ಮನೆಯಲ್ಲಿ ಪ್ರತಿಯೊಂದು ವಿಚಾರದಲ್ಲಿಯೂ ಕೂಡ ಗಮನ ವಹಿಸುವುದು ಹೆಣ್ಣು ಮಕ್ಕಳ ಕರ್ತವ್ಯವಾಗಿರುತ್ತದೆ, ಹೆಣ್ಣುಮಕ್ಕಳಿಗೆ ಎಷ್ಟೆಲ್ಲ ಜವಾಬ್ದಾರಿ ಇರುತ್ತದೆ ಅಂದರೆ ಅವರು ಮನೆಯ ಪ್ರತಿಯೊಂದು ವಿಚಾರದಲ್ಲಿಯೂ ಕೂಡ ಗಮನ ವಹಿಸ ಬೇಕಾಗಿರುತ್ತದೆ,
ಇನ್ನು ಮನೆಯ ಯಜಮಾನಿ ಆದ ಹೆಣ್ಣು ಮತ್ತೊಂದು ವಿಚಾರದಲ್ಲಿ ಕೂಡಾ ಕಾಳಜಿ ವಹಿಸಬೇಕಾಗುತ್ತದೆ, ಅದೇನೆಂದರೆ ಮನೆಯ ಸದಸ್ಯರು ಅಂದರೆ ಮನೆಯ ಯಜಮಾನ ಆಗಲಿ ಮನೆಯಲ್ಲಿ ಮಕ್ಕಳಿದ್ದರೆ ಅವರೇನಾದರೂ ಕೆಲಸಕ್ಕೆ ಹೋಗುತ್ತಿದ್ದರೆ,
ಅವರು ದುಡಿಯುತ್ತಿರುವ ಹಣವೂ ಯಾವ ದಾರಿಯಿಂದ ಈ ಹಣವನ್ನು ಮಕ್ಕಳಾಗಲಿ ಮನೆಯ ಹಿರಿಯರಾಗಲಿ ಸಂಪಾದನೆ ಮಾಡುತ್ತಿದ್ದಾರೆ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.
ನಾವು ನಮ್ಮ ಜೀವನದಲ್ಲಿ ಹಣಕ್ಕೆ ಎಷ್ಟು ಪ್ರಾಧಾನ್ಯತೆಯನ್ನು ನೀಡುತ್ತೇವೆಯೋ ಅಷ್ಟೇ ಪ್ರಾಧಾನ್ಯತೆ ಅನ್ನು ನಾವು ಈ ಹಣವನ್ನು ಸಂಪಾದನೆ ಮಾಡುವುದರಲ್ಲಿಯೂ ಕೂಡಾ ನೀಡಬೇಕಾಗುತ್ತದೆ ಯಾಕೆ ಅಂದರೆ ನಮ್ಮ ಮನೆಯ ಹೇಳಿಕೆಯಲ್ಲಿ ನಾವು ಈ ಹಣವನ್ನು ಸಂಪಾದನೆ ಮಾಡುವ ದಾರಿಯೂ ಕೂಡಾ ಪಾತ್ರ ವಹಿಸುತ್ತದೆ.
ಆದ ಕಾರಣ ಮನೆಯ ಯಜಮಾನಿ ಯಾದವರು ಈ ಎಲ್ಲ ವಿಚಾರಗಳಲ್ಲಿಯೂ ಕೂಡ ಗಮನವನ್ನು ವಹಿಸಿ ಮನೆಯಲ್ಲಿ ಎದುರಾಗುವಂತಹ ಪ್ರತಿಯೊಂದು ಕಷ್ಟಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕು ಇದರ ಜೊತೆಗೆ ನಾವು ಅನಾದಿಕಾಲದಿಂದಲೂ ಪಾಲಿಸಿಕೊಂಡು ಬಂದಂತಹ ಸಂಪ್ರದಾಯ ಶಾಸ್ತ್ರ ಪದ್ಧತಿಗಳನ್ನು ಕೂಡ ಮನೆಯಲ್ಲಿ ಪಾಲಿಸಬೇಕಾಗುತ್ತದೆ.
ಮನೆಯಲ್ಲಿ ಲಕ್ಷ್ಮಿ ದೇವಿಯ ಕೃಪಕಟಾಕ್ಷ ಇರಬೇಕಾದರೆ ಮತ್ತು ಮನೆಯಲ್ಲಿ ಮನೆಯ ಸದಸ್ಯರು ಒಳ್ಳೆಯ ದಾರಿಯಲ್ಲಿ ನಡೆಯಬೇಕೆಂದರೆ, ಮನೆಯಲ್ಲಿ ಸಾತ್ವಿಕತೆ ತುಂಬಿರಬೇಕು.
ಈ ಸಾತ್ವಿಕತೆಯ ಮನೆಯ ಸದಸ್ಯರನ್ನು ಒಳ್ಳೆಯ ದಾರಿಯಲ್ಲಿ ಕರೆದೊಯ್ಯಲು ಸಹಕಾರಿಯಾಗಿರುತ್ತದೆ. ಮನೆಯಲ್ಲಿ ಸಾತ್ವಿಕತೆ ಇರಬೇಕಾದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ನೆಲೆ ಇರಬೇಕಾದರೆ ನಾವು ನಮ್ಮ ಸಂಪ್ರದಾಯಗಳನ್ನು ಮರೆಯಬಾರದು ನಮ್ಮ ಪದ್ಧತಿಗಳನ್ನ ಪಾಲಿಸಬೇಕಾಗುತ್ತದೆ.
