Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಅತಿಯಾದ ಚರ್ಮದ ಸಮಸ್ಯೆಗಳಿಂದ ನೀವು ನೊಂದು ಬೆಂದಿದ್ದೀಯ ಹಾಗಾದ್ರೆ ಬಾಳೆ ಎಲೆಯಿಂದ ನೀವು ಈ ಒಂದು ಪರಿಹಾರವನ್ನು ಮಾಡಿಕೊಂಡರೆ ಸಾಕು … ನಿಮಗೆ ಜನುಮದಲ್ಲಿ ಮತ್ತೆ ಚರ್ಮದ ಸಮಸ್ಯೆ ಬರುವುದಿಲ್ಲ …!!!

ನಿಮಗೆ ಚರ್ಮದ ರೋಗವಿದ್ದರೆ ಅಥವಾ ಚರ್ಮಕ್ಕೆ ಸಂಬಂಧಪಟ್ಟಂತಹ ಯಾವುದೇ ಸಮಸ್ಯೆಗಳಿದ್ದರೆ ಈ ಬಾಳೆ ಎಲೆಯ ಪರಿಹಾರವನ್ನು ಒಮ್ಮೆ ಮಾಡಿ ನೋಡಿ.
ಹಾಯ್ ಸ್ನೇಹಿತರೆ ಚರ್ಮದ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಣುತ್ತೇವೆ ತುರಿಕೆ ಬರುವುದು ಅಥವಾ ಕಡಿತ ಬರುವುದು ಕೆಂಪಾಗಿ ಕಾಣಿಸುವುದು ಹೀಗೆ ಇನ್ನೂ ಹೆಚ್ಚಾಗಿ ಚರ್ಮದ ಸಮಸ್ಯೆಗಳು ಇರುತ್ತವೆ. ಈ ಚರ್ಮದ ಸಮಸ್ಯೆಗಳು ಏಕೆ ಬರುತ್ತದೆ ಎಂದರೆ ಕೆಲವೊಮ್ಮೆ ನಮ್ಮ ದೇಹದಲ್ಲಿ ವಿಟಮಿನ್ ಗಳ ಕೊರತೆ ಇರಬಹುದು ಹಾಗೆ ದೇಹದಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳು ಹೆಚ್ಚಾಗಿರಬಹುದು.

ಒಂದು ತರಹ ಅಲರ್ಜಿಯಾಗಿ ಚರ್ಮದ ರೋಗಗಳು ಕಾಣಿಸಿಕೊಳ್ಳುತ್ತವೆ. ಎಷ್ಟೇ ಹಾಸ್ಪಿಟಲ್ಗೆ ತೋರಿಸಿದರು ಕೂಡ ಕಡಿಮೆ ಆಗುತ್ತಿರುವುದಿಲ್ಲ ಇಂತಹ ಸಮಯದಲ್ಲಿ ನೀವು ಅದನ್ನು ನೆಗ್ಲೆಕ್ಟ್ ಮಾಡದೆ ಈ ಒಂದು ಪರಿಹಾರವನ್ನು ಮಾಡಿಕೊಳ್ಳಿ ಮನೆಯಲ್ಲಿ ಪರಿಹಾರವನ್ನು ಮಾಡಬಹುದು ಹಾಗೆ ಇದಕ್ಕೆ ಸಾಕಷ್ಟು ಖರ್ಚು ಏನಿಲ್ಲ. ಆಗಿನ ಕಾಲದಲ್ಲಿ ಬಾಳೆ ಎಲೆಯಲ್ಲಿ ಊಟವನ್ನು ಮಾಡುತ್ತಿದ್ದರು ಈಗಲೂ ಮಾಡುತ್ತಾರೆ ಆದರೆ ಯಾವುದಾದರೂ ಮದುವೆಯಲ್ಲಿ ಅಥವಾ ಶುಭ ಸಮಾರಂಭಗಳಲ್ಲಿ ಮಾತ್ರ ಬಾಳೆ ಎಲೆಯಲ್ಲಿ ಊಟ ಮಾಡುತ್ತಾರೆ.

