ಒಣದ್ರಾಕ್ಷಿ ಸೇವಿಸುವುದರಿಂದ ಎಲುಬುಗಳು ಬಲಗೊಳ್ಳುವುದು ರಕ್ತ ವೃದ್ಧಿಯಾಗುವುದು ಇನ್ನು ಅನೇಕ ಉಪಯೋಗಗಳಿಗಾಗಿ ಒಮ್ಮೆ ಓದಿ..!!

ಒಣದ್ರಾಕ್ಷಿಯಲ್ಲಿ ಪ್ರತಿಶತ ಎಂಬತರಷ್ಟು ಸಕ್ಕರೆಯ ಅಂಶವಿದೆ ಈ ಸಕ್ಕರೆಯು ದೇಹದೌರ್ಬಲ್ಯವನ್ನು ನಿವಾರಿಸುವುದು ಕ್ಷಯರೋಗಿಗಳು ಒಣ ದ್ರಾಕ್ಷಿ ಸೇವಿಸುವುದರಿಂದ ರಕ್ತ ಸಂಚಯವಾಗುವುದು ಯಾವುದೇ ರೋಗದ ಚಿಕಿತ್ಸೆಯ ಅವಧಿಯಲ್ಲಿ ಒಣದ್ರಾಕ್ಷಿ ಸೇವಿಸುತ್ತಿದ್ದರೆ ರೋಗ ಬೇಗ ಗುಣವಾಗುವುದು.

ಚರಕ ಮುನಿಗಳ ಪ್ರಕಾರ ಫಲಗಳಲ್ಲಿ ಒಣದ್ರಾಕ್ಷಿಯ ಶ್ರೇಷ್ಠ ಒಣದ್ರಾಕ್ಷಿಯನ್ನು ಒಂದೆರಡು ತಿಂಗಳ ಕಾಲ ಆಹಾರವಾಗಿ ಬಳಸುತ್ತಿದ್ದರೆ ಗುಣಪಡಿಸಲಾಗದ ರೋಗಗಳು ಗುಣವಾಗಿರುವ ಸಂದರ್ಭಗಳು ಉಂಟು ಆದರೆ ಈ ಅವಧಿಯಲ್ಲಿ ಮತ್ತಾವ ಆಹಾರವನ್ನು ಸೇವಿಸಬಾರದು.

ರಾತ್ರಿಯ ವೇಳೆ ಒಂದು ಹಿಡಿ ಒಣದ್ರಾಕ್ಷಿಯನ್ನು ನೀರಿನಲ್ಲಿ ಅಥವಾ ಹಾಲಿನಲ್ಲಿ ಅಥವಾ ಮೊಸರಿನಲ್ಲಿ ನೆನೆಹಾಕಿ ಮರುದಿನ ಬೆಳಗ್ಗೆ ನೀರು ಅಥವಾ ಹಾಲು ಅಥವಾ ಮೊಸರಿನ ಸಮೇತ ದ್ರಾಕ್ಷಿಯನ್ನು ಸೇವಿಸುವುದು ಉತ್ತಮ ಇದು ಸಂತುಲನ ಭೋಜನಕ್ಕೆ ಸಮ ದ್ರಾಕ್ಷಿಯನ್ನು ಆಹಾರದೊಂದಿಗೆ ಬಳಸುವುದರಿಂದ ನಾವು ಸೇವಿಸುವ ಆಹಾರವು ಅತ್ಯಂತ ರುಚಿಕರವೂ ಪುಷ್ಠಿಕರವೂ ಆಗಿರುವುದು.

ಒಣದ್ರಾಕ್ಷಿ ಸೇವಿಸುವುದರಿಂದ ಮಲಬದ್ಧತೆ ಅಜೀರ್ಣ ಲೈಂಗಿಕ ಅಶಕ್ತತೆ ನಿವಾರಣೆಯಾಗುವುದು ದೇಹದಲ್ಲಿ ಲವಲವಿಕೆ ಉಂಟಾಗುವುದು.

ಒಣದ್ರಾಕ್ಷಿಯಲ್ಲಿ ಕಬ್ಬಿನ ಮತ್ತು ಸುಣ್ಣದ ಅಂಶವಿರುವುದು ಈ ಹಣ್ಣನ್ನು ಸೇವಿಸುವುದರಿಂದ ಎಲುಬುಗಳು ಬಲಗೊಳ್ಳುವುದು ರಕ್ತ ವೃದ್ಧಿಯಾಗುವುದು ಮತ್ತು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ಒಂದು ಹಿಡಿ ಒಣದ್ರಾಕ್ಷಿಯನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಮರುದಿನ ಬೆಳಿಗ್ಗೆ ಆ ನೀರಿನಲ್ಲಿ ದ್ರಾಕ್ಷಿಯನ್ನು ಚೆನ್ನಾಗಿ ಕಿವುಚಿ ನೀರನ್ನು ಬಸಿಯಿರಿ ಹೀಗೆ ಬಸಿದ ನೀರನ್ನು ಕುಡಿಯುತ್ತಿದ್ದರೆ ಹಳೆಯ ಚರ್ಮ ರೋಗಗಳು ಬೇಗ ಗುಣವಾಗುವುದು.

ಜೊತೆಗೆ ಇದನ್ನು ಓದಿ ನೇರಳೆ ಹಣ್ಣಿನ ರಸ ಜೀರ್ಣಕಾರಕ ಪಿತ್ತ ಶಾಮಕ ಮತ್ತು ದಾಹ ನಾಶಕ ಗುಣವುಳ್ಳದು.

ನೇರಳೆ ಹಣ್ಣನ್ನು ಚೆನ್ನಾಗಿ ಸೇವಿಸುವುದರಿಂದ ಕೆಮ್ಮು ಬರುವುದು ಆದರೆ ಉಪ್ಪು ಮತ್ತು ಕರಿಮೆಣಸಿನ ಪುಡಿಯೊಂದಿಗೆ ನೇರಳೆ ಹಣ್ಣು ತಿಂದರೆ ಯಾವ ಹಾನಿಯೂ ಆಗದು.

