ನಿಮ್ಮ ಪ್ರತಿದಿನದ ಹವ್ಯಾಸಗಳು ನಿಮ್ಮ ಜೀವನಕ್ಕೆ ಎಷ್ಟು ಮಾರಕವಾಗಿರುತ್ತದೆ ಎಂಬುದು ಮಾತ್ರ ನಿಮಗೆ ತಿಳಿದಿರುವುದಿಲ್ಲ. ಹೌದು ನೀವು ಪ್ರತಿದಿನ ಇಂತಹ ಹವ್ಯಾಸಗಳನ್ನು ಅಥವಾ ಕೆಲವೊಂದು ವಿಚಾರಗಳನ್ನು ನಿಮಗೆ ತಿಳಿಯದೆ ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಿಟ್ಟಿರುತ್ತೀರ,ಅದು ನಿಮ್ಮ ಜೀವನಕ್ಕೆ ಮಾರಕವಾಗುತ್ತಿದೆ, ನಿಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ ಎಂಬುದನ್ನು ಮಾತ್ರ ನೀವು ಅರಿತು ಕೊಂಡಿರುವುದಿಲ್ಲ ಅಷ್ಟೇ.ಹಾಗಾದರೆ ನಿಮಗೆ ತಿಳಿಯದೆ ನಿಮ್ಮ ಜೀವನದಲ್ಲಿ ಬಂದಿರುವ ಕೆಲವೊಂದು ಕೆಟ್ಟ ಹವ್ಯಾಸಗಳು ಕೆಟ್ಟ ವಿಚಾರಗಳ ಬಗ್ಗೆ ನಾನು ನಿಮಗೆ ತಿಳಿಸಿಕೊಡುತ್ತೇನೆ.
ಈ ವಿಚಾರವನ್ನು ತಿಳಿದ ನಂತರ ಇನ್ನು ಮುಂದೆ ಅಂತಹ ಹವ್ಯಾಸಗಳನ್ನು ಪಾಲಿಸದೆ ನಿಮ್ಮ ಆರೋಗ್ಯವನ್ನು ಉತ್ತಮವಾಗಿಸಿಕೊಳ್ಳಿ. ಹಾಗೆ ನೀವು ಕೂಡ ಮಾಹಿತಿಯನ್ನು ತಿಳಿದ ಮೇಲೆ ಪ್ರತಿಯೊಬ್ಬರಿಗೂ ಒಂದು ಉಪಯುಕ್ತ ಆರೋಗ್ಯ ಮಾಹಿತಿಯನ್ನು ಶೇರ್ ಮಾಡಿ ಮಾಹಿತಿಯ ಕೊನೆ ಅಲ್ಲಿ ನಿಮ್ಮ ಅನಿಸಿಕೆ ಅನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.ನೀವು ಪಾಲಿಸುತ್ತಿರುವಂತಹ ಅನೇಕ ಕೆಟ್ಟ ಹವ್ಯಾಸಗಳಲ್ಲಿ ಮೊದಲನೇ ಹವ್ಯಾಸ ಅಂದರೆ ಪ್ರತಿ ದಿನ ಜನರು ಸಕ್ಕರೆಯನ್ನು ಬಳಸುತ್ತಾರೆ ಆದರೆ ಈ ಸಕ್ಕರೆಯಿಂದ ಆಗುವ ಅಡ್ಡ ಪರಿಣಾಮಗಳು ಯಾರಿಗೂ ತಿಳಿದಿರುವುದಿಲ್ಲ.
ನಾನು ನಿಮಗೆ ಆ ಸಕ್ಕರೆಯ ಅಡ್ಡ ಪರಿಣಾಮಗಳ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುತ್ತೇನೆ, ಈ ಸಕ್ಕರೆಯನ್ನು ನೀವು ಹೇಗೆ ಸಿಹಿಯನ್ನು ನೀಡುವುದಕ್ಕಾಗಿ ಬಳಸುತ್ತೀರೋ ಅದೇ ರೀತಿಯಲ್ಲಿ ಆ ಸಕ್ಕರೆ ನಿಮ್ಮ ಆರೋಗ್ಯವನ್ನು ಕ್ಷೀಣಿಸುತ್ತಾ ಬರುತ್ತಿದೆ .ಈ ಸಕ್ಕರೆಯಲ್ಲಿ ಏನೂ ಇಲ್ಲ ನಿಮ್ಮ ಆರೋಗ್ಯವನ್ನು ಕ್ಷೀಣಿಸುತ್ತದೆ ಹೊರತು ನಿಮ್ಮ ಆರೋಗ್ಯಕ್ಕೆ ಯಾವ ಪ್ರಯೋಜನದ ಲಾಭಗಳನ್ನು ನೀಡುವುದಿಲ್ಲ.
ನೀವು ಕೇವಲ ಏಳು ದಿನಗಳವರೆಗೂ ಸಕ್ಕರೆ ಅನ್ನು ಬಳಸದೆ ಇರಿ ನಂತರ ನಿಮ್ಮ ಆರೋಗ್ಯದಲ್ಲಿ ಆಗುವ ಬದಲಾವಣೆಯನ್ನು ನೀವೇ ನೋಡಬಹುದು .
