ಸಪ್ತ ಪದಿಯಲ್ಲಿ ಏಳು ಹೆಜ್ಜೆ ಗಳನ್ನು ಇಡುವ ನಿಜವಾದ ಅರ್ಥ ಮತ್ತು ಪ್ರತಿಜ್ಞೆ..!!

ಮೊದಲನೆ ಹೆಜ್ಜೆ : ಓ ನನ್ನ ಹೈದಯ ಕದ್ದವಳೆ ನೀನು ಒಂದು ಹೆಜ್ಜೆ ಮುಂದಿಡು. ನೀನು ಕಾಲಿಟ್ಟ ಸ್ತಳದಲ್ಲೆಲ್ಲ ಅನ್ನ ಸಮೈದ್ದಿಯಾಗುವಂತೆಮಾಡು ನನಗೆ ಅನುಕೂಲ ಪತ್ನಿಯಾಗು, ನಮ್ಮ ಮುಂದಿನ ಬಾಳು ಹಸನಾಗುವಂತಾಗಲಿ.

ಎರಡನೆ ಹೆಜ್ಜೆ : ನಿನ್ನ ನುಣುಪಾದ ಹೆಜ್ಜೆ ಸ್ಥಳದಲ್ಲೆಲ್ಲ ಬಲ ಸಂವರ್ದನೆ ಆಗಲಿ, ನಮ್ಮ ಭಾಂಧವ್ಯ ಜೇನಿನಂತಾಗಲಿ, ನನ್ನ ಬಾಹುವಿನಲ್ಲಿ ಬಲವನ್ನು ತುಂಬುವಂತವಳಾಗು.

ಮೂರನೆ ಹೆಜ್ಜೆ : ನಿನ್ನ ಮೂರನೆ ಹೆಜ್ಜೆಯನ್ನು ನಿನ್ನ ನೂತನ ಗೈಹದಲ್ಲಿಟ್ಟು ಅಲ್ಲಿ ಧನ – ಧಾನ್ಯ – ಸಂಪತ್ತು ವೈದ್ದಿಯಾಗುವಂತೆ ಮಾಡು, ನಿನ್ನ ಕಾಲ್ಗುಣದಿಂದ ಸಂಪತ್ತು ವೈದ್ದಿಯಾಗುವಂತಾಗಲಿ, ನಮ್ಮ ಸಂಸಾರ ಸಾಗರವು ನಿರಾಂತಕವಾಗಿ ಸಾಗುವಂತೆ ಮಾಡು.

ನಾಲ್ಕನೆ ಹೆಜ್ಜೆ : ನಿನ್ನ ನಾಲ್ಕನೆ ಹೆಜ್ಜೆ ಯನ್ನು ಗೈಹದಲ್ಲಿಟ್ಟನಂತರ ಸುಖ – ಶಾಂತಿ – ಸೌಕರ್ಯಗಳು ನಮ್ಮ ಬಾಳಿನಲ್ಲಿ ಉಕ್ಕಿ ಹರಿಯುವಂತಾಗಲಿ.

ಐದನೆ ಹೆಜ್ಜೆ : ಮುಂದಿನ ದಿನಗಳಲ್ಲಿ ನನ್ನ ನಿನ್ನ ಸಮ್ಮಿಲನದಿಂದ ಉತ್ತಮ ಸಂತಾನ ಪ್ರಾಪ್ತವಾಗಲಿ, ನಮ್ಮವು ಸತ್ಪ್ಪ್ರಜೆಗಳಾಗಲಿ.

ಆರನೇ ಹೆಜ್ಜೆ : ನಿನ್ನ ಆರನೆ ಹೆಜ್ಜೆ ಯಿಂದ ನಮ್ಮ ಮನೆಯಲ್ಲಿ ಮಂದಮಾರುತವು ಬೀಸಲಿ, ಹಾಸ್ಯ ಪ್ರೇಮ ಆನಂದ ಸಾಗರ ದಲ್ಲಿ ನಾವು ತೇಲುವಂತಾಗಲಿ, ಯಾವುದೇ ಕಾರಣಕ್ಕು ಮನಸ್ತಾಪ ಉಂಟಾಗದಿರಲಿ.

ಎಳನೆ ಹೆಜ್ಜೆ : ಬಂದು ಭಾಂಧವರಲ್ಲಿ ಉತ್ತಮ ಸಂಬಂಧ ವೈದ್ದಿಯಗಾಲಿ, ನೀನು ನನ್ನ ಉತ್ತಮ ಮಡದಿ ಯಾಗಿ, ನಮ್ಮ ಮಕ್ಕಳಿಗೆ ಮಾತೆಯಾಗಿ ಕ್ಷಮಯ ಧರತ್ರಿಯಾಗಿ ಮನೆಯನ್ನು ನಂದನ ವನವಾಗುವಂತೆ ಮಾಡು, ನಮ್ಮ ಮಕ್ಕಳು ಉತ್ತಮ ಆಯಸ್ಸು ಪಡೆದು ಧರ್ಮದ ಹಾದಿಯಲ್ಲಿ ನಡೆಯುತ್ತಾ ದೀರ್ಘಾಯುಗಳಾಗಿ ಬಾಳುವಂತಾಗಲಿ.

ಈ ಸೊಪ್ಪುನ್ನ ತಿನ್ನುವುದರಿಂದ ಹಲ್ಲಿನ ವಸಡು ಕಬ್ಬಿಣದಂತೆ ಗಟ್ಟಿಯಾಗುತ್ತದೆ..!!

ಸೊಪ್ಪು ಮತ್ತು ತರಕಾರಿಗಳು ನಮ್ಮ ಆಹಾರದಲ್ಲಿ ಬಹಳ ಮುಖ್ಯವಾದವುಗಳು, ಅವುಗಳ ಬಳಕೆಯಿಂದ ನಮ್ಮ ದೇಹ ರಕ್ಷಣೆ ಮತ್ತು ಅರೋಗ್ಯ ವೃದ್ಧಿ ಸಾಧ್ಯ, ನಾವು ಸೇವಿಸುವ ಆಹಾರ ಪದಾರ್ಥಗಳಿಗೆ ಆಕರ್ಷಕ ಬಣ್ಣ, ಪರಿಮಳ ಹಾಗು ರುಚಿ ಸೊಪ್ಪು ಮತ್ತು ತರಕಾರಿಗಳಿಂದ ಲಭ್ಯ.

ಹಸಿರು ಸೊಪ್ಪುಗಳ ಬಳಕೆಯಿಂದ ಜೀರ್ಣ ಶಕ್ತಿ ಹೆಚ್ಚುವುದು, ಶುಭ ಖರ್ಚಿನಲ್ಲಿ ಹೆಚ್ಚಿನ ಪ್ರಮಾಣದ ಪೋಷ್ಟಿಕಾಂಶಗಳು ದೊರಕುವವು ಹಾಗು ಕಣ್ಣುಗಳ ಅರೋಗ್ಯ ರಕ್ಷಣೆ ಆಗುವವು.

