ದೇವರಿಗೆ ಸಮರ್ಪಿಸುವಂತಹ ಕುಂಕುಮ ಮನೆಯಲ್ಲಿ ಬಿದ್ದರೆ ಅಂದರೆ ಅಚಾನಕ್ಕಾಗಿ ಕೈ ಜಾರಿ ಚೆಲ್ಲಿದ್ದರೆ ಅಥವಾ ಕುಂಕುಮದ ಬಟ್ಟಲಿನಿಂದ ಕುಂಕುಮ ಕೆಳಗೆ ಚೆಲ್ಲಿದ್ದರೆ, ಅದನ್ನು ಕೆಲವರು ಮೂಢನಂಬಿಕೆಯಿಂದ ಅಶುಭ ಅಂತ ಹೇಳ್ತಾರೆ,ಆದರೆ ಆ ಒಂದು ಸನ್ನಿವೇಶದಲ್ಲಿ ನೀವು ಯಾವ ಹೆದರುವ ಅವಶ್ಯಕತೆ ಇಲ್ಲ, ಯಾಕೆ ಅನ್ನೋದನ್ನು ನಾನು ಈ ದಿನದ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇನೆ, ಈ ಒಂದು ಮೂಢನಂಬಿಕೆ ಅನ್ನು ನಂಬುವ ಜನರುಈ ಒಂದು ವಿಚಾರದ ಬಗೆಗಿನ ತಪ್ಪಿನ ತಿಳಿವಳಿಕೆಯ ಕುರಿತು, ಈ ದಿನದ ಮಾಹಿತಿಯಲ್ಲಿ ನಿಮಗೆ ಆ ಒಂದು ಸಂಶಯವನ್ನು ನಿವಾರಿಸಿಕೊಡುವುದೆ ಇಂದಿನ ಈ ಮಾಹಿತಿಯ ಉದ್ದೇಶ ಆಗಿರುತ್ತದೆ.
ಹಾಗಾದರೆ ನೀವು ಕೂಡ ಈ ಒಂದು ವಿಚಾರದಲ್ಲಿ ಗೊಂದಲಕ್ಕೆ ಒಳಗಾಗಿದ್ದರೆ ಈ ಮಾಹಿತಿಯನ್ನು ತಪ್ಪದೆ ಸಂಪೂರ್ಣವಾಗಿ ತಿಳಿಯಿರಿ, ಹಾಗೂ ಇನ್ನು ಮುಂದಿನ ದಿನಗಳಲ್ಲಿ ಯಾವುದೆ ವಿಚಾರಗಳನ್ನೆ ಆಗಲಿ ಅದನ್ನು ಪೂರ್ತಿಯಾಗಿ ನಂಬುವ ಮುನ್ನ, ಆ ವಿಚಾರವನ್ನು ಸರಿಯಾಗಿ ವಿಶ್ಲೇಷಣೆ ಮಾಡಿ ನಂತರ ಆ ಒಂದು ಪದ್ಧತಿಯನ್ನೆ ಆಗಲಿ ಆ ಒಂದು ವಿಚಾರವನ್ನೆ ಆಗಲಿ ನಂಬುವುದು ಸೂಕ್ತವಾಗಿರುತ್ತದೆ.ಕುಂಕುಮ ಇದೊಂದು ದೇವರಿಗಾಗಿ ಸಮರ್ಪಿಸುವ ಒಂದು ಪವಿತ್ರ ವಸ್ತುವಾಗಿರುತ್ತದೆ, ಈ ಕುಂಕುಮ ನಿಮ್ಮ ಮನೆಯಲ್ಲಿ ಅಚಾನಕ್ಕಾಗಿ ಚೆಲ್ಲಿದ್ದರೆ, ಅದನ್ನು ನೀವು ಅಶುಭ ಎಂದು ತಿಳಿಯದಿರಿ,
ನಮ್ಮ ಶಾಸ್ತ್ರವೂ ಹೇಳುವ ಹಾಗೆ ಯಾವುದೇ ವಸ್ತು ಕೆಳಗೆ ಬಿದ್ದರೂ ಅದು ಯಾವುದೇ ರೀತಿಯಲ್ಲಿ ಅಶುಭದ ಸಂಕೇತವಲ್ಲ ಮತ್ತು ಕೆಡಕನ್ನು ಕೂಡ ಉಂಟುಮಾಡುವುದಿಲ್ಲ ಆ ವಸ್ತು ಕೇವಲ ಕೆಳಗೆ ಬಿಟ್ಟರೆ ವಸ್ತು ನಷ್ಟ ಆಗಿರುತ್ತದೆ ಅಷ್ಟೆ ಇದರಿಂದ ಯಾವ ನಷ್ಟವೂ ನಮಗೇ ಉಂಟಾಗುವುದಿಲ್ಲ.