೋಣ, ಕೆಳಗಿನ ಮಾಹಿತಿಯಲ್ಲಿ ಈ ದೇವಾಲಯವನ್ನು ಕುರಿತು ಹೆಚ್ಚಿನ ವಿವರಗಳನ್ನು ತಿಳಿದು ಪ್ರತಿಯೊಬ್ಬರಿಗೂ ಶೇರ್ ಮಾಡಿ.

ವಾರಂಗಲ್ ನಿಂದ ಸುಮಾರು ನೂರ ಮೂವತ್ತು ಕಿಲೋಮೀಟರ್ ದೂರದಲ್ಲಿರುವ, ಈ ದೇವಾಲಯವು ಮಾಲೂರಿನಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಬೆಟ್ಟದ ಮೇಲೆ ಈ ದೇವಾಲಯವಿದೆ ಇಲ್ಲಿ ನರಸಿಂಹಸ್ವಾಮಿಯ ಸ್ವಯಂಭೂವಾಗಿ ನೆಲೆಸಿದ್ದಾರೆ.

ಈ ದೇವಾಲಯದ ವಿಶೇಷದ ಬಗ್ಗೆ ಹೇಳಬೇಕೆಂದರೆ ಸಾಮಾನ್ಯವಾಗಿ ಪ್ರತಿ ದೇವಾಲಯದಲ್ಲಿಯೂ ನಾವು ಕಾಣುವ ವಿಗ್ರಹ ಮತ್ತು ದೇವಾಲಯದ ಮೂರ್ತಿಯನ್ನು ಸಾಲಿಗ್ರಾಮ ಶಿಲೆಯಿಂದ ಅಥವಾ ಪಂಚಲೋಹದಿಂದ ಮೂರ್ತಿಯನ್ನು ಮಾಡಿರುತ್ತಾರೆ.

ಆದರೆ ಇಲ್ಲಿಯ ನರಸಿಂಹ ಸ್ವಾಮಿಯ ಮೂರ್ತಿಯನ್ನು ಮುಟ್ಟಿದರೆ ಮನುಷ್ಯನ ತ್ವಚೆಯನ್ನು ಮುಟ್ಟಿದಷ್ಟು ಮೃದುವಾಗಿ ಅನುಭವವಾಗುತ್ತದೆ ಅಂತ ಮತ್ತು ಈ ಮೂರ್ತಿಗೆ ಅಭಿಷೇಕ ಮಾಡುವಂತಹ ಸಮಯದಲ್ಲಿ ಈ ಮೂರ್ತಿಯ ಕೂದಲು ಉದುರುವ ಅನುಭವವೂ ಕೂಡ ಆಗಿದೆಯಂತೆ.

ಒಮ್ಮೆ ಭಾರಧ್ವಾಜ್ ಮತ್ತು ಅಂಗೀರಸ ಮಹರ್ಷಿಗಳು ಹೋಗುವಾಗ ಈ ವಾರಂಗಲ್ ನಲ್ಲಿ ವಿಶ್ರಾಂತಿಗಾಗಿ ತಂಗಿದ್ದರಂತೆ ಆಗ ಇವರ ಕನಸಿಗೆ ನರಸಿಂಹಸ್ವಾಮಿ ಬಂದು ತಾನು ಇಲ್ಲಿ ನೆಲೆಸಿರುವುದಾಗಿ ಹೇಳಿ ಭೂಮಿಯೊಳಗಿನಿಂದ ತನ್ನ ವಿಗ್ರಹವನ್ನು ಆಚೆ ತೆಗೆಯಲು ಸೂಚನೆ ನೀಡುತ್ತಾರೆ .

ಆ ನಂತರ ಮಾರನೇ ದಿವಸ ಈ ಮಹರ್ಷಿಗಳು ಭೂಮಿಯೊಳಗಿನಿಂದ ಈ ದೇವರ ಮೂರ್ತಿಯನ್ನು ತೆಗೆಯುವಾಗ ದೇವರ ಮೂರ್ತಿಯ ನಾಭಿಗೆ ಪೆಟ್ಟು ಬಿದ್ದು ಆ ಮೂರ್ತಿಯಿಂದ ರಕ್ತಸ್ರಾವ ವಾಗುತ್ತಿದ್ದಂತೆ.