ಮೂಳೆಗಳ ಬೆಳವಣಿಗೆಗೆ ಹಲ್ಲುಗಳು, ವಸುಡುಗಳು ದೃಢವಾಗುವುದಕ್ಕೆ C ಜೀವಸತ್ವ ಅಗತ್ಯ, ಈ ಜೀವಸತ್ವವನ್ನು ನುಗ್ಗೆ ಸೊಪ್ಪಿನಿಂದ ಹೆಚ್ಚು ಪ್ರಮಾಣದಲ್ಲಿ ಪಡೆಯಬಹುದು, ಹೆಚ್ಚು ಬೆಲೆಯ ಪ್ರಾಣಿಜನ್ಯ ಆಹಾರ ವಸ್ತುಗಳಲ್ಲಿ ಲಭ್ಯವಿರುವ ರೈಬೋಪ್ಲೇವಿನ್ ಎಂಬ ಜೀವಸತ್ವವನ್ನು ಬಿಟ್ರೋಟ್ ಗೆಡ್ಡೆಯ ಮೇಲಿನ ಎಲೆಗಳೂ ಒದಗಿಸುತ್ತದೆ.

ಅಗಸೆ ಸೊಪ್ಪು ನಮ್ಮಲ್ಲಿ ಹೆಚ್ಚು ಬಳಕೆಯಲ್ಲಿಲ್ಲ ಕಾರಣವೆಂದರೆ ಈ ಸೊಪ್ಪಿನಲ್ಲಿ ನಮ್ಮ ದೇಹಕ್ಕೆ ಹೆಚ್ಚು ಪ್ರಯೋಜನ ಉಂಟು ಎಂಬ ವಿಷ್ಯ ಬಹು ಮಂದಿಗೆ ತಿಳಿಯದು, ಈ ಸೊಪ್ಪನ್ನು ಬೇಯಿಸಿ ತಿನ್ನುವುದರಿಂದ ಕಬ್ಬಿಣ, ರಂಜಕ, ಕ್ಯಾಲ್ಸಿಯಂ ಮತ್ತು A ಜೀವಸತ್ವದ ಅಭಾವದಿಂದ ತಲೆದೋರುವ ರೋಗಗಳು ಗುಣವಾಗುವುದರಲ್ಲಿ ಸಂಶಯವಿಲ್ಲ.

ಹದಿನೈದಿ ದಿನಕೊಮ್ಮೆಯಾದರು ಅಗಸೆ ಸೊಪ್ಪು ಬಳಸುವುದು ಲೇಸು, ಕೆಲವರು ದ್ವದಶಿಯ ದಿನದಂದು ಈ ಸೊಪ್ಪನ್ನು ಖಡ್ಡಾಯವಾಗಿ ಬಳಸುತ್ತಾರೆ, ಈ ಸಂಪ್ರದಾಯಕ್ಕೆ ವೈಜಿನೈಕ ಹಿನ್ನಲೆ ಇಲ್ಲದೆ ಇಲ್ಲ.

ನಮ್ಮ ದೇಹಕ್ಕೆ ಸಂಭಂದಪಟ್ಟ ಕೆಲವು ವಿಚಿತ್ರ ಸಂಗತಿಗಳು ಗೊತ್ತಾದ್ರೆ ಶಾಕ್ ಆಗ್ತೀರಾ.

ಮಾನವ ಶರೀರವು ಒಂದು ಮಹಾ ಅದ್ಬುತ ಸೃಷ್ಟಿ ,ಈ ವಿಚಾರವನ್ನು ನಾವು ಸ್ಪಷ್ಟವಾಗಿ ಅರಿತುಕೊಂಡಲ್ಲಿ ನಮಗೆ ವಿಚಿತ್ರ ಎನಿಸುತ್ತದೆ.

ಯುಕ್ತ ವಯಸ್ಸಿನ ಒಬ್ಭ ಮನುಜನ ಶರೀರದಲ್ಲಿ ಒಂದು ಲಕ್ಷ ಕಿಲೋಮೀಟರ್ ಉದ್ದವಿರುವ ರಕ್ತ ನಾಳಗಳು ಇರುತ್ತವೆ.

ನಮ್ಮ ಶರೀರದಲ್ಲಿರುವ ಕೆಂಪು ರಕ್ತ ಕಣಗಳು ೧೨೦ ದಿನಗಳು ಮಾತ್ರವೇ ಜೀವಂತವಾಗಿರುತ್ತವೆ.

ಮನುಜನ ಶರೀರದಲ್ಲಿ ಸುಮಾರು ೨ಮಿಲಿಯನ್ ಶ್ವೇದ ಗ್ರಂಥಿಗಳು ಇರುತ್ತವೆ.

ನಮ್ಮ ಶರೀರದಲ್ಲಿ ೨೦೬ಮೂಳೆಗಳು ೬೫೦ಖಂಡಗಳು ೧೦೦ಕ್ಕೂ ಹೆಚ್ಚು ಕೀಲುಗಳು ಇರುತ್ತವೆ.

೭ವರ್ಷಕ್ಕೊಮ್ಮೆ ಮಾನವನ ಶರೀರದಲ್ಲಿ ಕೆಲವು ಜೀವ ಕಣಗಳು ಬದಲಾವಣೆ ಹೊಂದಿರುತ್ತದೆ ಆದರೆ ಪರಿಣಾಮವಾಗಿ ಮನುಜನ ರೂಪವೂ ಸಹ ಬದಲಾವಣೆಯನ್ನು ಹೊಂದಿರುತ್ತದೆ, ಆ ಬದಲಾವಣೆಯ ಸಕಾರತ್ಮಕ ಬದಲಾವಣೆ ಆಗಬಹುದು ಅಥವಾ ನಕಾರತ್ಮಕ ಬದಲಾವಣೆ ಆಗಬಹುದು.

ಚಿನ್ನ ಅಥವಾ ಬೆಳ್ಳಿ ಪದಾರ್ಥಗಳನ್ನ ಶುದ್ಧ ಮಾಡುವ ಸುಲಭ ವಿಧಾನ..!!

ಚಿನ್ನ ತುಂಬ ದುಬಾರಿ ವಸ್ತು, ಚಿನ್ನವನ್ನು ಕೊಡುಕೊಳ್ಳಬೇಕಾದರೆ ತುಂಬಾ ಹಣವನ್ನು ವೆಚ್ಚ ಮಾಡಬೇಕು, ಅಷ್ಟೊಂದು ವೆಚ್ಚಮಾಡಿ ಖರೀದಿಸಿದ ಚಿನ್ನ ಅಥವಾ ಬಂಗಾರವನ್ನ ಕಾಪಾಡಿಕೊಳ್ಳುವುದು ಅಷ್ಟೇ ಕಷ್ಟದ ವಿಷಯವೇ ಸರಿ ಆದರೆ ಇಂದು ನಾವು ನಿಮಗೆ ಮನೆಯಲ್ಲೇ ನಿಮ್ಮ ಆಭರಣಗಳು ಪಳ ಪಳ ಹೊಳೆಯುವಂತೆ ಸೂಚಿ ಮಾಡಲು ಉತ್ತಮ ಟಿಪ್ಸ್ ಅನ್ನು ನೀಡಲಿದ್ದೇವೆ ಮುಂದೆ ಓದಿ.

