ಆಮೆಯ ಮೂರ್ತಿಯನ್ನು ದೇವಸ್ಥಾನಗಳ ಮುಂದೆ ಅಥವಾ ದೇವಸ್ಥಾನದಲ್ಲಿ ಯಾಕೆ ನಿರ್ಮಿಸಲಾಗಿರುತ್ತದೆ ಈ ಪ್ರಶ್ನೆ ನಿಮ್ಮಲ್ಲಿ ಯಾವತ್ತಾದರೂ ಬಂದಿದ್ದರೆ .
ಈ ಪ್ರಶ್ನೆಗೆ ನಾವು ಈ ದಿನ ನಿಮಗೆ ಉತ್ತರವನ್ನು ತಿಳಿಸುತ್ತೇವೆ ಹಾಗಾದರೆ ಸ್ನೇಹಿತರ ಈ ಮಾಹಿತಿ ನಿಮಗೆ ಉಪಯುಕ್ತವಾಗಿರುತ್ತದೆ ಆದ್ದರಿಂದ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ನಿಮಗೆ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಮಿತ್ರರೊಂದಿಗೆ ಈ ಮಾಹಿತಿಯನ್ನು ಷೇರ್ ಮಾಡೋದನ್ನು ಮರೆಯದಿರಿ .
ಆಮೆ ಅಂದರೆ ಲಕ್ಷ್ಮಿಯ ಪ್ರತೀಕ ಈ ಆಮೆಯ ಪ್ರತಿಮೆಯನ್ನು ಮನೆಯಲ್ಲಿ ಇಡುವುದರಿಂದ ಮನೆಗೆ ಶುಭ ಹಾಗೂ ಮನೆಯಲ್ಲಿ ದುಷ್ಟಶಕ್ತಿಗಳು ಇರುವುದಿಲ್ಲ ಎನ್ನುವ ಆಮೆಯ ಪ್ರತಿಮೆಯನ್ನು ಮನೆಯಲ್ಲಿ ಇಂತಹ ದಿಕ್ಕಿನಲ್ಲೇ ಇರಬೇಕು ಅನ್ನೋ ಒಂದು ಶಾಸ್ತ್ರವೂ ಕೂಡ ಹೀಗೆ ಮನೆಯಲ್ಲಿ ಆಮೆಯ ಪ್ರತಿಮೆಯನ್ನು ಇಡುವುದರಿಂದ ಮನೆಗೆ ಶುಭವಾಗುತ್ತದೆ ಎಂದು ನಂಬಲಾಗಿದೆ .
ಇದೇ ರೀತಿ ದೇವಸ್ಥಾನಗಳಲ್ಲಿಯೂ ಕೂಡ ಆಮೆಯ ಪ್ರತಿಮೆಯನ್ನು ನಿರ್ಮಿಸಲಾಗಿರುತ್ತದೆ ಹೀಗೆ ಯಾಕೆ ಪ್ರತಿಮೆಯನ್ನು ನಿರ್ಮಿಸಲಾಗುತ್ತದೆ ಎಂದರೆ ಸಮುದ್ರ ಮಂಥನದ ವೇಳೆ ವಿಷ್ಣು ಕೂರ್ಮಾವತಾರ ವನ್ನು ತಾಳಿ ಭೂಮಿ ತಾಯಿಯನ್ನು ಹೊತ್ತು ದೇವಾನು ದೇವತೆಗಳನ್ನು ಮತ್ತು ೮೪ಕೋಟಿ ಜೀವರಾಶಿಗಳನ್ನು ಕಾಪಡಿದರು .
ಅ ಕಾರಣಕ್ಕಾಗಿಯೆ ದೇವಸ್ಥಾನಗಳಲ್ಲಿ ಆಮೆಯ ಪ್ರತಿಮೆಯನ್ನು ಅಥವಾ ಆಮೆಯ ಪ್ರತಿಮೆಯ ಆಕಾರವನ್ನು ಕಟ್ಟಿಸಲಾಗುತ್ತದೆ ಹಾಗೂ ದೇವರ ದರ್ಶನಕ್ಕೆ ಬರುವವರು ಮೊದಲು ಆಮೆಯ ದರ್ಶನವನ್ನು ಪಡೆದು ನಂತರ ಗರ್ಭಗುಡಿಯ ದೇವರ ದರ್ಶನವನ್ನು ಮಾಡಬೇಕು ಎಂಬ ಪದ್ಧತಿಯೂ ಕೂಡ ಹಿಂದೂ ಸಂಪ್ರದಾಯದಲ್ಲಿ ಇದೇ .
ಆಮೆಯ ಪ್ರತಿಮೆಯನ್ನು ಮನೆಯಲ್ಲಿಟ್ಟರೆ ಲಕ್ಷ್ಮಿ ಪ್ರತೀಕ ಎಂದು ನಾನು ಈ ಮೊದಲೇ ಈ ಮಾಹಿತಿಯಲ್ಲಿ ತಿಳಿಸಿದೆ ಆದ್ದರಿಂದ ಮನೆಯಲ್ಲಿ ಆಮೆಯ ಪ್ರತಿಮೆಯನ್ನು ಇಡುವುದರಿಂದ ಲಕ್ಷ್ಮೀದೇವಿಯ ಕೃಪಾಕಟಾಕ್ಷ ದೊರೆಯುವುದರ ಜೊತೆಗೆ ವಿಷ್ಣುವಿನ ಸಾನ್ನಿಧ್ಯವು ಕೂಡ ಆ ಮನೆಯ ಮೇಲೆ ಇರುತ್ತದೆ ಎಂದು ನಂಬಲಾಗಿದೆ .
