Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳು ಬಂದಾಗ ನಿಮಗೆ ಭಯವಾಗುತ್ತಾ ಹೀಗೆ ನೀವು ಈ ದಿನಗಳಲ್ಲಿ ಹೆದರುತ್ತಿದ್ದರೆ ಚಪಾತಿಯಿಂದ ಈ ಚಿಕ್ಕ ಪರಿಹಾರ ಮಾಡಿಕೊಳ್ಳಿ ನಂತರ ಯಾವುದೇ ರೀತಿಯ ಭಯ ಆಗಲ್ಲ …!!!

ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನದಂದು ನಿಮಗೆ ತೊಂದರೆಗಳು ಉಂಟಾಗಿದ್ದರೆ ಚಪಾತಿಯಿಂದ ಈ ಪ್ರಯೋಗವನ್ನು ಮಾಡಿ ನೋಡಿ.ಹಾಯ್ ಸ್ನೇಹಿತರೆ ಇವತ್ತು ನಾನು ನಿಮಗೆ ಇಂಪಾರ್ಟೆಂಟ್ ಆದ ಒಂದು ವಿಷಯವನ್ನು ಹೇಳುತ್ತಿದ್ದೇನೆ. ಇದು ಎಲ್ಲರಿಗೂ ಸಾಮಾನ್ಯವಾಗಿ ಕಾಡುತ್ತಿರುತ್ತದೆ ಅಮಾವಾಸ್ಯೆ ಹುಣ್ಣಿಮೆ ದಿನ ಹತ್ತಿರ ಬರುತ್ತಿದ್ದಂತೆ ಮನಸಲ್ಲಿ ಕಳವಳ ಮನೆಯಲ್ಲಿ ಅಶಾಂತಿ ಕತ್ತಲೆ ತುಂಬಿದ ವಾತಾವರಣ ಹೀಗೆ ಏನೇನೋ ಕಲ್ಪನೆಗಳು ನಮ್ಮಲ್ಲಿ ಬರುತ್ತವೆ. ಕೆಲವೊಬ್ಬರಿಗೆ ಅಂತೂ ಅಮಾವಾಸ್ಯೆ ಹುಣ್ಣಿಮೆ ಹತ್ತಿರ ಬಂದಂತೆ ಕೆಟ್ಟ ಕೆಟ್ಟ ಕನಸುಗಳು ಬೀಳಲು ಆರಂಭವಾಗುತ್ತವೆ. ಹಾಗೆ ಮನೆಯಲ್ಲಿ ಒಬ್ಬರಿಗೆ ಇರಲು ಭಯ ಆಗುತ್ತದೆ ಮನೆಯಲ್ಲಿ ಏನು ಇಲ್ಲದಿದ್ದರೂ ಏನೋ ಇದೆ ಎಂಬ ಭಯ ಆಗುತ್ತದೆ.

ಸ್ನೇಹಿತರೆ ಅಮಾವಾಸ್ಯೆ ಹಾಗೂ ಹುಣ್ಣಿಮೆಗಳು ತಿಂಗಳಲ್ಲಿ ಎರಡು ಸಲ ಬರುತ್ತವೆ ಒಂದು ಅಮಾವಾಸ್ಯೆ ಹಾಗೂ ಒಂದು ಹುಣ್ಣಿಮೆ. ಅಮವಾಸ್ಯೆಯಲ್ಲಿ ಚಂದಿರ ಕಾಣುವುದಿಲ್ಲ ಅದೇ ರೀತಿಯಾಗಿ ಹುಣ್ಣಿಮೆಯ ದಿನ ಚಂದ್ರ ತನ್ನ ಪೂರ್ತಿ ಆಕಾರವನ್ನು ಹೊಂದಿ ಬೆಳಕನ್ನು ನೀಡುತ್ತಾನೆ. ಸ್ನೇಹಿತರೆ ಸೂರ್ಯ-ಚಂದ್ರರು ನಮ್ಮ ಭೂಮಂಡಲಕ್ಕೆ ಮಾತೃ ಪಿತೃ ಇದ್ದಹಾಗೆ. ಹಾಗಾದರೆ ಏಕೆ ಅಮಾವಾಸ್ಯೆ ಹುಣ್ಣಿಮೆ ದಿನ ನಮಗೆ ಭಯ ಕಳವಳ ಶುರುವಾಗುತ್ತದೆ ಎಂದು ನೋಡೋಣ. ಮಾನಸಿಕವಾಗಿ ತುಂಬಾ ಸದೃಢ ಇರದವರು ಇಂತಹ ಸಂಕಟಗಳನ್ನು ಎದುರಿಸುತ್ತಾರೆ. ಅಮಾವಾಸ್ಯೆ ಹಾಗೂ ಹುಣ್ಣಿಮೆಯ ದಿನದಲ್ಲಿ ಭೂತ- ಪ್ರೇತಗಳಿಗೆ ಹೆಚ್ಚಿನ ಶಕ್ತಿ ಬಂದಿರುತ್ತದೆ.