ಬಾಳೆ ಎಲೆಗಳಲ್ಲಿ ಊಟ ಮಾಡುವುದರಿಂದ ನಮ್ಮ ದೇಹಕ್ಕೆ ಆರೋಗ್ಯ ಹೆಚ್ಚಾಗುತ್ತದೆ. ಹಾಗೆಯೇ ಎಲೆಯಲ್ಲಿ ಊಟ ಮಾಡುವುದರಿಂದ ನಮ್ಮ ಭೋಜನವು ಕೂಡ ತುಂಬಾ ರುಚಿಯಾಗಿರುತ್ತದೆ ಆ ದಿನ ನಮಗೆ ಬೇಗನೆ ಹೊಟ್ಟೆ ಹಸಿಯುವುದಿಲ್ಲ ಅಷ್ಟು ತೃಪ್ತಿಕರವಾಗಿ ಇರುತ್ತೆ. ಚರ್ಮದ ಸಮಸ್ಯೆಗಳು ಇದ್ದರೆ ನಮ್ಮ ಮುಖದ ಸೌಂದರ್ಯ ತುಂಬಾ ಹದಗೆಡುತ್ತದೆ ಹಾಗೆಯೇ ರಾತ್ರಿ ನಿದ್ದೆ ಬರದೇ ತುರುಕೆ ಶುರುವಾಗುತ್ತದೆ. ತುರಿಕೆ ಇದ್ದ ಸ್ಥಳವು ಕೆಂಪಗಾಗಿ ತುಂಬಾ ಗಾಯದಿಂದ ಕೂಡಿರುತ್ತದೆ. ಇದರಿಂದ ನಿಮಗೆ ತುಂಬಾ ನೋವು ಆಗುವ ಲಕ್ಷಣಗಳು ಇರುತ್ತವೆ ಇದನ್ನು ಅತಿಹೆಚ್ಚಿನ ದಿನದಲ್ಲಿ ಬಿಡಬಾರದು.

ಏಕೆಂದರೆ ಈ ಚರ್ಮ ರೋಗಗಳು ಒಂದು ತರ ಅಂಟು ರೋಗಗಳು ದೇಹದಲ್ಲಿ ಹರಡಿಕೊಳ್ಳುತ್ತಾ ಹೋಗುತ್ತವೆ. ಒಣ ಚರ್ಮವನ್ನು ಹೊಂದಿರುವವರು ಚಳಿಗಾಲದಲ್ಲಿ ತುಂಬಾ ಚರ್ಮದ ಸಮಸ್ಯೆಗಳನ್ನು ಹೊಂದುತ್ತಾರೆ ಗರ್ಭಿಣಿಯರಿಗೂ ಕೂಡ ಹಾರ್ಮೋನುಗಳ ಏರುಪೇರಿನಿಂದಾಗಿ ಚರ್ಮದ ಸಮಸ್ಯೆಗಳು ಬರಬಹುದು. ಚರ್ಮದ ಸಮಸ್ಯೆ ಇರುವವರು ಆಹಾರದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಬೇಕು ಅತಿಯಾದ ಸಿಹಿ ತಿನ್ನುವುದು ಹಾಗೂ ನಟ್ಸ್ ಗಳನ್ನು ಅಂದರೆ ಗೋಡಂಬಿ ಬಾದಾಮಿ ದ್ರಾಕ್ಷಿ ತಿನ್ನುವುದು ಹಾಗೆ ಮೊಟ್ಟೆ ತಿನ್ನುವುದು ಅಲರ್ಜಿಯಾಗಬಹುದು.

ಕೆಲವೊಮ್ಮೆ ಮುಖದಲ್ಲಿ ಮೊಡವೆಗಳು ಸಹ ಹೆಚ್ಚಾಗುವುದು ಚರ್ಮದ ಸಮಸ್ಯೆಯಿಂದ, ಬಿಸಿಲಿನ ತಾಪಮಾನ ಏರಿಕೆಯಿಂದ ಕೂಡ ಚರ್ಮದ ಸಮಸ್ಯೆಗಳು ಹೆಚ್ಚಾಗುತ್ತವೆ. ಚರ್ಮರೋಗಗಳ ಸಾಲಿನಲ್ಲಿ ಈಗ ಹಿಮ್ಮಡಿ ಬಿರುಕು ಒಡೆಯುವುದು ಇತ್ತೀಚಿನ ದಿನಗಳಲ್ಲಿ ಇದು ಜಾಸ್ತಿ ಆಗುತ್ತಿದೆ. ಹಾಗಾದರೆ ಈ ಎಲ್ಲಾ ಸಮಸ್ಯೆಗಳಿಗೂ ಒಂದು ಪರಿಹಾರ ಹೇಳುತ್ತೇನೆ ಮಾಡಿ. ಗಂಡು ಮಕ್ಕಳಿಗೆ ಏನಾದರೂ ಚರ್ಮದ ಸಮಸ್ಯೆಗಳು ಕಾಣಿಸಿಕೊಂಡರೆ 30 ಬಾಳೆ ಎಲೆಗಳನ್ನು ಮೂರು ಅಂಗಡಿಗಳಲ್ಲಿ ತೆಗೆದುಕೊಳ್ಳಬೇಕು ಅಂದರೆ ಹತ್ತು ಎಲೆಗಳಂತೆ ಮೂರು ಅಂಗಡಿಗಳಲ್ಲಿ ತೆಗೆದುಕೊಳ್ಳಬೇಕು. ಅಥವಾ ಮೂರು ಏರಿಯಾದಿಂದ ಕೂಡ ತೆಗೆದುಕೊಳ್ಳಬಹುದು

