ಲೈಂಗಿಕ ತೊಂದರೆಗಳು ವೀರ್ಯ ವೃದ್ಧಿಗೊಳ್ಳಲು ಸುಲಭ ಮನೆ ಮದ್ದುಗಳು..!!

ಸಾಮಾನ್ಯವಾಗಿ ಲೈಂಗಿಕ ತೊಂದರೆಗಳು ಕಂಡು ಬಂದಾಗ ನಾವು ವೈದ್ಯರನ್ನು ಸಂಪರ್ಕಿಸಲು ಸಂಕೋಚಕೊಳ್ಳುತ್ತೇವೆ, ಸಂತಾನ ಭಾಗ್ಯ ಲಭಿಸದೆ ಇರಲು ಕಾರಣ ವೀರ್ಯದಲ್ಲಿ ಕಂಡುಬರುವ ನಿಶ್ಯಕ್ತತೆ ಅಥವಾ ಬೇರೆ ಕಾರಣಗಳು ಇರಬಹುದು, ಲೈಂಗಿಕ ತೊಂದರೆಗಳನ್ನು ನಿವಾರಿಸಿಕೊಂಡರೆ ವೀರ್ಯವು ತನ್ನಷ್ಟಕ್ಕೆ ತಾನೆ ವೃದ್ಧಿಯಾಗುತ್ತದೆ, ಅಂತಹ ವಿಷಯವನ್ನು ನಾವು ನಮ್ಮ ಮನೆಯಲ್ಲಿ ದೊರಕುವ ಪದಾರ್ಥಗಳಿಂದ ನಿವಾರಣೆ ಮಾಡಿಕೊಳ್ಳಬಹುದು.

ಹಿಂದಿನ ಕಾಲದಲ್ಲಿ ಈರುಳ್ಳಿಯನ್ನು ಕಾಮಪ್ರಚೋದಕ ಎಂದು ಕರೆಯುತ್ತಿದ್ದರು, ಆದರೆ ಆಧುನಿಕ ಯುಗದಲ್ಲಿ ಈರುಳ್ಳಿಯನ್ನು ಆರೋಗ್ಯ ಪ್ರದಾಯಕ ಎಂದು ಕರೆಯುತ್ತಿದ್ದಾರೆ, ಈರುಳ್ಳಿಯ ಸೇವನೆಯಿಂದ ಹಸಿವು ಹೆಚ್ಚುವುದು, ಆರೋಗ್ಯ ಲಭಿಸುವುದು, ಸ್ನಾಯುಮಂಡಲ ಚೈತನ್ಯ ಗೊಳ್ಳುವುದು, ಕಾಲರಾ ಕ್ರೀಮ್ಗಳನ್ನು ದೇಹದಿಂದ ನಾಶಗೊಳಿಸುವುದು, ಲೈಂಗಿಕ ತೊಂದರೆಗಳನ್ನು ನಿವಾರಿಸಿ ವೀರ್ಯವನ್ನು ವೃದ್ಧಿಸುವುದು.

ವೀರ್ಯ ವೃದ್ಧಿ ಕೊಳ್ಳಬೇಕಾದರೆ ಹುರಿದ ಉದ್ದಿನಬೇಳೆಯನ್ನು ಹಿಟ್ಟಿನ ಜೊತೆ ಬೆರೆಸಿ ತಿನ್ನಬೇಕು.

ನಿಮ್ಮಲ್ಲಿ ಯಾರಿಗಾದರೂ ಶೀಘ್ರ ಸ್ಖಲನದ ಸಮಸ್ಯೆ ಇದ್ದರೆ ಅಂಥವರು ಜೇನುತುಪ್ಪವನ್ನು ಪ್ರತಿನಿತ್ಯ ಸೇವಿಸಬೇಕು ಆಗ ಶೀಘ್ರ ಸ್ಖಲನದ ಸಮಸ್ಯೆ ನಿವಾರಣೆಯಾಗಿ ಸುಖ ಸಂತೃಪ್ತಿ ಸಂಭೋಗವನ್ನು ನಡೆಸಬಹುದು, ಜೇನುತುಪ್ಪ ಶರೀರವನ್ನು ಲವಲವಿಕೆಯಿಂದ ಕೂಡಿರುವಂತೆ ಮಾಡಬಲ್ಲದು.

ಕಾದ ಹಾಲಿಗೆ ಏಲಕ್ಕಿ ಪುಡಿ ಕಲ್ಲುಸಕ್ಕರೆಪುಡಿ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಲೈಂಗಿಕ ಆಸಕ್ತಿ ಹೆಚ್ಚುವುದು, ಹೀಗೆ ಮಾಡುವುದರಿಂದ ಉರಿ ಮೂತ್ರ ರೋಗ ದೂರವಾಗುವುದು.

ಲೈಂಗಿಕ ನಿರಾಸಕ್ತಿಗೆ ನರಗಳ ದೌರ್ಬಲ್ಯ ಒಂದು ಕಾರಣ ನರಗಳ ಶಕ್ತಿಯನ್ನು ವೃದ್ಧಿ ಪಡಿಸಿಕೊಳ್ಳಬೇಕು ಒಂದು ಬಟ್ಟಲು ಎಳ ನೀರಿಗೆ ಜೇನುತುಪ್ಪ ಬೆರೆಸಿ ಕುಡಿಯಬೇಕು, ಆಗ ನರಗಳು ಚೈತನ್ಯ ಗೊಳ್ಳುತ್ತವೆ.

ಬೆಳ್ಳುಳ್ಳಿಯ ಸೇವನೆಯಿಂದ ಜೀರ್ಣಶಕ್ತಿ ವೃದ್ಧಿಸುವುದು ನಂತರ ವೀರ್ಯ ವೃದ್ಧಿಯಾಗುವುದು ಲೈಂಗಿಕ ಆಸಕ್ತಿಯು ಹೆಚ್ಚುವುದು.

ಲೈಂಗಿಕ ಸಾಮರ್ಥ್ಯ ಕಡಿಮೆ ಇರುವವರು ಬಿಳಿ ಈರುಳ್ಳಿ ರಸವನ್ನು ಹಸುವಿನ ತುಪ್ಪದ ಜೊತೆ ಕೋಳಿ ಮೊಟ್ಟೆ ಸೇರಿಸಿ ಸೇವಿಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.

ಬಾಳೆಹಣ್ಣಿನ ಸೇವನೆಯಿಂದ ವೀರ್ಯ ವೃದ್ಧಿಯಾಗುವುದು.

ಕಬ್ಬಿನ ರಸವನ್ನು ಸೇವಿಸಿದರೆ ವೀರ್ಯ ವೃದ್ಧಿಯಾಗುವುದು.

ಹಸುವಿನ ಹಾಲನ್ನು ಕಾಯಿಸಿ ಕುಡಿದರೆ ವೀರ್ಯವು ವೃದ್ಧಿಗೊಳ್ಳುತ್ತದೆ.

ಸಂಭೋಗ ಶಕ್ತಿಯು ಹೆಚ್ಚಲು ಕೆಂಪು ಮೂಲಂಗಿಯ ಪಲ್ಯವನ್ನು ಸೇವಿಸಬೇಕು ಆಗ ವೀರ್ಯ ವೃದ್ಧಿಯಾಗುವುದು.

ವೀರ್ಯಾಣುಗಳ ಕೊರತೆ ಯಿಂದ ನರಳುವವರು ಮೊಸರಿಗೆ ಉಪ್ಪು ಸೇರಿಸಿ ಪ್ರತಿದಿನ ಕುಡಿಯುವುದರಿಂದ ಲೈಂಗಿಕ ಶಕ್ತಿ ಹೆಚ್ಚುವುದು ವೀರ್ಯಾಣುಗಳು ವೃದ್ಧಿಯಾಗುತ್ತವೆ ಹೀಗೆ ಲೈಂಗಿಕ ಸಾಮರ್ಥ್ಯ ಹೆಚ್ಚುವುದು.

ಲೈಂಗಿಕ ಬಲಹೀನತೆ ನಿವಾರಿಸಿಕೊಳ್ಳಲು ಒಣದ್ರಾಕ್ಷಿಯನ್ನು ಸೇವಿಸಬೇಕು ಹಾಗೂ ಲೈಂಗಿಕ ಆಸಕ್ತಿ ಹೆಚ್ಚಾಗುವುದು.

ನೀವು ಇಷ್ಟ ಪಟ್ಟವರನ್ನೇ ಮದುವೆಯಾಗಲು ಹೀಗೆ ಮಾಡಿ..!!

ಅನೇಕ ಬಾರಿ ನಾವು ಬಯಸಿದ ಸಂಗಾತಿ ಸಿಗುವುದಿಲ್ಲ ಕುಟುಂಬಸ್ಥರ ಕಾರಣಕ್ಕೆ ಇರಬಹುದು ಅಥವಾ ಮತ್ಯಾವುದೋ ಕಾರಣಕ್ಕೆ ಬಯಸಿದ ಸಂಗಾತಿ ಸಿಕ್ಕಿರುವುದಿಲ್ಲ, ನಿಮಗೆ ಈ ಸಮಸ್ಯೆ ಕಾಡಿದರೆ ನಿಮಗೆ ಜೋತಿಷ್ಯ ಶಾಸ್ತ್ರದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳ ಬಹುದು, ಜೋತಿಷ್ಯ ಶಾಸ್ತ್ರದ ಸಹಾಯದಿಂದ ನಿಮಗಿಷ್ಟವಾದ ಸಂಗಾತಿಯನ್ನ ನೀವು ಪಡೆಯಬಹುದು.

ಹುಡುಗಿ ಅಥವಾ ಹುಡುಗನ ನೋಡಲು ಹೋಗುವ ಹಿಂದಿನ ದಿನ ರಾತ್ರಿ ಊಟದ ನಂತ್ರ ಕೇವಲ ಹಾಲನ್ನ ಕುಡಿಯಿರಿ, ನಂತ್ರ ಶ್ರೀರಾಮನ ಹಾಗು ಸೀತಾಮಾತೆಯ ಫೋಟೋದ ಮುಂದೆ ದೀಪ ಹಾಗು ಒಂದು ಧೂಪವನ್ನ ಹಚ್ಚಿ, ಜಾನಕಿ ಜೀವನ ರಾಮ್ ಮಂತ್ರವನ್ನು ಜಪಿಸಿ.

