Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ಇಲ್ಲಿರುವ ಈ ಕೊಳದಲ್ಲಿ ಎಲ್ಲ ಎಲೆಗಳು ತೇಲುತ್ತವೆ ಆದರೆ ಬಿಲ್ವಪತ್ರೆ ಎಲೆ ಮಾತ್ರ ಮುಳುಗುತ್ತದೆ .. ಈ ಕೊಳದ ನೀರಿನಿಂದ ಮೂತ್ರಪಿಂಡದಲ್ಲಿ ಆಗಿರುವ ಕಲ್ಲನ್ನು ಕರಗಿಸಬಹುದಂತೆ ಈ ಒಂದು ವಿಸ್ಮಯಕಾರಿ ದೇವಾಲಯ ಇರುವುದು ಎಲ್ಲಿ ಗೊತ್ತಾ !!

ಇವತ್ತಿನ ಮಾಹಿತಿಯಲ್ಲಿ ಒಂದು ವಿಸ್ಮಯಕಾರಿಯಾದ ತಾಣದ ಬಗ್ಗೆ ರಹಸ್ಯಮಯ ವಿಚಾರಗಳನ್ನು ತಿಳಿದುಕೊಳ್ಳುವುದರೊಂದಿಗೆ, ಈ ಒಂದು ತಾಣವನ್ನು ಕುರಿತು ಅನೇಕ ವಿಶೇಷ ಮಾಹಿತಿಗಳನ್ನು ಕೂಡ ತಿಳಿದುಕೊಳ್ಳೋಣ,ಅಷ್ಟಕ್ಕೂ ಈ ಒಂದು ತಾಣ ಇರುವುದಾದರು ಏಲ್ಲಿ ಅಂದರೆ ಶಿವಮೊಗ್ಗ ಜಿಲ್ಲೆಯ ಕೊಡಚಾದ್ರಿ ತಪ್ಪಲಿನಲ್ಲಿ. ಹೌದು ಮಲೆನಾಡ ಬೀಡು ಈ ನಾಡು, ಇಲ್ಲಿ ಹಲವಾರು ಪ್ರಕೃತಿಯ ಸುಂದರವಾದ ನೋಟವನ್ನು ಕಾಣಲು ಜನ ಬರುತ್ತಾರೆ .ಮತ್ತು ಅನೇಕ ವಿಸ್ಮಯಗಳನ್ನು ಕೂಡ ಇಲ್ಲಿ ಕಾಣುತ್ತಾರೆ ಅದನ್ನು ನಂಬದೆ ಇರುವವರು ವಿಜ್ಞಾನದ ಮೊರೆ ಹೋಗುತ್ತಾರೆ ಆದರೆ ಅವರಿಗೆ ಉತ್ತರವೇ ದೊರೆಯುವುದಿಲ್ಲ.

ಶಿವಮೊಗ್ಗ ಗೆ ಸೇರಿದ ಹೊಸನಗರ ತಾಲ್ಲೂಕಿನ ಗುಬ್ಬಿಗಾ ಗ್ರಾಮದ ವ್ಯಾಪ್ತಿಯಲ್ಲಿ ಇರುವ ಅಡಿಕೆ ತೋಟದಲ್ಲಿ ಈ ಒಂದು ಪ್ರಕೃತಿಯ ವಿಸ್ಮಯವೂ ಜರುಗುತ್ತಿದ್ದು ಇಲ್ಲಿ ಇಲ್ಲಿಯವರೆಗೂ ಅನೇಕ ಜನರು ಬಂದು ವೈಜ್ಞಾನಿಕ ಕಾರಣಗಳನ್ನು ಹುಡುಕಲು ಮುಂದಾಗಿದ್ದಾರೆ,ಆದರೆ ಈ ಸುಂದರವಾದ ಪ್ರಕೃತಿಯ ತಾಣದಲ್ಲಿ ಯಾವುದೇ ವೈಜ್ಞಾನಿಕ ಕಾರಣವೂ ದೊರೆತಿಲ್ಲ ಆದರೆ ಇಲ್ಲಿ ಇರುವ ಕೆಲವು ಕುಡಿಯುವ ನೀರಿಗಿಂತ ಪರಿಶುದ್ಧವಾಗಿದ್ದು ಅನೇಕ ಚರ್ಮರೋಗ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆಮತ್ತು ಮೂತ್ರಪಿಂಡದಲ್ಲಿ ಕಲ್ಲಾಗಿರುವ ಸಮಸ್ಯೆಯನ್ನು ಪರಿಹರಿಸುವ ಈ ಪವಿತ್ರವಾದ ಜಲಕ್ಕೆ ದೇವಾಲಯವನ್ನು ಕೂಡ ಇಲ್ಲಿ ಕಟ್ಟಿಸಲಾಗಿದೆ.ಗುಬ್ಬಿಗಾ ಗ್ರಾಮದ ವ್ಯಾಪ್ತಿಯಲ್ಲಿರುವ ಅಡಿಕೆ ತೋಟದಲ್ಲಿರುವ ಈ ಒಂದು ಕೊಳಕ್ಕೆ, ಚಪ್ಪಾಳೆ ಕೊಳ ಗುಳಗುಳಿ ಕೊಳ ನೀರ್ಗುಳ್ಳೆ ಕೊಳ್ಳ ಗೌರಿ ತೀರ್ಥ ಹಾಗೆ ಗುಳಗುಳಿ ಶಂಕರ ಅಂತ ಕೂಡ ಕರೆಯುತ್ತಾರೆ .