ನೇರಳೆ ಹಣ್ಣಿನ ರಸದಿಂದ ಶರಬತ್ತು ತಯಾರಿಸಬಹುದು ಈ ಶರಬತ್ತನ್ನು ಸೇವಿಸುವುದರಿಂದ ನೀರಿನಂತಾಗುವ ಭೇದಿ ನಿಲ್ಲುವುದು.

ಅಂಗಾಲು ಅಂಗೈ ಉರಿ ಕಣ್ಣುರಿ ಮೂಲವ್ಯಾಧಿ ಅಲ್ಪಾಂಶ ಮೂತ್ರ ವಿಸರ್ಜನೆ ಕಣ್ಣಿಗೆ ನಿದ್ದೆ ಹತ್ತದಿರುವುದು ಈ ಸಂದರ್ಭ ಗಳಲ್ಲಿ ಒಂದು ಬಟ್ಟಲು ನೇರಳೆಹಣ್ಣಿನ ಶರಬತ್ತನ್ನು ಒಂದು ಊಟದ ಚಮಚ ಜೇನುತುಪ್ಪದೊಂದಿಗೆ ಸೇವಿಸಿದರೆ ಗುಣ ಉಂಟು.

ಎಳೆ ನೇರಳೆ ಎಲೆಗಳ ಕಷಾಯ ತಯಾರಿಸಿ ನಾಲ್ಕೈದು ಊಟದ ಚಮಚ ಕಷಾಯವನ್ನು ದಿನಕ್ಕೆ ಮೂರಾವರ್ತಿಯಂತೆ ಸೇವಿಸಿದರೆ ಆಮಶಂಕೆ ಮೂಲವ್ಯಾದಿ ಈ ರೋಗಗಳಿಂದನರಳುವವರು ಗುಣಮುಖರಾಗುವರು.

ನೇರಳೆ ಎಲೆಗಳನ್ನು ಅರೆದು ಹಚ್ಚುವುದರಿಂದ ಸುಟ್ಟ ಗಾಯದ ಕಲೆಗಳು ಕ್ರಮೇಣ ಅಳಿಸಿ ಹೋಗುವುದು.

ಎಳೆಯ ನೇರಳೆ ಎಲೆಗಳನ್ನು ಹಲ್ಲುಗಳಿಂದ ಚೆನ್ನಾಗಿ ಅಗಿಯುವುದರಿಂದ ವಸಡು ಮತ್ತು ಹಲ್ಲುಗಳಿಂದ ಆಗುವ ರಕ್ತಸ್ರಾವ ನಿಲ್ಲುವುದು ಹಲ್ಲುಗಳು ಗಟ್ಟಿಯಾಗುವುದು ಬಾಯಿಯಿಂದ ದುರ್ಗಂಧ ಹೊರಡುವುದಿಲ್ಲ.

ನಿಮ್ಮ ಊಟದೊಂದಿಗೆ ಈ ಹಣ್ಣುನ್ನು ತಿಂದರೆ ನಿಮಗೆ ಯಾವ ಅರೋಗ್ಯ ಸಮಸ್ಯೆಯು ಬರುವುದಿಲ್ಲ..!!

ಹಣ್ಣುಗಳು ಎಂದರೆ ಅರೋಗ್ಯ ಎಂದರೆ ತಪ್ಪಾಗಲಾರದು ಪ್ರತಿಯೊಂದು ಹಣ್ಣಿಗಳು ತನ್ನದೇ ಆದ ಗುಣ ಹಾಗು ಶಕ್ತಿಯನ್ನು ಹೊಂದಿರುತ್ತವೆ, ಪ್ರತಿಯೊಂದು ಹಣ್ಣನ್ನು ತಿನ್ನಲು ಕೆಲವು ಸಮಯಾಗು ಇರುತ್ತದೆ ಅಂತ ಏನು ಇಲ್ಲ ಯಾವಾಗ ಬೇಕಾದರೂ ಮನಸೋ ಇಚ್ಛೆ ತಿನ್ನಬಹುದು ಆದರೆ ಪಪ್ಪಾಯ ಹಣ್ಣಿನ ಅಧ್ಯನ ಹೇಳುವ ಪ್ರಕಾರ ಈ ಹಣ್ಣನ್ನು ನಿಮ್ಮ ಊಟದ ಜೊತೆ ಸೇರಿಸಿ ದಿನವೂ ತಿನ್ನುವ ಅಭ್ಯಾಸ ಮಾಡಿಕೊಂಡರೆ ಎಷ್ಟೆಲ್ಲಾ ಲಾಭ ಇದೆ ಅಂತ ಇಂದು ತಿಳಿಯೋಣ.

ಮೊದಲನೆಯದಾಗಿ ಪಪ್ಪಾಯದಲ್ಲಿ ಅಧಿಕ ಫೈಬರ್ ಅಂಶವಿದೆ ಇದು ನಿಮ್ಮ ಆಹಾರ ಪಚನಕ್ರಿಯೆಯನ್ನ ಸುಲಭ ಮಾಡುತ್ತದೆ, ಇದರಿಂದ ಆಹಾರ ಉತ್ತಮವಾಗಿ ಜೀರ್ಣವಾಗುತ್ತದೆ, ಮಲ ಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.

ನಿಮ್ಮ ದಿನ ನಿತ್ಯದ ಆಹಾರದಲ್ಲಿ ಸರಿಯಾದ ಪೌಷ್ಟಿಕಾಂಶ ದೊರೆತಿಲ್ಲ ಅಂದರೆ ಚಿಂತೆ ಬೇಡ ಕಾರಣ ಪಪ್ಪಾಯದಲ್ಲಿ ವಿಟಮಿನ್​ಗಳು ಸಮೃದ್ಧವಾಗಿವೆ. ಆ್ಯಂಟಿಆಕ್ಸಿಡೆಂಟ್​ ಆಗಿರುವ ವಿಟಮಿನ್​ ಎ, ಇ ಹಾಗೂ ಸಿ ಪಪ್ಪಾಯದಲ್ಲಿವೆ ಜೊತೆಗೆ ವಿಟಮಿನ್​ ಬಿ, ಮಿನರಲ್ಸ್​ಗಳು ಕೂಡ ಇರುವುದರಿಂದ ಇದು ಜೀವಕೋಶಗಳ ಮರುಹುಟ್ಟಿಗೆ ಸಹಾಯ ಮಾಡುತ್ತದೆ.