ಮರುದಿನ ಭಗವಂತ ರಾಮ ಹಾಗು ಸೀತೆ ಮುಂದೆ ಧೂಪ ಹಾಗು ದೀಪವನ್ನ ಹಚ್ಚಿ ಬಲಗೈನ ಮಧ್ಯ ಬೆರಳಿಗೆ ಕಾಡಿಗೆಯ ಬಿಂದಿಯನ್ನ ಇಟ್ಟು ಓಂ ನಮೋ ಭಾಗವತೇ ವಾಸುದೇವಾಯ ನಮ್ಹಾ ಮಂತ್ರವನ್ನ ಜಪಿಸಿ.

ಗುರುವಾರ ಕನ್ಯೆಯರು ಗುರು ಬೃಹಸ್ಪತಿ ಪೂಜೆ ಮಾಡಬೇಕು, ಹಳದಿ ವಸ್ತು ಹಾಗು ಬಾಳೆಹಣ್ಣು ಸೇರಿದಂತೆ ಹಳದಿ ಆಹಾರವನ್ನು ಗುರು ಬೃಹಸ್ಪತಿಗೆ ಅರ್ಪಿಸಬೇಕು, ವೃತ್ತದ ಜೊತೆಗೆ ಆಕಳ ತುಪ್ಪದ ದೀಪವನ್ನು ಹಚ್ಚಬೇಕು, ಗುರುವಾರ ನೀರಿಗೆ ಅರಿಶಿನ ಬೆರೆಸಿ ಹುಡುಗಿಯರು ಸ್ನಾನ ಮಾಡಬೇಕು, ಹೀಗೆ ಮಾಡುವುದರಿಂದ ನಿಮ್ಮ ಪ್ರೀತಿಯ ಸಂಗಾತಿ ನಿಮಗೆ ದೊರೆಯುತ್ತಾರೆ ಎಂದು ಜೋತಿಷ್ಯ ಶಾಸ್ತ್ರ ಹೇಳುತ್ತದೆ.

ಜೊತೆಯಲ್ಲಿ ಇದನ್ನು ಓದಿ ಮದುವೆ ಮನೆಯಲ್ಲಿ ಊಟದ ನಂತರ ಸೋಂಪನ್ನು ತಿನ್ನುತ್ತೀರ.

ಊಟ ಆದ ತಕ್ಷಣ ಒಂದು ಅರ್ಧ ಚಮಚ ಸೊಂಪನ್ನ ತಿನ್ನ ಬೇಕು ಅಂತ ಹೇಳ್ತಾರೆ, ಒಂದು ವೇಳೆ ನೀವು ಊಟದ ನಂತರ ಒಂದು ಅರ್ಧ ಚಮಚ ಸೊಂಪನ್ನ ತಿಂದರೆ ಅದರಿಂದ ಆಗುವ ಅರೋಗ್ಯ ಉಪಯೋಗವನ್ನ ಇವತ್ತು ನಿಮಗೆ ತಿಳಿಸುತ್ತೇವೆ.

ಸೊಂಪನ್ನ ನೀರಿನಲ್ಲಿ ಕುದಿಸಿ ಋತು ಸಮಯದಲ್ಲಿ ಮಹಿಳೆಯರು ಸೇವನೆ ಮಾಡುವುದರಿಂದ ಒತ್ತೆ ನೋವು ತುಂಬಾನೇ ಕಡಿಮೆ ಯಾಗುತ್ತದೆ, ಅಥವಾ ಸೋಪನ್ನಾ ಪುಡಿಮಾಡಿ ಅದನ್ನು ಸ್ವಲ್ಪ ನೀರಿನಲ್ಲಿ ಮಿಶ್ರಣ ಮಾಡಿಯೂ ಕುಡಿಯ ಬಹುದು.

ಜೀರ್ಣ ಕ್ರಿಯೆಯನ್ನ ಉತ್ತಮ ಗೊಳಿಸುತ್ತದೆ ಹಾಗು ಹೊಟ್ಟೆಯಲ್ಲಿನ ಅನಿಲವನ್ನು ಹೊರದೂಡಲು ಸಹಾಯಕ ಹಾಗು ಅಜೀರ್ಣದ ಸಮಸ್ಯೆ ಇದ್ದಾರೆ ಅದು ಸಹ ನಿವಾರಣೆಯಾಗುತ್ತದೆ.

ನಗಡಿಯಾದಾಗ ಅಧಿಕ ಶೀತವನ್ನ ನಿವಾರಿಸಲು ಇದು ಪರಿಣಾಮಕಾರಿ, ಅಷ್ಟೇ ಅಲ್ಲದೆ ಇದು ಬಾಯಿಯ ದುರ್ಗಂಧ ನಿವಾರಣೆ ಮಾಡುತ್ತದೆ, ತೆಲೆಯ ಎನಿನ ನಿವಾರಣೆಗೂ ಸೋಂಪು ಮನೆ ಮದ್ದು.

ಏನುಗಳ ನಿವಾರಣೆಗೆ ಸೊಂಪಿನ ಬೀಜದ ತೈಲವನ್ನ ತಲೆಯ ನೆತ್ತಿಗೆ ಹಚ್ಚಲಾಗುತ್ತೆ, ಒಂದು ಲೀಟರ್ ನೀರಿಗೆ ಹತ್ತರಿಂದ ಅದಿನೈದು ಗ್ರಾಂ ಸೋಪಿನ ಪುಡಿ ಮಿಶ್ರಣ ಮಾಡಿ, ಐದು ಕಪ್ ದಿನ ಕುಡಿದರೆ ನಿಮ್ಮ ತಲೆಯಲ್ಲಿ ಎನಿನ ಸಮಸ್ಯೆ ಮಾಯವಾಗುತ್ತದೆ.

ರಾತ್ರಿ ಪೂರ್ತಿ ಸೊಂಪನ್ನ ನೀರಿನಲ್ಲಿ ನೆನಸಿ ಬೆಳಗ್ಗೆ ಎದ್ದು ಆ ನೀರಿನಿಂದ ನಿಮ್ಮ ಕಣ್ಣುಗಳನ್ನ ತೊಳೆದರೆ ಇದರಿಂದ ನಿಮ್ಮ ಕಣ್ಣಿನ ಸಂಭಂದ ಪಟ್ಟ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತದೆ.

ರಕ್ತದಲ್ಲಿನ ಅಧಿಕ ಆಮ್ಲದ ಮಟ್ಟವನ್ನ ಕಡಿಮೆ ಮಾಡುತ್ತೆ, ಗಾಯ ವಾಸಿ ಮಾಡುವ ಗುಣವನ್ನ ಹೊಂದಿದೆ, ಶ್ವಾಸಕೋಶದ ಕೆಲಸಕ್ಕೆ ಸಹಾಯ ಮಾಡುತ್ತದೆ, ತೂಕವನ್ನು ಸಹ ಕಡಿಮೆ ಮಾಡುತ್ತೆ.

ಹೃದಯಘಾತ ಎಂಬ ಮಾರಿಯಿಂದ ತಪ್ಪಿಸಿಕೊಳ್ಳುವ ಸುಲಭ ಉಪಾಯ..!!

ಎದೆನೋವು ಇಂದು ಎಲ್ಲರನ್ನೂ ಭಯಂಕರವಾಗಿ ನೀತಿಗೆ ಒಳಪಡಿಸುವ ಕಾಯಿಲೆಯಾಗಿದೆ, ಯಾರೇ ಆಗಲಿ ಎದೆ ನೋವನ್ನು ನಿರ್ಲಕ್ಷದಿಂದ ನೋಡಬಾರದು, ಕೂಡಲೇ ಉತ್ತಮ ವೈದ್ಯರನ್ನು ಸಂಪರ್ಕಿಸಬೇಕು, ಆದರೆ ಎದೆನೋವು ಬರ ತಡೆಯಲು ತಡೆಯುವುದು ಸೂಕ್ತ, ಹೀಗೆ ಮಾಡುವಂತೆ ನಿಮಗೆ ಕೆಲವು ಸೂಚನೆಗಳನ್ನು ನೀಡಲಾಗಿದೆ.

ಪಪಾಯಿ ಹಣ್ಣಿನ ಸೇವನೆಯಿಂದ ಹೃದಯದ ದೌರ್ಬಲ್ಯದಿಂದ ಮುಕ್ತರಾಗಬಹುದು.

ಪಪಾಯಿ ಹಣ್ಣಿನ ಬೀಜ ಸಿಪ್ಪೆ ಸಮೇತ ಮಿಕ್ಸಿಗೆ ಹಾಕಿ ಕೊಂಡು ಪೇಸ್ಟ್ ನಂತೆ ತಯಾರಿಸಿ ಅದಕ್ಕೆ ಜೇನುತುಪ್ಪವನ್ನು ಬೆರೆಸಿ ತಿನ್ನಬಹುದು ಇದನ್ನು ಸೇವಿಸಿದ ನಂತರ ಉಗುರು ಬೆಚ್ಚಗಿನ ಹಾಲನ್ನು ಕುಡಿಯುವುದು ಒಳ್ಳೆಯದು.

ಸೂಕ್ತವಾದ ವ್ಯಾಯಾಮ ವಾಕಿಂಗ್ ಹೃದಯದ ದೌರ್ಬಲ್ಯವನ್ನು ದೂರ ಮಾಡುವುದು.

ಕೊತ್ತಂಬರಿ ಬೀಜವನ್ನು ಅರ್ಧಂಬರ್ಧ ಅರೆದು ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು ಅರ್ಧದಷ್ಟಾದ ಮೇಲೆ ಕಷಾಯವನ್ನು ಕೆಳಗಿಳಿಸಿ ನಂತರ ಅದಕ್ಕೆ ಹಾಲು ಸಕ್ಕರೆಯನ್ನು ಬೆರೆಸಿ ಕುಡಿಯಬೇಕು ಹೀಗೆ ಮಾಡುವುದರಿಂದ ಎದೆನೋವಿನಿಂದ ಮುಕ್ತರಾಗಬಹುದು.

ದೇಹದ ಎಡಭಾಗದಲ್ಲಿ ನೋವು ಕಾಣಿಸಿಕೊಂಡರೆ ಕೂಡಲೇ ವೈದ್ಯರ ಬಳಿಗೆ ತೆರಳುವುದು ಒಳ್ಳೆಯದು.

ಹೃದಯ ಗಟ್ಟಿಗೊಳ್ಳಲು ಪೊಟ್ಯಾಶಿಯಂ ಅಗತ್ಯ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ ಸೇಬಿನಲ್ಲಿ ಪೊಟ್ಯಾಶಿಯಂ ಅಧಿಕವಾಗಿರುವುದು ಹೀಗಾಗಿ ಸೇಬನ್ನು ತಿನ್ನುವುದರಿಂದ ರೋಗದಿಂದ ಮುಕ್ತರಾಗಬಹುದು.

