ಅಲ್ಲಿ ಇದ್ದಾರಂತೆ ಹಾರುವ ಸಾಧುಗಳು. ಇಲ್ಲಿನ ರಹಸ್ಯ ತಿಳಿಯೋಣ ಬನ್ನಿ!!!

269

ಸ್ನೇಹಿತರೆ ಮನುಷ್ಯನ ಯಾವ ಯಂತ್ರದ ಸಹಾಯವಿಲ್ಲದೆ ಗಾಳಿಯಲ್ಲಿ ಹಾರುವುದಕ್ಕೆ ಆಗುತ್ತಾ, ನೀರಲಿ ನಡೆಯುವುದಕ್ಕೆ ಸಾಧ್ಯಾನಾ, ಇದನ್ನು  ಹೇಳಿದರೆ ನಿಮಗೆ ನಂಬಲು ಕಷ್ಟ ಅನಿಸಬಹುದು ಸ್ವಲ್ಪ ನಗು ಬಂದರು ಬರಬಹುದು .

ಆದರೆ ಯಾವುದೇ ಯಂತ್ರಗಳ ಸಹಾಯವಿಲ್ಲದೆ ಗಾಳಿಯಲ್ಲಿ ಹಾರುವ ಅಂತಹ ಸಾಧುಗಳು ಮನುಷ್ಯರಿಂದ ದೂರದಲ್ಲಿ ವಾಸಿಸುತ್ತಿದ್ದಾರೆ ಎನ್ನುವ ವಿಷಯವನ್ನು ಕೇಳಿದರೆ ನಿಜವಾಗಲೂ ಅಚ್ಚರಿಯನ್ನು ಮೂಡಿಸುತ್ತದೆ.

ನಮಗೆ ನಿಮಗೆ ಆಗದೇ ಇರುವಂತಹ ಅದೆಷ್ಟು ಶಕ್ತಿಗಳನ್ನು ಇವರು ನಿಭಾಯಿಸುತ್ತಾರೆ ಎಂದು ವಿಷಯವನ್ನು ಇವತ್ತು ನಾವು ನಿಮಗೆ ಹೇಳಲು ಹೊರಟಿದ್ದೇವೆ. ಇಷ್ಟಕ್ಕೂ ಯಾರು ಅವರು ಎಲ್ಲಿದ್ದಾರೆ ಹೇಗಿದ್ದಾರೆ ಎಲ್ಲವನ್ನು ನಾವು ನಿಮಗೆ ಇವತ್ತು ಹೇಳುತ್ತೇವೆ ಮುಂದೆ ಓದಿ.

ಸ್ನೇಹಿತರ ನೀವು ಆ ಪ್ರದೇಶದ ಹೆಸರನ್ನು ಕೇಳ್ತೀರಾ, ಅದು ನಮ್ಮ ದೇಶದ ಅತಿ ಹೆಚ್ಚು ಎತ್ತರದ ಶಿವಲಿಂಗ ಹೊಂದಿರುವಂತಹ ಪ್ರದೇಶ. ಹಾಗೂ ಅದೆಷ್ಟು ಋಷಿ ಹಾಗೂ ಸಾಧುಗಳಿಗೆ ಏಕಾಂತ ಒದಗಿಸುವಂತಹ ಜಾಗ ಅದು. ಅಲ್ಲಿಗೆ ಹೋದವರಿಗೆ ಪ್ರಶಾಂತವಾದ ಮನಸ್ಸು ಬರುತ್ತದೆ ಆ ಜಾಗ ಮತ್ತ್ಯಾವುದೂ ಅಲ್ಲ ಅದೇ ತಿರುವಣ್ಣಾಮಲೈ.

ಇದು  ಕೇವಲ ದೇವರು ಇರುವ ದೇವಸ್ಥಾನ ಅಲ್ಲ ಇಲ್ಲಿ ಸಾಕಷ್ಟು ಸಿದ್ದರು ಹಾಗೂ ಸಾಧುಗಳು ವಾಸ ಮಾಡುವಂತಹ ಸ್ಥಳ . ಇಲ್ಲಿ ಆಗಾಗ ಕೆಲವು ಪವಾಡಗಳು ನಡೆಯುತ್ತವೆ ಅಂತೆ ಆ ಪವಾಡವೇ ಅಲ್ಲಿ ಇರುವಂತಹ ಸಾಧು ಸಂತರು ಗಾಳಿಯಲ್ಲೇ ಹಾರಾಡುತ್ತಾ ರೆ. ಇದನ್ನು ಅಲ್ಲಿ ಇರುವಂತಹ ಕೆಲ ಜನರು ಸೂಕ್ಷವಾಗಿ ಗಮನಿಸಿದ್ದಾರೆ.