ಆಮೆಯ ಪ್ರತಿಮೆಯನ್ನು ದೇವಸ್ಥಾನಗಳಲ್ಲಿ ಏರಿಸುವುದರಿಂದ ಮನುಷ್ಯನಿಗೆ ಮತ್ತೊಂದು ವಿಚಾರವನ್ನು ಕೂಡ ತಿಳಿಸಿ ಹೇಳಲಾಗುತ್ತದೆ ಅದೇನೆಂದರೆ ಆಮೆಯ ಹೇಗೆ ತನ್ನ ಅವಯವಗಳನ್ನು ಸಮಯಕ್ಕೆ ಸಂದರ್ಭಕ್ಕೆ ತಕ್ಕ ಹಾಗೆ ಹೊರ ಹಾಕುತ್ತದೆಯೋ ಅದೇ ರೀತಿಯಲ್ಲಿ ಮನುಷ್ಯನು ಕೂಡ ತನ್ನ ಪಂಚೇಂದ್ರಿಯಗಳನ್ನು ಸಮಯಕ್ಕೆ ತಕ್ಕ ಹಾಗೆ ಬಳಸಬೇಕು ಎಂಬುದನ್ನು ಆಮೆ ತಿಳಿಸುತ್ತದೆ .
ಆಮೆ ಇಂದ ತಿಳಿದುಕೊಳ್ಳಬೇಕಾದಂತಹ ಮತ್ತೊಂದು ವಿಚಾರವೇನು ಅಂದರೆ ಹೇಗೆ ಆಮೆಯು ಮೊಟ್ಟೆಯನ್ನು ಇಡುವಾಗ ಅದನ್ನು ಸಮುದ್ರದ ದಡದಲ್ಲಿ ಇಟ್ಟು ನಂತರ ಸಮುದ್ರಕ್ಕೆ ಹೋಗುತ್ತದೆಯೋ ಅದೇ ರೀತಿ ಮನುಷ್ಯನು ಸಂಸಾರದೊಳಗೆ ಕಾಲಿಡುತ್ತಿದ್ದಾನೆ ಅಂದರೆ ತನ್ನ ದುಷ್ಕರ್ಮಗಳನ್ನು ದೂರ ಮಾಡಿ ಸ್ವಚ್ಛ ಮನಸ್ಸಿನಿಂದ ಜೀವನ ನಡೆಸಬೇಕು .
ಹೀಗೆ ಸ್ವಚ್ಛ ಮನಸ್ಸಿನಿಂದ ಸಂಸಾರಕ್ಕೆ ಇಳಿದ ವ್ಯಕ್ತಿಯ ಭಗವಂತನ ಧ್ಯಾನವನ್ನು ಮಾಡಿ ಸ್ವಚ್ಛ ಮನಸ್ಸನ್ನು ತನ್ನ ಜೀವನದಲ್ಲಿ ಹೊಂದಿರಬೇಕು ಹಾಗೆಯೇ ತನ್ನ ದೇಹವನ್ನು ಗಟ್ಟಿಯನ್ನಾಗಿಸಿಕೊಂಡು ದಾನ ಧರ್ಮಗಳನ್ನು ಮಾಡಿದರೆ ಆಗ ಮನುಷ್ಯನ ಮನಸ್ಸು ಮೃದಗೊಳ್ಳುತ್ತದೆ ಈ ರೀತಿಯಾಗಿ ಪರಮಾತ್ಮನನ್ನು ಸೇರಲು ಸುಲಭವಾಗುತ್ತದೆ ಎಂದು ಹೇಳಲಾಗಿದೆ .
ಈ ಮಾಹಿತಿ ನಿಮಗೆಲ್ಲರಿಗೂ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ ಹಾಗೂ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಮಾಹಿತಿಯನ್ನು ಬೇರೆಯವರಿಗೂ ಕೂಡ ಶೇರ್ ಮಾಡಿ ಹಾಗೂ ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡೋದನ್ನು ಮರೆಯದಿರಿ .
ಈ ಮಾಹಿತಿಯ ಮುಖಾಂತರ ನಾನು ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ನಮ್ಮ ಹಿರಿಯರು ಯಾವುದೇ ಶಾಸ್ತ್ರ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬಂದಿದ್ದರೆ ಅದು ಮಾನವನ ಒಳಿತಿಗಾಗಿ ಅದ್ದರಿಂದ ಪಾಶ್ಚಾತ್ಯರ ಸಂಪ್ರದಾಯಕ್ಕೆ ಮೊರೆ ಹೋಗದೆ ನಮ್ಮ ಸಂಪ್ರದಾಯಗಳನ್ನು ಉಳಿಸಿ ಬೆಳೆಸಿ ಧನ್ಯವಾದ .