ಎದೆ ಉರಿ ಯು ಹೃದಯದ ರೋಗಗಳಲ್ಲಿ ಒಂದಾಗಿದೆ ಎದೆ ಉರಿ ಇರುವವರು ನಿಂಬೆರಸ ಮತ್ತು ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ಸೇವಿಸುವುದರಿಂದ ಶಮನವಾಗುವುದು.

ಶ್ವಾಸಕೋಶಗಳು ಚುರುಕಾಗಿರಲು ಕೊತ್ತಂಬರಿ ಸೊಪ್ಪಿನ ರಸ ಮತ್ತು ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ಸೇವಿಸಬೇಕು.

ಪ್ರತಿದಿನವೂ ಈರುಳ್ಳಿಯನ್ನು ಹಸಿಯಾಗಿ ಅಥವಾ ಆಹಾರ ಪದಾರ್ಥದಲ್ಲಿ ಬಳಸುವುದರಿಂದ ಹೃದಯದ ತೊಂದರೆಗಳು ದೂರವಾಗುತ್ತವೆ ಹೃದಯದಲ್ಲಿರುವ ನರಗಳು ಕವಾಟಗಳು ಶ್ವಾಸಕೋಶಗಳು ಚುರುಕಾಗುತ್ತವೆ.

ಕಲ್ಲಂಗಡಿ ಬೀಜ, ಗಸಗಸೆ, ಬಾದಾಮಿಯನ್ನು ಚೆನ್ನಾಗಿ ಅರೆದು ಹಾಲು ಮತ್ತು ಕಲ್ಲು ಸಕ್ಕರೆಯ ಜೊತೆ ಬೆರೆಸಿ ಕುಡಿಯುವುದರಿಂದ ದೇಹಕ್ಕೆ ತಂಪಾಗುವುದು ಹಾಗೆಯೇ ಹೃದಯದ ಕ್ರಿಯೆಗಳು ಚುರುಕಾಗುತ್ತವೆ.

ಮಾವಿನಕಾಯಿಯ ಕಾಲದಲ್ಲಿ ಮಾವಿನ ಹಣ್ಣನ್ನು ತಿನ್ನುವುದರಿಂದ ಹೃದಯ ಚಲನೆ ಚುರುಕಾಗಿ ಆರೋಗ್ಯವಾಗಿರುತ್ತದೆ.

ಹಾಗಾಗಿ ಶ್ವಾಸಕೋಶದ ಆರೋಗ್ಯಕ್ಕೆ ಯೋಗ ಮಾಡುವುದು ಉತ್ತಮ.

ಹೃದಯದ ಕಾಯಿಲೆ ದೂರವಾಗಬೇಕಾದರೆ ಹಾಲನ್ನು ಸೇವಿಸಬೇಕು ತುಪ್ಪವನ್ನು ಅತಿಯಾಗಿ ಸೇವಿಸಬಾರದು.

ಹಸಿ ತರಕಾರಿಗಳು ತಾಜಾ ಹಣ್ಣುಗಳು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ಗಮನಿಸಿ: ಹೃದಯಕ್ಕೆ ಜಿಡ್ಡು ತುಂಬಾ ಹಾನಿಕರ ಎಣ್ಣೆಯನ್ನು ಮಿತವಾಗಿ ಬಳಸಬೇಕು ಆಗಲೇ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಬಾಯಿಯಿಂದ ಬರುವ ಕೆಟ್ಟ ದುರ್ವಾಸನೆಗೆ ಸುಲಭ ಮನೆ ಮದ್ದಿನ ಪರಿಹಾರ..!!

ಬಾಯಿಯ ದುರ್ವಾಸನೆ ನಮ್ಮನ್ನು ಅನೇಕ ಬಾರಿ ಮುಜುಗರಕ್ಕೆ ಒಳಗಾಗುವುದೂ, ಹಲ್ಲು ಮತ್ತು ಬಾಯಿಯ ಸ್ವಚ್ಛತೆಗೆ ಬಾಯಿಯ ದುರ್ವಾಸನೆಗೆ ಮುಖ್ಯ ಕಾರಣ, ಸುಮಾರು ದಿನಗಳ ಕಾಲ ಹಲ್ಲಿನ ಅಸ್ವಚ್ಛತೆಯನ್ನು ಹಾಗೆ ಬಿಡುವುದರಿಂದ ಕೊನೆಗೆ ದುರ್ವಾಸನೆ ಪ್ರಾರಂಭವಾಗಿ ನಮ್ಮನ್ನು ಸಂಕಟಕ್ಕೆ ಗುರಿಮಾಡುತ್ತದೆ, ಬಾಯಿಯೂ ದುರ್ವಾಸನೆ ಬರದಂತೆ ಮುಂಜಾಗ್ರತೆ ಕ್ರಮಗಳು ಯಾವುದೆಂದು ಎಂದು ನಾವು ನಿಮಗೆ ತಿಳಿಸುತ್ತೇವೆ.

ಬಾಯಿಯ ದುರ್ವಾಸನೆಯನ್ನು ತಡೆಯಲು ಜಾಕಾಯಿ, ಏಲಕ್ಕಿ ಕಾಡುಗಳನ್ನು ಬಾಯಿಗೆ ಹಾಕಿಕೊಂಡು ಅಗೆಯುವುದರಿಂದ ಈ ಕಾಯಿಲೆಯಿಂದ ಕ್ರಮೇಣ ದೂರವಾಗಬಹುದು.

ದಂತ ವೈದ್ಯರ ಸಲಹೆ ಮೇರೆಗೆ ಔಷಧಿಗಳನ್ನು ತೆಗೆದುಕೊಳ್ಳಬೇಕು, ಹಲ್ಲು ಹುಳುಕು ಅತಿಯಾದ ಹಲ್ಲು ನೋವು ಈ ರೀತಿಯ ಸಮಸ್ಯೆಗಳಿಗೆ ಯಾವ ಕಾರಣಕ್ಕೂ ನಿಧಾನ ಮಾಡಲೇ ಮೊದಲು ವೈದ್ಯರ ಸಂಪರ್ಕ ಮಾಡುವುದು ಒಳ್ಳೆಯದು.

ಪುದೀನಾ ಎಲೆಗಳನ್ನು ಅಗಿಯುವುದರಿಂದ ಬಾಯಿಯ ದುರ್ಗಂಧ ದೂರವಾಗುವುದು.

ಕೊತ್ತಂಬರಿ ಸೊಪ್ಪನ್ನು ಶುಭ್ರಗೊಳಿಸಿ ಅಗಿಯುವುದರಿಂದ ಬಾಯಿಯಲ್ಲಿ ಬರುವ ದುರ್ವಾಸನೆ ನಿವಾರಣೆಯಾಗುವುದು.

ಹಸಿ ಶುಂಠಿ, ಉಪ್ಪು, ಲವಂಗವನ್ನು ಚೆನ್ನಾಗಿರು ರುಬ್ಬಿ ಪೇಸ್ಟ್ ಮಾಡಿಕೊಂಡು, ಬಾಯಿಗೆ ಹಾಕಿಕೊಂಡು ಅಗಿಯುವುದರಿಂದ ಬಾಯಿಯ ದುರ್ವಾಸನೆ ದೂರವಾಗುವುದು ಜೊತೆಯಲ್ಲಿ ನಾಲಿಗೆಯ ರುಚಿ ಹೆಚ್ಚುವುದು.

ಶ್ರೀಗಂಧವನ್ನು ಚೆನ್ನಾಗಿ ಗಂಧ ತೆಗೆದು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಚೆನ್ನಾಗಿ ಗೊಟಾಯಿಸ ಬೇಕು, ಹೀಗೆ ಗೊಟಾಯಿಸಿದ ನೀರನ್ನು ಬಾಯಿಗೆ ಹಾಕಿಕೊಂಡು ಮುಕ್ಕಳಿಸುವುದರಿಂದ ಬಾಯಿಯ ದುರ್ಗಂಧ ದೂರವಾಗುತ್ತದೆ.

ರಾತ್ರಿ ಊಟದ ನಂತರ ಸ್ವಲ್ಪ ಪ್ರಮಾಣದಲ್ಲಿ ಸೊಂಪಿನ ಕಾಲನ್ನ ಬಾಯಿಯಲ್ಲಿ ಹಾಕಿಕೊಂಡು ಅಗಿಯುವುದರಿಂದ ಕೂಡ ಬಾಯಿಯ ದುರ್ಗಂಧ ನಿಲ್ಲುತ್ತದೆ.

ಗಮನಿಸಿ : ಬಾಯಿಯ ದುರ್ಗಂಧ ನಿವಾರಿಸಲು ಸೋಂಪು, ಏಲಕ್ಕಿ, ಜಾಕಾಯಿ ಮುಂತಾದ ಪದಾರ್ಥಗಳಲ್ಲಿ ಔಷದಿಯ ಗುಣಗಳು ಇರುವುದರಿಂದ ಬಾಯಿಯ ದುರ್ಗಂಧ ದೂರವಾಗುತ್ತದೆ.

ಬಾಯಿಂದ ಬರುವ ದುರ್ವಾಸನೆ ಬಗ್ಗೆ ನೀಡಲಾದ ಈ ಅದ್ಭುತ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ.

ಮೂಗಿನಲ್ಲಿ ರಕ್ತ ಸ್ರಾವವಾಗುವುದು ಏಕೆ ಅಂತ ಗೊತ್ತಾ..!! ರಕ್ತ ಸ್ರಾವವಾದಾಗ ಏನು ಮಾಡಬೇಕು.

ಮೂಗಿಗೂ ಸಮಸ್ಯೆ ಇರುವುದೇ ಎಂದು ಆಶ್ಚರ್ಯವಾಗಬಹುದು ನಾವು ಮೂಗಿನಿಂದಲೇ ಉಸಿರಾಡಬೇಕು ಅಂತಹ ಜೀವ ವಾಯುವನ್ನು ನಮಗೆ ಒಳಗೆ ತೆಗೆದುಕೊಳ್ಳಲು ಸಹಕರಿಸುವ ಮೂಗಿನ ಸ್ವಚ್ಛತೆಯ ಬಗ್ಗೆ ನಾವು ತುಂಬಾ ಗಮನ ಹರಿಸಬೇಕು ಮುಗಿನಿಂದಲೇ ನೆಗಡಿ ಬರುವುದು ನೆಗಡಿ ಒಂದು ಸಮಸ್ಯೆ ಕಾಯಿಲೆ ಎಂದು ಕಂಡುಬಂದರೂ ಬಹಳ ಕಾಟ ಕೊಡುವುದು.