ಯಾವುದೇ ಗ್ರಹದ ತೊಂದರೆಗಳು ಬರಬೇಕು ಎಂದರೆ ಅದು ಚಂದ್ರನ ಮುಖಾಂತರವೇ ನಮಗೆ ಬರುತ್ತದೆ ಉದಾಹರಣೆಗೆ ಯಾರಾದರೂ ನಿಮಗೆ ಗುರುಗ್ರಹದ ಅಥವಾ ಶನಿಗ್ರಹದ ಇದೆ ಎಂದು ಹೇಳಿದರೆ ಅದು ಚಂದ್ರನಿಂದಲೇ ನಿಮಗೆ ಸೇರಿರುತ್ತದೆ. ಯಾರಾದರೂ ವಶೀಕರಣ ಮಾಡಿಸುವುದಾದರೆ ಹಾಗೂ ಮಾಟ ಮಂತ್ರವನ್ನು ಮಾಡಿಸುತ್ತಿದ್ದರೆ ಅಮವಾಸ್ಯೆ ದಿನದಂದು ಹೆಚ್ಚಾಗಿ ಮಾಡುತ್ತಾರೆ. ಹಾಗಾದರೆ ನೀವು ವಶೀಕರಣ ಅಥವಾ ಮಾಟ-ಮಂತ್ರ ಹೊಂದಿದ್ದೀರಾ ಎಂದು ತಿಳಿದುಕೊಳ್ಳಲು ಈ ಒಂದು ಸರಳವಾದ ಪ್ರಯೋಗವನ್ನು ನೀವು ಮನೆಯಲ್ಲಿ ಮಾಡಿ ನೋಡಿ. ಸ್ನೇಹಿತರೆ ಈ ಪ್ರಯೋಗವನ್ನು ನೀವು ಮಾಡುವುದರಿಂದ ನೀವು ವಶೀಕರಣಕ್ಕೆ ಸಿಲುಕಿದ್ದೀರಿ ಅಥವಾ ಇಲ್ಲ ಎಂಬುದನ್ನು ಬೇಗನೆ ತಿಳಿಯಬಹುದು ಹಾಗೂ ಇದಕ್ಕೆ ಪರಿಹಾರ ಕೂಡ ಇದೆ.

ಈ ರೀತಿಯಾಗಿ ಮಾಡುವವರು ಬೇರೆ ಯಾರು ಅಲ್ಲ ನಮ್ಮನ್ನು ಕಂಡರೆ ಆಗದವರು ಅಥವಾ ನಮ್ಮ ಹಿತಶತ್ರುಗಳು ನಾವು ಚೆನ್ನಾಗಿ ಇರಬಾರದು ಎಂದು ಅಥವಾ ನಾವು ಜೀವನದಲ್ಲಿ ಏಳಿಗೆಯನ್ನು ಪಡೆಯಬಾರದು ಎಂದು ಇಂತಹ ನೀಚ ಕೆಲಸಗಳನ್ನು ಮಾಡುತ್ತಾರೆ. ಸ್ನೇಹಿತರೆ ಎಷ್ಟೇ ತೊಂದರೆಗಳು ನಿಮಗೆ ಬಂದರೂ ಯಾವುದೇ ಭಯವಿಲ್ಲದೆ ದೇವರ ಪೂಜೆಯನ್ನು ಮಾಡಿ ಭಕ್ತಿಯಿಂದ ಎಲ್ಲ ಕಷ್ಟವನ್ನು ದೂರ ಮಾಡು ಎಂದು ಒಂದು ದೀಪ ಹಚ್ಚಿದರೆ ನಿಮ್ಮ ಮನಸ್ಸಿಗೆ ನಿಜವಾಗಿಯೂ ಸಮಾಧಾನವಾಗುತ್ತದೆ. ಅಮಾವಾಸ್ಯೆ ದಿನದಂದು ನೀವು ಒಂದು ಚಪಾತಿಯನ್ನು ಮಾಡಬೇಕು. ಅದನ್ನು ನೀವು ಯಾವುದಾದರೂ ಒಂದು ಕರಿ ಬಣ್ಣದ ನಾಯಿಗೆ ನಿಮ್ಮ ಕೈಯಾರೆ ಕೊಡಬೇಕು.