ಕುಂಕುಮವು ಕೂಡ ಒಂದು ದೇವರಿಗೆ ಸಮರ್ಥಿಸುವಂತಹ ಶ್ರೇಷ್ಠ ವಸ್ತುವಾಗಿದೆ ಅದೇನಾದರೂ ಕೆಳಗೆ ಬಿದ್ದರೆ ಅದು ವಸ್ತು ನಷ್ಟ ಅಷ್ಟೆ ಈ ಕುಂಕುಮ ಕೆಳಗೆ ಜಾರಿ ಬಿದ್ದರೆ ಅದು ಭೂತಾಯಿಗೆ ಸಮರ್ಪಿತವಾಯಿತು ಅಂತ ನಾವು ಅಂದುಕೊಳ್ಳಬೇಕು
ಯಾಕೆ ಅಂದರೆ ಯಾವ ವಿಚಾರಗಳು ನಮ್ಮ ಕೈಮೀರಿ ನಡೆಯುತ್ತದೆಯೋ ಅದು ನಾವು ಮಾಡುವ ತಪ್ಪಲ್ಲ ಅಚಾನಕ್ಕಾಗಿ ಕುಂಕುಮ ಚೆಲ್ಲಿದರೆ, ಅದು ಭೂತಾಯಿಗೆ ಸಮರ್ಪಿತವಾಯಿತು ಎಂದು ಅರ್ಥವನ್ನು ನೀಡುತ್ತದೆ ಅಷ್ಟೇ.ಇಂದಿಗೂ ಕೂಡ ಎಷ್ಟೋ ವಿಚಾರಗಳು ನಮ್ಮ ಅರಿವಿಗೆ ಬಂದಿಲ್ಲದೆ ಇರುವಂತಹ ವಿಚಾರಗಳಲ್ಲಿ ನಾವು ಮೂಢ ನಂಬಿಕೆಯಿಂದ ನಡೆದುಕೊಳ್ಳುತ್ತಿದ್ದೇವೆ, ಆದರೆ ನೀವು ನಂಬುವಂತಹ ಪ್ರತಿಯೊಂದು ವಿಚಾರವನ್ನು ಕೂಡ ಸರಿಯಾಗಿ ವಿಮರ್ಶೆ ಮಾಡಿ ನಂತರ ಆ ವಿಚಾರಗಳನ್ನು ನಂಬಲು ಮುಂದಾಗಿ ಇಲ್ಲವಾದಲ್ಲಿ ಆ ನಂಬಿಕೆಗಳೇ ನಿಮ್ಮ ಜೀವನದಲ್ಲಿ ಕೆಡುಕನ್ನುಂಟು ಮಾಡಬಹುದು.
ಮಾಹಿತಿಗೆ ಬರುವುದಾದರೆ ಇನ್ನು ಮುಂದಿನ ದಿನಗಳಲ್ಲಿ ನಿಮ್ಮ ಮನೆಯಲ್ಲಿ ಕುಂಕುಮ ಅಚಾನಕ್ಕಾಗಿ ಚೆಲ್ಲಿದ್ದರೆ ಅದನ್ನು ಅಶುಭ ಅಂತ ತಿಳಿಯದಿರಿ ಆ ಒಂದು ವಸ್ತು ಭೂತಾಯಿಗೆ ಸಮರ್ಪಿತವಾಯಿತು ಅಂತ ಅಂದುಕೊಳ್ಳಿ ಅಷ್ಟೇ.ಈ ದಿನ ತಿಳಿಸಿದಂತಹ ಈ ಮಾಹಿತಿ ನೀವು ನಂಬಿದಂತಹ, ನಂಬಿಕೆಗಳು ನಂಬಿಕೆಯಲ್ಲ ಕೇವಲ ಮೂಢನಂಬಿಕೆ ಅನ್ನೋದನ್ನು ತಿಳಿಸುವುದಕ್ಕಾಗಿ, ಈ ಒಂದು ವಿಚಾರವನ್ನು ತಿಳಿಸಲಾಗಿದ್ದು,ನೀವು ಕೂಡ ಈ ಒಂದು ಮಾಹಿತಿಯನ್ನು ತಿಳಿದು ಈ ಉಪಯುಕ್ತ ಮಾಹಿತಿಯನ್ನು ಬೇರೆಯವರಿಗೂ ಕೂಡ ಶೇರ್ ಮಾಡಿ. ಹಾಗೆ ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ಆಚಾರ ವಿಚಾರದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜನ್ನು ಫಾಲೊ ಮಾಡಿ ಧನ್ಯವಾದ.