ಮೂಗಿನಿಂದ ಕೆಲವು ಬಾರಿ ರಕ್ತ ಶ್ರಮಿಸುವುದುಂಟು ಅದನ್ನು ಸಾಮಾನ್ಯ ಕಾಯಿಲೆ ಎಂದು ತಿಳಿದುಕೊಂಡು ಸುಮ್ಮನ್ ಆಗಬಾರದು ಮೂಗಿನಿಂದ ರಕ್ತಸ್ರಾವ ಕಾಯಿಲೆ ಕೆಲವು ಬಾರಿ ಗಂಭೀರ ಸಮಸ್ಯೆಯನ್ನು ತಂದೊಡ್ಡುವುದು ಇಂತಹ ಕಾಯಿಲೆಗೆ ಎಪಿಸ್ಟಾಕ್ಸೀಸ್ ಎಂದು ಕರೆಯುವರು.

ಆಯುರ್ವೇದ ಶಾಸ್ತ್ರದ ಪ್ರಕಾರ ರಕ್ತದ ಜೊತೆ ಸೇರಿಕೊಂಡು ಮೂಗಿನಲ್ಲಿ ರಕ್ತ ಸ್ರವಿಸುವುದು ಎಂದು ಹೇಳುವರು ಅದು ಕಪದ ಜೊತೆ ಬೆರೆತಾಗ ಮೂಗು ಅಥವಾ ಬಾಯಿಯಲ್ಲಿ ರಕ್ತದ ರೂಪದಲ್ಲಿ ಹೊರಬರುವುದು ಮೂಗನ್ನು ಬಹಳ ಸೂಕ್ಷ್ಮವಾಗಿ ಸ್ವಚ್ಛಗೊಳಿಸಬೇಕು ಕೈ ಬೆರಳುಗಳಲ್ಲಿ ಇರುವ ಉಗುರು ಹೊಳ್ಳೆಗಳಿಗೆ ತಗುಲಿದರೆ ಬಹಳ ಬೇಗ ಗಾಯವಾಗುವುದು.

ಮೂಗಿನಲ್ಲಿ ರಕ್ತ ಬರುವವರು ಬೇಸಿಗೆಯ ಕಾಲದಲ್ಲಿ ಸ್ವಲ್ಪ ಎಚ್ಚರದಿಂದ ಇರಬೇಕು ತಂಪಾದ ಪದಾರ್ಥಗಳನ್ನು ಸೇವಿಸಬೇಕು ತಾಜಾ ಹಣ್ಣುಗಳ ಸೇವನೆ ತುಂಬಾ ಮುಖ್ಯ ಗುಲ್ಕನ್ ತಿನ್ನುವುದರಿಂದ ಒಳ್ಳೆಯ ಫಲಿತಾಂಶ ದೊರಕುವುದು.

ಪ್ರತಿನಿತ್ಯ ಬೆಟ್ಟದ ನೆಲ್ಲಿ ಕಾಯಿಯ ಪುಡಿಯನ್ನು ಸೇವಿಸುವುದರಿಂದ ತುಂಬಾ ಒಳ್ಳೆಯದಾಗುವುದು.

ಹಸುವಿನ ತುಪ್ಪವನ್ನು ಪ್ರತಿದಿನವೂ ಮೂಗಿನ ಹೊಳ್ಳೆಗಳಿಗೆ ಒಂದೆರಡು ಹನಿ ಇಟ್ಟುಕೊಳ್ಳುವುದರಿಂದ ಮೂಗಿನಿಂದ ರಕ್ತ ಬರುವುದನ್ನು ತಪ್ಪಿಸಬಹುದು.

ದಾಳಿಂಬೆ ರಸವನ್ನು ಮೂಗಿನ ಹೊಳ್ಳೆಗಳಿಗೆ ಹಾಕಬೇಕು ಆಗ ರಕ್ತವು ಕ್ಷಮಿಸುವುದಿಲ್ಲ.

ಗಮನಿಸಿ: ಮೂಗು ತುಂಬಾ ಸೂಕ್ಷ್ಮವಾದ ಅಂಗ ಅದನ್ನು ಸ್ವಚ್ಛಗೊಳಿಸುವಾಗ ಹಾಗೂ ಅದರ ಕ್ಷೇಮವನ್ನು ನೋಡಿಕೊಳ್ಳುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು.

ಈ ಉಪಯುಕ್ತ ಮಾಹಿತಿ ಯು ನಿಮಗೆ ಇಷ್ಟವಾದಲ್ಲಿ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಏಕೆಂದರೆ ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಒಂದು ಒಳ್ಳೆಯ ವಿಷಯ.

ಎಚ್ಚರ ಕಿವಿ ನೋವು ಬಂದರೆ ಕಡೆಗಣಿಸದೆ ಮೊದಲು ಇಲ್ಲಿ ಓದಿ..!!

ಮಾನವರಲ್ಲಿ ಕಿವಿ ತುಂಬಾ ಪ್ರಮುಖವಾದ ಅಂಗ, ಅಂದರೆ ಅದು ತುಂಬಾ ಸೂಕ್ಷ್ಮವಾದ ಅಂಗವೂ ಹೌದು, ಹೀಗಿರುವುದರಿಂದ ಬಹಳ ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು.

ಹೊರಗಿನಿಂದ ತೂರುವ ಗಾಡಿ ದೂಳನ್ನು ಕಿವಿಯ ತಮಟೆಯ ಕೊಡುವಂತೆ ಮಾಡುವುದು, ಆಗ ಅಲರ್ಜಿ ಸೋಂಕು ಉಂಟಾಗುವುದು, ನಂತರ ಮುಂದಿನ ಸರದಿ ಕಿವಿ ನೋವು ಬರುತ್ತದೆ.

ಕಿವಿ ನೋವಿಗೆ ಬಹಳ ಸೂಕ್ಷ್ಮವಾಗಿ ಚಿಕಿತ್ಸೆ ಮಾಡಿಸಬೇಕು, ಕಿವಿಯ ಒಳಗಡೆ ಏನಾಗಿದೆ ಎಂದು ನೋಡಲು ಜಾಗ ಸಾಲದು.

ಕಿವಿಯ ಒಳಗಡೆ ಕಬ್ಬಿಣ ಕಬ್ಬಿಣದ ಹೇರ್ ಪಿನ್ನು, ಕಡ್ಡಿ ಹಾಕಬಾರದು, ಕಾರಣ ಕಿವಿಯ ತಮಟೆ ತುಂಬಾ ಸೂಕ್ಷ್ಮ, ಆದ್ದರಿಂದ ಕಿವಿಗೆ ಕಡ್ಡಿ ಹೇರ್ ಪಿನ್ನು ಹಾಕಬಾರದು, ತಮಟೆ ಹೊಡೆದು ಹೋದರೆ ಕಿವುಡು ಉಂಟಾಗುವುದು, ಕಿವಿಯ ಸಂರಕ್ಷಣೆಗೆ ಹಲವಾರು ಸಲಹೆಗಳನ್ನು ಸೂಚಿಸಲಾಗಿದೆ.

ಕಿವಿ ನೋವು ಬಂದಾಗ ಉಗುರು ಬೆಚ್ಚಗಿನ ಕೊಬ್ಬರಿ ಎಣ್ಣೆಗೆ ಜಜ್ಜಿದ ಬೆಳ್ಳುಳ್ಳಿಯನ್ನು ಹಾಕಿ ಎಣ್ಣೆಯನ್ನು ಸೋಸಿ ಕಿವಿಗೆ ಬಿಡಬೇಕು, ಆಗ ನೋವು ಶಮಾನವಾಗುವುದು.

ಕಿವಿಯಲ್ಲಿ ಇರುವೆ ಸೇರಿಕೊಂಡರೆ ಒಳಗಡೆ ಬುಳು ಬುಳು ಎಂಬ ಶಬ್ದದೊಂದಿಗೆ ತುಂಬಾ ನೋವನ್ನು ಕೊಡುತ್ತದೆ, ಅಂತಹ ಸಮಯದಲ್ಲಿ ಕಿವಿಗೆ ಉಪ್ಪು ಬೆರೆಸಿದ ನೀರನ್ನು ಬಿಡಬೇಕು, ನಾಲ್ಕಾರು ತೊಟ್ಟು ನೀರು ಬಿಟ್ಟರೆ ಇರುವೆ ಸಾಯುವುದು, ನಂತರ ನೋವು ಕಡಿಮೆಯಾಗುವುದು.

ಕಿವಿಯನ್ನು ಆಗಾಗೆ ಸ್ವಚ್ಛಗೊಳಿಸಬೇಕು, ಉತ್ತಮವಾದ ಸಾಬೂನು ಬಳಸಿ ತೊಳೆಯಬೇಕು, ಮೃದುವಾದ ಬಟ್ಟೆಯಿಂದ ಕಿವಿಯನ್ನು ಒರೆಸಬೇಕು ದೂಳು ತುಂಬದಂತೆ ನೋಡಿಕೊಳ್ಳಬೇಕು, ಕಿವಿಗೆ ಹಾಕುವ ಎಣ್ಣೆ ಸ್ವಚ್ಛವಾಗಿರಬೇಕು.

ಕಿವಿನೋವು ಶಮಾನಗುವಾಗಲು ನಿಂಬೆರಸ, ತುಳಸಿರಸ, ಎಣ್ಣೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಬಿಸಿ ಮಾಡಿ ತಣ್ಣಗಾದ ನಂತರ ಕಿವಿಗೆ ಹಾಕಬೇಕು ಕಿವಿ ನೋವು ದೂರವಾಗುತ್ತದೆ.

ಲವಂಗ ಮತ್ತು ಬೆಳ್ಳುಳ್ಳಿ ಜಜ್ಜಿ ಕೊಬ್ಬರಿ ಎಣ್ಣೆಯಲ್ಲಿ ಕಾಯಿಸಿ ಎಣ್ಣೆಯನ್ನು ಶೋದಿಸಬೇಕು, ಆ ಹೆಣ್ಣೆ ತಣ್ಣಗಾದ ನಂತರ ಕಿವಿಗೆ ಹಾಕಬೇಕು ಆಗ ಕಿವಿ ನೋವು ಶಮನವಾಗುವುದು.

ಕೊತ್ತಂಬರಿ ಸೊಪ್ಪಿನ ರಸಕ್ಕೆ ಜೇನುತುಪ್ಪ ಬೆರೆಸಿ ಪ್ರತಿದಿನ ಸೇವಿಸುತ್ತಿದ್ದರೆ ಕಿವಿಯ ಅನಾರೋಗ್ಯ ಉಂಟಾಗದು.