ಹಾಗೆ ಇಲ್ಲಿರುವ ವಿಸ್ಮಯ ಕಾರ್ಯ ಕೊಳದ ವಿಶೇಷತೆ ಏನು ಅಂದರೆ ಬಂದ ಭಕ್ತಾದಿಗಳು ಚಪ್ಪಾಳೆಯನ್ನು ಹೊಡೆದರೆ ಈ ಕೊಳದಲ್ಲಿ ಗುಳಿಗಳು ಉಂಟಾಗುತ್ತವೆ ಅಂತ ಹೌದು ಮತ್ತು ಯಾವುದೇ ಎಲೆಗಳನ್ನು ಈ ನೀರಿನ ಮೇಲೆ ಹಾಕಿದರೂ ಮುಳುಗುವುದಿಲ್ಲ,ಆದರೆ ಈಶ್ವರನ ಪ್ರಿಯವಾದ ಬಿಲ್ವ ಎಲೆಯನ್ನು, ಈ ನೀರಿನೊಳಗೆ ಹಾಕಿದರೆ ಆ ಬಿಲ್ವ ಪತ್ರೆ ಎಲೆ ಮಾತ್ರ ಮುಳುಗುವುದು ಇಲ್ಲಿಯ ನೀರಿನ ಇಲ್ಲಿಯ ತಾಣದ ಒಂದು ವಿಶೇಷತೆಯಾಗಿದೆ.ಇಲ್ಲಿರುವ ಕೊಳದಲ್ಲಿ ಯಾವುದೇ ನೀರಿಗೆ ಸಂಬಂಧ ಪಟ್ಟ ಸಂಪರ್ಕವಿಲ್ಲ ಆದರೆ ಈ ಭೂಮಿಯೊಳಗಿಂದ ನೀರು ಉತ್ಪತ್ತಿಯಾಗುತ್ತಿದೆ, ಮೂರು ಇಂಚಿನಷ್ಟು ನೀರು ಇಲ್ಲಿಂದ ಪ್ರತಿ ದಿನ ಆಚೆ ಹೋಗುತ್ತಿರುವುದನ್ನು ನಾವು ಇಲ್ಲೇ ನೋಡಬಹುದಾಗಿದ್ದು,

ಈ ತಾಣಕ್ಕೆ ಇರುವ ಪೌರಾಣಿಕ ಹಿನ್ನೆಲೆಯ ಬಗ್ಗೆ ಹೇಳಬೇಕಾದರೆ ಶಿವ ಪಾರ್ವತಿ ಒಮ್ಮೆ ಮಲೆನಾಡಿನ ಸೌಂದರ್ಯವನ್ನು ಸವಿಯಲು ಬಂದಿರುತ್ತಾರೆ, ಆಗ ಶಿವ ಇಲ್ಲಿಯ ತಾಣಕ್ಕೆ ತನ್ನ ಜತೆಯಲ್ಲಿರುವ ಗಂಗೆಯನ್ನು ಹರಿಸುತ್ತಾರೆ ಅಂದಿನಿಂದಲೂ ಈ ಒಂದು ವಿಸ್ಮಯಕಾರಿಯಾಗಿ ಅಚ್ಚರಿಗಳನ್ನು ಮೂಡಿಸುತ್ತಾ ಇದೆ.ಈ ಕೊಳದೊಳಗೆ ಇರುವ ಬಂಗಾರದ ಬಣ್ಣದ ಪಾಚಿಯೂ ಬೆಳಗ್ಗೆ ಸೂರ್ಯೋದಯದ ಸಮಯದಲ್ಲಿ ಮತ್ತು ಸಂಜೆ ಸೂರ್ಯಾಸ್ತದ ಸಮಯದಲ್ಲಿ ಬಂಗಾರದ ಹಾಗೆ ಹೊಳೆಯುತ್ತದೆ ಈ ಒಂದು ದೃಶ್ಯವನ್ನು ಕಾಣುವುದು ನಿಜಕ್ಕೂ ಒಂದು ಸೋಜಿಗದಂತೆ ಇರುತ್ತದೆ ಎಂದು ಪ್ರವಾಸಿಗರು ಹೇಳುವುದುಂಟು.ಇಂದು ವಿಸ್ಮಯಕಾರಿಯಾದ ಕೊಳದಲ್ಲಿ ಬರುತ್ತಿರುವಂತಹ ಒಂದು ಸೋಜಿಗವನ್ನು ಅಚ್ಚರಿಯನ್ನು ನಿಜಕ್ಕೂ ನಂಬಲು ಅಸಾಧ್ಯವಾಗಿದೆ ಇದೊಂದು ಪ್ರಕೃತಿಯ ಸೃಷ್ಟಿಯಾಗಿತ್ತು ಯಾವುದೇ ವೈಜ್ಞಾನಿಕ ಹಿನ್ನೆಲೆಯನ್ನು ಈ ಒಂದು ಕೊಳ ಹೊಂದಿಲ್ಲ.ನೀವು ಕೂಡ ಒಮ್ಮೆ ಶಿವಮೊಗ್ಗಕ್ಕೆ ಭೇಟಿ ನೀಡಿದಾಗ ಈ ಮಲೆನಾಡಿನ ಸೌಂದರ್ಯವನ್ನು ಸವಿದು ಬನ್ನಿ ಮತ್ತು ಈ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಇದನ್ನು ಶೇರ್ ಮಾಡುವುದನ್ನು ಮರೆಯದಿರಿ ಧನ್ಯವಾದ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