ಅಂಗೈ ಮತ್ತು ಅಂಗಾಲುಗಳು ಉರಿಯುತ್ತಿದ್ದರೆ ನಿರ್ಲಕ್ಷಿಸದೆ ಮೊದಲು ಹೀಗೆ ಮಾಡಿ..!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಅಂಗೈ ಮತ್ತು ಅಂಗಾಲು ಉರಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ, ದೇಹದಲ್ಲಿ ಅತಿಯಾದ ಉಷ್ಣ ಶೇಖರವಾಗುವುದುರಿಂದ ಅಂಗೈ ಮತ್ತು ಅಂಗಾಲು ಉರಿ ಕಾಣಿಸಿಕೊಳ್ಳುವುದು.

ಆಗಾಗ್ಗೆ ಅಭ್ಯಂಜನ ಸ್ನಾನ ಮಾಡಿ ದೇಹಕ್ಕೆ ವಿಶ್ರಾಂತಿ ನೀಡುವುದರಿಂದ ಅಂಗಾಲು ಮತ್ತು ಅಂಗೈ ಉರಿ ದೂರವಾಗುವುದು.

ಹೆಚ್ಚು ತಾಜಾ ಹಣ್ಣಿನ ರಸ ಕುಡಿಯುವುದರಿಂದ ಅಂಗೈ ಮತ್ತು ಅಂಗಾಲಿನಲ್ಲಿ ಉರಿ ಕಡಿಮೆಯಾಗುವುದು.

ನಿದ್ರಾಹೀನತೆಯಿಂದ ಅಂಗೈ ಮತ್ತು ಅಂಗಾಲುಗಳಲ್ಲಿ ಉರಿ ಕಾಣಿಸಿಕೊಳ್ಳುವುದು ನಿದ್ರಾಹೀನತೆಯಿಂದ ಕಣ್ಣುಗಳ ಕೆಳಗೆ ಕಪ್ಪು ವರ್ತುಲ ಕಾಣಿಸಿಕೊಳ್ಳುವುದು ಅಂತಹ ಸಮಯದಲ್ಲಿ ಸೌತೆ ಕಾಯಿಯ ತಿರುಳನ್ನು ಮಜ್ಜಿಗೆಗೆ ಬೆರೆಸಿ ಕುಡಿಯಬೇಕು ಹಾಗೆಯೇ ಸೌತೆಕಾಯಿ ತಿರುಳಿನಿಂದ ಅಂಗಾಲುಗಳನ್ನು ಚೆನ್ನಾಗಿ ತಿಕ್ಕಬೇಕು ಆಗ ಸುಖಕರವಾದ ನಿದ್ರೆ ಆವರಿಸುವುದು.

ಹಸಿ ಈರುಳ್ಳಿಯ ಸೇವನೆಯಿಂದ ಅಂಗೈ ಅಂಗಾಲು ಉರಿ ಯನ್ನು ತಪ್ಪಿಸಬಹುದು.

ಮಜ್ಜಿಗೆಗೆ ಬೆಟ್ಟದ ನೆಲ್ಲಿಕಾಯಿ ಪುಡಿ ಬೆರೆಸಿ ಕುಡಿಯುವುದರಿಂದ ಅಂಗೈ ಅಂಗಾಲು ಉರಿ ಯನ್ನು ತಪ್ಪಿಸಬಹುದು.

ಚೆನ್ನಾಗಿ ಹಣ್ಣಾಗಿರುವ ನಿಂಬೆಹಣ್ಣಿನ ರಸವನ್ನು ಶುಭ್ರವಾದ ನೀರಿಗೆ ಬೆರೆಸಿ ಕುಡಿಯುವುದರಿಂದ ಅಂಗೈ ಮತ್ತು ಅಂಗಾಲು ಉರಿ ದೂರವಾಗುವುದು.

ಅಂಗೈ ಮತ್ತು ಅಂಗಾಲು ಗಳಿಗೆ ತುಪ್ಪವನ್ನು ಹಚ್ಚಿ ಉಜ್ಜಬೇಕು ಆಗ ಒಳ್ಳೆಯ ಫಲಿತಾಂಶ ದೊರಕುವುದು.

ಬಾಳೆಹಣ್ಣನ್ನು ಮಜ್ಜಿಗೆಗೆ ಬೆರೆಸಿ ಕುಡಿಯುವುದರಿಂದ ಅಂಗೈ ಮತ್ತು ಅಂಗಾಲು ಉರಿ ಕಡಿಮೆಯಾಗುವುದು.

ಎಳನೀರು ಮತ್ತು ಸುಣ್ಣದ ತಿಳಿನೀರು ಅರಿಶಿನಪುಡಿ ಬೆರೆಸಿ ಅಂಗೈ ಮತ್ತು ಅಂಗಾಲು ಗಳಿಗೆ ತಿಕ್ಕುವುದರಿಂದ ರೋಗ ನಿವಾರಣೆಯಾಗುವುದು ಹೀಗೆ ಅಂಗೈ ಮತ್ತು ಅಂಗಾಲುಗಳಿಗೆ ರುಬ್ಬಿದ ಮೆಂತ್ಯಯನ್ನು ಹೆಚ್ಚುವುದರಿಂದ ಉರಿ ಶಮಾನಗೊಳ್ಳುವುದು.

ಯಾವ ಕಾಲದಲ್ಲಿ ಯಾವ ಹಣ್ಣು ದೊರಕಿತು ದೊರಕುವುದು ಹಣ್ಣುಗಳನ್ನು ಸೇವಿಸುವುದರಿಂದ ಅಂಗೈ ಅಂಗಾಲು ಊರಿಗೆ ಕಾಣಿಸಿಕೊಳ್ಳುವುದಿಲ್ಲ ಮೈಯಲ್ಲಿರುವ ಉಷ್ಣವನ್ನು ಕಡಿಮೆ ಮಾಡಿಕೊಳ್ಳಬೇಕು.

ಗಮನಿಸಿ: ಅಂಗೈ ಅಂಗಾಲು ಉರಿಗೆ ಕಾರಣ ದೇಹದಲ್ಲಿರುವ ಕೃಷ್ಣ ಹೀಗಾಗಿ ತಂಪಾದ ಪದಾರ್ಥಗಳನ್ನು ಸೇವಿಸಬೇಕು ನೀರಿನ ಅಂಶ ಹೆಚ್ಚಾಗಿರುವ ಹಣ್ಣು ತರಕಾರಿಗಳನ್ನು ಸೇವಿಸುವುದರಿಂದ ರೋಗ ಜಾಸ್ತಿಯಾಗದು.

Leave a Reply

Your email address will not be published. Required fields are marked *