ಟೂತ್​ಪೇಸ್ಟ್ : ಹೌದು ಟೂತ್​ಪೇಸ್ಟ್ ಬಳಸಿ ಸ್ವಚ್ಛ ಮಾಡುವುದನ್ನ ನೀವು ಸಾಮಾಜಿಕ ಜಾಲತಾಣದ ವಿಡಿಯೋ ಗಳಲ್ಲಿ ನೋಡಿರಿತ್ತೀರಾ, ಕಾರಣ ಟೂತ್​ಪೇಸ್ಟ್ ಬಹಳ ಪರಿಣಾಮ ಕಾರಿ ಹಾಗು ಸುಲಭ ವಿಧಾನ, ಲ್ಪ ಟೂತ್​ಪೇಸ್ಟ್​ನ್ನು ಆಭರಣಗಳ ಮೇಲೆ ಹಚ್ಚಿ, ಬ್ರಶ್​ ಸಹಾಯದಿಂದ ನಿಧಾನವಾಗಿ ಉಜ್ಜಿ. ಆದಷ್ಟು ಮೈಲ್ಡ್​ ಹಾಗೆ ಬಿಳಿ ಬಣ್ಣದ ಟೂತ್​ಪೇಸ್ಟ್​ ಬಳಸಿ. ನಂತರ ಬೆಚ್ಚಗಿನ ನೀರಿನಲ್ಲಿ 5 ನಿಮಿಷ ಮುಳುಗಿಸಿಡಿ.

ಅಮೋನಿಯಾ : ಅಮೋನಿಯಾ ಪೌಡರ್ ಅನ್ನು ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ, ಮುತ್ತು ಹವಳ ಇಲ್ಲ ಆಭರಣಗಳನ್ನ ಎರಡು ನಿಮಿಷ ಈ ಬೆಚ್ಚಗಿನ ಅಮೋನಿಯಾ ಮಿಶ್ರಿತ ನೀರಿನಲ್ಲಿ ಬಿಟ್ಟು ನಂತ್ರ ಅದನ್ನ ಬ್ರೆಷ್ ನಲ್ಲಿ ಚೆನ್ನಾಗಿ ಉಜ್ಜಿ ಸದಾ ನೀರಿನಲ್ಲಿ ಸ್ವಚ್ಛ ಮಾಡಿ.

ಉಪ್ಪು : ಇನ್ನು ಬೆಳ್ಳಿಯ ಆಭರಣ ಶುಚಿ ಮಾಡಲು ಉಪ್ಪು ಒಳ್ಳೆಯ ಸಾಧನ, ಬಿಸಿ ನೀರಿಗೆ ಉಪ್ಪು ಸೇರಿಸಿ ಅದರಲ್ಲಿ ಬೆಳ್ಳಿಯ ಆಭರಣಗಳನ್ನು ಮುಳುಗಿಸಿ. ನಂತರ ಬ್ರಶ್​ ಮೂಲಕ ಸ್ವಚ್ಛಗೊಳಿಸಿ ಸಾದಾ ನೀರಿನಿಂದ ತೊಳೆಯಿರಿ.

ಡಿಶ್​ವಾಶ್​ ಪೌಡರ್​ ಅಥವಾ ಲಿಕ್ವಿಡ್ : ಎಲ್ಲಾ ಮನೆಯಲ್ಲೂ ಡಿಶ್​ವಾಶ್​ ಪೌಡರ್​ ಅಥವಾ ಲಿಕ್ವಿಡ್ ಸರ್ವೇ ಸಾಮಾನ್ಯ, ಇವು ನಿಮ್ಮ ಚಿನ್ನವನ್ನು ಕ್ಲೀನ್ ಮಾಡಲು ದಿ ಬೆಸ್ಟ್, ಬೆಚ್ಚಗಿನ ನೀರನ್ನ ಬಳಸಿ ಸ್ವಚ್ಛ ಮಾಡಿ, ಅದರಿಂದ ಅಂಟಿಕೊಂಡಿರುವ ಕೊಳೆಯುವು ಹೋಗಿ ಕಾಂತಿ ಮೂಡುತ್ತದೆ.

ಸಿಲ್ವರ್​ ಪಾಲಿಶ್​ : ಇದು ಮಾರುಕಟ್ಟೆಯಲ್ಲಿ ಸಿಲ್ವರ್​ ಪಾಲಿಶ್​ ಗಾಗಿಯೇ ಸಿಗುವ ವಸ್ತು, ಇದನ್ನು ಖರೀದಿಸಿ ಸಹ ನಿಮ್ಮ ಆಭರಣವನ್ನು ಸ್ವಚ್ಛವಾಗಿ ಇಡಬಹುದು, ಈ ಮಾಹಿತಿ ನಿಮಗೆ ಇಷ್ಟವಾದರೆ ಹಂಚಿಕೊಳ್ಳುವುದು ಮರೆಯದಿರಿ.

ಚಿಕ್ಕವರಿದ್ದಾಗ ಇದೊಂದು ಆಟವಾಡಿದ್ದರೆ ನಿಮಗೆ ಈ ರೋಗಗಳು ಬರುವುದಿಲ್ಲ..!!

ಸದಾ ಕೈಯಲ್ಲಿ ಮೊಬೈಲ್ ಹಿಡಿದೋ ಅಥವಾ ಟಿವಿ ಮುಂದು ಕುಳಿತೋ ಮಕ್ಕಳನ್ನು ಮನೆಯಿಂದ ಹೊರ ಕಳುಹಿಸಿ, ಆಡಲು ಉತ್ತೇಜಿಸಿ ಅವರು ಬಾಲ್ಯದಲ್ಲಿ ಆಡಲಿಲ್ಲವೆಂದರೆ ದೊಡ್ಡವರಾದ ಮೇಲೆ ನೂರಾರು ಕಾಯಿಲೆಗಳು ಬರುವುದು ಗ್ಯಾರಂಟಿ ಎಂದು ಸಂಶೋಧನೆಗಳು ದೃಢಪಡಿಸಿವೆ.

ಸಂಶೋಧನೆಗಳು ಬಾಲ್ಯ ಬಹಳ ಸ್ಟ್ರೆಸ್‌ನಿಂದ ಕೂಡಿದ್ದರೆ ದೊಡ್ಡವರಾದ್ಮೇಲೆ ಒಬೇಸಿಟಿ ಬರುವ ಸಾಧ್ಯತೆ ಅಧಿಕ, ಎಂದು ಸಾಬೀತಪಡಿಸಿವೆ.

ಇತ್ತೀಚೆಗೆ ಅಮೆರಿಕಾದಲ್ಲಿ ಬೊಜ್ಜಿನ ಸಮಸ್ಯೆಯಿಂದ ನರಳುತ್ತಿರುವವರ ಕುರಿತು ಮಹತ್ವದ ಸಮೀಕ್ಷೆಯೊಂದು ನಡೆಯಿತು, ಅದರಲ್ಲಿ ಬೊಜ್ಜಿರುವ ಹೆಚ್ಚಿನ ವಯಸ್ಕರ ಬಾಲ್ಯ ಕಹಿಯಾಗಿರುವುದು ಸಾಬೀತಾಗಿದೆ, ಹೆತ್ತವರ ಡಿವೋರ್ಸ್, ಪನಿಶ್‌ಮೆಂಟ್ ಭೀತಿ, ಮಾದಕ ವ್ಯಸನದಂಥ ಸಮಸ್ಯೆಗಳಿದ್ದವರು ಕೊನೆಯತನಕವೂ ಸಂತೋಷವನ್ನು ಕಂಡುಕೊಳ್ಳಲು ವಿಫಲ ಯತ್ನ ನಡೆಸುತ್ತಾರೆ, ಆದರೆ ಅದು ಅವರ ಕೈಗೆಟಕುವುದಿಲ್ಲ, ಹಾಗಾಗಿ ನಿಮ್ಮ ಮಗುವಿನ ಮೇಲೆ ಒತ್ತಡ ಹೇರಬೇಡಿ.

