ಚಿಕ್ಕನ್ ಗಿಂತಲೂ ಹೆಚ್ಚಿನ ಪೌಷ್ಟಿಕಾಂಶ ಈ ಒಂದು ಬೀಜದಲ್ಲಿದೆ..!!

ಹೆಚ್ಚಿನ ಜನ ಪೋಷ್ಟಿಕಾಂಶ ಹೆಚ್ಚಾಗಿ ಸಿಗುವುದು ಕೇವಲ ಮಾಂಸಾಹಾರಿಗಳಿಗೆ ಮಾತ್ರ, ಸಸ್ಯಾಹಾರಿಗಳಿಗೆ ಯಾವು ಶಕ್ತಿ ತಾಕತ್ತು ಇರುವುದಿಲ್ಲ ಎಂದು ತಿಳಿದಿರುತ್ತಾರೆ, ನಾವು ತಿಳಿಸುವ ಈ ಒಂದು ಬೀಜದಲ್ಲಿ ಮಾಂಸಕಿಂತ ಹೆಚ್ಚಿನ ಪ್ರೋಟೀನ್​ ಅಂಶ, ಕಬ್ಬಿಣಾಂಶ, ಫೈಬರ್ ಹಾಗು ಕ್ಯಾಲ್ಶಿಯಮ್​ ಅಂಶ ಹೆಚ್ಚಿದೆ ಎಂದು ತಿಳಿದರೆ ನಿಮಗೆ ಅಚ್ಚರಿಯಾಗಬಹುದು ಆದರೆ ಇದು ನಿಜ.

ನಾನ್ ವೆಜ್ ತಿನ್ನಲು ಮನಸ್ಸು ಇಲ್ಲ ಆದರೂ ನಮಗೆ ದಷ್ಟ ಪುಷ್ಟವಾದ ದೇಹ ಅರೋಗ್ಯ ಹಾಗು ಶಕ್ತಿ ಬೇಕೆನ್ನುವರು ಈ ಮಾಹಿತಿಯನ್ನು ಒಮ್ಮೆ ಸಂಪೂರ್ಣವಾಗಿ ಓದಿ.

ಬಾದಾಮಿ : ಪ್ರೊಟೀನ್ ಅಂಶದ ಸಾರ ಅತಿ ಹೆಚ್ಚು ಇರುವುದೇ ಬಾದಾಮಿ ಬೀಜದಲ್ಲಿ ಅಷ್ಟೇ ಅಲ್ಲದೆ ಇದರಲ್ಲಿ 3.7ಎಂಜಿ ಕಬ್ಬಿಣಾಂಶ, 12 ಎಂಜಿ ಫೈಬರ್​ ಮತ್ತು 264 ಎಂಜಿ ಕ್ಯಾಲ್ಶಿಯಮ್​ ಅಂಶವಿದೆ, ಒಂದು ಕಪ್ ಬಾದಾಮಿ ರೋಸ್ಟ್ ಮಾಡಿ ತಿನ್ನುವ ಚಿಕನ್ ಗಿಂತ ಒಂದು ಕೈ ಮೇಲೆ.

ಸೋಯಾಬೀನ್​ : ಸೋಯಾಬಿನ್ ಬೀಜ ಬಳಸಿ ಹಲವು ರುಚಿಯಾದ ತಿನಿಸು ಮಾಡುತ್ತಾರೆ, ನಿಮಗಿದು ತಿಳಿದಿರಲಿ ಒಂದು ಕಪ್ ಚಿಕನ್ ನಲ್ಲಿ 43.3 ಗ್ರಾಂನಷ್ಟು ಪ್ರೋಟೀನ್​ ಇರುತ್ತದೆಯಂತೆ ಆದರೆ ಒಂದು ಕಪ್ ಸೋಯಾಬಿನ್ ಬೀಜದಲ್ಲಿ 68 ಗ್ರಾಂ ಪ್ರೋಟೀನ್​ ಇರುತ್ತದೆಯಂತೆ ಈಗ ನೀವೇ ಹೋಲಿಕೆ ಮಾಡಿಕೊಳ್ಳಿ ಯಾವುದು ಹೆಚ್ಚು ಪ್ರೊಟೀನ್ ಇದೆ ಎಂದು.

ಕುಂಬಳಕಾಯಿ ಬೀಜ : ಕುಬಲಕಾಯಿ ಬೀಜದಲ್ಲಿಯು ಸಹ ನಿಮಗೆ ಅಧಿಕವಾದ ಪ್ರೊಟೀನ್ ಅಂಶ ಸಿಗುತ್ತದೆ, ಅಲ್ಲದೆ ಅಧಿಕ ಫೈಬರ್ ಅಂಶವು ಇದರಲ್ಲಿ ಇರುವುದರಿಂದ ಫೈಬರ್ ಅಂಶಕ್ಕಾಗಿ ಚಿಕನ್ ತಿನ್ನುವ ಅವಶ್ಯಕತೆಯಿಲ್ಲ.

ಗಸ ಗಸೆ ಬೀಜ : ಮಟನ್​ಗೆ ಹೋಲಿಸಿದರೆ ಡಯಟ್ರಿ ಫೈಬರ್​ ಇದರಲ್ಲೇ ಹೆಚ್ಚು, ಕಾರಣ ಒಂದು ಕಪ್​ ಗಸಗಸೆ ಬೀಜದಲ್ಲಿ 19.5ಗ್ರಾಂ ಡಯಟ್ರೀ ಫೈಬರ್​ ಇರುತ್ತದೆ.

ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಈ ಆಹಾರಗಳನ್ನ ಸೇವಿಸಬೇಕು..!!

ಸಧ್ಯದ ಪರಿಸ್ಥಿಯಲ್ಲಿ ಜನರು ಸೇವಿಸುತ್ತಿರುವ ಆಹಾರದ ಮೇಲೆ ಇತ್ತೀಚಿಗಿನ ಅಧ್ಯನದ ಒಂದರ ಪ್ರಕಾರ ಜನರು ಸೇವಿಸುತ್ತಿರುವ ಆಹಾರದಲ್ಲಿ ಸರಾಸರಿ 9.5-10.5ಗ್ರಾಂನಷ್ಟು ಉಪ್ಪನ್ನು ಪ್ರತಿನಿತ್ಯ ಸೇವಿಸುತ್ತಿದ್ದಾರೆ, ಈ ರೀತಿಯ ಅಹಾರ ಸೇವನೆ ಪದ್ಧತಿಯಿಂದ ಅಧಿಕ ರಕ್ತದೊತ್ತಡ ಸಮಸ್ಯೆ ಹೆಚ್ಚಾಗಿ ಕಂಡು ಬಂದಿದೆ, ನಿಮಗೆ ನೆನಪಿರಲಿ ನೀವು ಯಾವುದೇ ಆಹಾರ ಸೇವಿಸಿದರು ಅದು ನೇರವಾಗಿ ನಿಮ್ಮ ರಕ್ತದ ಮೇಲೆ ಪರಿಣಾಮ ಬೀರುತ್ತದೆ.

ಹಾಗಾಗಿ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿ ಇಡಲು ನಾವು ತಿಳಿಸುವ ಈ ಆಹಾರವು ನಿಮಗೆ ಬಹಳ ಉಪಕಾರಿಯಾಗಲಿದೆ.