ಹೀಗೆ ತೆಗೆದುಕೊಂಡ ಬಾಳೆ ಎಲೆಗಳನ್ನು ವೃದ್ಧರಿಗೆ ಅನಾಥಾಶ್ರಮಕ್ಕೆ ಅಥವಾ ಅನಾಥ ಮಕ್ಕಳು ಇರುವ ಸ್ಥಳಕ್ಕೆ ಭೇಟಿ ನೀಡಿ ಇವುಗಳನ್ನು ಊಟ ಮಾಡುವುದಕ್ಕೆ ಕೊಟ್ಟು ಬರಬೇಕು. ಈ ರೀತಿಯಾಗಿ ಮೂರು ಗುರುವಾರ ನೀವು ಮಾಡಬೇಕು. ಹೀಗೆ ಮಾಡುವುದರಿಂದ ನೀವು ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಬಹುದು ಅಥವಾ ಸಂಪೂರ್ಣವಾಗಿ ನಿವಾರಿಸಿಕೊಳ್ಳಬಹುದು. ಬಾಳೆ ಎಲೆಯೂ ಶ್ರೇಷ್ಠವಾದ ಎಲೆಯಾಗಿದೆ. ಏನಾದರೂ ಹೆಣ್ಣುಮಕ್ಕಳಿಗೆ ಚರ್ಮದ ಸಮಸ್ಯೆಗಳು ಕಾಣಿಸಿಕೊಂಡರೆ 33 ಬಾಳೆ ಎಲೆಗಳನ್ನು ಮೂರು ಅಂಗಡಿಗಳಲ್ಲಿ 11 ಎಲೆಗಳಂತೆ ತೆಗೆದುಕೊಳ್ಳಬೇಕು ಅಥವಾ ಮೂರು ಏರಿಯಾದಲ್ಲಿ ತೆಗೆದುಕೊಳ್ಳಬಹುದು

ಎಲೆಗಳನ್ನು ಶುಕ್ರವಾರದ ದಿನ ವೃದ್ಧಾಶ್ರಮಕ್ಕೆ ಅಥವಾ ಅನಾಥಾಶ್ರಮಕ್ಕೆ ಊಟ ಮಾಡಲು ಕೊಟ್ಟು ಬರಬೇಕು ಈ ರೀತಿಯಾಗಿ ಮೂರು ಶುಕ್ರವಾರ ಮಾಡಬೇಕು ಹೀಗೆ ಮಾಡುವುದರಿಂದ ಮಹಿಳೆಯರಲ್ಲಿ ಚರ್ಮದ ಸಮಸ್ಯೆಗಳು ನಿವಾರಣೆಯಾಗುತ್ತವೆ ಸ್ನೇಹಿತರೆ ಈ ಒಂದು ಪರಿಹಾರವನ್ನು ನಂಬಿ ನೀವು ಮಾಡಿದರೆ ಚರ್ಮದ ಸಮಸ್ಯೆಗಳು ನಿಮಗೆ ಎಂದಿಗೂ ಕಾಣುವುದಿಲ್ಲ. ಚರ್ಮವು ಸೂಕ್ಷ್ಮವಾದ ದೇಹದ ಒಂದು ಭಾಗ. ನಮ್ಮ ಸೌಂದರ್ಯವೂ ಕೂಡ ಚರ್ಮದಲ್ಲಿ ಇರುತ್ತದೆ ಹಾಗಾಗಿ ನಾವು ಇದನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಪ್ರತಿನಿತ್ಯ ಸ್ನಾನವನ್ನು ತಪ್ಪದೇ ಮಾಡಬೇಕು ತಿಂಗಳಿಗೊಮ್ಮೆ ಸ್ವಲ್ಪ ಉಪ್ಪನ್ನು ನೀರಿಗೆ ಹಾಕಿಕೊಂಡು ಸ್ನಾನ ಮಾಡುವುದರಿಂದ ನಮ್ಮ ದೇಹದಲ್ಲಿರುವ ಉಷ್ಣಾಂಶ ಕಡಿಮೆಯಾಗಿ ಚರ್ಮದ ಸಮಸ್ಯೆಗಳು ಕಡಿಮೆಯಾಗುತ್ತವೆ ಈ ಒಂದು ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ನಿಮ್ಮ ಸ್ನೇಹಿತರಿಗೂ ತಿಳಿಸಿ ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