ಇಲ್ಲಿನ ಈ ದೇವಾಲಯಕ್ಕೆ ನೀರಿನಲ್ಲಿ ನಡೆದುಕೊಂಡು ಹೋಗಿ ಈ ದೇವರನ್ನು ಪೂಜೆ ಮಾಡಿದರೆ ..ನಿಮ್ಮಲ್ಲಿರುವ ಯಾವುದೇ ರೀತಿಯ ಚರ್ಮಕಾಯಿಲೆಗಳಿದ್ದರೂ ಕೂಡ ವಾಸಿಯಾಗುತ್ತಂತೆ..

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ಇವತ್ತು ನಾವು ನಿಮಗೆ ಒಂದು ದೇವಸ್ಥಾನದ ಕುರಿತು ಒಂದು ವಿಶೇಷವಾದ ಮಾಹಿತಿಯನ್ನು ನಿಮಗೆ ಹೇಳಲಿದ್ದೇವೆ, ಈ ದೇವಸ್ಥಾನ ಇರುವುದಾದರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ, ಈ ದೇವಸ್ಥಾನ ಇರುವುದು ಬೀದರ್ ಜಿಲ್ಲೆಯಲ್ಲಿ ಇರುವಂತಹ ಝರಣಿ ಗುಹಾಲಯ.ಇಲ್ಲಿ ನೆಲೆಸಿರುವಂತಹ ನರಸಿಂಹ ಸ್ವಾಮಿಯನ್ನು ನೋಡಲು ಹಲವಾರು ಜನರು ತುಂಬಾ ಕಡೆಯಿಂದ ಇಲ್ಲಿಗೆ ವಲಸೆ ಬರುತ್ತಾರೆ. 300 ಅಡಿ ಎಷ್ಟು ಆಳ ಇರುವಂತಹ  ನೀರಿನಲ್ಲಿ ಈ ಗುಹೆಯಲ್ಲಿ ಬರಿ ಕಾಲಿನಲ್ಲಿ ಹೋಗಿ ದೇವರನ್ನು ನೀವು ಪೂಜೆ ಮಾಡಿದ್ದೇ ಆದಲ್ಲಿ ನಿಮಗೆ ಅಷ್ಟೈಶ್ವರ್ಯಗಳು ಬರುತ್ತವೆ ಎನ್ನುವುದು ಇಲ್ಲಿನ ಜನರ ನಂಬಿಕೆಯಾಗಿದೆ.ಈ ಕ್ಷೇತ್ರಕ್ಕೆ ಒಂದು ಪುರಾತನ ಹಾಗೂ ಇತಿಹಾಸದ ಒಂದು ಕಥೆ ಇದೆ ಅದು ಏನ್ ಅಂತೀರಾ.ಪುರಾಣದ ಪ್ರಕಾರ ನರಸಿಂಹನು ವಿಷ್ಣುವಿನ ನಾಲ್ಕನೇ ಅವತಾರ ಎಂದು ಹೇಳುತ್ತಾರೆ, ಈ ಝರಣಿ ಎನ್ನುವ ಕ್ಷೇತ್ರಕ್ಕೆ ತೇತ್ರಾಯುಗದಲ್ಲಿ  2 ರಾಕ್ಷಸರು ಈ ಕ್ಷೇತ್ರಕ್ಕೆ ಬರುತ್ತಾರೆ.

ನರಸಿಂಹನ ರೂಪದಲ್ಲಿ ಇರುವಂತಹ ವಿಷ್ಣು ಸ್ವಾಮಿಯು ಈ ಎರಡು ರಾಕ್ಷಸರನ್ನು ಕೊಲ್ಲಲು ಇಲ್ಲಿಗೆ ಬರುತ್ತಾನೆ. ಆದರೆ ಈ ಎರಡು ರಾಕ್ಷಸರ ಅಲ್ಲಿ ಒಬ್ಬ ರಾಕ್ಷಸ ಈ ಝರಣಿ ಗುಹೆಯಲ್ಲಿ ಶಿವನ ಲಿಂಗವನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ಮಾಡಲು ಶುರು ಮಾಡುತ್ತಾನೆ.ಹೀಗೆ ಪೂಜೆ ಮಾಡುತ್ತಿರುವಂತಹ ರಾಕ್ಷಸನ ಪೂಜೆಗೆ ಮೆಚ್ಚಿ ಶಿವನು ಪ್ರತ್ಯಕ್ಷವಾಗಿ ವರವನ್ನು ಕೇಳಲು ಆರಂಭ ಮಾಡುತ್ತಾನೆ. ಹೀಗೆ ತಿಳಿದಂತಹ ಶಿವನ ಪ್ರಶ್ನೆಗೆ ರಾಕ್ಷಸನು ಶಿವನೊಂದಿಗೆ ಕೇಳಿಕೊಳ್ಳುತ್ತಾನೆ.ಅದು ಏನಪ್ಪಾ ಅಂದರೆ  ಸಂಹಾರ ಮಾಡಲು ಬಂದಂತಹ ನರಸಿಂಹನು   ಸಂಹಾರ ಮಾಡಿದ ಮೇಲೆ ಇಲ್ಲೇ ನೆಲೆಸಿ ಇಲ್ಲಿಗೆ ಬರುವಂತಹ ಎಲ್ಲ ಜನರಿಗೆ ಕಷ್ಟ ಪರಿಹಾರಗಳನ್ನು ಮಾಡಬೇಕು ಎಂದು ಶಿವನಲ್ಲಿ ಕೇಳಿಕೊಳ್ಳುತ್ತಾನೆ.ಈ ರಾಕ್ಷಸನ ಆಜ್ಞೆಯ ಮೇರೆಗೆ ಶಿವನು ಅವನ ಕೇಳಿದ ಪ್ರಶ್ನೆಗಳಿಗೆ ವರವನ್ನು ಕೊಡುತ್ತಾನೆ. ಹಾಗಾಗಿ ಈ ಕ್ಷೇತ್ರದಲ್ಲಿ ಝರಣಿ ಕ್ಷೇತ್ರ ಎಂದೂ ಹೆಸರು ಬರುತ್ತದೆ ಝರಣಿ ಅಂದರೆ ಒಬ್ಬ ರಾಕ್ಷಸನ ಹೆಸರು.