ಕೆಲವು ಬಾರಿ ಶೀತದಿಂದ ಕಿವಿ ನೋವು ಬರುವುದು ಹಾಗೂ ಈರುಳ್ಳಿಯನ್ನು ಜಜ್ಜಿ ಅದರ ರಸವನ್ನು ಬಿಸಿ ಮಾಡಿ ಕಿವಿಗೆ ಹಾಕಬೇಕು ಆಗ ಶೀತದಿಂದ ಬಂದಿರುವ ಕಿವಿನೋವು ಶಮಾನವಾಗುವುದು.

ಕೊಬ್ಬರಿ ಎಣ್ಣೆಗೆ ಓಮಿನಿ ಕಾಳನ್ನು ಹಾಕಿ ಕುದಿಸಬೇಕು ಆ ಎಣ್ಣೆಯನ್ನು ಶೋಧಿಸಿ ಕಿವಿನೋವು ಬಂದವರಿಗೆ ಹಾಕಬೇಕು ಆಗ ಕಿವಿನೋವು ದೂರವಾಗುವುದು.

ಆಗಾಗ್ಗೆ ಅಭ್ಯಂಜನ ಸ್ನಾನ ಮಾಡುತ್ತಿದ್ದರೆ ಕಿವಿಯ ಆರೋಗ್ಯ ಚೆನ್ನಾಗಿರುವುದು ಮುಖದಲ್ಲಿರುವ ಕಣ್ಣು ಕಿವಿ ಗಂಟಲು ಒಂದಕ್ಕೊಂದು ಸೇರಿಕೊಂಡಿವೆ ಒಂದರ ಆರೋಗ್ಯ ಕೆಟ್ಟರೆ ಬೇರೆ ಅಂಗವು ಅನಾರೋಗ್ಯಕ್ಕೆ ಒಳಗಾಗುವುದು ಹೀಗಾಗಿ ಕಣ್ಣು ಕಿವಿ ಮೂಗು ಒಂದೇ ತಾಯಿಯ ಮಕ್ಕಳಂತೆ ಎಂದು ಹೇಳುವುದು.

ಗಮನಿಸಿ: ಕಿವಿ ಗಂಟಲು ನೂವು ಕಣ್ಣುಗಳು ಹರಿ ಸೋದರಿ ಯಂತೆ ಇರುವರು ಒಬ್ಬರಿಗೆ ರೋಗ ಬಂದರೆ ಮತ್ತೊಬ್ಬರು ಅನಾರೋಗ್ಯಕ್ಕೆ ಒಳಗಾಗುವುದು ಕಿವಿ ತುಂಬಾ ಸೂಕ್ಷ್ಮವಾದ ಅಂಗ.

ಕಾಲಿನ ಶೂ ತೆಗೆದ ನಂತರ ಬರುವ ಕೆಟ್ಟ ವಾಸನೆಗೆ ಇಲ್ಲಿದೆ ಸುಲಭ ಪರಿಹಾರ..!!

ಕೆಲವರಿಗಂತೂ ಶೂ ಧರಿಸಿದರೆ ದುರ್ವಾಸನೆ ಬೀರುತ್ತದೆ ಎಂದು ಚಪ್ಪಲಿ ಧರಿಸಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿರುವುದಿಲ್ಲ. ಆದರೆ ಕೆಲವೊಂದು ಟ್ರಿಕ್ಸ್‌ ಪಾಲಿಸಿದರೆ ಈ ಸಮಸ್ಯೆಯಿಂದ ಪಾರಾಗಬಹುದು. ಅದು ಹೇಗೆ ಎಂದು ನೋಡೋಣ ಬನ್ನಿ.

ಟೀ ಬ್ಯಾಗ್‌ ಟ್ರಕ್ಸ್‌ : ಸಂಜೆ ಮನೆಗೆ ಬಂದಾಗ ಒಂದು ಗ್ಲಾಸ್ ನೀರಿಗೆ ಎರಡು ಟೀ ಬ್ಯಾಗ್‌ ಹಾಕಿ ಚೆನ್ನಾಗಿ ಕುದಿಸಿ, ನಂತರ ಆ ನೀರನ್ನು ಬಕೆಟ್‌ಗೆ ಸುರಿದು, ಅದಕ್ಕೆ ಎರಡು ಮಗ್‌ ತಣ್ಣೀರು ಸೇರಿಸಿ, ನಂತರ ಕಾಲುಗಳನ್ನು ಅದರಲ್ಲಿ ನೆನೆಸಿ ಇಪ್ಪತ್ತು ನಿಮಿಷ ಇಡಿ. ಈ ರೀತಿ ಒಂದು ವಾರದವರೆಗೆ ಮಾಡುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ವಿನಿಗರ್‌ : ಸ್ನಾನ ಮಾಡುವಾಗ ಕೊನೆಯ ಮಗ್‌ ನೀರು ಮೈಮೇಲೆ ಸುರಿಯುವಾಗ ಅದಕ್ಕೆ ಸ್ವಲ್ಪ ವಿನಿಗರ್‌ ಸೇರಿಸಿ ಮೈಗೆ ನೀರು ಹಾಕಿ, ನಂತರ ಮೈ ಒರೆಸಿ, ಈ ರೀತಿ ವಾರದವರೆಗೆ ಮಾಡಿದರೆ ಬೆವರಿನ ದುರ್ವಾಸನೆ ಸಮಸ್ಯೆ ಕಾಡುವುದಿಲ್ಲ.

ದುರ್ವಾಸನೆ ತಡೆಯುವ ಮದ್ಯ : ಹೌದು ಕಾಲುಗಳನ್ನು ಚೆನ್ನಾಗಿ ತೊಳೆದ ಬಳಿಕ ಕಾಲನ್ನು ಒರೆಸಿ, ನಂತರ ಸ್ವಲ್ಪ ಹತ್ತಿಯ ಉಂಡೆಯನ್ನು ತೆಗೆದುಕೊಂಡು ಅದಕ್ಕೆ ಮದ್ಯ ಹಾಕಿ ಪಾದಕ್ಕೆ ಉಜ್ಜುವುದರಿಂದ ದುರ್ವಾಸನೆ ತಡೆಯಬಹುದು.

ಮೌತ್‌ ವಾಶ್‌ : ಟೀ ಬ್ಯಾಗ್‌ ಟ್ರೀಟ್‌ಮೆಂಟ್‌ ರೀತಿಯಲ್ಲೇ ಸ್ವಲ್ಪ ಮೌತ್‌ ವಾಶ್‌ ತೆಗೆದು ಅದನ್ನು ಹದ ಬಿಸಿ ನೀರಿಗೆ ಹಾಕಿ, ಅದರಲ್ಲಿ ಕಾಲನ್ನು 20 ನಿಮಿಷ ನೆನಸಿ ಇಡುವುದರಿಂದಲೂ ಕಾಲು ಬೆವರಿನ ದುರ್ವಾಸನೆ ಬೀರುವುದನ್ನು ತಡೆಯಬಹುದು.

ಜೊತೆಯಲ್ಲಿ ಇದನ್ನು ಒಮ್ಮೆ ಓದಿ ಅರಿಶಿನದ ಮಹತ್ವ.

ಅರಿಶಿಣಕ್ಕೆ ಸನಾತನ ಸಂಪ್ರದಾಯದಲ್ಲಿ ಬಹಳ ಮಹತ್ವವಿದೆ, ಮಂಗಳ ಕಾರ್ಯಗಳಲ್ಲಿ ಅರಿಶಿಣವೇ ಪ್ರಧಾನ, ಇದು ಗ್ರಹಗಳಲ್ಲಿ ಗುರುವಿಗೆ ಸಂಬಂಧಿಸಿದ್ದು, ಇಡೀ ಕುಂಡಲಿಯಲ್ಲಿ ಯೋಗ ಪ್ರಾಪ್ತಿಯನ್ನೂ, ದುರ್ಯೋಗ ನಿವಾರಣೆಯನ್ನೂ ಮಾಡುವವನೇ ಗುರುಗ್ರಹ, ಇವನು ಹಳದಿ ಬಣ್ಣದ ಕಾರಕ ಅಂದರೆ ಹಳದಿಯು ಜ್ಞಾನ ಎಂದರ್ಥ. ವೈಜ್ಞಾನಿಕವಾಗಿಯೂ, ವೈದ್ಯಕೀಯವಾಗಿಯೂ ಮಹತ್ವ ಪಡೆದಿದೆ ಅಂದರೆ ಒಟ್ಟಿನಲ್ಲಿ ಮಾನಸಿಕ ಉದ್ವೇಗಗಳನ್ನು ನಿಂತ್ರಿಸುತ್ತದೆ.

ವಿವಾಹಗಳಲ್ಲಿ ಇದರ ಉಪಯೋಗಕ್ಕೆ ಬಹಳ ಮಹತ್ವವಿದೆ, ಅರಿಶಿಣಕ್ಕೆ ಸೋಂಕು ನಿವಾರಕ ಶಕ್ತಿಗಳಿವೆ, ಪೃಥ್ವಿಯ ಮೇಲೆ ಅನೇಕ ಲಹರಿ ಚಲಿಸುತ್ತಾ ಇರುತ್ತದೆ, ಆಧುನಿಕ ವಿಜ್ಞಾನಕ್ಕೂ ನಿಲುಕದ ಲಹರಿಗಳಿವು, ಇದು ಕೆಲವೊಮ್ಮೆ ದುಷ್ಪರಿಣಾಮವನ್ನೂ ಬೀರಬಹುದು, ಅದನ್ನು ನಿಂತ್ರಿಸಲು ಈ ಅರಿಶಿಣ ಕೊಂಬು(ಗಿಣ್ನು)ಗಳು ತುಂಬಾ ಸಹಕರಿಸುತ್ತದೆ, ಸಮಾನ್ಯವಾಗಿ ಅಪರೇಷನ್ ಥಿಯೇಟರ್ ಗಳಲ್ಲಿ ಅಪರೇಷನ್ ಸರ್ಜರಿ ಮಾಡುವಾಗ ಹಳದಿ ಬೆಳಕನ್ನು ಉರಿಸಿ ಪ್ರಜ್ಞೆ ತಪ್ಪಿಸುವ ವಿಧಾನಗಳಿತ್ತು.