ಪೊಟ್ಯಾಶಿಯಂ ಅಂಶ ಹೆಚ್ಚಿರುವ ಆಹಾರವನ್ನು ಸೇವಿಸುವುದರಿಂದ ಸೊಡಿಯೋ ಅಂಶವು ದೇಹದ ಮೇಲೆ ಕಟ್ಟಾ ಪರಿಣಾಮ ಬೀರುವದನ್ನು ತಡೆಯುತ್ತದೆ, ಆದ್ದರಿಂದ ಪೊಟ್ಯಾಶಿಯಂ ಅಂಶ ಹೆಚ್ಚಿರುವ ಬಾಳೆಹಣ್ಣನ್ನು ಪ್ರತಿ ನಿತ್ಯ ಸೇವಿಸುವುದರಿಂದ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ನಿವಾರಣೆ ಹೊಂದಲು ಸಹಕಾರಿ.

ವಾರದಲ್ಲಿ ಐದು ಬಾರಿ ಯೋಗಾರ್ಟ್ ಸೇವಿಸುವುದರಿಂದ ಅಧಿಕ ರಕ್ತದೊತ್ತಡದ ಸಂಭವವನ್ನು 20% ಕಡಿಮೆ ಮಾಡಬಹುದು, ಯೋಗಾರ್ಟ್​ ರುಚಿಯಾಗಿಯೂ ಇರುವುದರಿಂದ ಸ್ನ್ಯಾಕ್ಸ್​, ಹಣ್ಣುಗಳ ಜೊತೆ ಸೇವಿಸಬಹುದು.

ದೇಹದಲ್ಲಿ ನೈಟ್ರಿಕ್​ ಆ್ಯಸಿಡ್​ ಅಂಶ ಹೆಚ್ಚಿಸಲು ಬೆಳ್ಳುಳ್ಳಿ ಸಹಾಯಕಾರಿ, ಇದರಿಂದ ಅಪಧಮನಿಗಳು ಹಿಗ್ಗುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.

ಮೇಲೆ ತಿಳಿಸದ ಹಾಗೆ ಪೊಟ್ಯಾಶಿಯಂ ಜಾಸ್ತಿ ಇರುವ ಮೊತ್ತೊಂದು ಆಹಾರ ಕ್ಯಾರೆಟ್, ಈ ತರಕಾರಿಯ ಸೇವನೆಯಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ ಹಾಗೂ ಹೃದಯದ ಆರೋಗ್ಯವನ್ನೂ ಕಾಪಾಡಬಹುದು.

ಸೂರ್ಯಕಾಂತಿ ಬೀಜದಲ್ಲಿ ವಿಟಮಿನ್​ ಇ, ಫೋಲಿಕ್​ ಆ್ಯಸಿಡ್​, ಪ್ರೋಟೀನ್ ಹಾಗೆ ಫೈಬರ್​ ಅಂಶವಿದೆ ಇವು ಹೃದಯದ ಆರೋಗ್ಯಕ್ಕೆ ಉತ್ತಮ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ ಆದರೆ ಸೂರ್ಯಕಾಂತಿ ಬೀಜವನ್ನು ಉಪ್ಪು ಸೇರಿಸದೇ ಸೇವಿಸಿ.

ಬಾಯಿಯಲ್ಲಿ ಹುಣ್ಣಾದರೆ ಹುಣಸೆ ಹಣ್ಣನ್ನು ಬಳಸಿ ಹೀಗೆ ಮಾಡಿ..!!

ಆರೋಗ್ಯದ ದೃಷ್ಟಿಯಿಂದ ಹೊಸ ಹುಣಸೆಹಣ್ಣಿಗಿಂತ ಹಳೆಯ ಹುಣಸೆಹಣ್ಣು ಉತ್ತಮ ಹುಣಸೆಹಣ್ಣಿನ ರಸ ವಿರೇಚಕ ಗುಣವುಳ್ಳದ್ದು ಇದು ಪಿತ್ತ ಪ್ರಕೋಪವನ್ನು ನಿವಾರಿಸುವುದು ಆಲ್ಕೋಹಾಲ್ ಸೇವಿಸುವುದರಿಂದ ಆಗುವ ದುಷ್ಪರಿಣಾಮಗಳನ್ನು ತಡೆಗಟ್ಟುವುದು.

ಗೋಲಿ ಗಾತ್ರದ ಹುಣಸೆಹಣ್ಣು ಸ್ವಲ್ಪ ಬೆಲ್ಲ ಜೀರಿಗೆ ಚೆನ್ನಾಗಿ ಕುಟ್ಟಿ ದಿನಕ್ಕೆ ಮೂರುವರ್ತಿ ಸೇವಿಸುವುದರಿಂದ ಕಾಮಾಲೆ, ಹೊಟ್ಟೆ ನುಲಿತ ತಲೆಸುತ್ತುವುದು, ವಾಂತಿಯಾಗುವಿಕೆ, ಈ ಸಂದರ್ಭಗಳಲ್ಲಿ ಉತ್ತಮ ಗುಣ ಕಂಡುಬರುವುದು.

ಹುಣಸೆಹಣ್ಣು, ಪುದಿನಾ, ಮೆಣಸು ಹುರಿದ ಏಲಕ್ಕಿ ಕಾಳು ಯೋಗ್ಯ ಪ್ರಮಾಣದಲ್ಲಿ ತೆಗೆದುಕೊಂಡು ನುಣ್ಣಗೆ ಅರೆದು ರುಚಿಗೆ ತಕ್ಕಷ್ಟು ಉಪ್ಪು ಕೂಡಿಸಿ ಸೇವಿಸುವುದರಿಂದ ಹೊಟ್ಟೆ ನೋವು ಶಾಂತವಾಗುವುದು. ಈ ಚಟ್ನಿ ಸೇವಿಸುವುದರಿಂದ ವಾಂತಿ ಮತ್ತು ಭೇದಿ ಬಹುತೇಕ ಹತೋಟಿಗೆ ಬರುವುದು ಈ ಚಟ್ನಿಯು ಕಾಲರಾ ರೋಗದಲ್ಲಿ ಗುಣಕಾರಿ.

ಒಂದು ಟೀ ಚಮಚ ಹುಣಸೆ ಗೊಜ್ಜನ್ನು ಒಂದು ಬಟ್ಟಲು ಮಜ್ಜಿಗೆ ಬೆರೆಸಿ ಒಂದೆರಡು ಬಾಳೆಹಣ್ಣು ಸುಲಿದು ತಿರುಳನ್ನು ಚೆನ್ನಾಗಿ ಮಸೆಯಿರಿ ಆ ತಿರುಳು ತಿಂದು ಹುಳಿ ಮಿಶ್ರಿತ ಮಜ್ಜಿಗೆ ಸೇವಿಸಿರಿ ಇದರಿಂದ ಆಮಶಂಕೆ ಅತಿಸಾರ ಶಮನವಾಗುವುದು.

ಹುಣಸೆಹಣ್ಣಿನ ಸಕ್ಕರೆ ಪಾನಕ ಸೇವಿಸುವುದರಿಂದ ಉಷ್ಣದ ತಲೆನೋವು ನಿಲ್ಲುವುದು.

ಅಜೀರ್ಣವಾಗಿರುವಾಗ ಸ್ವಲ್ಪ ಹುಣಸೆ ಹಣ್ಣು ಮೆಣಸು, ಉಪ್ಪು ಚೆನ್ನಾಗಿ ಅಗಿದು ರಸ ಹೀರುವುದರಿಂದ ಗುಣ ಉಂಟು.