ಆದ್ದರಿಂದ ಈ ಕ್ಷೇತ್ರದಲ್ಲಿ ಅದರಲ್ಲೂ ಈ ಗುಹೆಯಲ್ಲಿ ವಿಷ್ಣು ಅವತಾರ ಹೊಂದಿರುವಂತಹ ನರಸಿಂಹನು ಇಲ್ಲಿ ನೆಲೆಸಿದ್ದಾನೆ ಹಾಗೆ ಎಲ್ಲರಿಗೂ ಕರುಣೆಯನ್ನು ನೀಡುತ್ತಿದ್ದಾರೆ ಎನ್ನುವುದು ಇಲ್ಲಿನ ಜನರ ಒಂದು ನಂಬಿಕೆಯಾಗಿದೆ.ದೇವಸ್ಥಾನದಲ್ಲಿ ಇರುವಂತಹ ಒಂದು ವಿಶೇಷ ಏನಪ್ಪಾ ಅಂದರೆ, ಈ ದೇವಸ್ಥಾನದ ಏನಾದರೂ ನೀವು ನೋಡಬೇಕಾದರೆ ಗುಹೆಯಲ್ಲಿ ಸ್ವಲ್ಪ ಹೊತ್ತು ನೀರಿನಲ್ಲಿ ನಡೆದು ಕೊಂಡು ಹೋಗ ಬೇಕಾಗುತ್ತದೆ. ಇಲ್ಲಿ ಯಾವಾಗಲೂ ಉಗುರು ಬೆಚ್ಚಗಿನ ನೀರು ಇದ್ದು  ನೀರು ಯಾವಾಗಲೂ ಹೋಗಿ ಗುಹೆಯಲ್ಲಿ ಹರಿಯುತ್ತಾ ಇರುತ್ತದೆ.ಈ ಗುಹೆಯಲ್ಲಿ ಸ್ವಲ್ಪ ಹೊತ್ತು ಚಲಿಸಿದ ನಂತರ ನಿಮಗೆ ಗುಹೆಯಲ್ಲಿ ನರಸಿಂಹ ಸ್ವಾಮಿಯ ದೇವಸ್ಥಾನ ನಿಮಗೆ ಕಂಡುಬರುತ್ತದೆ. ಇಲ್ಲಿನ ಜನರ ಪ್ರಕಾರ ಈ ನೀರಿನಲ್ಲಿ ಈ ಔಷಧೀಯ ಗುಣಗಳು ಇದ್ದು ಈ ನೀರಿನಲ್ಲಿ ಸ್ವಲ್ಪ ಹೊತ್ತು ನೀವು ನಡೆದುಕೊಂಡು ಹೋದರೆ ನಿಮ್ಮ ನಲ್ಲಿ ಇರುವಂತಹ ಚರ್ಮದ ಕಾಯಿಲೆಗಳು ಕೂಡ ವಾಸಿಯಾಗುತ್ತವೆ ಎಂದು ಕೂಡ ಇಲ್ಲಿನ ಜನರು ಹೇಳುತ್ತಾರೆ.

ಈ ದೇವಸ್ಥಾನವನ್ನು ಸರ್ಕಾರ ನಡೆಸುತ್ತಿರುವ ಕಾರಣ ಈ ದೇವಸ್ಥಾನಕ್ಕೆ ನೀವು ಅದರಲ್ಲೂ  ನೀರಿನಲ್ಲಿ ನಡೆದು ಕೊಂಡು ಹೋಗ ಬೇಕಾದರೆ ಕೆಲವೊಂದು ವಿಶೇಷವಾದ ಉಡುಪುಗಳನ್ನು ನೀವು ಹಾಕಿ ಕೊಂಡು ಹೋಗ ಬೇಕಾಗುತ್ತದೆ.ಹಾಗೆ ಕೆಲವೊಂದು ಚಿಕ್ಕ ಮಕ್ಕಳು ಹಾಗೂ  ವೃದ್ಧರಿಗೆ ಒಳಗಡೆ ಹೋಗದೆ ಇರುವ ಕಾರಣ ಅವರ ಕಡೆಗೆ ನರಸಿಂಹ ಸ್ವಾಮಿಯ ಚಿಕ್ಕದಾದ ದೇವಸ್ಥಾನವನ್ನು ಮಾಡಿ , ದೇವರ ಆಶೀರ್ವಾದಕ್ಕೆ ಸರಕಾರವು ಅನುವು ಮಾಡಿಕೊಟ್ಟಿದೆ.ಈ ವಿಷಯ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಚ್ಚಿಕೊಳ್ಳಿ

Leave a Reply

Your email address will not be published. Required fields are marked *