ಇದರಿಂದ ನೋವಿನ ಅನುಭವ ಬರಬಾರದೆಂದು ಈ ವಿಧಾನವನ್ನು ಬಳಸಲಾಗಿತ್ತು, ಇಲ್ಲಿ ಕೂಡಾ ಬಾಹ್ಯದಿಂದ ಬರುವ ಕೆಲ ಉಗ್ರಸ್ವರೂಪದ ಶಕ್ತಿಗಳಿಂದುಂಟಾಗುವ ನೋವುಗಳು ತಗಲದಿರಲಿ ಎಂಬ ಒಂದು ವಿಧಾನ, ಇದೊಂದು ರೋಗನಿರೋಧಕ ಎಂದರೂ ತಪ್ಪಾಗದು ಮದುವೆಗೆ ಮುಂಚಿತವಾಗಿ ಪಂಚಗವ್ಯ ಕಲಶಾದಿಗಳೆಲ್ಲಾ ಒಂದೆಡೆ ಸಂಸ್ಕಾರ ಎಂದಾದರೆ ಇನ್ನೊಂದೆಡೆ ಚಿಕಿತ್ಸೆಯೂ ಆಗುತ್ತದೆ, ಕಲಶಗಳಲ್ಲಿ ಹಾಕುವ ತುಳಸಿ, ಅಶ್ವತ್ತದ ಚಿಗುರು, ಮಾವಿನ ತುದಿಗಳು ದ್ರವ ಆಮ್ಲಜನಕಗಳನ್ನು ಉತ್ಪತ್ತಿ ಮಾಡುವಂತದ್ದಾಗಿದೆ.

ನಿಮ್ಮ ಮೊಬೈಲ್ ನೀರಲ್ಲಿ ಬಿದ್ದರೆ ತಕ್ಷಣ ಹೀಗೆ ಮಾಡಿ..!!

ನಿಮ್ಮ ಮೊಬೈಲ್ ನೀರಲ್ಲಿ ಬಿದ್ದರು ಅಥವಾ ನೀರೇ ನಿಮ್ಮ ಮೊಬೈಲ್ ಮೇಲೆ ಬಿದ್ದರು ಚಿಂತೆ ಬೇಡ ನಾವು ಹೇಳಿದ ಹಾಗೆ ಮಾಡಿದರೆ ನಿಮ್ಮ ಮೊಬೈಲ್ ಗೆ ಯಾವುದೇ ಅಪಾಯವಿಲ್ಲದೆ ಮತ್ತೆ ಅದನ್ನು ಮತ್ತೆ ಎಂದಿನಂತೆ ಬಳಸ ಬಹುದು, ಈ ಕ್ರಿಯೆಯು ಯಶಸ್ವಿಯಾಗುವುದು ನೀರಲ್ಲಿ ಬಿದ್ದ ತಕ್ಷಣ ಹೀಗೆ ಮಾಡಿದರೆ ಮಾತ್ರ, ನೀರಲ್ಲಿ ಮೊಬೈಲ್ ಬಿದ್ದು ಹಲವು ದಿನಗಳು ಕಳೆದಿದ್ದರೆ ಈ ಮಾರ್ಗ ಉಪಯೋಗಕ್ಕೆ ಬರುವುದಿಲ್ಲ.

ನಿಮ್ಮ ಮೊಬೈಲ್ ನೀರಲ್ಲಿ ಬಿದ್ದ ತಕ್ಷಣ ಮೊದಲು ಅದನ್ನು ಸ್ವಿಚ್ಟ್ ಆಫ್ ಮಾಡ ಬೇಕು ಹಾಗು ಅದರ ಬಿಡಿ ಬಾಗಗಳನ್ನ ಬೇರ್ಪಡಿಸ ಬೇಕು, ಆದರೆ ಅದರ ಹಿಂಬದಿಯ ಕ್ಯಾಪ್ ಹಾಗು ಬ್ಯಾಟರಿ ಇತ್ಯಾದಿಗಳನ್ನು.

ನಂತರ ಒಣಗಿದ ಬಟ್ಟೆಯನ್ನು ಬಳಸಿ ನೀರು ಕಾಣದಂತೆ ಮೊಬೈಲ್ ಅನ್ನು ಚೆನ್ನಾಗಿ ಒರೆಸ ಬೇಕು ಹಾಗು ಸ್ವಲ್ಪ ತೇವಾಂಶ ಕಡಿಮೆ ವಾತಾವರಣದಲ್ಲಿ ಮೊಬೈಲ್ ಒರೆಸಿ.

ಅತಿ ಮುಖ್ಯವಾಗಿ ನೀರು ನಿಮ್ಮ ಹೆಡ್ ಫೋನ್ ರಂದ್ರ ಅಥವಾ ಚಾರ್ಜಿಂಗ್ ರಂಧ್ರದಲ್ಲಿ ನೀರು ಸೇರಿದ್ದರೆ ಅದನ್ನು ತೆಗೆಯಿರಿ.

ನಂತರ ಅಷ್ಟು ಬಿಡಿಬಾಗದ ಜೊತೆಯಲ್ಲಿ ನಿಮ್ಮ ಮೊಬೈಲ್ ಅನ್ನು ನಿಮ್ಮ ಮನೆಯ ಅಕ್ಕಿಯ ಮೂಟೆಯಲ್ಲಿ ಉಟುಬಿಡಿ, ಕಾರಣ ಅಕ್ಕಿಯಲ್ಲಿ ನೀರನ್ನು ಹೀರುವ ಗುಣವಿದ್ದು ನಿಮ್ಮ ಮೊಬೈಲ್ ಒಳಗೆ ಹೋದ ನೀರನ್ನ ಹಾಗು ಮದರ್ ಬೋರ್ಡ್ ತೇವವಾಗಿದ್ದರೆ ತಕ್ಷಣ ಅಕ್ಕಿ ನೀರನ್ನ ಹೀರುತ್ತದೆ.

ಎರಡು ದಿನದ ಬಳಿಕ ಅಕ್ಕಿಯಿಂದ ನಿಮ್ಮ ಮೊಬೈಲ್ ಹೊರತೆಗೆದು ಬ್ಯಾಟರಿ ಹಾಕಿ ಆನ್ ಮಾಡಿ ಶೇಕಡಾ 90 ರಷ್ಟು ಮೊಬೈಲ್ ಗಳು ಹೀಗೆ ಮಾಡುವುದರಿಂದ ಆನ್ ಆಗುತ್ತದೆ.

ಈ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯ ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ.

ಮಗುವನ್ನು ಪಡೆಯಲು ಮಿಲನಕ್ರಿಯೆ ಯಾವ ರೀತಿ ಮಾಡಬೇಕು..?

ಸಾಮಾನ್ಯವಾಗಿ ಅಂಡಾಣು ಬಿಡುಗಡೆಯಾದ ದಿನ, ಹಿಂದಿನ ದಿನ ಅಥವಾ ಮರುದಿನ ಮಿಲನವಾದರೆ (ಯಾವುದೇ ಗರ್ಭನಿರೋಧಕ ಸಾಧನಗಳಿಲ್ಲದೆ) ಗರ್ಭಿಣಿಯಾಗುವ ಸಾಧ್ಯತೆಗಳು ಹೆಚ್ಚು. ಆದರೆ ಬಹುತೇಕ ಮಹಿಳೆಯರು ಗರ್ಭಿಣಿಯಾಗಲು ಯತ್ನಿಸುವಾಗ ಫಲವಂತಿಕೆಯ ದಿನವನ್ನು ತಪ್ಪಾಗಿ ಲೆಕ್ಕ ಹಾಕುವ ಸಾಧ್ಯತೆ ಇರುತ್ತದೆ. ಅಂಡಾಣು ಬಿಡುಗಡೆಯಾಗುವ ಸಾಧ್ಯತೆ ಇರುವ ದಿನಗಳಲ್ಲಿ ನಿರಂತರವಾಗಿ ಮಿಲನದಲ್ಲಿ ತೊಡಗಿಸಿಕೊಂಡರೆ ಹೆಚ್ಚು ಉಪಯುಕ್ತವಾದೀತು.

ಸತತವಾಗಿ ಎಂದರೆ ಎಷ್ಟು ಸಲ? : ಸಾಮಾನ್ಯವಾದ ನಂಬಿಕೆಯೆಂದರೆ ಕಡಿಮೆಯೇ ಲೇಸು ಎಂದಾದರೆ, ಹೆಚ್ಚು ಉತ್ತಮ ಎನ್ನಬಹುದು. ಆದರೆ ಸಂಭೋಗದ ವಿಷಯದಲ್ಲಿ ಇವೆರಡೂ ವ್ಯತಿರಿಕ್ತ ಪರಿಣಾಮವೇ ಬೀರುತ್ತವೆ. ವಾರಗಟ್ಟಲೆ ಸಂಭೋಗದಲ್ಲಿ ತೊಡಗದೆ ಫಲವಂತಿಕೆಯ ದಿನಗಳಂದು ತೊಡಗಿಸಿಕೊಂಡರೆ ನಿಮ್ಮಲ್ಲಿಯ ವೀರ್ಯಾಣುಗಳಿಗೆ ವಯಸ್ಸಾಗಿರುತ್ತದೆ. ಅವುಗಳ ಗುಣಮಟ್ಟದ ಬಗ್ಗೆ ಖಚಿತವಾಗಿ ಹೇಳಲಾಗದು. ಆದರೆ ಸತತವೆಂದಾಕ್ಷಣ ಸಂಭೋಗಗಳ ಸಂಖ್ಯೆ ಹೆಚ್ಚಾಗಕೂಡದು. ಇದರಿಂದ ವೀರ್ಯಾಣುವಿನ ಉತ್ಪಾದನೆಯ ಮೇಲೆ ಪ್ರಭಾವ ಬೀರುತ್ತದೆ. ಸಾಕಷ್ಟು ಸಂಖ್ಯೆಯಲ್ಲಿ ವಿರ್ಯಾಣುಗಳು ಹುಟ್ಟುವುದಿಲ್ಲ.

ಪ್ರತಿ ಸಂಭೋಗದಲ್ಲಿಯೂ ವೀರ್ಯ ಸ್ಖಲನವಾಗುವುದೇ ಹೊರತು ವೀರ್ಯಾಣುಗಳ ಪ್ರಮಾಣ ಅದರಲ್ಲಿ ಕಡಿಮೆಯಾಗಿರುತ್ತದೆ. ಹಾಗಾದರೆ ಯಾವುದು ಸರಿ? ಎಷ್ಟು ಸಲ ಮಿಲನವಾಗಬೇಕು? ಈ ಮಾತಿಗೆ ತಜ್ಞರು ಎಲ್ಲ ವಾದ, ಚರ್ಚೆಗಳನ್ನು ಪರಾಮರ್ಶಿಸಿ ಬಂದ ತೀರ್ಮಾನವೆಂದರೆ, ಮಗು ಬೇಕೆನಿಸಿದಾಗ ಪ್ರತಿದಿನವೂ ಸಾಧ್ಯವಿದ್ದಲ್ಲಿ ಒಂದು ಸಲ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕು. ಕೊನೆಯ ಪಕ್ಷ ದಿನ ಬಿಟ್ಟು ದಿನವಾದರೂ ಒಂದು ಸಲ ತೊಡಗಿಸಿಕೊಂಡರೆ ಉತ್ತಮ ಫಲಿತಾಂಶ ನಿರೀಕ್ಷಿಸಬಹುದಾಗಿದೆ.

