ಪ್ರಕೃತಿಯಲ್ಲಿ ಮಾನವ ಒಂದು ವಿಶಿಷ್ಟ ಜಾತಿ ಇವರಿಗೆ ದೇವರು ಒಳ್ಳೆಯ ಮೆದುಳನ್ನು ಕೊಟ್ಟಿದ್ದಾನೆ, ಸೃಷ್ಟಿಯಲ್ಲಿ ಹಲವಾರು ಕಲ್ಲುಬಂಡೆಗಳು ಮರಗಿಡಗಳು ಲಿವೆ. ಆದರೆ ಒಬ್ಬ ಮನುಷ್ಯನು ಇಲ್ಲದಿದ್ದಲ್ಲಿ ಯಾವ ಬಂಡೆಗಳು ಕೂಡ ಒಳ್ಳೆಯ ರೂಪಕ ಬರಲು ಆಗುತ್ತಿರಲಿಲ್ಲ. ಮನುಷ್ಯ ನಲ್ಲಿ ಇರುವಂತಹ ಈ ಬುದ್ಧಿವಂತಿಕೆಯಿಂದ ಇಲ್ಲೊಂದು ದೊಡ್ಡದಾದ ಬಂಡೆ ಒಂದೇ ಕಲ್ಲಿನಲ್ಲಿ ದೊಡ್ಡ ದೇವಸ್ಥಾನವಾಗಿ ಪರಿವರ್ತನೆಯಾಗಿದೆ. ಇದರ ಹೆಸರೇ ಮಹಾರಾಷ್ಟ್ರದ ಎಲ್ಲೋರ ದಲ್ಲಿ ಇರುವಂತಹ 14ನೇ ಗುಹೆಯಲ್ಲಿ ಇರುವ ಕೈಲಾಸ ದೇವಸ್ಥಾನ. ಇದು ಪ್ರಪಂಚದಲ್ಲಿ ಅತಿ ದೊಡ್ಡ ಏಕಶೀಲ ದೇವಸ್ಥಾನ ಎಂದು ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ದೇವಸ್ಥಾನವನ್ನು ಕಟ್ಟಲು ಬರೋಬ್ಬರಿ ಒಂದು ನೂರ ಐವತ್ತು ವರ್ಷಗಳು ಹಿಡಿದಂತೆ, ಈ ದೇವಸ್ಥಾನ ನಿರ್ಮಾಣಕ್ಕಾಗಿ ಏಳರಿಂದ ಹತ್ತು ಸಾವಿರ ಜನರು ಈ ದೇವಸ್ಥಾನವನ್ನು ಕಟ್ಟಲು ಶ್ರಮಿಸಿದ್ದಾರೆ. ಈ ದೇವಸ್ಥಾನವು 50 ಸಾವಿರ ಅಡಿ ದೊಡ್ಡದಾಗಿದ್ದು , ಈ ದೇವಸ್ಥಾನದ ಕೆತ್ತನೆಯಲ್ಲಿ ರಾಮಾಯಣದ ಹಾಗೂ ಮಹಾಭಾರತದ ಎಲ್ಲಾತರದ ಪಾತ್ರವನ್ನು ಈ ದೇವಸ್ಥಾನದಲ್ಲಿ ಕೆತ್ತಲಾಗಿದೆ. ಈ ದೇವಸ್ಥಾನಕ್ಕೆ ಹೋದರೆ ನಿಮಗೆ ರಾಮಾಯಣ ಪ್ರತಿಯೊಂದು ಪ್ರಸಂಗ ಕೂಡ ನೀವು ಕೆತ್ತನೆಯ ಮೂಲಕ ಇಲ್ಲಿ ನೋಡಬಹುದಾಗಿದೆ. ಹಾಗೆ ಇಲ್ಲಿರುವಂತಹ ನಟರಾಜ ಎನ್ನುವ ಶಿಲೆಗೆ ಬೆಳೆದಂತಹ ಬಣ್ಣ ಇಲ್ಲಿವರೆಗೂ ಕೂಡ ಹಾಗೆ ಇದೆ. ಇನ್ನೊಂದು ಈ ದೇವಸ್ಥಾನದ ವಿಶೇಷತೆ ಏನಪ್ಪಾ ಅಂದರೆ ಎಲ್ಲಾ ದೇವಸ್ಥಾನಗಳನ್ನು ಕೆಳಗಡೆಯಿಂದ ಮೇಲ್ಗಡೆಗೆ ಶಿಲ್ಪಕಲೆಯ ಕೆತ್ತನೆಯನ್ನು ಪ್ರಾರಂಭ ಮಾಡಿದರೆ ಈ ದೇವಸ್ಥಾನದಲ್ಲಿ ಬೆಟ್ಟದ ಮೇಲಿನಿಂದ ಈ ದೇವಸ್ಥಾನದ ಕೆತ್ತನೆಯನ್ನು ಮಾಡಲಾಗಿದೆ. ಈ ರೀತಿಯಾಗಿ ನಿರ್ಮಾಣ ಮಾಡಿದಂತಹ ದೇವಸ್ಥಾನಗಳಲ್ಲಿ ಇದೇ ಮೊದಲನೆಯದು.