ವಾಕರಿಕೆ, ತಲೆಸುತ್ತುವುಕೆ, ಕಂಡು ಬಂದಾಗ ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಹಾಕಿ ಕಿವುಚಿ ತಿಳಿ ಬಸಿದು, ಸಕ್ಕರೆ ಬೆರೆಸಿ ಆ ತಿಳಿಯನ್ನು ಸೇವಿಸಿ.

ಹುಣಸೆ ಹಣ್ಣು ಚೆನ್ನಾಗಿ ಸೇವಿಸುವುದರಿಂದ ಕೆಮ್ಮು ಬರುವುದು ಮತ್ತು ಸಂಭೋಗ ಸಾಮರ್ಥ್ಯ ಕುಗ್ಗುವುದು, ಆದ್ದುದರಿಂದ ಅಗತ್ಯಗಿಂತ ಹೆಚ್ಚು ಹುಣಸೆ ಹಣ್ಣನ್ನು ಸೇವಿಸುವುದು ಒಳಿತಲ್ಲ.

ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಹಾಕಿ ಚೆನ್ನಾಕಿ ಕಿವುಚಿ ರಸ ತೆಗೆಯಿರಿ ಗೊಜ್ಜಿನಂತಿರುವ ಒಂದು ಬಟ್ಟಿಲು ರಸವನ್ನು ಸ್ಟೀಲ್ ಡಬ್ಬಿಯಲ್ಲಿ ಸುರಿದು ಕಾಯಿಸಿ ಈ ಗೊಜ್ಜಿಗೆ ಒಂದು ಟಿ ಚಮಚ ಅಡುಗೆ ಉಪ್ಪು ಮತ್ತು ಒಂದು ಗೋಲಿ ಗಾತ್ರ ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ, ನಂತ್ರ ಬಿಸಿಯಾದ ಗೊಜ್ಜನ್ನು ಹುಳುಕಿರುವ ಭಾಗದ ಮೇಲೆ ಹದವರಿತು ಲೇಪಿಸಿ, ದಿನಕ್ಕೆ ಒಂದುಸಾರಿ ಮೂರು ದಿನಗಳ ಕಾಲ ಈ ಉಪಚಾರ ಮಾಡುವುದರಿಂದ ನೋವು ಕಡಿಮೆಯಾಗುವುದು ಮತ್ತು ಊತ ನಿಲ್ಲುವುದು.

ಹುಣಸೆ ಎಲೆಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ಆ ನೀರಿನಿಂದ ಬಾಯಿ ಮುಕ್ಕಳಿಸಿದರೆ ಬಾಯಿ ಹುಣ್ಣು ಗುಣವಾಗುವುದು, ಅದೇ ನೀರಿನಿಂದ ವ್ರಣಗಳನ್ನು ತೊಳಿಯಬಹುದು.

ಈ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಈರುಳ್ಳಿಯ ಈ ಗುಣಗಳು ನಿಮಗೆ ತಿಳಿದಿರಲಿ ಸಾಧ್ಯವಿಲ್ಲ ಒಮ್ಮೆ ಓದಿನೋಡಿ..!!

ಈರುಳ್ಳಿ ಸೇವನೆಯಿಂದ ಅನೇಕ ರೋಗಗಳು ಬಾರದಂತೆ ನಮ್ಮ ದೇಹದ ಆರೋಗ್ಯವೂ ರಕ್ಷಿಸಲ್ಪಡುತ್ತದೆ ಕೆಮ್ಮು ಉಬ್ಬಸ ಮುಂತಾದ ರೋಗಗಳ ನಿವಾರಣೆಗೆ ಇದು ಉತ್ತಮ ಔಷಧಿ ಈರುಳ್ಳಿ ಸೇವನೆಯಿಂದ ರಕ್ತವು ಶುದ್ಧವಾಗಿರುತ್ತದೆ ಈರುಳ್ಳಿಯಲ್ಲಿ ವಿಟಮಿನ್ ಇ ಯತೇಚ್ಛವಾಗಿ ಇರುತ್ತದೆ ಹೆಂಗಸರಿಗಿಂತಲೂ ಗಂಡಸರಿಗೆ ಈರುಳ್ಳಿಯ ಸೇವನೆಯು ಹೆಚ್ಚು ಪ್ರಯೋಜನಕಾರಿ ಆಗುತ್ತದೆ.

ವಿಜ್ಞಾನಿಗಳ ಅನ್ವೇಷಣೆಯ ಪ್ರಕಾರ 28 ವಿಧದ ರೋಗಗಳು ಬಾರದಂತೆ ತಡೆಯಲು ಈರುಳ್ಳಿ ಸೇವನೆಯು ಸಹಾಯಕಾರಿ ಆಗುತ್ತದೆ ಈರುಳ್ಳಿಯೂ ಉತ್ತಮವಾದ ದಿವ್ಯ ಔಷಧವೆಂದು ವೈಜ್ಞಾನಿಕವಾಗಿ ಶಾಸ್ತ್ರಜ್ಞರು ವಿವರಿಸಿದ್ದಾರೆ ಹಸಿ ಈರುಳ್ಳಿಯನ್ನು ಸೇವಿಸುವುದರಿಂದ ಬಾಯಲ್ಲಿರುವ ಕೆಲವು ಸೂಕ್ಷ್ಮ ಕ್ರಿಮಿಗಳು ಸಾವನ್ನಪ್ಪುತ್ತವೆ ಮತ್ತು ಬಾಯಿಯು ಶುಭ್ರವಾಗಿರುತ್ತದೆ ಈರುಳ್ಳಿಯನ್ನು ಕತ್ತರಿಸುವಾಗ ಕಣ್ಣಿನಲ್ಲಿ ನೀರು ಬರುತ್ತದೆ ಆದರೆ ಅದರ ಪರಿಣಾಮವಾಗಿ ಕಣ್ಣನಲ್ಲಿ ಇರುವ ಕೆಲವು ಸೂಕ್ಷ್ಮ ಜೀವಿಗಳು ನಶಶಿ ಕಣ್ಣುಗಳು ಸ್ವಚ್ಛವಾಗುತ್ತವೆ.

ಡಾ. ಬಿ ಬೊಕ್ಕಿನ್ ಎಂಬ ಸೋವಿಯಟ್ ಪರಿಶೋಧಕ ನಮ್ಮ ದೇಹದಲ್ಲಿನ ಸೂಕ್ಷ್ಮ ಕ್ರಿಮಿಗಳನ್ನು ನಾಶ ಮಾಡಲು ಈರುಳ್ಳಿಗಿಂತಲೂ ಮಿಗಿಲಾದ ಆಹಾರವು ಮತ್ತೊಂದಿಲ್ಲ ಎಂದು ತನ್ನ ಸಂಶೋಧನೆಯಲ್ಲಿ ಸ್ಪಷ್ಟಪಡಿಸಿದ್ದಾನೆ.

ಈ ಮಾಹಿತಿ ನಿಮಗೆ ಇಷ್ಟ ವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹುಳುಕಡ್ಡಿ, ಇಸಬು, ಕರಪಾಣಿ ಇತ್ಯಾದಿ ಚರ್ಮ ರೋಗಗಳಿಗೆ ರಾಮಬಾಣ ಈ ಕಾಯಿ..!!

ಜಾಪತ್ರೆ ಮತ್ತು ಜಾಯಿಕಾಯಿಗಳನ್ನು ಅಡಿಕೆಪುಡಿಯೊಂದಿಗೆ ಸೇರಿಸಿ ಬಳಸುವರು ಇದು ಲೈಂಗಿಕ ಕ್ರಿಯೆಯನ್ನು ಪ್ರಚೋದಿಸುವುದು ಜೀರ್ಣಶಕ್ತಿ ಹೆಚ್ಚಿಸುವುದು.