ಯಾವ ಭಂಗಿ ಎಷ್ಟು ಸಹಾಯಕ? : ಈ ಪ್ರಶ್ನೆಯನ್ನು ಸಾಮಾನ್ಯವಾಗಿ ಸಮಾಲೋಚನೆಗೆ ಬರುವ ದಂಪತಿಗಳೆಲ್ಲ ಕೇಳುತ್ತಾರೆ. ಮಗು ಮಾಡಿಕೊಳ್ಳಲು ಯಾರೂ ಕಾಮಸೂತ್ರವನ್ನು ಓದಿರಲೇಬೇಕಿಲ್ಲ. ತಿಳಿದರಲೇಬೇಕೆಂದೂ ಏನಿಲ್ಲ. ವಿಶ್ವದಲ್ಲಿ ಈಗಲೂ ಯಾವ ಭಂಗಿ ಸೂಕ್ತ ಎನ್ನುವುದನ್ನು ನಿರ್ಣಯಿಸಲು ಆಗಿಲ್ಲ. ಸಾಮಾನ್ಯವಾಗಿ ಪುರುಷ ಮೇಲೆ ಬರುವ ‘ಮಿಶನರಿ ಭಂಗಿ’ಯನ್ನು ಜನ ನೆಚ್ಚಿಕೊಂಡಿರುತ್ತಾರೆ. ಸ್ತ್ರೀಯರ ಜನನಾಂಗವನ್ನು ವೀರ್ಯಾಣು ನೇರವಾಗಿ ಪ್ರವೇಶಿಸುವುದರಿಂದ ಅನುಕೂಲ ಹೆಚ್ಚು ಎನ್ನುವುದು ಅಂಥವರ ವಾದ. ಮತ್ತೂ ಕೆಲವು ಮಹಿಳೆಯರು ಹೆಣ್ಣುಮಕ್ಕಳು ಮೇಲೆ ಬರುವ ಭಂಗಿಯಲ್ಲಿದ್ದರೆ ಗರ್ಭಿಣಿಯಾಗುವುದನ್ನು ತಪ್ಪಿಸಬಹುದು ಎಂದು ಕೊಂಡಿರುತ್ತಾರೆ.

ವೀರ್ಯಾಣುವಿನ ಚಲನೆಯ ವಿರುದ್ಧ ದಿಕ್ಕಿನಲ್ಲಿ ಗುರುತ್ವಾಕರ್ಷಣೆಯ ಬಲ ಇರುವುದರಿಂದ ವೀರ್ಯಾಣುಗಳು ತಮ್ಮ ಗಮ್ಯವನ್ನು ಸೇರುವುದಿಲ್ಲ ಎನ್ನುವುದು ಅವರ ನಂಬಿಕೆಯಾಗಿದೆ. ಆದರೆ ಒಮ್ಮೆ ವೀರ್ಯಾಣು ಸ್ಖಲನದೊಂದಿಗೆ ಚಿಮ್ಮಿದರೆ ಸಾಕು, ಅವು ಡಿಂಭನಾಳ ಸೇರಿ ಅತಿ ವೇಗವಾಗಿ ಈಜಿ ಸೆಕೆಂಡಿನ ಕೆಲ ಅಂಶದಷ್ಟು ಅವಧಿಯಲ್ಲಿಯೇ ತಮ್ಮ ಗಮ್ಯವನ್ನು ಸೇರಿಬಿಡುತ್ತವೆ. ನಂತರ ಏನೇ ಹೊರಬಂದರು ಅದರಲ್ಲಿ ಚಲಿಸಲು ವಿಫಲವಾದ ವೀರ್ಯಾಣು ಹಾಗೂ ವೀರ್ಯ ಮಾತ್ರವಿರುತ್ತದೆ. ಈ ಪ್ರಶ್ನೆಗೆ ಯಾವುದೇ ಬಗೆಯ ಸ್ಪಷ್ಟ ಉತ್ತರ ಸಿಗದು. ಅನುಕೂಲಕರವಾದ ಆರಾಮದಾಯಕವಾದ ಸುಖದ ಪರಮಸ್ಥಿತಿ ತಲುಪಬಹುದಾದ ಭಂಗಿಯೇ ಉತ್ತಮವೆಂದು ಹೇಳಬಹುದು.

ಮಿಲನದ ನಂತರ ಮುಂದೇನು? : ಮಿಲನದ ನಂತರ ಮುಂದೇನು ಮಾಡಬೇಕು ಎನ್ನುವುದೂ ಬಹುತೇಕರ ಪ್ರಶ್ನೆ. ಪರಿಣತರ ಪ್ರಕಾರ ಸಂಭೋಗದ ನಂತರ ಹೆಣ್ಣುಮಕ್ಕಳು ಕನಿಷ್ಠ ಪಕ್ಷ 20 ನಿಮಿಷಗಳಾದರೂ ಹಾಸಿಗೆಯಲ್ಲಿಯೇ ಮಲಗಿರುವುದು ಒಳಿತು. ಒಂದು ಗಂಟೆ ಇದ್ದರಂತೂ ಇನ್ನೂ ಪರಿಣಾಮಕಾರಿ. ವೀರ್ಯಾಣುವು ಜನನಾಂಗದ ಮೂಲಕ ಗರ್ಭಕೋಶವನ್ನು ಸೇರಲು ಅನುಕೂಲವಾಗುವಂತೆ ಬೇಕಿದ್ದರೆ ಮೊಣಕಾಲನ್ನು ಮೇಲೆತ್ತಿರುವ ಭಂಗಿಯಲ್ಲಿ ಮಲಗಬಹುದು. ಇಲ್ಲವೇ ಗೋಡೆಗೆ ಕಾಲು ಚಾಚಿ, ಮೇಲೆತ್ತಿ, ಅಂಗಾಲುಗಳನ್ನು ಆನಿಸಿಕೊಂಡು ಪೃಷ್ಠದ ಕೆಳಗೆ ದಿಂಬನ್ನಿರಿಸಿದ ಭಂಗಿಯಲ್ಲಿಯೂ ಮಲಗಬಹುದು.

ಮೊಣಕಾಲುಗಳನ್ನು ಹೊಟ್ಟೆಗಾನಿಸಿಕೊಂಡು, ಸುರುಳಿ ಸುತ್ತಿಕೊಂಡಂತೆ ಭ್ರೂಣದ ಭಂಗಿಯಲ್ಲಿ ಮಲಗಬಹುದೇ? ಇಲ್ಲ… ಈ ಭಂಗಿ ಅಂಥ ಪರಿಣಾಮಕಾರಿಯಾದ ಫಲಿತಾಂಶವನ್ನೇನೂ ನೀಡದು. ಇದರಿಂದ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆಯೇ ಹೊರತು ಗರ್ಭಿಣಿಯಾಗುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಈ ಮಿಲನದ ನಂತರ ಇನ್ನೊಂದು ಗಮನದಲ್ಲಿಡಲೇಬೇಕಾದ ಅಂಶವೆಂದರೆ ದೇಹದ ಉಷ್ಣತೆಯನ್ನು ಹೆಚ್ಚಿಸುವಂತ ದೇಹ ದಂಡಿಸುವ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಾರದು. ಸುದೀರ್ಘ ನಡಿಗೆ ಅಥವಾ ಓಟ, ಬಾತ್‌ ಟಬ್‌ ಸ್ನಾನ, ಸೋನಾ ಸ್ನಾನ ಇಂಥವುಗಳನ್ನೆಲ್ಲ ತಡೆಯಬೇಕು.

ಆನಂದಕರವಾಗಿರಲಿ ಮಿಲನ : ಮಗುವಿಗಾಗಿಯೇ ಮಿಲನ ಎಂಬ ನಿರ್ಧಾರ ಬೇಡ. ಲೈಂಗಿಕ ಕ್ರಿಯೆಯಲ್ಲಿ ತೊಡಗುವಾಗ ಈ ಅಂಶವನ್ನು ಆದಷ್ಟೂ ನೇಪಥ್ಯಕ್ಕೆ ಸರಿಸಿ. ಆನಂದಕ್ಕಾಗಿ, ಆನಂದಕರವಾಗಿ ತೊಡಗಿಸಿಕೊಳ್ಳಬೇಕು. ಇಲ್ಲದಿದ್ದರೆ ಈ ಸಲವಾದರೂ ಭ್ರೂಣ ಕಟ್ಟುವುದೇ ಎಂಬ ಒತ್ತಡ ಮರೆಯಲ್ಲಿದ್ದರೂ ನಿಮ್ಮ ಮಿಲನವನ್ನು ಸಂಪೂರ್ಣಗೊಳಿಸಲು ಬಿಡದು. ಅಲ್ಲದೆ ಮುನ್ನಲಿವಿಗಾಗಿ ಯಾವುದೇ ಸಾಧನಗಳನ್ನು ಬಳಸುವುದು ಬೇಡ. ಕೆಲವೊಮ್ಮೆ ಜಾರಕಗಳನ್ನು ಬಳಸುತ್ತಾರೆ.

ಅಂಥವರು ವೀರ್ಯಾಣು ಸ್ನೇಹಿಯಾಗಿರುವ ಜಾರಕಗಳನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು ಯಾವುದೇ ಬೇಡಿಕೆ, ನಿರೀಕ್ಷೆಗಳಿಲ್ಲದೆ, ಸಂಗಾತಿಗಳಿಬ್ಬರೂ ಒಬ್ಬರನ್ನೊಬ್ಬರು ಸ್ವೀಕರಿಸುವ ಸುಖಕರ ಆಟದಲ್ಲಿ ತೊಡಗಿಸುವಂತೆ ಮುನ್ನಲಿವಿನಲ್ಲಿ ಪಾಲ್ಗೊಳ್ಳಿ. ಇದರಿಂದ ನೈಸರ್ಗಿಕ ಜಾರಕವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಸಂಭೋಗ ಕ್ರಿಯೆ ಸರಳಗೊಳಿಸುತ್ತವೆ. ಸುಖಕರಗೊಳಿಸುತ್ತವೆ ಎನ್ನುವುದು ನೆನಪಿರಲಿ.