ಪಪ್ಪಾಯಾದಲ್ಲಿ ಪಾಪಿನ್​ ಹಾಗೂ ಕೈಮೊಪಾಪಿನ್​ ಎಂಬ ಕಿಣ್ವಗಳಿರುತ್ತವೆ ಇವು ಉರಿಯೂತವನ್ನು ಕಡಿಮೆ ಮಾಡಿ ದೀರ್ಘಕಾಲದ ಸಮಸ್ಯೆಯನ್ನು ಶಮನಗೊಳಿಸುತ್ತದೆ ಜೊತೆಗೆ ಆರ್ಥರೈಟಿಸ್​ನಂತಹ ಸಮಸ್ಯೆಯನ್ನೂ ಕಡಿಮೆ ಮಾಡುತ್ತದೆ.

ಅಂದದ ತ್ವಚೆಗೂ ಪಪ್ಪಾಯ ಸಹಾಯ ಮಾಡುತ್ತದೆ, ವಿಟಮಿನ್​ ಇ ಅಂಶ ಜೀವಕೊಶಗಳು ಹಾನಿಗೊಳಗಾಗುವುದನ್ನು ತಡೆಯುತ್ತದೆ, ಜೊತೆಗೆ ವಯಸ್ಸಿಗೂ ಮುಂಚೆ ನೆರಿಗೆಗಳು ಮೂಡುವುದನ್ನು ತಡೆಯುತ್ತದೆ, ಪಪ್ಪಾಯದಲ್ಲಿರುವ ಅಗತ್ಯ ಎಣ್ಣೆಯಂಶವು ತ್ವಚೆಯನ್ನು ಮಾಯಿಶ್ಚರೈಸ್​ ಮಾಡುತ್ತದೆ.

ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದರಿಂದ ರಕ್ತ ಸಂಚಾರಕ್ಕೆ ತೊಡಕು ಉಂಟಾಗುತ್ತದೆ ಕೆಲವೊಂದು ಸಲ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವುದರಿಂದ ಹಾರ್ಟ್​ ಅಟ್ಯಾಕ್​ ಆಗುವ ಸಂಭವ ಇರುತ್ತದೆ, ಪಪ್ಪಾಯದಲ್ಲಿ ಫೈಬ್ರಿನ್​ ಎನ್ನುವ ಪದಾರ್ಥ ಇರುವುದರಿಂದ ಇದು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ.

ನಿಮಗೇನಾದರೂ ದಿನ ದಾಳಿಂಬೆ ತಿನ್ನುವ ಅಭ್ಯಾಸ ಇದ್ದರೆ ಮೊದಲು ಇಲ್ಲಿ ಓದಿ..!!

ಯಾವುದೇ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ಆ ಕಾಲದಲ್ಲಿ ಸಿಹಿ ದಾಳಿಂಬೆ ಹಣ್ಣನ್ನು ಸೇವಿಸುತ್ತ ಬಂದಲ್ಲಿ ರೋಗದಿಂದ ಬೇಗ ಮುಕ್ತರಾಗಬಹುದು ಸಿಹಿ ದಾಳಿಂಬೆ ಹಣ್ಣಿನ ರಸ ಪಿತ್ತ ಶಾಮಕ ಗುಣವುಳ್ಳದ್ದು ದೇಹಕ್ಕೆ ಶಕ್ತಿಯನ್ನು ಕೊಡುವುದು ಹೃದಯ ಯಕೃತ್ತು ಮತ್ತು ಮೂತ್ರ ಪಿಂಡಗಳ ಕ್ರಿಯೆಗೆ ಚೈತನ್ಯ ತಂದು ಕೊಡುವುದು ಮತ್ತು ರೋಗಿಯಲ್ಲಿ ಪ್ರಬಲ ರೋಗ ನಿರೋಧಕ ಶಕ್ತಿಯನ್ನು ಬೆಳೆಸುವುದು.

ಒಂದು ಊಟದ ಚಮಚ ಹುಳಿ ದಾಳಿಂಬೆ ಹಣ್ಣಿನ ರಸವನ್ನು ಅಷ್ಟೇ ಪ್ರಮಾಣ ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಹಲವಾರು ಶರೀರ ಸಂಬಂಧ ರೋಗಗಳು ಗುಣವಾಗುವುದು ಮಾನಸಿಕ ಒತ್ತಡ ಮತ್ತು ನರಗಳ ದೌರ್ಬಲ್ಯದಿಂದ ತಲೆದೋರುವ ತಲೆಶೂಲೆಗೆ ಇದು ಅತ್ಯುತ್ತಮ ಚಿಕಿತ್ಸೆ ಈ ಹಣ್ಣಿನ ರಸ ದೃಷ್ಟಿ ದೋಷಗಳನ್ನು ನಿವಾರಿಸಬಲ್ಲದು.

ಪಿತ್ತಾದಿಕ್ಯದಿಂದ ನರಗಳು ರೋಗಿಗಳು ಹುಳಿ ದಾಳಿಂಬೆಯನ್ನು ಸೇವಿಸುವುದರಿಂದ ಪಿತ್ತ ಪ್ರಕೋಪಗಳುವ ಸಂಭವಉಂಟು.

ದಾಳಿಂಬೆ ಹಣ್ಣಿನ ಬೀಜಗಳನ್ನು ಅಗಿದು ನುಂಗಿದರೂ ಸರಿಯೇ ಅಥವಾ ಉಗುಳಿದರೂ ಸರಿಯೇ ಆದರೆ ಬೀಜಗಳನ್ನು ಉಂಡೆಯಾಗಿ ನುಂಗಿದರೆ ಆರೋಗ್ಯ ಕೇಡುವುದು.

ದಾಳಿಂಬೆ ಹಣ್ಣಿನ ಬೀಜಗಳನ್ನು ಚೆನ್ನಾಗಿ ಅರೆದು ನೀರಿನೊಂದಿಗೆ ಕುದಿಸುವುದರಿಂದ ಆಮಶಂಕೆ ಅತಿಸಾರ ಹತೋಟಿಗೆ ಬರುವುದು.