ಅದೇ ರೀತಿಯಲ್ಲಿ ಹೆಣ್ಣು ಮಕ್ಕಳು ಈ ಒಂದು ವಿಚಾರದಲ್ಲಿ ಗಮನವನ್ನು ಇಟ್ಟುಕೊಂಡು ಮನೆಯಲ್ಲಿ ಈ ಒಂದು ಕೆಲಸದಲ್ಲಿ ಇಂತಹ ಒಂದು ಪರಿಹಾರವನ್ನು ಮಾಡಬೇಕು, ಅದೆನೆಂದರೆ ಬೆಳಗ್ಗೆ ಎದ್ದ ಕೂಡಲೇ ಹೆಣ್ಣು ಮಕ್ಕಳು ಅಡುಗೆ ಕೋಣೆಯಲ್ಲಿ ಹಾಲನ್ನು ಕಾಯಿಸಲೆಂದು ಹೋಗುತ್ತಾರೆ,
ಆ ಸಮಯದಲ್ಲಿ ಈ ಹಾಲು ಇನ್ನೇನು ಹುಕ್ಕುತ್ತದೆ ಅನ್ನುವ ಸಮಯದಲ್ಲಿ, ಈ ಹಾಲಿಗೆ ಮೂರ್ನಾಲ್ಕು ಕಾಳು ಅಕ್ಕಿಯನ್ನು ಹಾಕಿ ಈ ಹಾಲನ್ನು ಕಾಯಿಸಬೇಕಾಗುತ್ತದೆ, ನೆನಪಿನಲ್ಲಿಡಿ ಅಕ್ಕಿಕಾಳುಗಳನ್ನು ಹಾಲು ಹೊಕ್ಕುವ ಸಮಯದಲ್ಲಿ ಹಾಕಬೇಕು.
ನಂತರ ಈ ಹಾಲು ಕಾಯಿಸಿದ ನಂತರ ಇದನ್ನು ಯಾವುದೆ ಕಾರಣಕ್ಕೂ ಹಾಗೆ ತೆರೆದಿಡಬಾರದು, ಇದರ ಮೇಲೆ ಒಂದು ತಟ್ಟೆಯ ಸಹಾಯದಿಂದ ಈ ಪಾತ್ರೆಯನ್ನು ಅಂದರೆ ಹಾಲು ಇರುವಂತಹ ಪಾತ್ರೆಯನ್ನು ಮುಚ್ಚಬೇಕು,
ಇಲ್ಲವಾದಲ್ಲಿ ಈ ಹಾಲು ಹೇಗೆ ಹಾವಿಯಾಗುತ್ತದೆಯೊ ಮನೆಯಲ್ಲಿರುವಂತಹ ಸಾತ್ವಿಕತೆ ಸಕಾರಾತ್ಮಕತೆ ಮತ್ತು ಮನೆಯಲ್ಲಿರುವ ಒಳ್ಳೆಯ ಅಂಶವೂ ಕೂಡ ಹಾವಿಯಾಗಿ ಹೋಗುತ್ತದೆ ಎಂದು ಹೇಳಲಾಗುತ್ತದೆ.
ಹಿಂದಿನ ಕಾಲದಲ್ಲಿ ಹಿರಿಯರು ಮಣ್ಣಿನ ಒಲೆಯನ್ನು ಬಳಸುತ್ತಿದ್ದರು, ಈ ಮಣ್ಣಿನ ಒಲೆಯಲ್ಲಿ ಅಡುಗೆ ಮಾಡುವುದಕ್ಕೂ ಮುನ್ನ ಒಲೆಯನ್ನು ಪೂಜೆ ಮಾಡುತ್ತಿದ್ದರು, ಎರಡು ಎಳೆಯ ರಂಗೋಲಿ ಅನ್ನು ಅಡ್ಡವಾಗಿ ಬಿಟ್ಟು ಒಲೆಗೆ ಅರಿಶಿಣ ಕುಂಕುಮವನ್ನು ಹಚ್ಚಿ ಲಕ್ಷ್ಮೀ ದೇವಿಯನ್ನು ನೆನೆದು ಅಗ್ನಿ ದೇವನನ್ನು ನೆನೆದು ಅಡುಗೆಯನ್ನು ಮಾಡುತ್ತಿದ್ದರು.
ಆದರೆ ಇತ್ತೀಚಿನ ದಿನಗಳಲ್ಲಿ ಜನ ಹೆಚ್ಚಾಗಿ ಸ್ಟವ್ಗಳನ್ನು ಬಳಸುತ್ತಾರೆ ಈ ಸ್ಟೌ ಗಳಿಗೆ ಈ ರೀತಿ ರಂಗೋಲಿಯನ್ನು ಅರಿಶಿಣ ಕುಂಕುಮವನ್ನು ಹಚ್ಚುವುದು ಅಷ್ಟೊಂದು ಸರಿಯಲ್ಲ, ಆದರೆ ಈ ಸ್ಟವ್ ಅನ್ನು ಹಚ್ಚುವುದಕ್ಕಿಂತ ಮೊದಲು, ಅಗ್ನಿ ದೇವನನ್ನು ನೆನೆದು ಸೂರ್ಯದೇವನಿಗೆ ನಮಸ್ಕರಿಸಿ ನಂತರ ವಲೆಯನ್ನು ಹಚ್ಚುವುದು ಒಳ್ಳೆಯದು.