ಅದು ಹಾಯಾಗಿ ಆರಾಮವಾಗಿ ಬದುಕುವಂತೆ ಮಾಡಿ, ತಪ್ಪಿಯೂ ಕೂತು ಆಡುವ ಅಭ್ಯಾಸ ಮಾಡಿಸಬೇಡಿ, ಮಗು ಓಡಾಡಲಿ, ಹೊರಗೆ ಆಟವಾಡಲಿ, ಖುಷಿ ಖುಷಿಯಾಗಿರಲಿ.

ಸೊಳ್ಳೆ ಕೈಯಲ್ಲಿ ಒಡೆದು ಸಾಯಿಸಿದರೆ ಇದೆ ಭಯಾನಕ ಅಪಾಯ.

ಹೌದು ಸೊಳ್ಳೆ ಅನ್ನೋದು ತುಂಬ ಡೇಂಜರ್ ಕೀಟ ಸೊಳ್ಳೆಗಳು ಬದುಕಿದ್ದಾಗ ಮಾತ್ರವಲ್ಲ ಸತ್ತ ಮೇಲೂ ಅಪಾಯಕಾರಿ ಸೊಳ್ಳೆಗಳು ಮನುಷ್ಯನನ್ನು ಕಚ್ಚಿ ಡೆಂಗೆಯಂತಹ ಅಪಾಯಕಾರಿ ರೋಗಗಳನ್ನು ಹರಡಿದರೆ, ಸತ್ತ ಮೇಲೆ ಅಸ್ತಮಾ, ಅಲರ್ಜಿ ಸಮಸ್ಯೆಯನ್ನು ಹರಡುತ್ತದೆ ದಿಲ್ಲಿಯ ವಿಶ್ವವಿದ್ಯಾನಿಲಯದ ವಲ್ಲಾಬಬಾಯ್‌ ಪಟೇಲ್ ಹೃದ್ರೋಗ ಚಿಕಿತ್ಸಾ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

ರೋಗಿಗಳಲ್ಲಿ ಅಲರ್ಜಿ, ಅಸ್ತಮಾ ಸಮಸ್ಯೆ ಉಲ್ಬಣಗೊಳ್ಳಲು ಎರಡನೇ ಅತ್ಯಂತ ಪ್ರಮುಖ ಕಾರಣ ಇದೇ ಆಗಿದೆ ಎಂದು ಈ ಅಧ್ಯಯನದಲ್ಲಿ ತಿಳಿದು ಬಂದಿದೆ.

ಈ ಅಧ್ಯಯನದ ಮುಂದಾಳತ್ವ ವಹಿಸಿದ ಡಾ ರಾಜ್‌ ಕುಮಾರ್‌ ಸೊಳ್ಳೆಯ ರೋಮ, ಎಂಜಲು ಹಾಗೂ ದೇಹದ ಇತರ ಭಾಗಗಳು ವಾತಾವರಣದ ಗಾಳಿ ಜತೆ ಸೇರಿ ಉಸಿರಾಟದ ಮೂಲಕ ನಮ್ಮ ದೇಹವನ್ನು ಸೇರುತ್ತದೆ ಇದರಿಂದ ಅಸ್ತಮಾ ಹಾಗೂ ಅಲರ್ಜಿ ಸಮಸ್ಯೆ ಮತ್ತಷ್ಟು ಉಲ್ಬಣವಾಗುವುದು ಎಂದಿದ್ದಾರೆ.

ಪ್ರತಿದಿನ ಕನಿಷ್ಠ 6 ಲೋಟ ನೀರು ಕುಡಿಯುವುದರಿಂದ ಮೂತ್ರನಾಳ ಸೋಂಕಿನಿಂದ ಮುಕ್ರಗಬಹುದಂತೆ ನೋಡಿ.

ಹೌದು ದಿನಕ್ಕೆ ಕನಿಷ್ಠ 6 ಗ್ಲಾಸ್ ನೀರು ಕುಡಿಯುವುದರಿಂದ ಮಹಿಳೆಯರಲ್ಲಿ ಮೂತ್ರಕೋಶದ ಸೋಂಕಾಗುವ ಸಾಧ್ಯತೆಗಳು ಕಡಿಮೆ ಎಂದು ಒಂದು ಸಂಶೋಧನೆಯೊಂದರಲ್ಲಿ ಪತ್ತೆಯಾಗಿದೆ.

ಮೂತ್ರವಿಸರ್ಜನೆ ಮಾಡುವಾಗ ನೋವು, ತೊಂದರೆ ಅಥವಾ ಮೂತ್ರಕೋಶ ತುಂಬಿದೆ ಎಂಬ ಭಾವ, ಮೂತ್ರ ವಿಸರ್ಜನೆಗೆ ತುರ್ತು ಅಥವಾ ಪದೇ ಪದೇ ಹೋಗಬೇಕೆನಿಸುವುದು, ಕಿಬ್ಬೊಟ್ಟೆಯ ಬಳಿ ಕಿರಿಕಿರಿ ಎನ್ನಿಸುವುದು, ಮೂತ್ರದಲ್ಲಿ ರಕ್ತ ಇವು ಮೂತ್ರಕೋಶಕ್ಕೆ ಸೋಂಕಾಗಿರುವ ಲಕ್ಷಣಗಳಾಗಿವೆ.

ಈ ಕುರಿತು ಇತ್ತೀಚೆಗೆ ನಡೆದ ಸಂಶೋಧನೆಯಲ್ಲಿ ಕಂಡು ಬಂದ ಫಲಿತಾಂಶದ ಪ್ರಕಾರ ದಿನಕ್ಕೆ ಕನಿಷ್ಠ 1.5 ಲೀಟರ್ ನೀರು ಕುಡಿಯುವ ಮಹಿಳೆಯರಲ್ಲಿ ಮೂತ್ರಕೋಶದ ಸೋಂಕು ತಗಲುವ ಸಾಧ್ಯತೆಗಳು ಶೇ 48% ಕಡಿಮೆ ನೀರು ಅಥವಾ ದ್ರವಾಹಾರ ಸೇವನೆ ಮೂತ್ರಕೋಶಕ್ಕೆ ತಗಲುವ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡಲು ಮತ್ತು ಆ ಬ್ಯಾಕ್ಟೀರಿಯಾಗಳ ಸಾಮರ್ಥ್ಯ ಕುಂದಿಸಲು ಸಹಾಯ ಮಾಡುತ್ತದೆ ಎಂದು ವೈದ್ಯರು ಸಂಶೋದನೆಯಲ್ಲಿ ತಿಳಿಸಿದ್ದಾರೆ.

ಹುಳುಕಡ್ಡಿ, ಇಸಬು, ಕರಪಾಣಿ ಇತ್ಯಾದಿ ಚರ್ಮ ರೋಗಗಳಿಗೆ ರಾಮಬಾಣ ಈ ಕಾಯಿ..!!