ದಾಳಿಂಬೆ ಹಣ್ಣಿನಿಂದ ಬೀಜಗಳನ್ನು ತಿಳಿದುಕೊಂಡ ನಂತರ ಉಳಿಯುವ ದಿಂಡು ಆಮಶಂಕೆ ಮತ್ತು ಅತಿಸಾರ ತಡೆಗಟ್ಟಲು ಸಿದ್ಧೌಷಧಿ ದಿಂಡಿನ ಕಷಾಯವನ್ನು ಮೆಂತ್ಯದ ಕಷಾಯದೊಂದಿಗೆ ಮಿಶ್ರಮಾಡಿ ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಗುಣವಾಗುವುದು ಈ ದಿಂಡಿನ ಕಷಾಯಕ್ಕೆ ಅಡುಗೆ ಉಪ್ಪು ಸೇರಿಸಿ ಬಾಯಿಗ ಮುಕ್ಕಳಿಸಿದರೆ ಗಂಟಲು ನೋವು ಹಲ್ಲು ನೋವು ಬಾಯಿಹುಣ್ಣು ಗುಣವಾಗುವುದು.

ದಾಳಿಂಬೆ ಚಿಗುರನ್ನು ಹಲ್ಲುಗಳಿಂದ ಆಗಿರುವುದರಿಂದ ವಸಡಿನಿಂದಾಗುವ ರಕ್ತಸ್ರಾವ ನಿಲ್ಲುವುದು ಹಲ್ಲು ನೋವು ಕಡಿಮೆಯಾಗುವುದು.

ದಾಳಿಂಬೆ ಎಲೆಗಳನ್ನು ನುಣ್ಣಗೆ ಅರೆದು ಸುಟ್ಟಗಾಯಕ್ಕೆ ಲೇಪಿಸಿದರೆ ಉರಿ ಶಾಂತವಾಗುವುದು ಇದನ್ನು ಮೈಗೆ ಹಚ್ಚುವುದರಿಂದ ಚರ್ಮ ರೋಗಗಳ ನಿಮಿತ್ತ ದೇಹದಲ್ಲಿ ಹುಟ್ಟುವ ದುರ್ಗಂಧ ನಿವಾರಣೆಯಾಗುವುದು.

ನುಗ್ಗೆ ಸೊಪ್ಪು ಲೈಂಗಿಕ ಶಕ್ತಿ ಜೊತೆಗೆ ಈ ರೋಗಗಳನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದೆ..!!

ಹಳ್ಳಿಗಳಲ್ಲಿ ಹೆಚ್ಚಾಗಿ ಸಿಗುವ ನುಗ್ಗೆಗಿಡದ ಸೊಪ್ಪು ತಿನ್ನಲು ವಿಶೇಷ ರುಚಿಯನ್ನು ಹೊಂದಿದ್ದು ಆರೋಗ್ಯಕ್ಕೂ ಪೂರಕವಾಗಿರುವ ನುಗ್ಗೆಸೊಪ್ಪನ್ನು ಆಷಾಢ ಮಾಸದಲ್ಲಿ ಹೆಚ್ಚಾಗಿ ಬಳಕೆ ಮಾಡುತ್ತಾರೆ.

ಒಂದಿಡಿ ನುಗ್ಗೆ ಸೊಪ್ಪು ತಿಂದರೆ ಒಂದು ಲೋಟ ಹಾಲು, ಒಂದು ಲೋಟ ಕಿತ್ತಳೆ ಹಣ್ಣಿನ ರಸ ಹಾಗೂ 7 ಬಾಳೆಹಣ್ಣು ತಿನ್ನುವುದಕ್ಕೆ ಸಮ, ಹೌದು ನುಗ್ಗೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ, ಪೊಟಾಶಿಯಂ ವಿಟಮಿನ್ ಸಿ ಮತ್ತು ಕಣ್ಣಿನ ದೃಷ್ಟಿಗೆ ಅವಶ್ಯಕವಾದ ಜೀವಸತ್ವ ಎ ಹೇರಳವಾಗಿದೆ, ಇಂತ ನುಗ್ಗೆ ಸೊಪ್ಪನ್ನು ಪ್ರತಿ ದಿನ್ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಸೇವಿಸುವುದರಿಂದ ಹಲವು ರೋಗಗಳಿಂದ ದೂರವಿರುಬಹುದು.

ಲೈಂಗಿಕ ನಿಶ್ಶಕ್ತಿ ಎನ್ನುವುದು ವಯಸ್ಸಾದಂತೆ ಕಾಡುವ ತೀರಾ ಸಾಮಾನ್ಯ ಖಾಯಿಲೆಗಳಲ್ಲೊಂದು ನುಗ್ಗೆಸೊಪ್ಪಿನಲ್ಲಿ ಲೈಂಗಿಕ ಶಕ್ತಿ ಜಾಗೃತಗೊಳಿಸುವ ತಾಕತ್ತು ಇರುವಂತೆಯೇ ಜೀವನಿರೋಧಕ ಶಕ್ತಿಯೂ ಹೇರಳವಾಗಿದೆ ನುಗ್ಗೆ ಸೊಪ್ಪು ಬಳಸಿ ಪ್ರತಿದಿನ ಚಹಾ ಮಾಡಿಕೊಂಡು ಕುಡಿಯುವುದರಿಂದ ಕಳೆದುಹೋದ ಲೈಂಗಿಕ ಶಕ್ತಿಯನ್ನು ಮತ್ತೆ ಪಡೆಯಬಹುದು.

ನುಗ್ಗೆಸೊಪ್ಪಿನ ಸಾರು ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ಮಾತೆಯರಿಗೆ ಉತ್ತಮ ಪೋಷಕಾಂಶಗಳಿಂದ ಕೂಡಿದ ಆಹಾರ ಈ ಸಾರನ್ನು ಅಬಾಲವೃದ್ದಿಯಾದಿಯಾಗಿ ಬಳಸಬಹುದು.

ಬೇಯಿಸಿ ಬಸಿದ ನುಗ್ಗೆಸೊಪ್ಪಿನ ರಸಕ್ಕೆ ನಿಂಬೆ ರಸ ಹಿಂಡಿ ಸೇವಿಸಬೇಕು ಒಂದು ವಾರ ಕಾಲ ಪ್ರತಿದಿನ ಬೆಳಿಗ್ಗೆ ಒಂದು ಬಟ್ಟಲು ರಸ ಸೇವಿಸುತ್ತಿದ್ದರೆ ತಲೆ ಸುತ್ತುವಿಕೆ ನಿವಾರಣೆಯಾಗುತ್ತದೆ.

