ಅಣಬೆಯನ್ನು ನೀವು ಹೀಗೆ ತಿನ್ನುತ್ತಾ ಬಂದರೆ ನಿಮಗೆ ಈ ರೋಗದ ಭಯ ಇರಲ್ಲ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೇ ,ಅಣಬೆ ಎಂದರೆ ಹಳ್ಳಿಯ ಭಾಷೆಯಲ್ಲಿ ನಾಯಿ ಕೊಡೆ ಎಂದು ಕೂಡ ಕರೆಯಲಾಗುತ್ತದೆ .ಅಣಬೆ ತೇವಾಂಶ ವಾಗಿರುವ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತದೆ .ಅಣಬೆಗಳು ಸಸ್ಯಗಳಂತೆ ಸಾವಯವಯುತ ಮಣ್ಣು ಮತ್ತು ಸತ್ತೆಗಳ ಮೇಲೆ ಬೆಳೆಯುತ್ತವೆ.ಅವುಗಳಿಗೆ ಸಸ್ಯಗಳಂತೆ ಹರಿತ್ತಿರುವುದಿಲ್ಲ. ಅಣಬೆಗಳ ರಚನಾಂಗಗಳು ಬಹಳ ಸರಳವಾಗಿದ್ದು ಸಸ್ಯಗಳಿಗಿಂತ ಭಿನ್ನವಾಗಿರುತ್ತವೆ. ಅಣಬೆಯ ಬೀಜಾಣು ಬಹಳ ಚಿಕ್ಕದಾಗಿದ್ದು ಸೂಕ್ಷ್ಮದರ್ಶಕಗಳ ಸಹಾಯದಿಂದ ವೀಕ್ಷಿಸಬಹುದು.ಈ ಕಿವಿರುಗಳು ನೆಲ ಅಥವಾ ಅದರ ನಿವಾಸಿ ಮೇಲ್ಮೆ ಮೇಲೆ ಹರಡಲು ಶಿಲೀಂಧ್ರಕ್ಕೆ ಸಹಾಯ ಮಾಡುವ ಸೂಕ್ಷ್ಮ ಬೀಜಕಗಳನ್ನು ಉತ್ಪಾದಿಸುತ್ತವೆ.ದುಂಡಾಗಿಯೂ ಮೊಟ್ಟೆ ಯಾಕಾರದಲ್ಲಿಯೂ ಸಣ್ಣ ಸಣ್ಣ ಗಂಟಿನಾಕಾರದಲ್ಲಿಯೂ ಕವಕತಂತುವಿನ ಅಂಚಿನಲ್ಲಿ ಅಣಬೆಗಳು ಕಾಣಿಸಿಕೊಳ್ಳುತ್ತವೆ. ಇವನ್ನು ಸಾಮಾನ್ಯವಾಗಿ ಗುಂಡಿಗಳೆಂದು ಕರೆಯುತ್ತಾರೆ.ಹಾಗಾದ್ರೆ ಅವುಗಳನ್ನು ತಿನ್ನುತ್ತಾ ಬಂದ್ರೆ ಯಾವ ರೀತಿಯ ಉಪಯೋಗಗಳು ನಮ್ಮ ದೇಹಕ್ಕೆ ಆಗುತ್ತೆ ಎನ್ನುವುದನ್ನು ತಿಳಿಯೋಣ ..