ಜಾಪತ್ರೆ ಮತ್ತು ಜಾಯಿಕಾಯಿಗಳನ್ನು ಅಡಿಕೆಪುಡಿಯೊಂದಿಗೆ ಸೇರಿಸಿ ಬಳಸುವರು ಇದು ಲೈಂಗಿಕ ಕ್ರಿಯೆಯನ್ನು ಪ್ರಚೋದಿಸುವುದು ಜೀರ್ಣಶಕ್ತಿ ಹೆಚ್ಚಿಸುವುದು.

ದೇಹಾಲಸ್ಯದಿಂದ ಅಳುಗರೆಯುವ ಮಗುವಿಗೆ ಜೇನುತುಪ್ಪದಲ್ಲಿ ಜಾಯಿಕಾಯಿ ತೇದು ಸ್ವಲ್ಪ ಗಂಧವನ್ನು ನೆಕ್ಕಿಸಿದರೆ ಮಗು ಚೆನ್ನಾಗಿ ನಿದ್ರಿಸುವುದು.

ರೋಗಿಯ ಜೊಲ್ಲು ರಸದಲ್ಲಾಗಲಿ ಮೂತ್ರದಲ್ಲಾಗಲಿ ಜಾಯಿಕಾಯಿ ತೇದು ಆ ಗಂಧ ಹಚ್ಚಿದರೆ ಹುಳುಕಡ್ಡಿ ಇಸಬು ಕರಪಾಣಿ ಇತ್ಯಾದಿ ಚರ್ಮ ರೋಗಗಳು ಗುಣವಾಗುತ್ತವೆ.

ಅಂಗಸುಖ ಅನುಭವಿಸುವುದಕ್ಕೆ ಒಂದು ಗಂಟೆ ಮುಂಚೆ ಜೇನುತುಪ್ಪದಲ್ಲಿ ಕಲಸಿದ ಜಾಯಿಕಾಯಿ ಚೂರ್ಣ ಸೇವಿಸಿದರೆ ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಉಲ್ಲಾಸ ಕಂಡುಬರುವುದು ಮತ್ತು ವೀರ್ಯ ವಿಸರ್ಜನೆ ತಡವಾಗಿ ಆಗುವುದು.

ಜಾಯಿಕಾಯಿ ಚೂರ್ಣವನ್ನು ಬಾಳೆಹಣ್ಣಿನೊಂದಿಗೆ ಸೇವಿಸಿದರೆ ಅಜೀರ್ಣದ ದೆಸೆಯಿಂದ ತಲೆದೋರುವ ಭೇದಿ ನಿಲ್ಲುವುದು.

ಒಂದು ಊಟದ ಚಮಚ ನೆಲ್ಲಿಕಾಯಿ ರಸದಲ್ಲಿ 1 ಚಿಟಿಕೆ ಜಾಯಿಕಾಯಿ ಚೂರ್ಣ ಸೇರಿಸಿ ದಿನಕ್ಕೆ ಮೂರಾವರ್ತಿಯಂತೆ ಸೇವಿಸುತ್ತಿದರೆ ಅಜೀರ್ಣ ದೈನಂದಿನ ಚಟುವಟಿಕೆಗಳಲ್ಲಿ ಅನಾಸಕ್ತಿ ಮಾನಸಿಕ ಉದ್ವೇಗ ಬಿಕ್ಕಳಿಕೆ ಮೆರಗುಳಿತನ ಈ ಲಕ್ಷಣಗಳುಳ್ಳ ರೋಗಿಗಳಲ್ಲಿ ಕ್ರಮೇಣ ಸುಧಾರಣೆ ಕಂಡುಬರುವುದು ಆದರೆ ಜಾಯಿಪತ್ರೆಯನ್ನಾಗಲಿ ಜಾಯಿಕಾಯಿಯನ್ನಾಗಲಿ ಅವಶ್ಯಕತೆಗಿಂತ ಹೆಚ್ಚು ಪ್ರಮಾಣದಲ್ಲಿ ಬಳಸಿದ್ದೇ ಆದಲ್ಲಿ ದೇಹಕ್ಕೆ ಹಾನಿಉಂಟಾಗುವುದು.

ಜಾಯಿಕಾಯಿಯನ್ನು ಚೆನ್ನಾಗಿ ಜಜ್ಜಿ ಪುಡಿ ಮಾಡಿ ಎಣ್ಣೆಯಲ್ಲಿ ಬೇಯಿಸಿಈ ಎಣ್ಣೆ ತಿಕ್ಕುವುದರಿಂದ ತಲೆಶೂಲೆ ಕೀಲು ನೋವು ಬಿಟ್ಟು ಹೋಗುವುದು ದೀರ್ಘಕಾಲದಿಂದ ಗುಣವಾಗದಿರುವ ವ್ರಣಗಳಿಗೂ ಈ ತೈಲ ಹಚ್ಚಬಹುದು.

ಕಾಮಾಸಕ್ತಿ ನಿಮಗೆ ಕಡಿಮೆಯಾಗಿದ್ಯಾ ತಿಳಿಯೋದು ಹೇಗೆ..?

ಕೆಲವರಿಗೆ ಸೆಕ್ಸ್ ನಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವುದಿಲ್ಲ ತಮಗೆ ತಾವೇ ಸೆಕ್ಸ್ ನನ್ನ ಬಳಸುವುದಿಲ್ಲ ಗಂಡ ಅತಿಯಾಗಿ ಒತ್ತಾಯವನ್ನು ಮಾಡಿದಾಗ ಒಪ್ಪಿಕೊಳ್ಳುತ್ತಾರೆ ಆದರೆ ಲೈಂಗಿಕತೆಯಲ್ಲಿ ಪಾಲ್ಗೊಂಡಾಗ ಶರೀರ ಚೆನ್ನಾಗಿ ಸ್ಪಂದಿಸುತ್ತದೆ ಯೋನಿಯಲ್ಲಿ ಸ್ರಾವ ಉಂಟಾಗುತ್ತದೆ ಭಾವಪ್ರಾಪ್ತಿ ಅಥವಾ ಲೈಂಗಿಕ ಪರಾಕಾಷ್ಟೆಯನ್ನು ಹೊಂದುತ್ತಾರೆ ಮತ್ತೆ ಸೆಕ್ಸ್ ನಲ್ಲಿ ಪಾಲ್ಗೊಳ್ಳಲು ಹೆಚ್ಚು ದಿನಗಳು ಬೇಕಾಗುತ್ತದೆ.

ಆ ತಿಂಗಳಲ್ಲಿ ಎರಡು ಮೂರು ಸಾರಿಗೂ ಹೆಚ್ಚಾಗಿ ರತಿಕ್ರೀಡೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಅದನ್ನು ಕಾಮವಾಂಛೆ ಇಳಿಕೆ ಚಟುವಟಿಕೆ ಎಂದು ಭಾವಿಸಬಹುದು.

ಕೆಲವರಲ್ಲಿ ಸೆಕ್ಸ್ ಕೋರಿಕೆಯಲ್ಲಿ ಕೊರತೆಯೇನೂ ಇರುವುದಿಲ್ಲಆದರೆ ಸೆಕ್ಸ್ನಲ್ಲಿ ಪಾಲ್ಗೊಂಡಾಗ ಶರೀರ ಸಹಕರಿಸುವುದಿಲ್ಲ ರತಿ ಆನಂದಕರವಾಗಿಲ್ಲದೆ ಇರಬಹುದು ಬಾಧೆಯು ಉಂಟಾಗಬಹುದು ಇದನ್ನು ಸ್ಪಂದನ ದೋಷ ಎಂದು ಕರೆಯಬಹುದು ಅಲ್ಲದೆ ಇದನ್ನು ಪುರುಷರ ಲೈಂಗಿಕ ದೌರ್ಬಲ್ಯತೆಗೆ ಹೋಲಿಸಬಹುದು.