ಒಂದೇ ಪಾಶ್ರ್ವದಲ್ಲಿ ತಲೆ ನೋಯುತ್ತಿದ್ದರೆ, ನಾಲ್ಕೈದು ತೊಟ್ಟು ನುಗ್ಗೆ ಸೊಪ್ಪಿನ ರಸವನ್ನು ಎಡ ಪಾಶ್ರ್ವದಲ್ಲಿ ತಲೆ ನೋವಿದ್ದರೆ ಬಲ ಕಿವಿಗೂ, ಬಲ ಪಾಶ್ರ್ವದಲ್ಲಿ ತಲೆ ನೋವಿದ್ದರೆ ಎಡಕಿವಿಗೂ ಬಿಡುವುದರಿಂದ ಗುಣಮುಖ ಕಂಡುಬರುತ್ತದೆ. ಈ ಕ್ರಮವನ್ನು ದಿನಕ್ಕೆ ಒಂದಾವರ್ತಿಯಂತೆ ಮೂರು ದಿನಗಳವರೆಗೆ ಮಾಡುವುದು ಅಗತ್ಯ.

ದೇಹದಲ್ಲಾದ ಯಾವುದೇ ಗಾಯವನ್ನು ಬೇಗನೆ ಶಮನಗೊಳಿಸುವ ಶಕ್ತಿ ಹೊಂದಿರುವ ನುಗ್ಗೆಸೊಪ್ಪಿನ ಚಹಾ ನಿತ್ಯ ಸೇವಿಸುತ್ತಿದ್ದರೆ ರಕ್ತದೊತ್ತಡ, ಸಕ್ಕರೆ ಖಾಯಿಲೆಯನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಅತೀ ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿರುವ ನುಗ್ಗೆಸೊಪ್ಪು ನಿಮ್ಮ ಆರೋಗ್ಯಕ್ಕೆ ರಾಮಬಾಣವಾಗಿದೆ.

ಪುರುಷ ನರ ದೌರ್ಬಲ್ಯ ನಿವಾರಣೆಗೆ ಖರ್ಜೂರವನ್ನು ಕಪ್ಪು ಹಸುವಿನ ಹಾಲಿನೊಂದಿ ಹೀಗೆ ಮಾಡಿ ಸೇವಿಸಿ..!!

ಖರ್ಜೂರ ಶಕ್ತಿವರ್ಧಕ ಹಾರ, ಮಕ್ಕಳಿಗೆ ಕಚ್ಚಿ ತಿನ್ನುವ ಸಲುವಾಗಿ ಖರ್ಜೂರ ಕೊಡುವುದು ಬಹಳ ಒಳ್ಳೆಯದು, ಮಧುಮೇಹ ರೋಗಿಗಳು ಸಿಹಿ ತಿನ್ನಲು ಇಚ್ಚಿಸಿದಾಗ ಖರ್ಜೂರ ತಿನ್ನುವುದು ಲೇಸು, ಮೂಲವ್ಯಾಧಿಯಿಂದ ಬಳಲುವವರು ಕರ್ಜೂರ ಸೇವಿಸುವುದರಿಂದ ಗುಣ ಉಂಟು.

ಇನ್ನು ಆಮಶಂಕೆ ಅತಿಸಾರ ರೋಗಗಳಿಂದ ನರಳುವವರು ಕರ್ಜೂರ ಸೇವಿಸುತ್ತಿದ್ದಲ್ಲಿ ಉಪಶಮನವಾಗುವುದು.

ಒಂದು ಹಿಡಿ ಬೀಜ ತೆಗೆದ ಖರ್ಜೂರವನ್ನು ಹಸುವಿನ ಹಾಲಿನಲ್ಲಿ ಇಡೀ ರಾತ್ರಿ ನೆನೆ ಹಾಕಿ, ಮಾರನೆ ದಿನ ಬೆಳಗ್ಗೆ ಖರ್ಜೂರವನ್ನು ಅದೇ ಹಾಲಿನೊಂದಿಗೆ ನುಣ್ಣಗೆ ಅರೆಯಿರಿ, ನಂತರ ಒಂದು ಚಿಟಿಕೆ ಏಲಕ್ಕಿ ಚೂರ್ಣ ಮತ್ತು ಎರಡು ಊಟದ ಚಮಚ ಜೇನು ತುಪ್ಪ ಅದರೊಡನೆ ಬೆರೆಸಿ, ಈ ರಸಾಯನವನ್ನು ಪ್ರತಿದಿನ ಊಟದ ನಂತರ ದಿನಕ್ಕೆ ಎರಡು ಬಾರಿ ಒಂದು ಊಟದ ಚಮಚದಷ್ಟು ಸೇವಿಸುವುದರಿಂದ ರಕ್ತ ವೃದ್ಧಿಯಾಗುವುದು, ಸಂಭೋಗ ಸಾಮರ್ಥ್ಯ ಹೆಚ್ಚುವುದು, ನರ ದೌರ್ಬಲ್ಯ ನಿವಾರಣೆಯಾಗುವುದು, ಸಂತಾನ ಶಕ್ತಿ ವೃದ್ಧಿಯಾಗುವುದು ಮತ್ತು ಗರ್ಭಿಣಿಯರಿಗೆ ಉತ್ತಮ ಆಹಾರ.

ಜೊತೆಯಲ್ಲಿ ಓದಿ ಕರ್ಬೂಜ ಹಣ್ಣಿನ ಆರೋಗ್ಯ ಉಪಯೋಗಗಳು.

ಊಟದ ನಂತರ ಈ ಹಣ್ಣನ್ನು ತಿನ್ನುವುದರಿಂದ ಆಹಾರ ಸುಲಭವಾಗಿ ಮತ್ತು ಶೀಘ್ರವಾಗಿ ಜೀರ್ಣವಾಗುವುದು, ತಂಪು ಹೊತ್ತಿನಲ್ಲಿ ಮತ್ತು ಹಸಿದ ಹೊಟ್ಟೆಯಲ್ಲಿ ಈ ಹಣ್ಣು ತಿನ್ನುವುದು ಅನಾರೋಗ್ಯಕರ.