ದೇಹಾಲಸ್ಯದಿಂದ ಅಳುಗರೆಯುವ ಮಗುವಿಗೆ ಜೇನುತುಪ್ಪದಲ್ಲಿ ಜಾಯಿಕಾಯಿ ತೇದು ಸ್ವಲ್ಪ ಗಂಧವನ್ನು ನೆಕ್ಕಿಸಿದರೆ ಮಗು ಚೆನ್ನಾಗಿ ನಿದ್ರಿಸುವುದು.

ರೋಗಿಯ ಜೊಲ್ಲು ರಸದಲ್ಲಾಗಲಿ ಮೂತ್ರದಲ್ಲಾಗಲಿ ಜಾಯಿಕಾಯಿ ತೇದು ಆ ಗಂಧ ಹಚ್ಚಿದರೆ ಹುಳುಕಡ್ಡಿ ಇಸಬು ಕರಪಾಣಿ ಇತ್ಯಾದಿ ಚರ್ಮ ರೋಗಗಳು ಗುಣವಾಗುತ್ತವೆ.

ಅಂಗಸುಖ ಅನುಭವಿಸುವುದಕ್ಕೆ ಒಂದು ಗಂಟೆ ಮುಂಚೆ ಜೇನುತುಪ್ಪದಲ್ಲಿ ಕಲಸಿದ ಜಾಯಿಕಾಯಿ ಚೂರ್ಣ ಸೇವಿಸಿದರೆ ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಉಲ್ಲಾಸ ಕಂಡುಬರುವುದು ಮತ್ತು ವೀರ್ಯ ವಿಸರ್ಜನೆ ತಡವಾಗಿ ಆಗುವುದು.

ಜಾಯಿಕಾಯಿ ಚೂರ್ಣವನ್ನು ಬಾಳೆಹಣ್ಣಿನೊಂದಿಗೆ ಸೇವಿಸಿದರೆ ಅಜೀರ್ಣದ ದೆಸೆಯಿಂದ ತಲೆದೋರುವ ಭೇದಿ ನಿಲ್ಲುವುದು.

ಒಂದು ಊಟದ ಚಮಚ ನೆಲ್ಲಿಕಾಯಿ ರಸದಲ್ಲಿ 1 ಚಿಟಿಕೆ ಜಾಯಿಕಾಯಿ ಚೂರ್ಣ ಸೇರಿಸಿ ದಿನಕ್ಕೆ ಮೂರಾವರ್ತಿಯಂತೆ ಸೇವಿಸುತ್ತಿದರೆ ಅಜೀರ್ಣ ದೈನಂದಿನ ಚಟುವಟಿಕೆಗಳಲ್ಲಿ ಅನಾಸಕ್ತಿ ಮಾನಸಿಕ ಉದ್ವೇಗ ಬಿಕ್ಕಳಿಕೆ ಮೆರಗುಳಿತನ ಈ ಲಕ್ಷಣಗಳುಳ್ಳ ರೋಗಿಗಳಲ್ಲಿ ಕ್ರಮೇಣ ಸುಧಾರಣೆ ಕಂಡುಬರುವುದು ಆದರೆ ಜಾಯಿಪತ್ರೆಯನ್ನಾಗಲಿ ಜಾಯಿಕಾಯಿಯನ್ನಾಗಲಿ ಅವಶ್ಯಕತೆಗಿಂತ ಹೆಚ್ಚು ಪ್ರಮಾಣದಲ್ಲಿ ಬಳಸಿದ್ದೇ ಆದಲ್ಲಿ ದೇಹಕ್ಕೆ ಹಾನಿಉಂಟಾಗುವುದು.

ಜಾಯಿಕಾಯಿಯನ್ನು ಚೆನ್ನಾಗಿ ಜಜ್ಜಿ ಪುಡಿ ಮಾಡಿ ಎಣ್ಣೆಯಲ್ಲಿ ಬೇಯಿಸಿಈ ಎಣ್ಣೆ ತಿಕ್ಕುವುದರಿಂದ ತಲೆಶೂಲೆ ಕೀಲು ನೋವು ಬಿಟ್ಟು ಹೋಗುವುದು ದೀರ್ಘಕಾಲದಿಂದ ಗುಣವಾಗದಿರುವ ವ್ರಣಗಳಿಗೂ ಈ ತೈಲ ಹಚ್ಚಬಹುದು.

ಫುಡ್ ಪಾಯಿಸನ್ ಸಮಸ್ಯೆ ನಿಮ್ಮನ್ನು ಕಾಡಿದರೆ ಮನೆಯಲ್ಲೇ ಸಿಗುವ ಒಂದು ಬೆಳ್ಳುಳ್ಳಿ ಬಳಸಿ ಹೀಗೆ ಮಾಡಿ..!!

ನಾಲಿಗೆ ರುಚಿಗೆ ಹೆಚ್ಚು ಮಹತ್ವ ನೀಡುವ ವ್ಯಕ್ತಿ ನೀವಾಗಿದ್ದರೆ, ಇಂತಹ ಫುಡ್ ಪಾಯಿಸನ್ ಸಮಸ್ಯೆಗೆ ನೀವು ತುತ್ತಾಗಿರುತ್ತೀರಿ, ರುಚಿಯಾಗಿರುವ ಆಹಾರವೆಲ್ಲ ಶುದ್ಧವಾಗಿಯೂ ಆರೋಗ್ಯವಾಗಿಯೂ ಇರುತ್ತದೆ ಎಂಬ ಕಾತರಿ ಇಲ್ಲದ ಕಾರಣ, ಮನೆಯ ಊಟ ಬಿಟ್ಟು ಹೋಟೆಲ್ ಊಟ ನಿಮ್ಮ ಆರೋಗ್ಯವನ್ನು ಆಗಾಗ ಕೆಡಿಸುತ್ತದೆ, ಇನ್ನು ಇಂತಹ ಫುಡ್ ಪಾಯಿಸನ್ ಸಮಸ್ಯೆಗೆ ಮನೆ ಮದ್ದಿನ ಬಗ್ಗೆ ನಿಮಗೆ ತಿಳಿಸುತ್ತೇವೆ.

ಇನ್ನು ಫುಡ್ ಪಾಯಿಸನ್ ಬಂದರೆ ವಾಕರಿಕೆ, ವಾಂತಿ, ಅತಿಸಾರ, ಹೊಟ್ಟೆ ನೋವು ಇವುಗಳು ಸಾಮಾನ್ಯ, ಇವುಗಳಿ ಉತ್ತಮ ಪರಿಹಾರಗಲಿ ಇಂದು ತಿಳಿಸುತ್ತೇವೆ.

ಹೊಟ್ಟೆ ನೋವಿನ ಸಮಸ್ಯೆಗೆ ಹಿಂದಿನಿಂದಲೂ ಶುಂಟಿಯನ್ನ ಬಳಸುತ್ತ ಬಂದಿದ್ದಾರೆ, ಅರ್ಥ ಶುಂಠಿ ಹಾಗು ಜೇನುತುಪ್ಪವನ್ನು ನೀರಿನಲ್ಲಿ ಚೆನ್ನಾಗಿ ಕಾಯಿಸಿ ಹೊಟ್ಟೆ ನೋವು ತಕ್ಷಣಕ್ಕೆ ಕಡಿಮೆಯಾಗುತ್ತದೆ.