ಕಾಮವಾಂಛೆ ದೋಷ ಹೇಗೆ ಉಂಟಾಗುತ್ತದೆ?

ಶ್ರೀಮತಿ ಕಾ ಮದುವೆಗೆ ಮೊದಲು ಮತ್ತು ಆನಂದ ಹೆಚ್ಚಾಗಿ ಶೃಂಗಾರ ಕಥೆಕಾದಂಬರಿಗಳನ್ನು ಓದುತ್ತಿದ್ದಳು ಆ ಪುಸ್ತಕಗಳಲ್ಲಿ ಪುರುಷರ ಶೃಂಗಾರ ಚೇಷ್ಟೆಯನ್ನು ಚಟುವಟಿಕೆಯನ್ನು ವರ್ಣಿಸಿರುವಂತೆ ನನ್ನ ದಾಂಪತ್ಯ ಜೀವನದಲ್ಲಿ ಉಂಟಾಗದಿದ್ದಾಗ ಆಕೆ ತನ್ನಲ್ಲಿ ಜಡತ್ವ ಇರುವುದರಿಂದಲೇ ನಾನು ಪರಿಪೂರ್ಣ ಸ್ತ್ರೀ ಆಗಲು ಸಾಧ್ಯವಿಲ್ಲವೆಂದು ಆಕೆಯ ಆವೇದನೆ ಇದನ್ನು ಮಿಥ್ಯಾ ಜಡತ್ವ ಕಲ್ಪನಾ ಸಾಹಿತ್ಯದಿಂದ ಉಂಟಾದ ಅಸಮಾಧಾನ ಆಸಂತೃಪ್ತಿ ಎಂದು ತಿಳಿಯಬಹುದು.

ಚಿಕ್ಕಂದಿನಿಂದಲೂ ಕಹಿ ಅನುಭವಗಳೆ ಬಂಧುಗಳು ತನ್ನವರು ಎಂದುಕೊಂಡವರು ಆಕೆಯನ್ನು ತಮ್ಮ ದಾಹಕ್ಕಾಗಿ ಬಲತ್ಕಾರವಾಗಿ ಬಳಸಿಕೊಂಡರು ಗಂಡಸರು ಎಂದರೆ ಆಕೆಗೆ ಅಸಹ್ಯಾ ಉಂಟಾಗುತ್ತದೆ, ಮನೆಯವರ ಒತ್ತಾಯದ ಮೇರೆಗೆ ಮದುವೆಯಾದಳು ಗಂಡನ ಒತ್ತಾಯದಿಂದ ಸೆಕ್ಸ್ ನಲ್ಲಿ ಪಾಲ್ಗೊಳ್ಳುತ್ತಿದ್ದಳು ಆದರೆ ಆಕೆಗೆ ಲೈಂಗಿಕ ಸಂತೋಷ ಉಂಟಾಗುತ್ತಿರಲಿಲ್ಲ ಆಕೆಗೆ ಯಾವಾಗಲೂ ಸ್ಪರ್ಧಿಗಳು ನೀಚರು ಆದ ಬಂಧುಗಳೇ ನೆನಪಿಗೆ ಬರುತ್ತಾರೆ ಟೀಕೆಗೆ ಸೆಕ್ಸ್ ವಾಂಛೆ ಯಾವಾಗಲೂ ಉಂಟಾಗದೆ ಇರಬಹುದು ಇದು ಆಕೆಯ ಹಿಂದಿನ ಕಹಿ ಅನುಭವದಿಂದ ಉಂಟಾದ ದೋಷವೆನ್ನಬಹುದು.

ನೀವು ಲೈಂಗಿಕ ಅಸಮರ್ಥರಾಗಲು ಇವುಗಳೇ ನಿಜವಾದ ಕಾರಣ ಏನು ಗೊತ್ತಾ..?

ಲೈಂಗಿಕ ಅಸಾಮರ್ಥ್ಯ ಸಾಮಾನ್ಯವಾಗಿ ಎಲ್ಲ ವಯಸ್ಸಿನ ಪುರುಷರು ಮತ್ತು ಮಹಿಳೆಯರನ್ನು ಬಾಧಿಸುವ ಸಾಮಾನ್ಯ ಸ್ಥಿತಿ, ಆದರೂ ವಯಸ್ಸಾದಂತೆಲ್ಲ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ, ಈ ರೀತಿಯ ಹೆಚ್ಚಿನ ಸಮಸ್ಯೆಗಳಿಗೆ ಚಿಕಿತ್ಸೆಯಿದೆ ಆದರೆ ಜನರು ಈ ಸಮಸ್ಯೆಗೆ ನೆರವು ಪಡೆಯಲು ಮತ್ತು ಈ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ.

ಲೈಂಗಿಕ ಚಟುವಟಿಕೆಗಳನ್ನು ಅನುಭವಿಸುವಲ್ಲಿ ನೀವು ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಪರಿಸ್ಥಿತಿಯ ಬಗ್ಗೆ ನಿಮ್ಮ ಸಂಗಾತಿಯ ಜತೆ ಮಾತನಾಡಬೇಕು ಮತ್ತು ವೃತ್ತಿಪರರ ನೆರವು ಪಡೆಯಬೇಕು, ಸೂಕ್ತ ಚಿಕಿತ್ಸೆಯಿಂದ ನೀವು ಆರೋಗ್ಯಕರ ಲೈಂಗಿಕ ಜೀವನವನ್ನು ನಡೆಸಬಹುದಾಗಿದೆ.

ದೈಹಿಕ ಅಂಶಗಳು: ಪುರುಷರಲ್ಲಿ ನರಕ್ಕೆ ಸಂಬಂಧಿಸಿದ ಹಾನಿ, ರಕ್ತ ಹರಿವಿನಲ್ಲಿ ಸಮಸ್ಯೆ, ಮಧುಮೇಹ, ಹಾರ್ಮೋನ್‌ ಅಸಮತೋಲನ, ನರ ಸಂಬಂಧಿ ರೋಗಗಳು, ಹೃದಯ ಅಥವಾ ಕಿಡ್ನಿ ವೈಫಲ್ಯದಂತಹ ಪರಿಸ್ಥಿತಿಗಳು ಲೈಂಗಿಕ ಅಸಾಮರ್ಥ್ಯಕ್ಕೆ ಕಾರಣವಾಗಬಹುದು, ಅಲ್ಕೋಹಾಲ್ ಮತ್ತು ನಿರ್ದಿಷ್ಟ ವಿಧದ ಔಷಧಗಳನ್ನು ಸೇವಿಸುವುದರಿಂದಲೂ ಲೈಂಗಿಕ ಕಾರ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು.