ಕರ್ಬೂಜದ ಹಣ್ಣನ್ನು ಸಕ್ಕರೆಯೊಂದಿಗೆ ತಿನ್ನಬಾರದು, ಬೆಲ್ಲ ವನ್ನಾಗಲಿ ಅಥವಾ ಉಪ್ಪು ಮತ್ತು ಕರಿ ಮೆಣಸಿನ ಪುಡಿ ಮಿಶ್ರಣ ವನ್ನಾಗಲಿ ಬಳಸುವುದು ಆರೋಗ್ಯಕರ.

ಕರ್ಬೂಜದ ಹಣ್ಣು ಸೇವಿಸುವುದರಿಂದ ರಕ್ತ ಶುದ್ಧಿಯಾಗುವುದು ಆದ್ದರಿಂದ ಚರ್ಮ ರೋಗಗಳಿಂದ ನರಳುವವರು ಈ ಹಣ್ಣು ಹೆಚ್ಚು ಹೆಚ್ಚು ಸೇವಿಸಿ ದರಿಂದ ಸಿಗುತ್ತದೆ.

ಖರ್ಬೂಜದ ಹಣ್ಣಿನ ಬೀಜಗಳನ್ನು ನುಣ್ಣಗೆ ಅರೆದು ಹಾಲಿನಂತಹ ದ್ರವ ತಯಾರಿಸಿ ಅದಕ್ಕೆ ಖರ್ಜೂರ ಮತ್ತು ಜೇನುತುಪ್ಪ ಸೇರಿಸಿ ಸೇವಿಸುತ್ತಿದ್ದರೆ ವೀರ್ಯ ವೃದ್ಧಿಯಾಗುವುದು ಮತ್ತು ಸಂಭೋಗ ಕ್ರಿಯೆಯಲ್ಲಿ ಆಸಕ್ತಿ, ಹೆಚ್ಚು ಕಾಲ ಸಂಭೋಗ ಕ್ರಿಯೆ ನಡೆಸುವ ಸಾಮರ್ಥ್ಯ ಉಂಟಾಗುವುದು.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಸೌತೆಕಾಯಿ ತಿರುಳನ್ನ ನಿಮ್ಮ ಅಂಗಾಲುಗಳಿಗೆ ತಿಕ್ಕಿದರೆ ಏನಾಗುತ್ತೆ ಗೊತ್ತಾ..?

ಹಸಿರು ಸೌತೆಕಾಯಿ ಗಿಂತ ನಸು ಹಳದಿ ಬಣ್ಣ ಉಳ್ಳ ಸೌತೆಕಾಯಿ ಉತ್ತಮ, ಇದು ಸುಲಭವಾಗಿ ಜೀರ್ಣವಾಗುವ ಕಾಯಿಪಲ್ಲೆ, ಸೌತೆಕಾಯಿಯ ಸಿಪ್ಪೆ ತೆಗೆದು ಬಳಸುವುದು ಸರಿಯಲ್ಲ, ಸಿಪ್ಪೆ ಸಹಿತ ಉಪಯೋಗಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ, ಹಸಿ ಸೌತೆಕಾಯಿಯನ್ನು ಕಾಳುಮೆಣಸಿನ ಪುಡಿ ಮತ್ತು ಉಪ್ಪು ಸಹಿತ ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚುವುದು.

ಸೌತೆಕಾಯಿಯನ್ನು ಸಣ್ಣಗೆ ಹೆಚ್ಚಿ ಮೊಸರಿನೊಂದಿಗೆ ಮಿಶ್ರ ಮಾಡಿ ರುಚಿಗೆ ತಕ್ಕಷ್ಟು ತೆಂಗಿನಕಾಯಿತುರಿ, ಹಸಿಮೆಣಸಿನಕಾಯಿ, ಹಸಿ ಕೊತ್ತಂಬರಿ ಸೊಪ್ಪು, ನಿಂಬೆ ರಸ ಮತ್ತು ಉಪ್ಪು ಸೇರಿಸಿ ಊಟ ಮಾಡುವುದು ಸರ್ವೇಸಾಮಾನ್ಯ, ಇದರೊಂದಿಗೆ ಈರುಳ್ಳಿ ಟೊಮೆಟೋ ಹಣ್ಣು ಮತ್ತು ಕ್ಯಾರೆಟ್ ಸಣ್ಣಗೆ ಹೆಚ್ಚಿ ಮಿಶ್ರ ಮಾಡಿ ಸೇವಿಸುವುದು ಮತ್ತಷ್ಟು ಲಾಭಕರ, ಇದೊಂದು ಆರೋಗ್ಯಕರ ಸಲಾಡ್.

ಹೆಚ್ಚು ಬಾಯಾರಿಕೆ ಯಾಗುತ್ತಿರುವ ಆಗ ಸುಲಭವಾಗಿ ಜೀರ್ಣವಾಗದ ಆಹಾರ ಊಟ ಮಾಡಿದ ನಂತರ ಸೌತೆಕಾಯಿ ತಿನ್ನುವುದು ಉತ್ತಮ.

ಮೂತ್ರ ಕಟ್ಟು, ಉರಿ ಮೂತ್ರ, ಮೂಲವ್ಯಾದಿ ಮತ್ತು ಪಿತ್ತವಿಕಾರಗಳು ಒಳ ರೋಗಿಗಳಿಗೆ ಸೌತೆಕಾಯಿ ಉತ್ತಮ ಆಹಾರ.