ನೀವೇನಾದರೂ ಅಣಬೆ  ತಿಂತೀರಾ ಹಣವೇ ತಿನ್ನುವುದು ನಿಮಗೆ ತುಂಬಾ ಇಷ್ಟ ಹೌದು ಹಣಬೆ ಒಂದು ರುಚಿಕರವಾದ ಆಹಾರ ಅಂತಾನೇ ಹೇಳಬಹುದು ಅಲ್ವಾ. ಈ ಒಂದು ಪದಾರ್ಥವನ್ನು ತಿನ್ನುವುದರಿಂದ ನಮಗೆ ದೊರೆಯುವ ಆರೋಗ್ಯಕರ ಲಾಭಗಳು ಅಪಾರವಾದದ್ದು. ಈ ಅಣಬೆಗಳನ್ನು ಆಂಗ್ಲ ಭಾಷೆಯಲ್ಲಿ ಮಶ್ರೂಮ್ ಅಂತ ಕರೆದರೆ. ಇದನ್ನು ಆಡು ಭಾಷೆಯಲ್ಲಿ ಅಥವಾ ಸಂಸ್ಕೃತದಲ್ಲಿ ನಾಯಿಕೊಡೆ ಅಂತ ಕೂಡ ಕರೀತಾರೆ.ಅಣಬೆ ಅನ್ನು ತಿನ್ನುವುದರಿಂದ ಆಗುವ ಆರೋಗ್ಯ ಲಾಭಗಳು ಯಾವುವು ಅಂತ ಹೇಳುವುದಾದರೆ ಅಣಬೆಯನ್ನು ನೀವು ಮಳೆಗಾಲದಲ್ಲಿ ಮಾತ್ರ ಕಾಣಬಹುದು ಹೌದು ಫ್ರೆಶ್ ಆದ ಅಣಬೆಯನ್ನು ನೀವು ಕೂಡ ತಿನ್ನಬೇಕು ಅಂದರೆ ನೀವು ಮಳೆಗಾಲದಲ್ಲಿ ತಿನ್ನೋಕೆ ಚೆಂದ ಮತ್ತು ಈ ಅಣಬೆ ಮಲೆನಾಡಿನಲ್ಲಿ ಬಹಳ ಸಿಗುತ್ತದೆ. ಮಲೆನಾಡ ಮಂದಿಗೆ ಮಳೆಗಾಲ ಬಂದ್ರೆ ಎಷ್ಟೊಂದು ಚೆಂದ ಅಲ್ವಾ ಮಳೆಗಾಲದಲ್ಲಿ ಕಳಲೆ ಸಿಗುತ್ತೆ ಹಣಬೆ ಸಿಗುತ್ತೆ ಹೀಗೆ ಇನ್ನು ಅನೇಕ ಆರೋಗ್ಯಕರ ಪದಾರ್ಥಗಳು ಪ್ರಕೃತಿಯಲ್ಲಿ ಸಿಗುತ್ತದೆ.

ಈ ಹಣವೇ ಅನ್ನ ತಿನ್ನುವುದರಿಂದ ಆಗುವ ಲಾಭಗಳು ಅಂದರೆ ಹಣಬೆ ಅಲ್ಲಿ ಹೇರಳವಾದ ಪ್ರೊಟೀನ್ ವಿಟಮಿನ್ಸ್ ಮಿನರಲ್ಸ್ ಅಮೈನೋ ಆಸಿಡ್ಸ್ ಆಂಟಿ ಬ್ಯಾಕ್ಟೀರಿಯಲ್ ಅಂಶ ಇರುತ್ತದೆ ಈ ಅಣಬೆಯನ್ನು ಸಸ್ಯಾಹಾರಿಗಳು ಕೂಡ ಸೇವಿಸಬಹುದು ಇದರ ಜೊತೆಗೆ ಮಾಂಸಾಹಾರಿಗಳು ಕೂಡ ಸೇವಿಸಬಹುದು. ಅಷ್ಟೇ ಅಲ್ಲದೆ ಸಸ್ಯಾಹಾರಿಗಳು ಈ ಮಾಂಸ ಪದಾರ್ಥಗಳನ್ನು ಸೇವಿಸುವುದಿಲ್ಲ ಇದರಿಂದ ಮಾಂಸಾಹಾರಿಗಳು ಪಡೆದುಕೊಳ್ಳ ಬಹುದಾದ ಪ್ರೋಟಿನ್ ಅಂಶವನ್ನು ಈ ಅಣಬೆಯನ್ನು ಸೇವಿಸುವ ಮುಖಾಂತರ ಸಸ್ಯಾಹಾರಿಗಳು ಪಡೆದುಕೊಳ್ಳಬಹುದು.