ಈ ಸಕ್ಕರೆಯನ್ನು ತಿನ್ನದೇ ಇರುವುದರಿಂದ ನಿಮ್ಮ ಜ್ಞಾಪಕ ಶಕ್ತಿ ಹೆಚ್ಚುವುದಲ್ಲದೆ ನಿಮ್ಮ ರೋಗ ನಿರೋಧಕ ಶಕ್ತಿಯೂ ಕೂಡ ಹೆಚ್ಚುತ್ತದೆ ನಿಮ್ಮಲ್ಲಿ ಉತ್ಸಾಹ ಹೆಚ್ಚುತ್ತದೆ ಕೂಡ.ಎರಡನೇ ಕೆಟ್ಟ ಹವ್ಯಾಸವೆಂದರೆ ಊಟವಾದ ಬಳಿಕ ಹೊಟ್ಟೆ ತುಂಬಾ ನೀರನ್ನು ಕುಡಿಯುವುದು ಆದರೆ ಊಟವಾದ ಬಳಿಕ ಸಿಕ್ಕಾಪಟ್ಟೆ ನೀರನ್ನು ಕುಡಿಯುವುದರಿಂದ ಇದು ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಹೈಡ್ರೋಕ್ಲೋರಿಕ್ ಆಸಿಡ್ ಅನ್ನು ನಿಯಂತ್ರಿಸುವ ಕಾರಣ ಅಜೀರ್ಣ ಸಮಸ್ಯೆ ಕಾಡಬಹುದು ಹಾಗೆ ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಇರಬಹುದು.
ಮೂರನೆಯ ಕೆಟ್ಟ ಹವ್ಯಾಸವೆಂದರೆ ನೀವು ಕಾಲಿನ ಮೇಲೆ ಕಾಲನ್ನು ಹಾಕಿಕೊಂಡು ಕುಳಿತುಕೊಳ್ಳುವುದರಿಂದ ನಿಮ್ಮ ಸ್ಪೈನಲ್ ಕಾರ್ಡ್ ಮೇಲೆ ಇದು ಅಡ್ಡ ಪರಿಣಾಮ ಬೀರುತ್ತದೆ ಆದ ಕಾರಣ ಯಾವತ್ತಿಗೂ ಇನ್ನು ಮುಂದೆ ಕಾಲಿನ ಮೇಲೆ ಕಾಲನ ಹಾಕಿಕೊಂಡು ಕುಳಿತುಕೊಳ್ಳುವ ಅಭ್ಯಾಸವನ್ನು ಬಿಟ್ಟುಬಿಡಿ.ನಾಲ್ಕನೆಯ ಹವ್ಯಾಸವೆಂದರೆ ಕೆಲವರು ಊಟವಾದ ಬಳಿಕ ತಕ್ಷಣವೇ ಮಲಗಿಬಿಡುತ್ತಾರೆ. ಈ ರೀತಿ ಮಾಡುವುದರಿಂದ ಜೀರ್ಣಶಕ್ತಿ ಕುಂದುತ್ತದೆ ಹಾಗೆ ತಿಂದ ಆಹಾರ ಸರಿಯಾಗಿ ಜೀರ್ಣೋ ಕೂಡ ಆಗುವುದಿಲ್ಲ. ಅದಕ್ಕಾಗಿಯೇ ಮಲಗುವುದಕ್ಕಿಂತ ಎರಡು ಗಂಟೆಗಳ ಮುನ್ನವೇ ಊಟ ಮಾಡುವುದು ಉತ್ತಮ ಆರೋಗ್ಯ.
ಈ ಕೊನೆಯ ವಿಚಾರವು ಧೂಮಪಾನ ಮಾಡುವವರಿಗೆ ಮದ್ಯಪಾನ ಮಾಡುವವರಿಗೆ ಯಾವುದೇ ಕಾರಣಕ್ಕೂ ಊಟವಾದ ಬಳಿಕ ಧೂಮಪಾನವನ್ನು ಮದ್ಯಪಾನವನ್ನು ಮಾಡಬೇಡಿ .ಇದರಿಂದ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ ಹಾಗೆ ಊಟವಾದ ತಕ್ಷಣ ಸ್ನಾನ ಮಾಡುವುದು ಕೂಡ ಬೇಡ ಯಾಕೆ ಅಂದರೆ ಅಜೀರ್ಣವಾಗುವ ಸಾಧ್ಯತೆ ಇರುತ್ತದೆ.ಇಂತಹ ಕೆಲವೊಂದು ಹವ್ಯಾಸಗಳನ್ನು ಈ ಮಾಹಿತಿ ತಿಳಿದ ನಂತರವೇ ನಿಮ್ಮ ಜೀವನದಿಂದ ದೂರವಾಗಿಸಿಕೊಂಡು ಬಿಡಿ ಹಾಗೆ ನಿಮ್ಮ ಆರೋಗ್ಯವನ್ನು ಉತ್ತಮವಾಗಿಸಿಕೊಳ್ಳಿ ಧನ್ಯವಾದ.