ಮಾನಸಿಕ ಮತ್ತು ಪಾರಿಸರಿಕ ಅಂಶಗಳು: ಲೈಂಗಿಕ ಬಯಕೆ ಕಡಿಮೆಯಾಗುವುದಕ್ಕೆ ಪ್ರಮುಖವಾದ ಸಾಮಾನ್ಯ ಕಾರಣ ಕಚೇರಿಯಲ್ಲಿನ ಕೆಲಸದ ಒತ್ತಡ, ಇದರ ಹೊರತಾಗಿ ಇತರ ಅಂಶಗಳೆಂದರೆ ಸಂಭೋಗದ ಕುರಿತಾದ ಆತಂಕ, ಈಗಾಗಲೇ ಇರುವ ಖಿನ್ನತೆ ಅಥವಾ ಅತಂಕದ ಸಮಸ್ಯೆ, ಸಂಗಾತಿಯ ಜತೆಗಿನ ಸಂಬಂಧದಲ್ಲಿರಬಹುದಾದ ಸಮಸ್ಯೆ ಮತ್ತು ಈ ಹಿಂದೆ ನಡೆದ ಲೈಂಗಿಕ ಆಘಾತಗಳು.

ಆಗಾಗ ಡಾರ್ಕ್ ಚಾಕೊಲೇಟ್ ತಿನ್ನೋರಿಗೆ ಇದೆ ಇಷ್ಟೆಲ್ಲಾ ಲಾಭ..!!

ಚಾಕೋಲೇಟ್ ತಿನ್ನೋದ್ರಿಂದ ಹಲ್ಲು ಹಾಳಾಗುತ್ತೆ, ಶುಗರ್ ಬರುತ್ತೆ ಅನ್ನೋ ಭಯ ನಿಮ್ಮಲ್ಲಿ ಇದ್ದರೆ ಮೊದಲು ಅದನ್ನ ತೆಗೆದು ಬಿಡಿ, ಸರಿಯಾಗಿ ಹಲ್ಲು ಸ್ವಚ್ಛ ಮಾಡದೆ ಹೋದರೆ ಏನೇ ತಿಂದರು ಹಲ್ಲು ಹುಳುಕು ಸಮಸ್ಯೆ ಸಂಭವಿಸುತ್ತದೆ ಹಾಗು ಸಕ್ಕರೆ ಕಾಯಿಲೆ ಸಿಹಿ ತಿನ್ನುವುದರಿಂದ ಬರುವುದಿಲ್ಲ ಬದಲಿಗೆ ಸಕ್ಕರೆ ಕಾಯಿಲೆ ಬಂದಮೇಲೆ ಸಿಹಿ ತಿನ್ನ ಬಾರದು.

ಹಾಗಾದರೆ ಡಾರ್ಕ್ ಚೊಕೊಲೇಟ್ ತಿನ್ನೋದ್ರಿಂತ ಏನು ಲಾಭ ಅಂದ್ರೆ ದೈನಂದಿನ ಮಾನಸಿಕ ಒತ್ತಡವು ಚೊಕೊಲೇಟ್ ತಿನ್ನುವುದರಿಂದ ಕಡಿಮೆಯಾಗುತ್ತದೆ ಯಂತೆ.

ನಿಮಗೇನಾದರೂ ಮರೆವಿನ ಸಮಸ್ಯೆ ಇದ್ದರೆ ಚಾಕೊಲೇಟ್ ನಿಮಗೆ ಸಹಾಯ ಮಾಡಬಹುದು, ಇದು ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.

ದೇಹದಲ್ಲಿ ಸಂಭವಿಸುವ ಹಲವು ಉರಿಯೂತ ಸಮಸ್ಯೆಗಳನ್ನ ತಡೆಯುವುದಲ್ಲದೆ, ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ನಿಮ್ಮ ಮನಸ್ಥಿತಿಯನ್ನು ಉತ್ತಮ ಗೊಳಿಸುತ್ತದೆ.

ಡಾರ್ಕ್ ಚಾಕೊಲೇಟ್ ನಲ್ಲಿ ಕೊಕೊ ಬೀಜದ ಪ್ರಮಾಣ ಹೆಚ್ಚಿದ್ದು ನಿಮಗೆ ಇಷ್ಟೆಲ್ಲಾ ಲಾಭಗಳು ದೊರೆಯುವುದು ಇದರಿಂದಲೇ, ಕೊಕೊ ಬೀಜದಲ್ಲಿ ಅತ್ಯಧಿಕ ಪ್ರಮಾಣ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತವನ್ನು ತಡೆಯುವ ಅಂಶಗಳಿದ್ದು ಅದು ಮೆದುಳು ಹಾಗೂ ಹೃದಯದ ಆರೋಗ್ಯಗಳಿಗೆ ಉತ್ತಮವಾಗಿದೆ ಎಂದು ಸಂಶೋಧನೆ ತಿಳಿಸುತ್ತದೆ.

ನೀವೇನಾದರೂ ಹಸಿ ಈರುಳ್ಳಿ ತಿನ್ನುತ್ತಿರಾ..? ಹಾಗಾದರೆ ಇಲ್ಲಿ ಒಮ್ಮೆ ಓದಿ.

ಹಸಿ ಈರುಳ್ಳಿಯಲ್ಲಿ ನೀವು ತಿಳಿಯದ ಹಲವು ಆರೋಗ್ಯಕಾರಿ ಲಾಭಗಳಿವೆ, ಪ್ರತಿ ದಿನ ಒಂದು ಹಸಿ ಈರುಳ್ಳಿ ಸೇವನೆ ಮಾಡಿದರೆ ಈ ಆರೋಗ್ಯಕಾರಿ ಲಾಭಗಳು ನಿಮ್ಮದಾಗುತ್ತವೆ, ಹಾಗಾದರೆ ಯಾವೆಲ್ಲ ರೀತಿಯಲ್ಲಿ ನಮ್ಮ ದೇಹಕ್ಕೆ ಹಸಿ ಈರುಳ್ಳಿ ಸಹಾಯಕವಾಗಿದೆ ಅನ್ನೋದನ್ನ ತಿಳಿಯೋಣ ಬನ್ನಿ.

ಮೊದಲನೆಯದಾಗಿ ಹಸಿ ಈರುಳ್ಳಿಯಲ್ಲಿ ಕ್ವೆರ್ಸೆಟಿನ್ ಎನ್ನುವ ರಾಸಾಯನಿಕ ಇರುತ್ತದೆ, ಇದು ಕ್ಯಾನ್ಸರ್ ಕೋಶಗಳ ವಿರುದ್ಧ ಯುದ್ಧಮಾಡಿ ಹೊರಡುವಷ್ಟು ಶಕ್ತಿಶಾಲಿ, ವಿಜ್ಞಾನಿಗಳು ಹಸಿ ಈರುಳ್ಳಿಯನ್ನು ತಿನ್ನುವ ಅಭ್ಯಾಸ ಇರುವವರಿಗೆ ಕ್ಯಾನ್ಸರ್ ಕಾಡುವ ಸಂದರ್ಭಗಳು ಕಡಿಮೆ ಎಂದಿದ್ದಾರೆ, ಅಲ್ಲದೆ ಹಸಿ ಈರುಳ್ಳಿ ದೇಹದ ಆರೋಗ್ಯಕ್ಕೆ ಶಕ್ತಿ ಕೊಡುವುದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನೂ ವೃದ್ಧಿಸುತ್ತದೆ.

