Categories
ಉಪಯುಕ್ತ ಮಾಹಿತಿ ಭಕ್ತಿ

ಇಲಿಗಳಿಗೆ ಒಂದು ದೇವಸ್ಥಾನ ಇದೆ ಅಂದ್ರೆ ನಿಜವಾಗ್ಲೂ ನಗ್ತೀರಾ ? ಆದ ಇದು ನಗುವಂತಹ ಮಾತಲ್ಲ ನಿಜವಾಗಲೂ ಇದೆ ಮುಂದೆ ಓದಿ ತಿಳಿದುಕೊಳ್ಳಿ ನಿಮಗೆ ದೇವರ ಮೇಲೆ ಭಕ್ತಿ ಹೆಚ್ಚಾಗುತ್ತದೆ !!

ಎಲ್ಲಾ ತರದ ದೇವಸ್ಥಾನವನ್ನು ನೋಡಿ ಆಯಿತು ಆದರೆ ಈ ತರದ ದೇವಸ್ಥಾನವನ್ನು ನೀವು ಎಲ್ಲಿ ಕೂಡ ನೋಡಿರುವುದಿಲ್ಲ, ಇವತ್ತು ನಾವು ಹೇಳಲು ಹೊರಟಿರುವ ಅಂತಹ ,ದೇವಸ್ಥಾನದ ಕುರಿತು ನಿಮಗೆ ಗೊತ್ತಾದರೆ ನಿಜವಾಗಲೂ ನೀವು ನಗ್ತೀರಾ.

ಆದರೆ ಇದು ನಗುವಂತಹ ಮಾತಲ್ಲ, ಇಲ್ಲಿರುವ ತಾಯಿ ದೇವಸ್ಥಾನದಲ್ಲಿ ಇಲಿಯನ್ನು ಪೂಜೆ ಮಾಡಲಾಗುತ್ತದೆ. ಹಾಗಾದರೆ ಈ ರೀತಿ ಇರುವಂತಹ ದೇವಸ್ಥಾನ ಇರೋದಾದ್ರೂ ಹೇಗೆ ಹಾಗೂ ಎಲ್ಲಿ ಇದೆ ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಕೊಟ್ಟಿದ್ದೇನೆ ನೋಡಿ.

ನಮ್ಮ ಭಾರತ ದೇಶದ ರಾಜಸ್ಥಾನ ರಾಜ್ಯದಲ್ಲಿ ಇರುವಂತಹ ಬಿಕಾನೆರ್ ಪಟ್ಟಣದಿಂದ ನೀವು ಕೇವಲ 30 ಕಿಲೋಮೀಟರ್ ಕ್ರಮಿಸಿದರೆ, ದೇಶ್ಮುಖ್ ಎನ್ನುವ ಪ್ರದೇಶದಲ್ಲಿ ಇಲಿಗಳಿಗೆ ಒಂದು ದೇವಸ್ಥಾನವಿದೆ.

ವಾರದಲ್ಲಿ ಮೂರು ಸಾವಿರ ಇಲಿಗಳು ಆಶ್ರಯವನ್ನು ಪಡೆದಿದೆ ಎಂದು ಇಲ್ಲಿನ ಜನರು ಹೇಳುತ್ತಾರೆ. ಅಷ್ಟಕ್ಕೂ ಇಲ್ಲದ ಜನರು ಇಲಿಗಳಿಗೆ ದಿನನಿತ್ಯವೂ ಹಾಲಿನ ನೈವೇದ್ಯವನ್ನು ನೀಡುತ್ತಾರೆ, ಹೀಗೆ ನೈವೇದ್ಯವನ್ನು ತಿನ್ನಲು 2ರಿಂದ 3ಸಾವಿರ ಇಲಿಗಳು ಬಂದು ಕುಡಿದು ಹೋಗುತ್ತವೆ ಹೀಗೆ ಕುಡಿದು ಬಿಟ್ಟಂತಹ ನೈವೇದ್ಯವನ್ನು ಇಲ್ಲಿನ ಜನರು ಕುಡಿಯುತ್ತಾರೆ ಅದನ್ನು ಪ್ರಸಾದವಾಗಿ ಸ್ವೀಕರಿಸುತ್ತಾರೆ.