ಸ್ನಾನದಲ್ಲಿ ಇದೆ ಇಷ್ಟೊಂದು ಬಗೆಗಳು..!! ತಪ್ಪದೇ ಓದಿ ಉಪಯುಕ್ತ ಮಾಹಿತಿ.

ಸ್ನಾನ ಪದ್ಧತಿಗಳು ಹತ್ತು ಹಲವಾರು, ಪ್ರತಿ ದಿನ ಬ್ರಾಹ್ಮೀ ಮುಹೂರ್ತ ಕಳೆದ ನಂತರ ಸ್ನಾನ ಮಾಡುವ ಪದ್ಧತಿ ಇಂದ ದೇಹ ಶುದ್ದಿಯಾಗುವುದಿಲ್ಲ ದೆ ಮನಸ್ಸು ಪ್ರಫುಲ್ಲವಾಗುತ್ತದೆ, ಸ್ನಾನ ಮಾಡದೆ ಇರುವ ದಿನ ಮನಸ್ಸಿಗೆ ಒಂದು ವಿಧವಾದ ಬೇಸರ ಮತ್ತು ಜಡತ್ವ ಆದ್ದರಿಂದ ಪ್ರತಿದಿನ ಸ್ನಾನ ಆರೋಗ್ಯಕ್ಕೆ ಸೋಪಾನ, ಇಂದು ನಾವು ನಿಮಗೆ 4 ಬಹಳ ಮುಖ್ಯವಾದ ಸ್ನಾನದ ವಿಧಾನಗಳ ಬಗ್ಗೆ ತಿಳಿಸುತ್ತೇವೆ.

ತಣ್ಣೀರು ಸ್ನಾನ : ತಮಿಳು ಸ್ಥಾನ ಅಭ್ಯಾಸ ಮಾಡಿಕೊಂಡರೆ ಹಸಿವು ಚೆನ್ನಾಗಿ ಆಗುತ್ತದೆ, ಚೆನ್ನಾಗಿ ನಿದ್ರೆ ಬರುತ್ತದೆ, ಶರೀರದ ಆಯಾಸ ನಿವಾರಣೆಯಾಗುತ್ತದೆ ದೇಹದ ಚರ್ಮ ರೋಗಗಳು ದೂರವಾಗುತ್ತವೆ, ಪ್ರತಿದಿನ ಹದಿನೈದು ನಿಮಿಷಗಳ ಕಾಲ ತಣ್ಣೀರಿನಲ್ಲಿ ಈಜಾಡುವುದು ಆರೋಗ್ಯಕರ, ಬಿಟ್ಟು ಬಿದ್ದಿರುವ ಶರೀರದ ಭಾಗವನ್ನು ತಣ್ಣೀರಿನಲ್ಲಿ ಮುಳುಗಿಸಿ ಮಾಲೀಶು ಮಾಡಿದರೆ ಬೇಗನೆ ಗುಣವಾಗುವುದು, ನದಿಯಲ್ಲಿ ಸ್ನಾನ ಮಾಡಿದರೆ ಶರೀರದ ಜಿಡ್ಡು ಪರಿಹಾರ ಆಗುವುದು, ಶಾರದಾ ಪೆಟ್ಟಾಗಿರುವ ಭಾಗಕ್ಕೆ ನೀರಿನಲ್ಲಿ ನೆನೆಸಿದ ಹತ್ತಿ ಬಟ್ಟೆಯ ಪಟ್ಟಿ ಕಟ್ಟಿ ಅದರ ಮೇಲೆ ಉಣ್ಣೆ ಬಟ್ಟೆಗಳನ್ನು ಸುತ್ತುತ್ತಿದ್ದರೆ ಶೀಘ್ರವೇ ಗುಣ ಕಂಡು ಬರುವುದು, ಪಟ್ಟಿಯಲ್ಲಿನ ತಣ್ಣೀರು ಹಾರಿದರೆ ಪುನಹ ಮೊದಲಿನಂತೆ ಪಟ್ಟಿ ಕಟ್ಟಬೇಕು.

ಬಿಸಿ ನೀರಿನ ಸ್ನಾನ : ಶರೀರದ ಎಲ್ಲಾ ಭಾಗಗಳನ್ನು ಅಡಿಗೆ ಮಾಡುವ ಉಪ್ಪಿನ ಪುಡಿಯಿಂದ ಚೆನ್ನಾಗಿ ಉಜ್ಜಿ ಬಿಸಿ ನೀರಿನ ಸ್ನಾನ ಮಾಡಿದರೆ ರಾತ್ರಿಯ ವೇಳೆ ನಿದ್ರೆ ಚೆನ್ನಾಗಿ ಬರುವುದು, ಹಾಗೂ ಶರೀರಕ್ಕೆ ಅವರ ವೆನಿಸುವುದು, ಚಳಿಗಾಲದಲ್ಲಂತೂ ಬಿಸಿ ನೀರಿನ ಸ್ನಾನ ತುಂಬಾ ಹಿತಕರವಾಗಿರುತ್ತದೆ ಬಿಸಿನೀರು ಉಷ್ಣ ಶಮನ ಕಾರಿ, ಮೈ ಕೈ ನೋವು ಕಂಡಾಗ ಬಿಸಿ ನೀರಿನಿಂದ ಸ್ನಾನ ಮಾಡಿ ಸ್ವಲ್ಪ ವಿಶ್ರಾಂತಿ ಪಡೆದರೆ ಮೈ ಕೈ ನೋವು ಪರಿಹಾರವಾಗುವುದು, ಕಾಲು ಉಳುಕಿದಾಗ ಬಿಸಿ ನೀರಿನೊಳಗೆ ಕಾಲಿಟ್ಟು ಆ ನೀರಿನಲ್ಲಿ ಬೆರಳುಗಳಿಂದ ಮಸಾಜ್ ಮಾಡಿದರೆ ಹುಳುಕು ನಿವಾರಣೆ ಆಗುವುದು.

ಸೂರ್ಯ ಸ್ನಾನ : ಸೂರ್ಯನನ್ನು ಜೀವಾದಾರ ಎಂದು ಹೇಳುವುದುಂಟು, ಬೆಳಗ್ಗೆ 6 ಗಂಟೆಯಿಂದ 6.30 ರವರೆಗೆ ಎಳೆಯ ಬಿಸಿಲಿನಲ್ಲಿ ಸೂರ್ಯ ನಮಸ್ಕಾರ ಮಾಡುವುದರಿಂದ ಶರೀರವು ಆರೋಗ್ಯದಾಯಕ ವು, ಮಾಂಸಖಂಡಗಳಿಗೆ ಬಲವು, ಮುಖದಲ್ಲಿ ತೇಜಸ್ಸು ಉಂಟಾಗುತ್ತದೆ, ಸೂರ್ಯೋದಯದ ನಂತರ ಬೆಳಗ್ಗೆ 8:30 ಒಳಗೆ ಹಾಗೂ ಮಧ್ಯಾಹ್ನ ನಾಲ್ಕು ಗಂಟೆಗಳ ನಂತರ ನಗ್ನ ದೇಹವನ್ನು ಬಿಸಿಲಿಗೆ ಹೋಗುವುದರಿಂದ ರೋಗ ನಿರೋಧಕ ಶಕ್ತಿ ಉಂಟಾಗುವುದು, ಮತ್ತು ಅಂಗಾಂಗಗಳ ಕ್ರಿಯೆ ಚೆನ್ನಾಗಿ ನಡೆಯುವುದು, ಶಾರೀರಿಕ ಮತ್ತು ಮಾನಸಿಕ ಕ್ರಿಯೆಯು ಉತ್ಕರ್ಷ ವಾಗುವುದು.

ರಿಕೆಟ್ಸ್ ರೋಗ ದಿಂದ ನರಳುತ್ತಿರುವ ಮಗುವಿನ ಶರೀರಕ್ಕೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಸೂರ್ಯ ಸ್ನಾನ ಮಾಡಿಸುವುದರಿಂದ ದೇಹದ ಮೂಳೆಗಳ ಬೆಳವಣಿಗೆ ಹೆಚ್ಚು ಸಹಾಯವಾಗುವುದು.

ಹಬೆಯ ಸ್ನಾನ : ಬಾನಿ ಯಂತಹ ಪಾತ್ರೆಯಲ್ಲಿ ಕುದಿಯುತ್ತಿರುವ ನೀರನ್ನು ತುಂಬಿ ಗಟ್ಟಿಯಾದ ಬಿದಿರಿನಿಂದ ಮಾಡಲ್ಪಟ್ಟ ಗೋಡೆಯೊಂದನ್ನು ನಿನ್ನ ಮೇಲೆ ಬೋರಲಾಗಿ ಹಾಕಿ ಬೆತ್ತಲೆಯಾಗಿ ಅದರ ಮೇಲೆ ಕುಳಿತು ಕೆಲವು ನಿಮಿಷಗಳನಂತರ ರೈನ್ ಕೋಟ್ ಹಾಕಿಕೊಂಡು ಅದರ ಮೇಲೆ ಉಲ್ಲನ್ ರಗ್ಗನ್ನು ಹೊಡೆದುಕೊಂಡು ಕೇವಲ ಕುತ್ತಿಗೆಯ ಬಳಿ ಸಂಚಾರವಾಗುವಂತೆ ಅವಕಾಶ ನೀಡಿ, ಬಾನಿ ಯಲ್ಲಿರುವ ಕುಡಿಯುವ ನೀರಿನಿಂದ ಹೊರಬಿದ್ದ ಹವೇರಿ ಶರೀರದಾದ್ಯಂತ ಮಾಡಿಕೊಳ್ಳುವುದು, ಆ ನಂತರ ಸಾಕಷ್ಟು ಬೆವರು ಶರೀರದಿಂದ ಹೊರಬರುವುದು, ಅನಂತರ ಬೆಚ್ಚಗಿರುವ ಕೋಣೆಯಲ್ಲಿ ಅರ್ಧ ಗಂಟೆಗಳ ಕಾಲ ವಿಶ್ರಮಿಸಿ ಕೊಳ್ಳಿ, ಆಮೇಲೆ ತಲೆಗೆ ಸ್ನಾನ ಮಾಡಿ, ಈ ರೀತಿಯ ಕ್ರಮ ವನ್ನು ಅನುಸರಿಸುವುದರಿಂದ ಶಾರೆ ಹಗುರವಾಗುತ್ತದೆ, ಕೀಲು ನೋವು ಹಾಗೂ ಮಾಂಸ ಖಂಡಗಳ ನೋವು ಮಾಯವಾಗಿ ದೇಹದಲ್ಲಿ ಹೊಸ ಉತ್ಸಾಹ ಮೂಡುವುದು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಒಂದು ಒಳ್ಳೆಯ ವಿಷಯ.