ಅಣಬೆಯನ್ನು ತಿನ್ನುವುದರಿಂದ ಹೇರಳವಾದ ವಿಟಮಿನ್ಸ್ ನಮ್ಮ ದೇಹಕ್ಕೆ ದೊರೆಯುತ್ತದೆ. ಅದರಲ್ಲಿಯೂ ವಿಟಮಿನ್ ಬಿ೨ ಅಂಶ ಹೆಚ್ಚಾಗಿರುವ ಅಣಬೆಯಲ್ಲಿ, ಇದು ನಮ್ಮ ದೇಹಕ್ಜೆ ಹೆಚ್ಚಿನ ಪ್ರಮಾಣದ ಶಕ್ತಿಯನ್ನು ನೀಡುತ್ತದೆ. ಅಷ್ಟೇ ಅಲ್ಲದೆ ಇದರಲ್ಲಿ ವಿಟಮಿನ್ ಬಿ ಅಂಶ ಕೂಡ ಇದೆ. ಇದು ನಮ್ಮ ದೇಹದಲ್ಲಿ ಇರುವ ಗ್ಲೂಕೋಸ್ ಅಂಶವನ್ನು ಪರಿವರ್ತನೆ ಮಾಡಲು ಸಹಕಾರಿ ಆಗಿರುತ್ತದೆಅಣಬೆಯಲ್ಲಿ ಕೊಬ್ಬಿನ ಅಂಶ ಇಲ್ಲ ಹೌದು ಯಾವುದೇ ಕೊಬ್ಬಿನ ಅಂಶ ಇಲ್ಲದಿರುವ ಈ ಅಣಬೆಯನ್ನು ತಿನ್ನೋದರಿಂದ ಇದು ಹೃದಯದ ಆರೋಗ್ಯವನ್ನು ಕೂಡ ಕಾಪಾಡುತ್ತದೆ ಮತ್ತು ರಕ್ತದಲ್ಲಿ ಕೊಬ್ಬಿನ ಅಂಶವನ್ನು ಹೆಚ್ಚು ಮಾಡುವುದಿಲ್ಲ ಮತ್ತು ಸಕ್ಕರೆಯ ಅಂಶವನ್ನು ಕೂಡ ಹೆಚ್ಚು ಮಾಡುವುದಿಲ್ಲ. ಇದರಿಂದ ಮಧುಮೇಹಿಗಳು ಕೂಡ ಈ ರುಚಿಕರವಾದ ಅಣಬೆಯನ್ನು ನಿಯಮಿತವಾಗಿ ಸೇವಿಸಬಹುದು.

ಅಣಬೆಯಲ್ಲಿ ಪೊಟಾಷಿಯಂ ಮತ್ತು ವಿಟಮಿನ್ ಡಿ ಅಂಶ ತುಂಬಾನೇ ಹೇರಳವಾಗಿದ್ದು ಸುಮಾರು ನೂರರಿಂದ ಇನ್ನೂರು ಗ್ರಾಂ ಅಣಬೆಯಲ್ಲಿ ಒಬ್ಬ ವ್ಯಕ್ತಿಗೆ ಪರಿಪೂರ್ಣ ಆಗಿ ಬೇಕಾಗಿರುವಂತಹ ಎಲ್ಲಾ ಪೌಷ್ಟಿಕಾಂಶವೂ ಈ ಅಣಬೆಯಿಂದ ನಮ್ಮ ದೇಹಕ್ಕೆ ದೊರೆಯುತ್ತದೆ. ರೋಗ ನಿರೋಧಕ ಶಕ್ತಿಯನ್ನು ಕೂಡ ಹೆಚ್ಚು ಮಾಡುವ ಈ ಅಣಬೆಯಲ್ಲಿ ನಮ್ಮ ದೇಹದಲ್ಲಿ ಅತಿ ಮುಖ್ಯ ಪ್ರಕ್ರಿಯೆ ಆಗಿರುವ ಚಯಪಚನ ಕ್ರಿಯೆಯಲ್ಲಿ ಉತ್ತಮ ವೃದ್ಧಿಯನ್ನು ಮಾಡುತ್ತದೆ ಅಂತ ಹೇಳಬಹುದು ಈ ಅಣಬೆ.ಇಷ್ಟೆಲ್ಲಾ ಪ್ರಯೋಜನಕಾರಿಯಾದ ಅಂಶಗಳಿರುವ ಅಣಬೆಯನ್ನು ನೀವು ತಿನ್ನಲು ಇಷ್ಟ ಪಡೋದಿಲ್ಲ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ …

Leave a Reply

Your email address will not be published. Required fields are marked *