ಆಗ ಮಹರ್ಷಿಗಳು ಈ ಭಾಗಕ್ಕೆ ಗಂಧವನ್ನು ಹಚ್ಚಿ ರಕ್ತ ನಿಲ್ಲುವಂತೆ ಮಾಡಿದ್ದರಂತೆ. ಇಂದಿಗೂ ಕೂಡ ಈ ನಾಭಿಯಿಂದ ದ್ರವ ಬರುವುದನ್ನು ಗಮನಿಸಬಹುದಾಗಿದೆ ಈ ಭಾಗಕ್ಕೆ ಗಂಧವನ್ನು ಲೇಪಿಸುತ್ತಾರೆ ಮತ್ತು ಈ ಗಂಧವನ್ನೇ ಭಕ್ತಾದಿಗಳಿಗೆ ಪ್ರಸಾದವನ್ನಾಗಿ ನೀಡುತ್ತಾರಂತೆ.

ಸಂತಾನ ಸಮಸ್ಯೆಯಿಂದ ಬಳಲುತ್ತಿರುವವರು ಈ ದೇವಾಲಯಕ್ಕೆ ಭೇಟಿ ನೀಡಿ ದೇವರ ಆಶೀರ್ವಾದವನ್ನು ಪಡೆದು ಪ್ರಸಾದವನ್ನು ಸೇವಿಸುವುದರಿಂದ ಸಂತಾನ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆಯೂ ಕೂಡ ಇದೇ. ನರಸಿಂಹಸ್ವಾಮಿಯ ಪಾದದಿಂದ ನೀರಿನ ಬುಗ್ಗೆ ಹರಿಯುತ್ತದೆ.

ಈ ನೀರು ನದಿಯಾಗಿ ಚಿಂತಾಮಣಿಗೆ ಸೇರುತ್ತದೆ ಈ ನೀರಿನಲ್ಲಿ ಜನರು ಸ್ನಾನ ಮಾಡಿ ಪಾವನರಾಗುತ್ತಾರೆ ಮತ್ತು ಅನೇಕ ರೋಗವನ್ನು ನಿವಾರಿಸುವ ಶಕ್ತಿ ಈ ನೀರಿನಲ್ಲಿದೆ ಮತ್ತು ಜನರು ಈ ನೀರನ್ನು ಬಾಟಲ್ ನಲ್ಲಿ ಸಂಗ್ರಹಿಸಿ ಮನೆಗೆ ತೆಗೆದುಕೊಂಡು ಹೋಗಿ ಮನೆಗೆ ಹಾಕುತ್ತಾರೆ ಎಂಬ ನಂಬಿಕೆಯೂ ಕೂಡ ಇದೆ.

ಶ್ರೀ ನರಸಿಂಹ ಸ್ವಾಮಿಯ ಹಿರಣ್ಯಕಶಿಪುವನ್ನು ಸಂಹರಿಸಿದ ನಂತರ ಈ ಜಾಗಕ್ಕೆ ಬಂದು ಲಕ್ಷ್ಮೀದೇವಿಯನ್ನು ಮದುವೆಯಾದರೂ ಎಂಬ ನಂಬಿಕೆಗಳು ಕೂಡ ಇದೆ, ಸುಮಾರು ಒಂಬತ್ತು ಅಡಿ ಉದ್ದದ ನರಸಿಂಹ ಸ್ವಾಮಿ ಮೂರ್ತಿಯನ್ನು ಇಲ್ಲಿ ನಾವು ಕಾಣಬಹುದಾಗಿದೆ.

ಸಮುದ್ರ ಮಟ್ಟದಿಂದ ಈ ದೇವಾಲಯವೂ ಸಾವಿರದ ಐನೂರು ಅಡಿ ಮೇಲಿದೆ, ದಟ್ಟ ಅರಣ್ಯದ ನಡುವೆ ಇರುವ ಈ ದೇವಾಲಯವು ಪರಿಸರ ಪ್ರೇಮಿಗಳಿಗೆ ಬಹಳ ಇಷ್ಟ ಆಗುತ್ತದೆ ಮತ್ತು ಕಾಡಿನೊಳಗೆ ಇರುವ ಈ ದೇವಾಲಯದ ಬಳಿ ತಂಗಲು ವ್ಯವಸ್ಥೆ ಇರುವುದಿಲ್ಲ.

ದೇವಾಲಯಕ್ಕೆ ಬಂದ ಭಕ್ತಾದಿಗಳು ವಾರಂಗಲ್ ನಲ್ಲಿ ಉಳಿದುಕೊಂಡು ನಂತರ ಮಾರನೇ ದಿವಸ ದೇವಾಲಯಕ್ಕೆ, ಇಲ್ಲಿರುವ ಆಟೋ ಅಥವಾ ಬಸ್ ಗಳ ಸಹಾಯದಿಂದ ದೇವಾಲಯಕ್ಕೆ ಬಂದು ದೇವರ ದರ್ಶನವನ್ನು ಮಾಡಬಹುದಾಗಿದೆ.

LEAVE A REPLY

Please enter your comment!
Please enter your name here