ಬೆಳ್ಳುಳ್ಳಿಯಲ್ಲಿದೆ ಆ್ಯಂಟಿವೈರಲ್ ಗುಣ, ಈ ಆ್ಯಂಟಿಬ್ಯಾಕ್ಟೀರಿಯಲ್​ ಮತ್ತು ಆ್ಯಂಟಿಫಂಗಲ್​ ಗುಣ ದೇಹವನ್ನು ಸ್ವಚ್ಛಗೊಳಿಸುವಲ್ಲಿ ಉತ್ತಮವಾದದ್ದು ಎಂದು ಹೇಳಲಾಗಿದೆ, ಹಾಗು ಹಸಿ ಬೆಳ್ಳುಳ್ಳಿಯ ಎಸಳನ್ನು ನೀರಿನ ಜೊತೆ ಸೇವಿಸಿ, ಇದರಿಂದ ಹೊಟ್ಟೆ ಸಮಸ್ಯೆ ಮಾಯವಾಗುತ್ತದೆಯಂತೆ.

ನಿಂಬೆ ಹಣ್ಣಿನಲ್ಲೂ ಸಹ ಆ್ಯಂಟಿಆಕ್ಸಿಡೆಂಟ್ ಗುಣವಿದ್ದು, ದೇಹದ ಅರೋಗ್ಯ ಕಾಪಾಡುವಲ್ಲಿ ಉತ್ತಮ ಪಾತ್ರ್ ವಹಿಸುತ್ತದೆ, ಒಂದು ಲೋಟ ನೀರಿನಲ್ಲಿ ಅರ್ಧ ನಿಂಬೆ ಹೋಳಿನ ರಸ ಇಂಡಿ ಕುಡಿದರೆ ಹೊಟ್ಟೆ ತೊಳಸುವಿಕೆ ಕಡಿಮೆಯಾಗುತ್ತದೆ, ಅವಶ್ಯವಿದ್ದರೆ ಇದರಲ್ಲಿ ಜೇನು ತುಪ್ಪ ಸಹ ಬೆರಸಬಹುದು.

ಫುಡ್​ ಪಾಯಿಸ್ನಿಂಗ್​ ಸಮಸ್ಯೆಗೆ ಜೀರಿಗೆ ತಕ್ಷಣ ಪರಿಹಾರ ನೀಡುತ್ತದೆ ಒಂದು ಚಮಚ ಜೀರಿಗೆಯನ್ನು ನೀರಿಗೆ ಹಾಕಿ ಕುದಿಸಿ ಇದಕ್ಕೆ ಕೊತ್ತಂಬರಿ ರಸ ಹಾಗು ಸ್ವಲ್ಪ ಉಪ್ಪು ಹಾಕಿ, ಅದರ ಜೊತೆ ಬೆರೆಸಿ ಸೇವಿಸಿ. ಇದರಿಂದ ದೇಹ ಸ್ವಚ್ಛವಾಗುತ್ತದೆ.

ಈ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ನೀವು ಕುಡಿಯುವ ನೀರಿನ್ನಲ್ಲಿ ಒಂದು ಸಣ್ಣ ಏಲಕ್ಕಿ ಮಿಶ್ರಣ ಮಾಡಿದರೆ ಏನಾಗುತ್ತೆ ಗೊತ್ತಾ..!!

ಸಾಮಾನ್ಯವಾಗಿ ಏಲಕ್ಕಿಯನ್ನು ಸಿಹಿ ಪದಾರ್ಥಗಳ ಸ್ವಾದವನ್ನ ಹೆಚ್ಚಿಸಲು ಬಳಸುತ್ತಾರೆ, ಆಹಾರಗಳ ರುಚಿಯನ್ನ ಹೆಚ್ಚಿಸುವ ಏಲಕ್ಕಿಯಲ್ಲಿ ಇದೆ ಅನೇಕ ರೋಗನಿರೋಧಕ ಗುಣಗಳು, ಈ ಏಲಕ್ಕಿಯನ್ನು ನಿಯಮಿತ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಇರುವ ಅನೇಕ ಉಪಯೋಗಗಳನ್ನ ಇಂದು ನಾವು ನಿಮಗೆ ತಿಳಿಸುತ್ತೇವೆ.

ತಾಜಾ ಉಸಿರು : ಬಾಯಿಯ ದುರ್ಗಂಧದ ಕಂಪ್ಲೇಂಟ್ ಏನಾದರೂ ನಿಮ್ಮ ಮೇಲೆ ಇದ್ದರೆ ಅಥವಾ ಬಾಯಿಯ ವಾಸನೆ ಬರುವ ನಿಮ್ಮ ಸ್ನೇಹಿತರಿಗೂ ನೀವು ಈ ಉಪಾಯವನ್ನ ತಿಳಿಸಬದು, ಒಂದು ಏಲಕ್ಕಿಯನ್ನ ಬಾಯಲ್ಲಿ ಇಟ್ಟುಕೊಂಡು ಸ್ವಲ್ಪ ಸಮಯ ಜಗಿದರೆ ಸಾಕು ನಿಮ್ಮ ಉಸಿರಿನಲ್ಲಿ ತಾಜಾತನ ತುಂಬುತ್ತದೆ.

ಲೈಂಗಿಕ ಆಸಕ್ತಿ : ಚೆನ್ನಾಗಿ ಕಾಯಿಸಿದ ಹಾಲಿಗೆ ಒಂದೆರಡು ಏಲಕ್ಕಿ ಹಾಗು ಸ್ವಲ್ಪ ಶುದ್ಧ ಜೇನನ್ನು ಸೇರಿಸಿ ಪ್ರತಿ ದಿನ ರಾತ್ರಿ ಮಲಗುವ ಮುನ್ನ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಲೈಂಗಿಕ ಶಕ್ತಿ ಅಥವಾ ಆಸಕ್ತಿ ಹೆಚ್ಚಾಗಿ ನಿಮ್ಮ ದಾಂಪತ್ಯ ಮಧುರವಾಗುತ್ತದೆ.

ಜೇರ್ಣಕ್ರಿಯೆ : ಕೆಲವು ಪಂಗಡಗಳಲ್ಲಿ ಆಹಾರ ಸೇವನೆಯ ನಂತರ ಏಲಕ್ಕೆಯನ್ನ ತಿನ್ನಲು ಕೊಡುವ ಅವ್ಯಾಸ ಈಗಲೂ ಇದೆ, ಕಾರಣ ನೀವು ತಿಂದ ಆಹಾರ ಸರಿಯಾದ ರೀತಿಯಲ್ಲಿ ಜೀರ್ಣವಾಗಲು ಏಲಕ್ಕಿ ಬಹಳ ಸಹಕಾರಿ.

ಗಂಟಲ ಸಮಸ್ಯೆ : ನಿಮಗೆ ಗಂಟಲ ನೋವಿನ ಸಮಸ್ಯೆ ಕಾಡುತ್ತಿದ್ದರೆ ನಾವು ನಿಮಗೆ ಮೇಲೆ ತಿಳಿಸಿದ ಹಾಗೆ ಕೇವಲ ಒಂದು ಏಲಕ್ಕಿಯನ್ನ ಬಾಯಲ್ಲಿ ಜಗಿದರೆ ಇದರ ರಸ ಗಂಟಲ ನೋವಿಗೆ ಕಾರಣವಾದ ಕೀಟಾಣುಗಳ ನಾಶ ಮಾಡಿ ನಿಮ್ಮ ಗಂಟಲಿಗೆ ತಾಜಾತನ ನೀಡುತ್ತದೆ.