ಅತಿಸಾರ, ವಾಂತಿ ಈ ಕಾರಣಗಳಿಂದ ದೇಹದಲ್ಲಿ ಜಲದ ಕೊರತೆ ಉಂಟಾಗಿ ಮೂತ್ರ ವಿಸರ್ಜನೆಯ ಪ್ರಮಾಣ ಕಡಿಮೆಯಾಗುವುದು, ಈ ಸಂದರ್ಭದಲ್ಲಿ ಸೌತೆಕಾಯಿ ತುರಿದು ಬಟ್ಟೆಯಲ್ಲಿ ಗಂಟು ಕಟ್ಟಿ ಹಿಂಡಿ ರಸ ತೆಗೆಯಿರಿ, ಒಂದು ಬಟ್ಟಲು ರಸಕ್ಕೆ ಸ್ವಲ್ಪ ಗ್ಲೂಕೋಸ್ ಮತ್ತು ಒಂದು ಟೀ ಚಮಚ ನಿಂಬೆ ರಸ ಸೇರಿಸಿ ದಿನಕ್ಕೆ ಎರಡಾವರ್ತಿ ಸೇವಿಸಿರಿ, ಅತಿಯಾಗಿ ನೀರಡಿಕೆಯಾಗುತ್ತಿತ್ತು ಆಗ ಅಜ್ಜಿ ಗುಣವಾಗದಿದ್ದಾಗ ಈ ಪಾನೀಯ ಸೇವಿಸುವುದರಿಂದ ಗುಣ ಉಂಟು.

ಸೌತೆಕಾಯಿಯನ್ನು ಬಿಲ್ಲೆಯ ಆಕಾರದಲ್ಲಿ ಕತ್ತರಿಸಿ ಇಂತಹ ಒಂದು ಜಿಲ್ಲೆಯಿಂದ ಮುಖದ ಚರ್ಮವನ್ನು ಮೃದುವಾಗಿ ತಿಕ್ಕಿ ಈ ಅಭ್ಯಾಸ ಮುಂದುವರಿಸಿದಲ್ಲಿ ಮುಖ ಸ್ವಚ್ಛವಾಗುವುದು ಮತ್ತು ಕಾಂತಿಯುತವಾಗುವುದು.

ಸೌತೆಕಾಯಿ ಸಿಪ್ಪೆ ಮತ್ತು ನಿಂಬೆ ಹಣ್ಣಿನ ಸಿಪ್ಪೆ ನುಣ್ಣಗೆ ಅರೆದು ಚರ್ಮದ ಮೇಲೆ ಹಚ್ಚಿ ತಿಕ್ಕುವುದರಿಂದ ಚರ್ಮ ದೋಷದಿಂದ ಉಂಟಾಗಿರುವ ಕಪ್ಪು ಕಲೆಗಳ ಆಗಲೇ ಕಪ್ಪು ಛಾಯೆ ಗಳಾಗಲಿ ನಾಶವಾಗುವುದು ಮತ್ತು ಚರ್ಮದ ಬಣ್ಣ ಉತ್ತಮಗೊಳ್ಳುವುದು.

ಸೌತೆಕಾಯಿ ತಿರುಳಿನಿಂದ ಅಂಗಾಲು ಗಳನ್ನು ಚೆನ್ನಾಗಿ ತಿಕ್ಕಿದರೆ ಕಣ್ಣಿಗೆ ನಿದ್ದೆ ಚೆನ್ನಾಗಿ ಹತ್ತುವುದು ಅಂಗಾಲು ಉರಿ ಕಣ್ಣುರಿ ಶಾಂತವಾಗುವುದು.

ಹರಳೆಣ್ಣೆಯನ್ನು ಹೀಗೆ ಬಳಸಿದರೆ ಕಣ್ಣು ಚುಚ್ಚುವುದು, ಕೆಂಪಾಗುವುದು ಇನ್ನು ಹಲವು ಸಮಸ್ಯೆಯಿಂದ ಪರಿಹಾರ ಸಿಗುತ್ತದೆ..!!

ಹರಳೆಣ್ಣೆ ಉತ್ತಮ ವಿರೇಚಕ ಗುಣವುಳ್ಳ ತೈಲ, ವಯಸ್ಸಿಗೆ ತಕ್ಕ ಪ್ರಮಾಣದಲ್ಲಿ ಹರಳೆಣ್ಣೆ ಸೇವಿಸುವುದರಿಂದ ಚೆನ್ನಾಗಿ ಬೇದಿ ಆಗುವುದು, ಮತ್ತು ದೇಹಕ್ಕೆ ಆರಾಮ ಸಿಗುವುದು.

ನಿಂಬೆ ರಸದೊಂದಿಗೆ ಹರಳೆಣ್ಣೆ ಸೇವಿಸುವುದರಿಂದ ಹೊಟ್ಟೆ ತೊಳಸುವಿಕೆ, ವಾಕರಿಕೆ, ಸಂಕಟ, ಉದರ ಬೇನೆ ಇತ್ಯಾದಿ ಉಪದ್ರವಗಳು ಪರಿಹಾರವಾಗಿ ದೇಹಕ್ಕೆ ಸುಖ ಉಂಟಾಗುವುದು.

ಕಣ್ಣು ಚುಚ್ಚುವಿಕೆ, ಕಣ್ಣು ಕೆಂಪಾಗುವುದು, ಕಣ್ಣುರಿ ಮತ್ತು ನೋವು ಕಂಡು ಬಂದಾಗ ಮೊಲೆಹಾಲಿನೊಂದಿಗೆ ಶುದ್ಧವಾದ ಹರಳೆಣ್ಣೆ ಚೆನ್ನಾಗಿ ಮಿಶ್ರ ಮಾಡಿ ಕಣ್ಣಿಗೆ ಹಾಕುವುದರಿಂದ ಶೀಘ್ರ ಗುಣ ಕಂಡು ಬರುವುದು.

ಅರಳೆಣ್ಣೆಯನ್ನು ಅಂಗಾಂಗಗಳಿಗೆ ಹಚ್ಚಿ ಚೆನ್ನಾಗಿ ಮಾಲೀಶು ಮಾಡಿದ ನಂತರ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಮೈ ಕೈ ನೋವು, ಕೀಲು ನೋವು ಬಿಟ್ಟುಹೋಗುವುದು, ಕಣ್ಣಿಗೆ ಚೆನ್ನಾಗಿ ನಿದ್ದೆ ಹತ್ತುವುದು, ಆಲಸ್ಯ ನಿವಾರಣೆಯಾಗುವುದು.

ಅಭ್ಯಂಜನ ಸ್ನಾನ ಕಣ್ಣಿಗೆ ತಂಪು ದೇಹಕ್ಕೆ ಸೋಂಪು, ವಾರಕ್ಕೊಮ್ಮೆ ಅಭ್ಯಂಜನ ಸ್ನಾನ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚುವುದು, ಚರ್ಮ ಮೃದುವಾಗುವುದು, ದೇಹದಲ್ಲಿ ಲವಲವಿಕೆ ಉಂಟಾಗುವುದು.