ಎಲ್ಲೋರ ದಲ್ಲಿ ಇರುವಂತಹ ಈ ದೇವಸ್ಥಾನವನ್ನು ಔರಂಗಜೇಬನು ತನ್ನ 10,000 ಸೈನಿಕರನ್ನು ಕಳುಹಿಸಿ ಧ್ವಂಸ ಮಾಡಲು ಹೇಳುತ್ತಾನೆ, ಆದರೆ ಈ ಬೃಹತ್ ದೇವಸ್ಥಾನವನ್ನು ತೋರಿಸು ಮಾಡಲು ಔರಂಗಜೇಬನಿಗೆ ಸಂಪೂರ್ಣವಾಗಿ ಆಗುವುದಿಲ್ಲ ಸತತ ಮೂರು ವರ್ಷಗಳ ಕಾಲ ಧ್ವಂಸ ಮಾಡುವುದಕ್ಕೆ ಪ್ರಯತ್ನ ಮಾಡಿದರೂ ಕೂಡ ಸಂಪೂರ್ಣವಾಗಿ ಧ್ವಂಸ ಮಾಡಲು ಆಗುವುದಿಲ್ಲ. ಇವಾಗ ಅರ್ಥವಾಯಿತಲ್ಲ ಈ ಬೃಹತ್ತಾದ ದೇವಸ್ಥಾನವನ್ನು ಆಕ್ರಮಣ ಮಾಡುವುದಕ್ಕೂ ನಿಲುಕದಂತಹ ಆಗಿನ ಕಾಲದಲ್ಲಿ ಈ ತರಹ ಟೆಕ್ನಾಲಜಿಯನ್ನು ಬೆಳೆಸಿದ್ದು ನಿಜವಾಗಲೂ ಹೆಮ್ಮೆ ತರುವಂತಹ ವಿಚಾರವಾಗಿದೆ.
ಮಹಾರಾಷ್ಟ್ರ ದಲ್ಲಿ ಇರುವಂತಹ ಎಲ್ಲೋರಾ ಎನ್ನುವ ಪ್ರದೇಶದಲ್ಲಿ ಇರುವ ಎಲ್ಲಾ ತರದ ದೇವಸ್ಥಾನವನ್ನು ಕಟ್ಟಿಸಿದ್ದು ಯಾರು ಎಲ್ಲಿ ಹೇಗೆ ಎನ್ನುವ ವಿಚಾರ ಇಲ್ಲಿವರೆಗೂ ಕೂಡ ಕಂಡು ಬಂದಿಲ್ಲ. ಆದರೆ ಈ ತರದ ಬೃಹತ್ ದೇವಸ್ಥಾನ ವನ್ನು ಹೇಗೆ ಕಟ್ಟಲಾಯಿತು ಇದು ನಿಜಾನಾ ಎನ್ನುವುದು ಇಲ್ಲಿವರೆಗೂ ಒಂದು ದೊಡ್ಡ ರಹಸ್ಯವಾಗಿ ಉಳಿದುಕೊಂಡಿದೆ.
ನೀವು ನಮ್ಮ ಪೇಜ್ ಅನ್ನು ಇಲ್ಲಿವರೆಗೂ ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಮೇಲೆ ಅಥವಾ ಕೆಳಗೆ ತೋರಿಸುತ್ತಿರುವ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮನ್ನು ಪ್ರೋತ್ಸಾಹಿಸಿ ಇಂತಿ ನಿಮ್ಮ ಪ್ರೀತಿಯ ಮಂಡ್ಯದ ಹುಡುಗಿ ರಶ್ಮಿ.