ಇಲಿಗಳಿಗೆ ಯಾಕೆ ಇಲ್ಲಿ ಪೂಜೆ ಮಾಡುತ್ತಾರೆ ಇದರ ಬಗ್ಗೆ ಹಾಗೂ ಇದರ ಹಿನ್ನೆಲೆಯಾದರೂ ಏನು ?ಇದಕ್ಕೆ ಪುಷ್ಠಿ ನೀಡುವಂತಹ ಒಂದು ವಿಚಿತ್ರವಾದ ಕಥೆ ಇದೆ, ಈ ಪ್ರದೇಶದಲ್ಲಿ 151 ವರ್ಷ ಬದುಕಿರುವಂತಹವರು ಮಹಿಳೆ ಇದ್ದಂತೆ ಎಂದು ಇಲ್ಲಿನ ಕೆಲವು ಪುರಾಣಗಳು ಹೇಳುತ್ತವೆ.

ಅವುಗಳ ಪ್ರಕಾರ ಕರಣಿ ಮಾತಾ ಚರಣ್ ಎನ್ನುವ ಜಾತಿಯಲ್ಲಿ ಹುಟ್ಟಿದಂತಹ ಒಬ್ಬ ಮಹಿಳೆ ಒಬ್ಬ ರಾಜ ನನ್ನು ಮದುವೆಯಾಗುತ್ತಾಳೆ ಆದರೆ ಅವರ ಜೊತೆಗೆ ಸರಿಯಾಗಿ ಸಂಸಾರವನ್ನು ಮಾಡದೆ ತನ್ನ ತಂಗಿಯನ್ನು ಮತ್ತೆ ಆ ರಾಜನಿಗೆ ಮತ್ತೆ ಮದುವೆ ಮಾಡಿ ಕೊಡುತ್ತಾಳೆ. ಹೀಗೆ ಮದುವೆ ಮಾಡಿಕೊಟ್ಟ ಅಂತಹ ಈ ಮಹಿಳೆ ತನ್ನ ಉಳಿದಂತಹ ಆಯುಷ್ಯವನ್ನು ಕೇವಲ ಧ್ಯಾನದಲ್ಲಿ ಕಳೆದು ಬಿಡುತ್ತಾಳೆ.

ಒಂದು ದಿನ ತನ್ನ ಮಗ ನೀರನ್ನು ಕುಡಿಯಲು ಯಾವುದೋ ಒಂದು ಕೆರೆಯ ಹತ್ತಿರ ಹೋಗುತ್ತಾನೆ ಹೀಗೆ ಹೋದಂತಹ ಮಗ ಕೆರೆಯಲ್ಲಿ ಕಾಲು ಜಾರಿ ಬಿದ್ದು ಸತ್ತು ಹೋಗುತ್ತಾನೆ, ಈ ನೋವನ್ನು ತಾಳಲಾರದೆ ಈ ಮಹಿಳೆಯನ್ನು ಯಮನ ಕುರಿತು ಧ್ಯಾನವನ್ನು ಮಾಡುತ್ತಾಳೆ, ಹೀಗೆ ಹೀಗೆ ತಪಸ್ಸನ್ನು ನೆಚ್ಚಿಹೆ ನಾನು ಪ್ರತ್ಯಕ್ಷವಾಗಿ ನಿನಗೆ ಏನು ವರ ಬೇಕು ಎಂದು ಕೇಳುತ್ತಾನೆ,

