ನಮಸ್ಕಾರ ಸ್ನೇಹಿತರೆ ನಾನು ನಿಮಗೆ ಇಂದು ನಿಮಗೆ ಗಂಟಲು ನೋವು, ಶೀತ, ಕೆಮ್ಮು, ನೆಗಡಿ ಇದ್ದರೆ ಯಾವ ರೀತಿಯಾದಂತಹ ಮನೆಮದ್ದನ್ನು ಉಪಯೋಗಿಸಿಕೊಂಡು ನೀವು ಇದನ್ನು ಮನೆಯಲ್ಲಿಯೇ ಗುಣಪಡಿಸಿಕೊಳ್ಳಬಹುದು
ಇದರ ಬಗ್ಗೆ ಇಂದಿನ ಮಾಹಿತಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.ಹೌದು ಸ್ನೇಹಿತರೆ ಚಳಿಗಾಲ ಮತ್ತು ಮಳೆಗಾಲ ಬಂತೆಂದರೆ ಎಲ್ಲರಿಗೂ ಕಾಡುವಂತಹ ಸಾಮಾನ್ಯ ಸಮಸ್ಯೆಯೆಂದರೆ ಅದು ಕೆಮ್ಮು, ಶೀತ ಮತ್ತು ನೆಗಡಿ ,ಗಂಟಲು ನೋವು.
ಸಾಮಾನ್ಯವಾಗಿ ಎಲ್ಲರಿಗೂ ಕೂಡ ಕಾಡುವಂತಹ ಒಂದು ಸಾಮಾನ್ಯವಾದ ಸಮಸ್ಯೆ ಅಂತನೇ ಹೇಳಬಹುದು ಸ್ನೇಹಿತರೆ.ಹೌದು ಈ ರೀತಿಯಾದಂತಹ ಸಮಸ್ಯೆ ನಮಗೆ ಬಂದಾಗ ನಾವು ವೈದ್ಯರ ಹತ್ತಿರ ಹೋಗುವುದನ್ನು ಬಿಟ್ಟು ನಾವು ಮನೆಮದ್ದನ್ನು ಉಪಯೋಗಿಸಿಕೊಂಡು ಇದನ್ನು ಆದಷ್ಟು ಬೇಗ ಗುಣಪಡಿಸಿಕೊಳ್ಳಬಹುದು ಸ್ನೇಹಿತರೆ.
ಹೌದು ಈ ಮನೆಮದ್ದನ್ನು ಅಂದರೆ ಮನೆಯಲ್ಲೇ ಇರುವಂತಹ ಪದಾರ್ಥಗಳನ್ನು ಉಪಯೋಗಿಸಿಕೊಂಡು ಮನೆಮದ್ದನ್ನು ತಯಾರಿಸಿಕೊಂಡು ನಾವು ಉಪಯೋಗಿಸುವುದರಿಂದ ನಮ್ಮಲ್ಲಿರುವಂತಹ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಹಾಗೂ ಮಾತ್ರೆಗಳಿಂದ ಆಗುವ ಹಾನಿಕಾರಕ ರಾಸಾಯನಿಕ ವಸ್ತುಗಳಿಂದ ಅರೋಗ್ಯ ಹಾಳಾಗುವುದನ್ನು ಕೂಡ ತಡೆಗಟ್ಟಬಹುದು.
ಹೌದು ಸ್ನೇಹಿತರೆ ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಈ ಒಂದು ಪವರ್ಫುಲ್ ಮನೆಮದ್ದನ್ನು ತಿಳಿಸಿಕೊಡುತ್ತೇನೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಗಂಟಲುನೋವು ಬಂದೇ ಬರುತ್ತದೆ.
ಅದು ಬಂದ ನಂತರ ಸಾಮಾನ್ಯವಾಗಿ ಕೆಮ್ಮು-ಶೀತ ಉಂಟಾಗುತ್ತದೆ. ಈ ರೀತಿಯ ಸಮಸ್ಯೆ ನಿಮ್ಮಲ್ಲಿ ಇದ್ದರೆ ತಕ್ಷಣ ನೀವು ಈ ಮನೆಮದ್ದನ್ನು ತಯಾರಿಸಿಕೊಂಡು ಎರಡು ದಿನ ಕುಡಿದರೆ ಸಾಕು ಸಂಪೂರ್ಣವಾಗಿ ಈ ಸಮಸ್ಯೆಯನ್ನು ಗುಣಪಡಿಸಿಕೊಳ್ಳಬಹುದು ಸ್ನೇಹಿತರೆ.