ಕಪ್ಪು ನಾಯಿಯು ಸಿಗದಿದ್ದರೆ ನಮ್ಮ ಸುತ್ತ ಇರುವ ಯಾವುದಾದರೂ ನಾಯಿಗೆ ನೀವು ನಿಮ್ಮ ಕೈಯಿಂದ ಚಪಾತಿಯನ್ನು ಕೊಡಬೇಕು ಈ ಚಪಾತಿಯನ್ನು ಅದು ಬೇಗನೆ ತಿಂದು ಹೋದರೆ ನೀವು ಯಾವುದೇ ವಶೀಕರಣಕ್ಕೆ ಸಿಲುಕಿಲ್ಲ ಎಂದು ತಿಳಿದುಕೊಳ್ಳಿ. ನಾಯಿ ಏನಾದರೂ ನಿಮ್ಮ ಕೈಯಿಂದ ಹಾಕಿದ ಚಪಾತಿಯನ್ನು ತಿನ್ನದೆ ಹಾಗೆ ಹೋದರೆ ಖಂಡಿತವಾಗಿಯೂ ನಿಮ್ಮಲ್ಲಿ ಸಮಸ್ಯೆ ಇರುತ್ತದೆ. ಸ್ನೇಹಿತರೆ ಯಾವುದೇ ನಾಯಿ ಆಗಲಿ ಹೊಟ್ಟೆ ತುಂಬಿದ್ದರೂ ಏನನ್ನಾದರೂ ಕೊಟ್ಟರೆ ತಿಂದು ಹೋಗುತ್ತದೆ ನಿಮಗೆ ಇದರ ಮೇಲೆ ಅನುಮಾನ ಇದ್ದರೆ ಅದಕ್ಕೆ ಇಷ್ಟವಾದ ತಿಂಡಿಯನ್ನು ಕೊಟ್ಟು ಒಂದು ಸಲ ನೋಡಿ ಅಮಾವಾಸ್ಯೆ ದಿನದಂದು ಅದು ನಿಮ್ಮ ಕೈಯಿಂದ ಕೊಟ್ಟ ಯಾವುದೇ ಆಹಾರವನ್ನು ತಿನ್ನದೆ ಹೋದರೆ ಖಂಡಿತವಾಗಿಯೂ ನಿಮಗೆ ವಶೀಕರಣ ಅಥವಾ ಮಾಟ-ಮಂತ್ರದ ತೊಂದರೆ ಇದೆ ಎಂದು ಅರ್ಥ.

ಮೊದಲು ನೀವು ಮಾತ ಮಂತ್ರ ಅಥವಾ ವಶೀಕರಣದ ತೊಂದರೆ ಅನುಭವಿಸುತ್ತಿದ್ದರೆ ಅದು ನಿಮಗೆ ತಿಳಿದ ಮೇಲೆ ಅಮವಾಸ್ಯೆ ಅಥವಾ ಹುಣ್ಣಿಮೆಯ ದಿನ ನೀವು ಯಾವುದಾದರೂ ಹಸುವಿಗೆ ಚಪಾತಿಯನ್ನು ಕೊಡಬೇಕು. ಹೀಗೆ ಮಾಡುವುದರಿಂದ ನಿಮಗೆ ಮಾಟ ಮಂತ್ರ ಆಗಿದ್ದೆಲ್ಲ ಮಾಯವಾಗುತ್ತದೆ. ಹಾಗೆ ನೀವು ಮುಂದಿನ ಅಮಾವಾಸ್ಯೆ ಹುಣ್ಣಿಮೆ ದಿನಗಳಲ್ಲಿ ಯಾವುದೇ ತೊಂದರೆ ಇಲ್ಲದೆ ಇರಬಹುದು. ಹಾಗಾದರೆ ಸ್ನೇಹಿತರೇ ಮೊದಲು ನೀವು ವಶೀಕರಣಕ್ಕೆ ಗುರಿಯಾಗಿದ್ದಿರಾ ಅಥವಾ ಇಲ್ಲವೋ ಎಂದು ತಿಳಿದುಕೊಳ್ಳಿ. ಸ್ನೇಹಿತರೆ ಒಂದು ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ಭಾವಿಸುತ್ತೇನೆ ಇಷ್ಟ ಆಗಿದ್ದರೆ ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬದವರಿಗೂ ತಿಳಿಸಿ ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