ಹೀಗೆ ಕೇಳಿದಂತಹ ಯಮನ ಆ ಪ್ರಶ್ನೆಗೆ ಈ ಹೆಣ್ಣು ಮಗಳು ನನ್ನ ಮಗ ಸತ್ತು ಹೋಗಿದ್ದಾನೆ ಅವನನ್ನು ಬದುಕಿಸಿ ಕೊಡು ಎಂದು ಕೇಳುತ್ತಾರೆ, ಹೀಗೆ ಯಮನ ಆ ಮಗುವನ್ನು ಬದುಕಿಸಲು ಇಲ್ಲಿಯ ಒಂದು ಪ್ರಾಣವನ್ನು ಆ ಮಗುವಿನಲ್ಲಿ ಬಿಡುತ್ತಾನೆ ಹಾಗೂ ಇಲ್ಲಿಯ ರೂಪದಲ್ಲಿ ಬದುಕಿಸಿ ಕೊಡುತ್ತಾನೆ. ಅದಾದ ನಂತರ ಇಲ್ಲಿಯ ಜನ್ಮದಿಂದ ಮಾನವ ಜನ್ಮಕ್ಕೆ ಅವಳ ಮಗನೂ ಪುನರವರ್ತನೆ ಆಗುತ್ತಾನೆ. ಆದ್ದರಿಂದ ಇಲ್ಲಿ ಇಲಿಗಳನ್ನು ಪೂಜೆ ಮಾಡಲಾಗುತ್ತದೆ.

ಹಾಗೆ ಪುರಾಣದ ಪ್ರಕಾರ ಇನ್ನೊಂದು ಕತೆಯೂ ಕೂಡ ಇಲ್ಲಿನ ದೇವಸ್ಥಾನದಲ್ಲಿ ಇಲಿಗಳನ್ನು ಪೂಜೆ ಮಾಡುವುದಕ್ಕೆ ಇನ್ನಷ್ಟು ಪುಷ್ಟಿಯನ್ನು ನೀಡುತ್ತದೆ, ಕೆಲವರು ವರ್ಷಗಳ ಹಿಂದೆ ಯುದ್ಧ ನಡೆಯುತ್ತದೆ ಹಲವಾರು ಸೈನಿಕರು ತಮ್ಮ ಪ್ರಾಣ ರಕ್ಷಣೆಗಾಗಿ ದೇಶಮುಖ್ ಕಡೆ ಓಡಿ ಬರುತ್ತಾರೆ, ಹೀಗೆ ಬಂದಂತಹ ಸೈನಿಕರು ಈ ದೇವಸ್ಥಾನದಲ್ಲಿ ಅಡಗಿಕೊಳ್ಳುತ್ತಾರೆ.

ಹೀಗೆ ಸೈನಿಕರನ್ನು ಉಳಿಸಿಕೊಳ್ಳುವುದಕ್ಕಾಗಿ ಇಲ್ಲಿನ ದೇವತೆ ಎಲ್ಲರನ್ನೂ ಇಲ್ಲಿಯ ಹಾಗೆ ಪರಿವರ್ತನೆ ಮಾಡುತ್ತಾಳೆ ಅಂತ. ಆದ್ದರಿಂದ ಈ ದೇವಸ್ಥಾನಕ್ಕೆ ಬಂದರೆ ನಿಮಗೆ ನಾವು ಭಯವನ್ನು ನಿವಾರಣೆ ಮಾಡುವಂತಹ ಇಲ್ಲಿನ ಇಲಿಗಳಿಗೆ ಆತರ ತಾಕತ್ತು ಇದೆ ಎಂದು ಇಲ್ಲಿನ ಜನರು ಇಲಿಗಳನ್ನು ಪೂಜೆ ಮಾಡುತ್ತಾರೆ.

ಗೊತ್ತಾಯ್ತಾ ಸ್ನೇಹಿತರೆ ಈ ತರದ ವಿಚಿತ್ರ ಲೇಖನವನ್ನು ನಿಜವಾಗಲೂ ನೀವು ನಿಮ್ಮ ಫ್ರೆಂಡ್ಸ್ ಗಳಿಗೆ ಶೇರ್ ಮಾಡಲೇ ಬೇಕು, ಈ ಲೇಖನ ನಿಮಗೆ ಇಷ್ಟವಾಗಿದೆ ದಯವಿಟ್ಟು ನಿಮ್ಮ ಫ್ರೆಂಡ್ಸ್ ಗಳಿಗೆ ಶೇರ್ ಮಾಡಿ ಹಾಗೂ ನಮ್ಮ ಪೇಜಿಗೆ ಇನ್ನು ನೀವು ಲೈಕ್ ಮಾಡದೇ ಇದ್ದಲ್ಲಿ ಇವತ್ತು ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

 

Originally posted on January 8, 2020 @ 2:16 am

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