ಹಾಗೆ ಕೆಲ ಜನರು ಇದನ್ನು ಪರೀಕ್ಷೆಯನ್ನು ಕೂಡ ಮಾಡಲು ಪ್ರಯತ್ನ ಪಟ್ಟಿದ್ದಾರೆ. ಹೇಗೆ ಯಾಕೆ ಆಗುತ್ತದೆ ಸಾಧು ಸಂತರು ಹೇಗೆ ಗಾಳಿಯಲ್ಲಿ ಹಾರಾಡುತ್ತಾರೆ ಎಂದರೆ ಬಗ್ಗೆ ತಿಳಿದುಕೊಳ್ಳಲು ನೀವು. ಒಂದು ಪಂಥದ ಬಗ್ಗೆ ತಿಳಿದುಕೊಳ್ಳ ಬೇಕಾಗುತ್ತದೆ ಅದೇ ಸಿದ್ದರು. ಈ ಸಾಧು ಸಂತರು  ಬೇರೆ ಸಾಧುಗಳಿಗಿಂತ ಅತೀ ಹೆಚ್ಚು ಶಕ್ತಿಯನ್ನು ಹೊಂದಿರುತ್ತಾರೆ ಇವರ ಇವರಿಗೆ ಇರುವಂತಹ ಶಕ್ತಿಯಿಂದ ಏನು ಬೇಕಾದರೂ ಮಾಡಬಹುದು.

ಸಿದ್ದರಿಗೆ ಮೂರು ತರನಾದ ಸಿದ್ಧಿಯನ್ನು ಪಡೆದುಕೊಂಡಿರುತ್ತಾರೆ. ಅದರಲ್ಲಿ ಮೊದಲನೆಯದು ಅನಿಮ, ಮಹಿಮ ಹಾಗೂ ಗರಿಮ ಮಾಡುವ 3 ಶಕ್ತಿಗಳನ್ನು ಸಿದ್ದರು ಪಡೆದುಕೊಂಡಿರುತ್ತಾರೆ. ಇದರಲ್ಲಿ ಮೊದಲ ಅನಿಮ ಎನ್ನುವ ಒಂದು ಶಕ್ತಿಯಿಂದ ತಮ್ಮ ದೇಹವನ್ನು ತಾವೇ ಕುಗ್ಗಿಸುವಂತಹ ಶಕ್ತಿ ಬರುತ್ತದೆ.

ಮಹಿಮ ಎಂದರೆ ತಮ್ಮ ದೇಹವನ್ನು ದೊಡ್ಡ ಗಾತ್ರದಲ್ಲಿ ಬೆಳೆಸಿ ಕೊಳ್ಳುವಂತಹ ಶಕ್ತಿಯು ಇರುತ್ತದೆ. ಗರಿಮ ಎಂದರೆ ಇವರು ಯಾರು ದೇಹಕ್ಕೆ ಬೇಕಾದರೂ ಪರಕಾಯ ಪ್ರವೇಶ ಮಾಡಬಹುದು. ಹಾಗೆ ಕೊನೆಯ ಶಕ್ತಿಯೆಂದರೆ ಪ್ರಾಪ್ತಿ ಅವರಿಗೆ ಯಾವುದೇ ಎಲ್ಲಾ ತರನಾದ ಶಕ್ತಿಯನ್ನು ನಿಯಂತ್ರಿಸಬಹುದು.

ಇದರಿಂದ ಇವರು ದೇವರಿಗೆ ಸಮಾನರಾಗುತ್ತಾರೆ. ಕೊನೆಯದಾಗಿ ವಿಚಿತ್ರ ಸೃಷ್ಟಿ ಮಾಡುವಂತಹ ಶಕ್ತಿ ಅವರಿಗೆ ಬರುತ್ತದೆ ಅಂದರೆ ಅವರಿಗೆ ಇಡೀ ಬ್ರಹ್ಮಾಂಡವನ್ನೇ ನಿಯಂತ್ರಣ ಮಾಡುವಂತಹ ಶಕ್ತಿ ಅವರಿಗೆ ಬರುತ್ತದೆ. ಇದು ಶಾಸ್ತ್ರ ದಲ್ಲಿ ಇರುವಂತಹ ಸಿದ್ಧರ ಬಗ್ಗೆ ಇರುವ ಉಲ್ಲೇಖವಾಗಿದೆ.