ರಾತ್ರಿ ಮಲಗುವ ಮುಂಚೆ ಕಣ್ಣಿನ ರೆಪ್ಪೆಗಳಿಗೆ ಅಪ್ಪಟ ಶುದ್ಧ ಹರಳೆಣ್ಣೆ ಹಚ್ಚಿ ಮರುದಿನ ಬೆಳಗ್ಗೆ ಅಭ್ಯಂಜನ ಸ್ನಾನ ಮಾಡಿ, ದ್ರವ ರೂಪದ ಆಹಾರ ಸೇವಿಸಿ ಸಾಕಷ್ಟು ವಿಶ್ರಾಂತಿ ಪಡೆಯಿರಿ ಇದರಿಂದ ಚುಚ್ಚುವಿಕೆ, ಕಣ್ಣುರಿ ಗುಣವಾಗುವುದು.

ಚಿಟ್ಟ ಹರಳು ಬೀಜ ದ ವರ ಸಿಪ್ಪೆ ತೆಗೆದು, ಒಳಗಣ ಬಿಳುಪಾದ ಭಾಗ ವನ್ನು ಎದೆ ಹಾಲಿನಲ್ಲಿ ತೇದು, ಕಣ್ಣುಗಳಿಗೆ ಹಚ್ಚಿ ದಿನಕ್ಕೆ ಎರಡು ಅಥವಾ ಮೂರು ಬಾರಿ ಮೂರು ದಿನಗಳ ವರೆಗೆ ಈ ಚಿಕಿತ್ಸೆ ಮಾಡಿದಲ್ಲಿ ಕಣ್ಣು ಕೆಂಪಾಗಿದ್ದರೆ ಗುಣವಾಗುವುದು.

ಅರಳೆಣ್ಣೆ ತಲೆಗೆ ಹಚ್ಚುವುದರಿಂದ ಕೂದಲು ಚೆನ್ನಾಗಿ ಬೆಳೆಯುವುದು ತಲೆಯಲ್ಲಿ ಹೊಟ್ಟು ಹೇಳುವುದಿಲ್ಲ.

ಗರ್ಭಿಣಿಯರು ದಿನಕ್ಕೊಮ್ಮೆ ಮಲೆ ತೊಟ್ಟಿಗೆ ಹರಳೆಣ್ಣೆ ಹಚ್ಚಿ ತೊಟ್ಟನ್ನು ಬೆರಳುಗಳಿಂದ ಹಿಡಿದು ಹೊರಮುಖವಾಗಿ ತೀಡುತ್ತಿದ್ದರೆ ಹೆರಿಗೆಯ ನಂತರ ಹಾಲುಣಿಸುವ ಕಾರ್ಯ ಸುಗಮವಾಗುವುದು.

ಹೆರಿಗೆಯ ನಂತರ ಸ್ತನಗಳಿಗೆ ಹರಳೆಣ್ಣೆ ಹಚ್ಚಿ ಚೆನ್ನಾಗಿ ಮಾಲೀಶು ಮಾಡುವುದರಿಂದ ಗುದಗ್ರಂಥಿಗಳು ಉತ್ತೇಜನಗೊಂಡು ಹೆಚ್ಚು ಹಾಲು ಸ್ರವಿಸುವುದು.

ಅರಳೆಣ್ಣೆ ಸವರಿದ ವೀಳ್ಯದೆಲೆಯನ್ನು ದೀಪದ ಶಾಖಕ್ಕೆ ಹಿಡಿದು ಬಿಸಿ ಮಾಡಿದ ನಂತರ, ಎಲೆಯಿಂದ ಮಗುವಿನ ಹೊಟ್ಟೆಗೆ ಶಾಖ ಕೊಟ್ಟರೆ ಹೊಟ್ಟೆ ಉಬ್ಬರದಿಂದ ನೋವು ಅನುಭವಿಸುತ್ತಿರುವ ಮಗುವಿಗೆ ನೋವು ಪರಿಹಾರವಾಗುವುದು ಮತ್ತು ಹೊಟ್ಟೆ ಉಬ್ಬರ ಇಳಿಯುವುದು.

ಅರಳೆಣ್ಣೆ ಸವರಿ ಎಲೆಯನ್ನು ಎಣ್ಣೆಯ ದೀಪಕ್ಕೆ ಹಿಡಿದು ಬಿಸಿ ಮಾಡಿ ಊತವಿರುವ ಕೀಲುಗಳಿಗೆ ಕೊಟ್ಟರೆ ಇದು ನೋವು ಕಡಿಮೆಯಾಗುವುದು, ಈ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಕಾಮಾಲೆ ರೋಗ ಹಾಗು ರಕ್ತಹೀನತೆಯಿಂದ ಮುಕ್ತಿ ಹೊಂದಲು ಒಂದು ಸಣ್ಣ ಅಡಿಕೆಯನ್ನೀಯು ಹೀಗೆ ಬಳಸಿ..!!

ಸುಗಂಧಯುಕ್ತ ಅಡಿಕೆಪುಡಿ ಮೆಲ್ಲುವುದರಿಂದ ಬಾಯಿಯಿಂದ ಹೊರ ಹೊಮ್ಮುವ ದುರ್ಗಂಧ ನಾಶವಾಗುವುದು, ಉಸಿರು ಸುವಾಸನೆಯಿಂದ ಕೂಡಿರುವುದು, ರುಚಿಗ್ರಹಣ ಶಕ್ತಿ ಜಾಗೃತ ವಾಗುವುದು ಹಾಗು ಹಲ್ಲಿನ ವಸಡು ಗಟ್ಟಿಯಾಗುವುದು.

ಪ್ರತಿದಿನವೂ ಸ್ವಲ್ಪ ಅಡಿಕೆಪುಡಿಯನ್ನು ಉಪಯೋಗಿಸುತ್ತಿದ್ದಾರೆ ಆಮಶಂಕೆ, ಅತಿಸಾರ, ಶಾಂತವಾಗುವ ಸಂಭವ ