ಭಾರತ ದೇಶದ ನೆಲೆಯೂ ದೇವಾಲಯಗಳ ಆಗರವಾಗಿದೆ, ಇಲ್ಲಿ ಪ್ರತಿಯೊಂದು ದೇವಾಲಯಕ್ಕೂ ಕೂಡ ಅದರದ್ದೇ ಆದಂತಹ ವೈಶಿಷ್ಟ್ಯತೆ ಇದೆ, ಅದರದ್ದೇ ಆದಂತಹ ಐತಿಹ್ಯ ಇರುವುದನ್ನು ಕೂಡ ನಾವು ಕಾಣಬಹುದಾಗಿದೆ.
ಇಂದಿನ ಮಾಹಿತಿಯಲ್ಲಿ ನಾವು ಒಂದು ವಿಶೇಷವಾದ ಅಚ್ಚರಿ ಮೂಡಿಸುತ್ತಿರುವ ದೇವಾಲಯದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯೋಣ, ಆ ದೇವಾಲಯ ಇರುವುದು ಎಲ್ಲಿ ಮತ್ತು ಈ ದೇವಾಲಯದಲ್ಲಿ ಜರುಗುತ್ತಿರುವ ಆ ಒಂದು ಅಚ್ಚರಿ ಏನು ಎಂಬುದನ್ನು ಕೆಳಗಿನ ಮಾಹಿತಿಯಲ್ಲಿ ತಿಳಿದು ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ.
ಅಷ್ಟಕ್ಕೂ ಈ ದೇವಾಲಯವಿರುವುದು ಎಲ್ಲಿ ಅಂದರೆ ನಮ್ಮ ದೇಶದ ಪ್ರಧಾನ ಮಂತ್ರಿಯಾಗಿರುವ ನರೇಂದ್ರ ಮೋದಿಯವರ ಹುಟ್ಟೂರಾದ ಗುಜರಾತಿ ವಡೋದದಿಂದ ಎಂಬತ್ತು ಕಿಲೋಮೀಟರ್ ದೂರದಲ್ಲಿರುವ ಬುರುಚ್ ಎಂಬ ಜಿಲ್ಲೆಯಲ್ಲಿದೆ.
ಈ ದೇವಾಲಯದ ವಿಶೇಷತೆಯೆಂದರೆ ಇಲ್ಲಿರುವ ಶಿವಲಿಂಗವೂ ಶ್ವೇತವರ್ಣದ ಬಣ್ಣವನ್ನು ಹೊಂದಿದ್ದು, ಈ ದೇವಾಲಯವು ಭಕ್ತಾದಿಗಳಿಗೆ ದಿನಕ್ಕೆ ಎರಡು ಬಾರಿ ಮಾತ್ರ ದರ್ಶನವನ್ನು ನೀಡುತ್ತದೆ.
ಹೌದು ಸಮುದ್ರ ತೀರದಲ್ಲಿರುವ ಈ ದೇವಾಲಯವು ದಿನದ ಎರಡು ಬಾರಿ ಮಾತ್ರ ಭಕ್ತಾದಿಗಳಿಗೆ ದರ್ಶನವನ್ನು ನೀಡುತ್ತದೆ ಹಾಗೂ ಈ ದೇವಾಲಯವು ಸಿಂಧೂ ಸಾಗರ ಅಂದರೆ ಅರಬ್ಬೀ ಸಮುದ್ರದ ತೀರದಲ್ಲಿದ್ದು, ಈ ದೇವಾಲಯದಲ್ಲಿರುವ ಶಿವಲಿಂಗಕ್ಕೆ ಸಮುದ್ರ ದೇವತೆಗಳೇ ಮಹಾ ಅಭಿಷೇಕವನ್ನು ಮಾಡುತ್ತವೆ.
ಕವಿ ಕಂಬವಿಯಲ್ಲಿ ನೆಲೆಸಿರುವ ಶ್ರೀ ಸ್ತಂಭೇಶ್ವರನ ದೇವಾಲಯವನ್ನು ಶಿವನ ಸನಾತನ ಸ್ಕಂದ ಕಾರ್ತಿಕೇಯ ನಿರ್ಮಾಣ ಮಾಡಿದ್ದಾರೆ ಎಂಬ ಪ್ರತೀತಿಯೂ ಕೂಡ ಇಲ್ಲಿ ಇದೆ.
ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಈ ದೇವಾಲಯವು ಸ್ಕಂದ ಪುರಾಣದಲ್ಲಿ ಉಲ್ಲೇಖವನ್ನು ಹೊಂದಿದ್ದು, ತಾರಕಾಸುರ ಎಂಬ ರಾಕ್ಷಸನನ್ನು ಕಾರ್ತಿಕೇಯ ವಧಿಸಿದ ನಂತರ ತನ್ನ ತಂದೆಯ ಪರಮ ಭಕ್ತನಾದ ತಾರಕಾಸುರನನ್ನು ವಧಿಸಿದೆನಲ್ಲ ಎಂಬ ಪಾಪ ಪ್ರಜ್ಞೆಯಲ್ಲಿ ಕಾರ್ತಿಕೇಯನ ವಿಷ್ಣುವಿನ ಸಲಹೆಯಂತೆ ಈ ದೇವಾಲಯವನ್ನು ನಿರ್ಮಿಸುತ್ತಾರೆ,
ನಂತರ ತಮ್ಮ ಪಾಪ ವಿಮೋಚನೆಗಾಗಿ ಪ್ರತಿದಿನ ತನ್ನ ತಂದೆಯನ್ನು ಈ ಪ್ರದೇಶದಲ್ಲಿ ದೇವಾಲಯವನ್ನು ನಿರ್ಮಿಸಿ ಸ್ತಂಭೇಶ್ವರನನ್ನು ಪೂಜಿಸುತ್ತಾನಂತೆ ಕಾರ್ತಿಕೇಯ.ಅದ್ಭುತ ಶಿಲ್ಪಕಲೆಯನ್ನು ಹೊಂದಿರುವಂತಹ ಈ ದೇವಾಲಯವು ಇತ್ತೀಚಿನ ದಿನಗಳಲ್ಲಿ ಅನೇಕ ಭಕ್ತಾದಿಗಳನ್ನು ಆಕರ್ಷಿಸುತ್ತಿದೆ .
ಮತ್ತು ಇಲ್ಲಿ ಬರುವಂತಹ ಭಕ್ತಾದಿಗಳಿಗೆ ರಶೀದಿಯನ್ನು ನೀಡಲಾಗುತ್ತದೆ, ಇಂತಹ ಸಮಯದಲ್ಲಿಯೆ ಒಳಹೋಗಬೇಕು ಇಂತಹ ಸಮಯದಲ್ಲಿಯೆ ದೇವಾಲಯದಿಂದ ಆಚೆ ಬರಬೇಕು ಎಂಬ ಸೂಚನೆಯನ್ನು ಕೂಡ ನೀಡಿ ಈ ದೇವಾಲಯಕ್ಕೆ ಪ್ರವೇಶವನ್ನು ನೀಡುತ್ತಾರೆ.
ಈ ದೇವಾಲಯವು ಸಮುದ್ರ ತೀರದಲ್ಲಿದ್ದು ಸಮುದ್ರದಲ್ಲಿ ಬರುವ ದೊಡ್ಡ ದೊಡ್ಡ ಅಲೆಗಳು ದೇವಾಲಯವನ್ನು ಮುಚ್ಚಿಬಿಡುತ್ತದೆ, ಸಮುದ್ರದ ಅಲೆಗಳು ಕಡಿಮೆ ಇರುವ ಸಮಯದಲ್ಲಿ, ದೇವಾಲಯಕ್ಕೆ ಪ್ರವೇಶವನ್ನು ನೀಡಲಾಗುತ್ತದೆ ಹಾಗೆ ಬೆಳಗ್ಗೆ ಸಮಯದಲ್ಲಿ ಮಾತ್ರ ಈ ದೇವಾಲಯಕ್ಕೆ ಪ್ರವೇಶವಿರುತ್ತದೆ.
ಭಾರತ ದೇಶದ ಪುರಾತನ ದೇವಾಲಯಗಳಲ್ಲಿ ಒಂದಾಗಿರುವಂತಹ ಈ ಸ್ತಂಭೇಶ್ವರ ದೇವಾಲಯಕ್ಕೆ ನೀವು ಕೂಡ ಒಮ್ಮೆ ಭೇಟಿ ನೀಡಿ, ಈ ದೇವಾಲಯದಲ್ಲಿ ಜರುಗುತ್ತಿರುವಂತಹ ಈ ಒಂದು ಅಚ್ಚರಿ ಅನ್ನು ಕಣ್ತುಂಬಿಕೊಳ್ಳಿ.
ನಿಮಗೂ ಕೂಡ ಈ ದಿನ ತಿಳಿಸಿದಂತಹ ಮಾಹಿತಿ ಉಪಯುಕ್ತವಾಗಿ ಇದ್ದಲ್ಲಿ ತಪ್ಪದೇ ಈ ಒಂದು ದೇವಾಲಯದ ಅಚ್ಚರಿ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆಯನ್ನು ಮಾಹಿತಿಯ ಕೊನೆಯಲ್ಲಿ ಕಾಮೆಂಟ್ ಮಾಡಿ ಹಾಗೂ ಮಿಸ್ ಮಾಡದೇ ಮಾಹಿತಿಗೆ ಲೈಕ್ ಮಾಡಿ ಇನ್ನೂ ಅನೇಕ ಇಂಟ್ರೆಸ್ಟಿಂಗ್ ಮಾಹಿತಿಗಳಿಗೆ ನಮ್ಮ ಫೇಸ್ ಬುಕ್ ಪೇಜನ್ನು ಫಾಲೋ ಮಾಡಿ ಎಲ್ಲರಿಗೂ ಶುಭವಾಗಲಿ ಶುಭ ದಿನ ಧನ್ಯವಾದ.