ರಕ್ತ ಶುದ್ದಿ : ಫ್ರೀ ರೆಡಿಕಲ್ ಮತ್ತು ಇತರೆ ವಿಷಯುಕತ ತತ್ವಗಳನ್ನು ದೇಹದಿಂದ ಹೊರ ದೂಡುವ ಶಕ್ತಿ ಏಲಕ್ಕಿಗೆ ಅತಿ ಹೆಚ್ಚಿರುವುದರಿಂದ ನೀವು ಕುದಿಯು ನೀರಿಗೆ ಒಂದು ಏಲಕ್ಕಿಯನ್ನು ಅಥವಾ ಏಲಕ್ಕಿ ಪುಡಿಯನ್ನ ಮಿಶ್ರಣ ಮಾಡಿ ಕುಡಿಯಬೇಕು.

ಏಲಕ್ಕಿಯಾ ಇಷ್ಟೊಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಕಪ್ಪು ದ್ರಾಕ್ಷಿ ಹಣ್ಣು ತಿನ್ನಲು ಬಯಸುವವರು ಇಲ್ಲಿ ಓದಲೇಬೇಕು..!!

ದ್ರಾಕ್ಷಿ ೩-೪ ಬಗೆಯಲ್ಲಿರುತ್ತವೆ ಈ ಪತಿ ಕರಿಯ ಬಣ್ಣದ ದ್ರಾಕ್ಷಿ ದೇಹರೋಗ್ಯಕ್ಕೆ ಹಿತಕರವಾದುದು.

ದ್ರಾಕ್ಷಿ ಹಣ್ಣಿನ ರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ರಕ್ತವೃದ್ಧಿ ಮತ್ತು ನರದೌರ್ಬಲ್ಯ ಶಮಾನವಾಗುತ್ತದೆ.

ಬಿಳಿ ದ್ರಾಕ್ಷಿ ಹಣ್ಣಿನ ರಸಕ್ಕೆ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ರಕ್ತ ವೃದ್ದಿಯಾಗುತ್ತದೆ ನರಗಳಲ್ಲಿ ಹೊಸ ಚೈತನ್ಯ ತುಂಬಿಕೊಳ್ಳುತ್ತದೆ.

ದ್ರಾಕ್ಷಿ ಹಣ್ಣಿನ ರಸವನ್ನು ಸಿಹಿಮೂತ್ರ ರೋಗಿಗಳಿಗೆ ಸಕ್ಕರೆ ಹಾಕದೆ ಕೊಟ್ಟರೆ ಗುಣವಾಗುತ್ತದೆ.

ಬೆಳ್ಳಿ ದ್ರಾಕ್ಷಿಯನ್ನು ಆಗಾಗ್ಗೆ ತಿನ್ನುತ್ತಿದ್ದರೆ ಹೊಟ್ಟೆ ಹುಣ್ಣು ಗುಣವಾಗುವುದು ಅಲ್ಲದೆ ಶರೀರದಲ್ಲಿ ರಕ್ತಶುದ್ದಿಗೊಳ್ಳುವುದು.

ಒಣದ್ರಾಕ್ಷಿಯನ್ನು ಕ್ರಮವಾಗಿ ಸೇವಿಸುತ್ತಿದ್ದರೆ ಶುದ್ದರಕ್ತ ವೃದ್ಧಿಯಾಗುವುದು.

ಕರಿಯ ಹುಳಿ ದ್ರಾಕ್ಷಿಹಣ್ಣು ತಿಂದರೆ ಹೊಟ್ಟೆಉಬ್ಬರ ಹುಳಿತೇಗು ಅಜೀರ್ಣ ಮತ್ತು ಮಲಬದ್ದತೆಯು ನಿವಾರಣೆಯಾಗುವುದು.

ಈ ಹಣ್ಣುಗಳು ಸಿಹಿಯಾಗೆ ಇದ್ದರು ಇದರಲ್ಲಿ ಸಕ್ಕರೆ ಅಂಶ ತುಂಬಾ ಕಡಿಮೆ ಆದ್ದರಿಂದ ಆರಾಮಾಗಿ ಎಲ್ಲರು ಸೇವಿಸಬಹುದು.

ಸಂಜೆಯಾದರೆ ಸಾಕು ನಾಲಿಗೆ ಚಪಲ ನಮ್ಮನ್ನು ಸುಮ್ಮನೆ ಬಿಡುವುದಿಲ್ಲ, ಸುಮ್ಮನೆ ಒಂದು ಸುತ್ತು ಆಚೆ ಸುತ್ತಾಡೊ ನೆಪದಲ್ಲಿ ಹೊರಗೆ ಸಿಗುವ ಪಾನಿಪುರಿ, ಗೋಬಿ ಮಂಚೂರಿ ಅಂತ ಹಲವು ಬಗೆ ತಿನಿಸನ್ನ ತಿಂದೆ ಮರಳಿ ಮನೆಗೆ ಬರ್ತೀವಿ ಇದು ಆರೋಗ್ಯಕ್ಕೆಷ್ಟು ಉತ್ತಮ ಹಾಗು ನಿಮ್ಮ ವಾಕಿಂಗ್ ಲಾಭವಾದರೂ ಏನು ? ಸುಮ್ಮನೆ ಏನೇನೋ ಸೇವಿಸಿ ಅರೋಗ್ಯ ಕೆಡಿಸಿಕೊಳ್ಳುವ ಬದಲು ನೀವು ಸೇವಿಸಬಹುದಾದ ಸಕ್ಕರೆ ಕಡಿಮೆ ಇರುವ ಹಣ್ಣುಗಳನ್ನು ಸೇವಿಸಿ ಮತ್ತು ನಿಮ್ಮ ಸಕ್ಕರೆಯ ಮಟ್ಟವನ್ನು ಮಿತಿಯಲ್ಲಿ ಇರಿಸಿಕೊಳ್ಳಿ.

ಕಿವಿ ಹಣ್ಣು : ಈ ಹಣ್ಣು ನಮ್ಮ ದೇಶದಲ್ಲ ವಿದೇಶದ್ದು ಆದರೇನಂತೆ ಇದರಲ್ಲಿ ಸಕ್ಕರೆ ಅಂಶಗಳು ತುಂಬಾ ಕಡಿಮೆ ಇರುತ್ತದೆ, ಪ್ರತಿ ಕಿವಿ ಹಣ್ಣು 6 ಗ್ರಾಂ ಸಕ್ಕರೆಯನ್ನು ಮಾತ್ರ ಹೊಂದಿರುತ್ತವೆ, ಇದಕ್ಕಿಂತ ಹೆಚ್ಚಾಗಿ ಇವುಗಳಲ್ಲಿ ನಾರಿನಂಶ ಹಾಗೂ ವಿಟಮಿನ್ ಸಿ ಸಹ ಇದ್ದು, ನಿಮ್ಮ ದಿನ ನಿತ್ಯದ ಅಗತ್ಯವನ್ನು ಪೂರೈಸುತ್ತವೆ.

ಕಲ್ಲಗಂಡಿ ಹಣ್ಣು : ಬೇಸಿಗೆಯ ಸಮಯದಲ್ಲಿ ನಿಮ್ಮ ದಾಹ ತೀರಿಸಲೆಂದೇ ಸಿಗುವ ಈ ಹಣ್ಣಿನಲ್ಲಿ 100 ಗ್ರಾಂ ಹಣ್ಣಿನಲ್ಲಿ ಕೇವಲ 6 ಗ್ರಾಂ. ನಷ್ಟು ಮಾತ್ರ ಸಕ್ಕರೆ ಅಂಶ ಇರುತ್ತದೆ, ಇದರಲ್ಲಿ ಅಧಿಕವಾಗಿರುವ ನೀರಿನಂಶವು ಕ್ಯಾಲೋರಿಯ ಅಂಶಗಳು ಕಡಿಮೆ ಇರುತ್ತವೆ, ಹಾಗಾಗಿ ಇದನ್ನು ನಿಶ್ಚಿಂತೆಯಾಗಿ ತಪ್ಪದೆ ಸೇವಿಸಿ.

ಕಿತ್ತಳೆ ಹಣ್ಣು : ತಾಜಾ ಒಂದು ಕಿತ್ತಳೆ ಹಣ್ಣಿನಲ್ಲಿ 12 ಗ್ರಾಂ.ನಷ್ಟು ಮಾತ್ರ ಸಕ್ಕರೆ ಅಂಶ ಇರುತ್ತದೆ ಹಾಗೂ ಸಮೃದ್ಧವಾದ ವಿಟಮಿನ್ ಸಿ ಸಹ ಇರುತ್ತದೆ, ತಂಪು ಪಾನೀಯಗಳು ಹಾಗೂ ಇನ್ನಿತರ ಕಾರ್ಬೊನೇಟೆಡ್ ಜ್ಯೂಸ್‌ಗಳನ್ನು ಸೇವಿಸುವ ಬದಲಿಗೆ ಈ ಹಣ್ಣನ್ನು ಪ್ರತಿದಿನ ಮಿತವಾಗಿ ಸೇವಿಸುವುದರಿಂದ ನಿಮ್ಮ ಆರೋಗ್ಯವು ಸುಧಾರಿಸುತ್ತದೆ.

ಸ್ಟ್ರಾಬೆರ್ರಿ ಹಣ್ಣು : ಮಕ್ಕಳು ತುಂಬಾ ಇಷ್ಟ ಪಡುವ ಹಣ್ಣುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಈ ಹಣ್ಣು ಯಾವ ಹಠವಿಲ್ಲದೆ ಸಲೀಸಾಗಿ ತಿನ್ನುತ್ತಾರೆ, ಈ ಹಣ್ಣಿನಲ್ಲಿ ಪ್ರತಿ 100 ಗ್ರಾಂ ಹಣ್ಣಿಗೆ ಕೇವಲ 5 ಗ್ರಾಂ ನಷ್ಟು ಮಾತ್ರ ಸಕ್ಕರೆ ಅಂಶವನ್ನು ಇವು ಹೊಂದಿರುತ್ತವೆ, ಇದರ ಜೊತೆಗೆ ಸ್ಟ್ರಾಬೆರ್ರಿಗಳಲ್ಲಿ ನಾರಿನಂಶ, ಖನಿಜಾಂಶ ಮತ್ತು ವಿಟಮಿನ್‌ಗಳು ಸಹ ಹೆಚ್ಚುವರಿಯಾಗಿ ಇರುತ್ತವೆ, ಇವು ನಿಮಗೆ ಅಗತ್ಯವಾದ ಪೋಷಕಾಂಶವನ್ನು ಒದಗಿಸುತ್ತವೆ.

ಸೂರ್ಯನ ಬಿಸಿಲು ಮೈ ಸೋಕಿದರೆ ಎಷ್ಟು ಲಾಭ ಇದೆ ಗೊತ್ತಾ..!!

ಮನುಜನ ದೇಹದ ಮೇಲೆ ಆಗಾಗ ಸೂರ್ಯನ ಕಿರಣಗಳು ಬೀಳುತ್ತಿರಬೇಕು ಸಂಜೆ ವೇಳೆಯ ಸೂರ್ಯ ರಶ್ಮೀಯಲ್ಲಿ ಡಿ ವಿಟಮಿನ್ ಹೆಚ್ಚಾಗಿರುತ್ತದೆ ಆದ ಕಾರಣದಿಂದ ಸಂಜೆ ವೇಳೆಯಲ್ಲಿ ಅರ್ಥ ಗಂಟೆಯಾದರೂ ಸೂರ್ಯನ ಕಿರಣಗಳು ಮನುಷ್ಯನ ದೇಹದ ಮೇಲೆ ಬೀಳುವಂತೆ ಮಾಡಿಕೊಳ್ಳಬೇಕು ಸೂರ್ಯ ರಶ್ಮಿಯು ಮನುಜನ ದೇಹದ ಮೇಲೆ ಆಗಾಗ ಬೀಳುತ್ತಿದ್ದರೆ ಅದರ ಪ್ರತಿಫಲವಾಗಿ ಮನುಜನಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಜೊತೆಗೆ ಮನುಜನಲ್ಲಿ ಹಸಿವು ಹೆಚ್ಚಾಗುತ್ತದೆ ನಿದ್ರೆಯು ಸಮೃದ್ಧಿಯಾಗಿ ಬರಲು ಹೆಚ್ಚು ಸಹಾಯಕಾರಿ ಆಗುತ್ತದೆ ಅಂಟು ರೋಗಗಳು ಬಾರದಂತೆ ತಡೆಯುವ ಶಕ್ತಿಯೂ ನಮ್ಮ ದೇಹಕ್ಕೆ ಹೆಚ್ಚಾಗುತ್ತದೆ ನಮ್ಮ ದೇಹದ ಮೇಲೆ ಆಗಾಗ ಸೂರ್ಯನ ರಶ್ಮಿಯು ಬಿಳುವುದರಿಂದ ನಮ್ಮ ದೇಹದಲ್ಲಿ ಕೆಲವು ಕ್ರಿಮಿಗಳು ನಾಶವಾಗುತ್ತವೆ.

ಸೂರ್ಯ ರಶ್ಮಿಯು ದೇಹದ ಮೇಲೆ ಬೀಳದೆ ಇದ್ದರೆ ಮನುಜನನ್ನು ಬಗೆ ಬಗೆಯ ರೋಗಗಳು ಆವರಿಸುತ್ತದೆ ಪ್ರಮುಖವಾಗಿ ಚರ್ಮದ ರೋಗವು ಹೆಚ್ಚಾಗಿ ಆವರಿಸುತ್ತದೆ ಸೂರ್ಯ ರಶ್ಮಿಯೂ ಹೆಚ್ಚಾಗಿ ಬೀಳುವುದರಿಂದ ಚರ್ಮವು ಕಪ್ಪಾಗುತ್ತದೆ ಎಂದು ಕೆಲವರು ಭಾವಿಸುತ್ತಾರೆ ಆ ಭಾವನೆ ಅಸತ್ಯವೇನಲ್ಲ ಸೂರ್ಯ ರಶ್ಮಿಯೂ ಬಹಳ ಹೆಚ್ಚಾಗಿ ದೇಹದ ಮೇಲೆ ಬೀಳುವ ಕಾರಣದಿಂದ ದೇಹದ ಬಣ್ಣ ಕಪ್ಪಗಾಗಬಹುದು ಆದರೆ ಸೂರ್ಯ ರಶ್ಮಿಯೇ ಬೀಳದೆ ಇದ್ದಲ್ಲಿ ದೇಹದ ಚರ್ಮವು ಕಡ್ಡಾಯವಾಗಿ ಅನಾರೋಗ್ಯಕ್ಕೆ ಒಳಗಾಗುತ್ತದೆ.