ಇಷ್ಟೊಂದು ಶಕ್ತಿಯನ್ನು ಹೊಂದಿರುವಂತಹ ಸಿದ್ದರಿಗೆ ಗಾಳಿಯಲ್ಲಿ ತೇಲಾಡುವ ಹಾಗೂ ನೀರಿನ ನಡೆಯುವುದು ದೊಡ್ಡ ವಿಷಯವೇನಲ್ಲ. ಆದರೆ ಇದು ಎಲ್ಲ ಸಿದ್ದರು ಮಾಡಲು ಸಾಧ್ಯ ಇಲ್ಲ ಇಡೀ ಭಾರತದಲ್ಲಿ ಕೆಲವೇ ಸಿದ್ದರು ಮಾತ್ರ ಅತೀಯಾದ ಶಕ್ತಿ ಹೊಂದಿದ್ದಾರೆ ಅವರು ಆದಷ್ಟು ಮನುಷ್ಯ ಜನರಿಂದ ದೂರದಲ್ಲೇ ಇರುತ್ತಾರೆ.

ಕೆಲವು ಯೋಗ ಮಾಡುವಂತಹ ಯೋಗಿಗಳು ಹೇಳುತ್ತಾರೆ ಯೋಗವನ್ನು ಸರಿಯಾಗಿ ಮಾಡಿದರೆ ನೀರಿನ ಮೇಲೆ ನಡೆಯಬಹುದು ಹಾಗೆ ನೀರಿನಲ್ಲಿ ಮಲಗ ಬಹುದು ಎಂದು. ಇದಕ್ಕೆ ಉದಾಹರಣೆ ಆಗಿ ನೀರಿನ ಮೇಲೆ ಮಲಗಿ ಉಸಿರಲ್ಲೇ ಕಂಟ್ರೋಲ್ ಮಾಡುತ್ತಾ ಕುಳಿತು ಕೊಳ್ಳುವ ವೀಡಿಯೊ ಗಳು ಸಹ ಸಾಕಷ್ಟು ಜನ ಯೌಟುಬ್ ನಲ್ಲಿ ಹಾಕಿದ್ದಾರೆ .

ಆದರೆ ಸಾವಿರಾರು ವರ್ಷ ದೇವರ ಧ್ಯಾನದಲ್ಲಿ ಯೋಗವನ್ನು ಪಡೆದು ದೀಕ್ಷ ಪಡೆದಂತಹ ಈ ಸಿದ್ದರಿಗೆ ಇನ್ನಷ್ಟು ಶಕ್ತಿ ಇರಬೇಕು ಅಲ್ವಾ. ಇವತ್ತಿಗೂ ಕೂಡಾ ತಮಿಳುನಾಡಿನಲ್ಲಿ ಅಲ್ಲಲ್ಲಿ ಬೆಟ್ಟಗುಡ್ಡಗಳಲ್ಲಿ ನೂರಾರು ಜನ ಇದ್ದಾರೆ ಅವರೇನಾದರೂ ಹೊರಗಡೆ ಬಂದರೆ ನೀವು ಯಾವ ಹುಚ್ಚನೇ ಇರಬೇಕೆಂದು ಹೇಳುತ್ತಿರ ಆದರೆ ಅವರು ಸಿದ್ಧರಾಗಿರುತ್ತಾರೆ. ಆದರೆ ಇವರು ಹೆಚ್ಚಾಗಿರುವುದು ತಿರುವಣ್ಣಾಮಲೈ ದೇವಸ್ಥಾನ ಬಳಿ ಇರುವಂತಹ ಬೆಟ್ಟಗುಡ್ಡಗಳಲ್ಲಿ. ಸಾಮಾನ್ಯವಾಗಿ ಸಿದ್ದರು ಯಾರ ಕಣ್ಣಿಗೆ ಕಾಣಿಸಿಕೊಳ್ಳುವುದಿಲ್ಲ ಅವರು ಜನರಿಂದ ದೂರವಾಗಿ ಬದುಕುತ್ತಿರುತ್ತಾರೆ.

 

LEAVE A REPLY

Please enter your comment!
Please enter your name here