ಅದು ಹೇಗೆ ತಯಾರು ಮಾಡಿಕೊಳ್ಳುವುದು ಎಂಬುದನ್ನು ತಿಳಿಸಿಕೊಡುತ್ತೇನೆ. ಮೊದಲನೆಯದಾಗಿ ಒಂದು ಪಾತ್ರೆಗೆ ಒಂದು ಲೋಟ ನೀರನ್ನು ಹಾಕಿಕೊಳ್ಳಿ. ನಂತರ ಅದಕ್ಕೆ ಅರ್ಧ ಇಂಚಿನಷ್ಟು ಶುಂಠಿಯನ್ನು ಹಾಕಿ.
ಈ ಶುಂಠಿಯಲ್ಲಿ ಬ್ಯಾಕ್ಟರಿಯ ನಿವಾರಕ ಅಂಶ ಇರುವುದರಿಂದ ಈ ಶುಂಠಿಯನ್ನು ನಿಮಗೆ ಈ ರೀತಿಯ ಸಮಸ್ಯೆ ಬಂದಾಗ ಉಪಯೋಗಿಸುವುದರಿಂದ ನಿಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿ ನಿಮ್ಮಲ್ಲಿ ಇರುವಂತಹ ಸಮಸ್ಯೆಯು ಬೇಗನೆ ನಿವಾರಣೆಯಾಗುತ್ತದೆ.
ನಂತರ ಇದಕ್ಕೆ ಮೂರರಿಂದ ನಾಲ್ಕು ಕಾಳುಮೆಣಸನ್ನು ಹಾಕಿ ನಂತರ ಇದಕ್ಕೆ ಕಾಲು ಟೀ ಸ್ಪೂನ್ ನಷ್ಟು ಅರಿಶಿನ ಪುಡಿಯನ್ನು ಹಾಕಿ ಅರಿಶಿನ ಪುಡಿ ಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿದ್ದು ಇದನ್ನು ನಾವು ಉಪಯೋಗಿಸಿದ್ದೇ ಆದಲ್ಲಿ ನಿಮಗೆ ಗಂಟಲು ನೋವು ,ಕೆಮ್ಮು ,ಶೀತ , ಜ್ವರ ಗಳಿದ್ದರೆ ಇದನ್ನು ಉಪಯೋಗಿಸುವುದರಿಂದ ಬೇಗನೆ ಅದರಿಂದ ಹೊರಬಹುದು.
ಹೀಗೆ ಮೂರು ಪದಾರ್ಥಗಳನ್ನು ಹಾಕಿ ಚೆನ್ನಾಗಿ ಕುದಿಸಬೇಕು.ಮೂರು ಪದಾರ್ಥಗಳನ್ನು ಚೆನ್ನಾಗಿ ಕುದಿಸಿದ ನಂತರ ಸ್ವಲ್ಪ ತಣ್ಣಗಾಗಲು ಬಿಡಬೇಕು. ಹೇಗೆ ತಣ್ಣಗಾದನಂತರ ಅದಕ್ಕೆ ಅರ್ಧ ಟೀ ಸ್ಪೂನ್ ನಷ್ಟು ಜೇನುತುಪ್ಪವನ್ನು ಮಿಕ್ಸ್ ಮಾಡಿಕೊಳ್ಳಬೇಕು.
ನೀವೇನಾದ್ರೂ ನಿಮಗೆ ಜ್ವರ, ಕೆಮ್ಮು, ಶೀತ ಮತ್ತು ಗಂಟಲು ನೋವು ಬಂದಾಗ ಈ ಟೀ ಉಪಯೋಗಿಸಿದ್ದೇ ಆದಲ್ಲಿ ನಿಮಗೆ ಎರಡು ದಿನದಲ್ಲಿ ಪರಿಹಾರ ಅಂದರೆ ನಿಮಗೆ ಬಂದಿರುವಂತಹ ಸಮಸ್ಯೆ ನಿವಾರಣೆಯಾಗುತ್ತದೆ ಸ್ನೇಹಿತರೆ.
ನೋಡಿದ್ರಲ್ಲ ಸ್ನೇಹಿತರೆ ನಿಮಗೆ ಶೀತ ಕೆಮ್ಮು ಜ್ವರ ಮತ್ತು ಗಂಟಲು ನೋವು ಬಂದಾಗ ಒಂದು ಮನೆಮದ್ದು ಮಾಡಿ ನೋಡಿ ನಿಮಗೆ ತಕ್ಷಣವೇ ಫಲಿತಾಂಶ ಸಿಗುತ್ತದೆ.
ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.