ಸೂರ್ಯ ರಶ್ಮಿಯೂ ದೇಹದ ಮೇಲೆ ಬೀಳದಿದ್ದರೆ ನಿದ್ರಾಹೀನತೆ ಚರ್ಮರೋಗ ಅಜೀರ್ಣ ಮುಂತಾದ ರೋಗಗಳು ಆವರಿಸುತ್ತದೆ ಹಾಗೆಂದು ಸೂರ್ಯ ರಶ್ಮಿಯು ಯಥೇಚ್ಛವಾಗಿ ನಮ್ಮ ದೇಹದ ಮೇಲೆ ಬೀಳುವಂತೆ ನಾವು ಮಾಡಿಕೊಂಡುರೂ ಸಹ ನಮ್ಮ ದೇಹದ ಚರ್ಮವು ಕೆಡುತ್ತದೆ ಆಯಾಸ ಹೆಚ್ಚಾಗುತ್ತದೆ ಆದುದರಿಂದ ಸೂರ್ಯ ರಶ್ಮಿಯು ನಮ್ಮ ದೇಹದ ಮೇಲೆ ಬೀಳದೇ ಇರುವಂತೆ ನಾವು ಪ್ರವರ್ತಿಸಬಾರದು ಹೆಚ್ಚಾಗಿ ಬೀಳುವಂತೆಯೂ ಮಾಡಿಕೊಳ್ಳಬಾರದು ದಿನಕ್ಕೆ ಅರ್ಧ ಗಂಟೆಯಾದರೂ ಸೂರ್ಯನ ಕಿರಣಗಳು ನಮ್ಮ ದೇಹದ ಮೇಲೆ ಬೀಳುವಂತೆ ನಾವು ಜಾಗ್ರತೆ ವಹಿಸಬೇಕು ಆ ಸೂರ್ಯ ಕಿರಣಗಳು ಸಂಜೆ 5 ಗಂಟೆಯ ಸೂರ್ಯ ಕಿರಣಗಳಾಗಿರಬೇಕು ಆಗ ನಮ್ಮಗೆ ವಿಟಮಿನ್ ಡಿ ದೊರೆಯುತ್ತದೆ ನಮ್ಮ ಚರ್ಮದ ಆರೋಗ್ಯವು ಸುರಕ್ಷಿತವಾಗಿರುತ್ತದೆ ನಮಗೆ ನಿದ್ರೆಯು ಸಮೃದ್ಧಿಯಾಗಿ ಬರುತ್ತದೆ ನಮಗೆ ಗಾಳಿ ನೀರು ಆಹಾರ ವ್ಯಾಯಾಮ ಹೇಗೆ ಮುಖ್ಯವೋ ಅದೇ ರೀತಿ ಸೂರ್ಯನ ಕಿರಣಗಳು ದೇಹದ ಮೇಲೆ ಪ್ರತಿನಿತ್ಯ ಅರ್ಧ ಗಂಟೆಯಾದರೂ ಬೀಳುವುದು ನಮ್ಮ ಆರೋಗ್ಯ ದೃಷ್ಟಿಯಿಂದ ಬಹಳ ಮುಖ್ಯ.

ಪಾರ್ಶ್ವವಾಯು ಮತ್ತು ಕ್ಯನ್ಸೆರ್ ಕಾಯಿಲೆ ತಡೆಗಟ್ಟುವ ಕಡಲೆಕಾಯಿ.. ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ..!!

ಕಡಲೇಕಾಯಿ ಕೇಂದ್ರೀಯ ಅಮೆರಿಕಾದಲ್ಲಿ ಹುಟ್ಟಿದೆ ಎಂದು ಭಾವಿಸಲಾಗಿದೆ ಮತ್ತು ಸ್ಪ್ಯಾನಿಷ್ ಅನ್ವೇಷಕರಿಂದ ಇದು ಪ್ರಪಂಚದ ಉಳಿದ ಭಾಗಗಳಿಗೆ ಹರಡಿತು, ಚೀನಾ, ಭಾರತ, ಆಫ್ರಿಕನ್ ರಾಷ್ಟ್ರಗಳು ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಇಂದು, ಇದು ವ್ಯಾಪಕವಾಗಿ ಬೆಳೆದ ಎಣ್ಣೆ ಬೀಜಗಳಲ್ಲಿ ಒಂದಾಗಿದೆ ಮತ್ತು ಪ್ರಮುಖ ವಾಣಿಜ್ಯ ಬೆಳೆಗಳನ್ನು ಸ್ಥಾಪಿಸಿದೆ, ಬೀಜ ಬಿತ್ತನೆಯ ನಂತರ ಬೆಳೆ ಬರಲು ಕಡಲೆಕಾಯಿ ಸಸ್ಯ ಸುಮಾರು 120 ರಿಂದ 150 ದಿನಗಳನ್ನು ತೆಗೆದುಕೊಳ್ಳುತ್ತದೆ.

ಕಡಲೇಕಾಯಿ 100 ಗ್ರಾಂಗೆ 567 ಕ್ಯಾಲೋರಿಗಳು ಸಿಗುತ್ತದೆ ಪೋಷಕಾಂಶಗಳು, ಖನಿಜಗಳು ಸಮೃದ್ಧವಾಗಿವೆ ಆಂಟಿಆಕ್ಸಿಡೆಂಟ್ಗಳು ಮತ್ತು ವಿಟಮಿನ್ಗಳನ್ನು ಉತ್ತಮ ಆರೋಗ್ಯಕ್ಕೆ ಸಹಾಯದಾಯಕ, ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ರಕ್ತದಲ್ಲಿ ಹೆಚ್ಚಿಸುವುದರಿಂದ ಕೊಬ್ಬಿನಾಮ್ಲಗಳು ಕಡಲೇಕಾಯಿ ಯಲ್ಲಿ ಸಮೃದ್ಧವಾಗಿದೆ ಇದರಿಂದ ಸ್ಟ್ರೋಕ್ ( ಲಕ್ವ ) ಕಾಯಿಲೆಯ ಅಪಾಯ ದೂರವಾಗುತ್ತದೆ.

ಉಪ್ಪು ಹಾಕಿ ಬೇಯಿಸಿ ಕಡಲೇಕಾಯಿಯನ್ನು ತಿನ್ನುವುದರಿಂದ ಎಷ್ಟೋ ಉಪಯೋಗಗಳು ಇದೆ ಎಂದು ವೈದ್ಯರು ಹೇಳುತ್ತಾರೆ, ಡ್ರೈ ಫ್ರೂಟ್ಸ್ ಗೆ ಸಮವಾದ ಪೌಷ್ಟಿಕಾಂಶಗಳು ಕದಲೆಯಲ್ಲಿದೆ, ಬೇಯಿಸಿದ ಕಡಲೆಕಾಯಿಯನ್ನು ಕ್ರಮವಾಗಿ ತಿನ್ನುವುದರಿಂದ ಕ್ಯನ್ಸೆರ್ ನಂತ ಮಹಾಮಾರಿ ಖಾಹಿಲೆಯನ್ನು ಬರದಂತೆ ನೋಡಿಕೊಳ್ಳಬಹುದು, ಕದಲೆಕಾಯಿಯಲ್ಲಿ ಫೈಬರ್ ಹೆಚ್ಚಾಗಿರುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗಿ ಮಲಬದ್ದತೆಯಂತಹ ಸಮಸ್ಯೆ ಇಂದ ದೂರಮಾಡುತ್ತದೆ.