ಬೇಯಿಸಿದ ಅಥವಾ ಹುರಿದ ಈರುಳ್ಳಿಗಿಂತ ಹಸಿ ಈರುಳ್ಳಿಯಲ್ಲಿ ಆರ್ಗಾನಿಕ್ ಸಲ್ಫರ್ ಪ್ರಮಾಣ ಜಾಸ್ತಿ ಇರುತ್ತದೆ, ಅಲ್ಲದೇ ಯಾವುದೇ ಕ್ಯಾಲರಿ ಇಲ್ಲದೇ ಇರೋದ್ರಿಂದ ಎಲ್ಲಾ ವಯಸ್ಸಿನವರುಗೂ ಹಾಗೂ ಎಲ್ಲ ಬಗೆಯ ಜನರಿಗೂ ಇದು ಸೂಕ್ತವಾಗಿದೆ, ಹಸಿ ಈರುಳ್ಳಿಯನ್ನು ಪ್ರತಿದಿನ ಊಟದ ಜೊತೆ ತಿನ್ನುವ ಅಭ್ಯಾಸವಿರುವ ಅನೇಕರಿಗೆ ಬೊಜ್ಜಿನ ಸಮಸ್ಯೆ ಇರುವುದಿಲ್ಲ.

ಈರುಳ್ಳಿ ನಮ್ಮ ದೇಹದ ಆರೋಗ್ಯಕ್ಕೆ ಮಾತ್ರವನ್ನ ನಮ್ಮ ತ್ವಚೆಯ ಸೌಂದರ್ಯ ಹಾಗೂ ಕೂದಲ ಸೌಂದರ್ಯಕ್ಕೂ ಬಹಳ ಸಹಾಯಕ, ಹಸಿ ಈರುಳ್ಳಿಯಲ್ಲಿರುವ ಸತ್ವಾಂಶಗಳು ರಕ್ತನಾಳದಲ್ಲಿ ಕೊಬ್ಬು ಶೇಖರಣೆಯಾಗದಂತೆ ತಡೆಯುತ್ತವೆ, ಹಾಗಾಗಿ ಹೃದ್ರೋಗದಿಂದ ದೂರ ಇರಿಸುವಲ್ಲಿ ಇವುಗಳ ಪಾತ್ರ ನಿಜಕ್ಕೂ ದೊಡ್ಡದೇ, ಇನ್ನು ದೇಹದ ರೋಗನಿರೋಧಕ ಶಕ್ತಿಯನ್ನು ಮತ್ತಷ್ಟು ಬಲಪಡಿಸುವುದರಿಂದ ಸಣ್ಣ ಪುಟ್ಟ ಸೋಂಕುಗಳು ದೇಹದ ಹತ್ತಿರವೂ ಸುಳಿಯದಂತೆ ಈರುಳ್ಳಿಯ ಗುಣಗಳು ದೇಹವನ್ನು ಸುರಕ್ಷಿತವಾಗಿಡುತ್ತದೆ.

ಒಂದು ಗಾಜಿನ ಲೋಟದಲ್ಲಿ ನಿಂಬೆ ಹಣ್ಣನ್ನು ಮುಳುಗಿಸಿ ಇಟ್ಟರೆ ಇರುವ ಉಪಯೋಗ ಏನು ಅಂತ ಗೊತ್ತಾ..!!

ಸಾಮಾನ್ಯವಾಗಿ ವ್ಯಾಪಾರದ ಸ್ಥಳದಲ್ಲಿ ನಿಂಬೆ ಹಣ್ಣನ್ನು ಒಂದು ಗಾಜಿನ ಲೋಟದಲ್ಲಿ ನೀರನ್ನು ತುಂಬಿ ಮುಳುಗಿಸಿರುತ್ತಾರೆ ಹಾಗು ದೇವರ ಫೋಟೋ ಪಕ್ಕದಲ್ಲಿ ಇಟ್ಟಿರುತ್ತಾರೆ, ಹೀಗೆ ಮಾಡುವುದರಿಂದ ಯಾವ ಲಾಭಗಳಿವೆ, ಈ ಆಚರಣೆ ಬರಲು ಕಾರ ಏನು, ಮತ್ತು ಈ ಆಚರಣೆಯ ಧಾರ್ಮಿಕ ಉಪಯೋಗ ಹಾಗು ವೈಜ್ಞಾನಿಕ ಉಪಯೋಗಗಳನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ.

ಧಾರ್ಮಿಕ ನಂಬಿಕೆ : ನಿಂಬೆ ಹಣ್ಣಿಗೆ ನಮ್ಮ ಧರ್ಮದಲ್ಲಿ ಅದರದೇ ಆದ ಸ್ಥಾನವಿದೆ, ಎಲ್ಲಾ ದೈವಿಕ ಕಾರ್ಯಗಳಲ್ಲಿ ಬಳಸುವುದಲ್ಲದೆ, ನಕಾರಾತ್ಮಕ ಶಕ್ತಿಗಳ ಉಚ್ಛಾಟನೆಗೂ ಹಾಗು ನಿಯಂತ್ರಿಸಲು ಬಳಸಲಾಗುತ್ತದೆ, ಅದರಂತೆ ಒಂದು ಗಾಜಿನ ಲೋಟದಲ್ಲಿ ನೀರನ್ನು ತುಂಬಿ ನಿಂಬೆಹಣ್ಣನ್ನು ಮುಳುಗಿಸಿ ಇಟ್ಟರೆ ಅದು ನಕಾರಾತ್ಮಕ ಶಕ್ತಿಯನ್ನು ತಟಸ್ಥ ಗೊಳಿಸುವುದಲ್ಲದೆ, ಹೆಣ್ಣು ಅಥವಾ ಗಂಡಸರ ಕೆಟ್ಟ ದೃಷ್ಟಿಯನ್ನು ತಡೆಯುತ್ತದೆ ಎನ್ನಲಾಗುತ್ತದೆ.

ಮುಖ್ಯವಾಗಿ ಮಾಟ ಮಂತ್ರದಂತಹ ಕೆಟ್ಟ ಪ್ರಯೋಗಗಳು ನಿಮ್ಮ ಮೇಲೆ ಪ್ರಯೋಗಿಸಿದಾಗ ಈ ನಿಂಬೆ ಹಣ್ಣು ನಿಮಗೆ ಕೊಳೆತು ಸೂಚನೆ ನೀಡುತ್ತದೆ ಎನ್ನುತ್ತಾರೆ ಹಾಗು ಆ ದುಷ್ಟ ಶಕ್ತಿಯನ್ನು ನಿಯಂತ್ರಿಸುತ್ತದೆ ಎಂದು ಸಹ ನಂಬಲಾಗಿದೆ.

ವೈಜ್ಞಾನಿಕ ಕಾರಣ : ವಾತಾವರದಲ್ಲಿ ಆಮ್ಲಿಯತೆ ಹೆಚ್ಚಿದ್ದರೆ ಅದು ನಿಮ್ಮ ಆರೋಗ್ಯದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ, ಇದರಿಂದ ಪರಿಹಾರ ಹೊಂದಲು ನಿಂಬೆ ಹಣ್ಣನ್ನು ನೀರಿನ ಲೋಟದಲ್ಲಿ ಇಟ್ಟರೆ ಅದರಲ್ಲಿ ಇರುವ ಕ್ಷಾರೀಕ ಗುಣ ವಾತಾವರಣ ಆಮ್ಲಿಯತೆಯನ್ನು ಹೀರಿ ನಿಮ್ಮ ಆರೋಗ್ಯವನ್ನು ಕಾಯುತ್ತದೆ.

ಈ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.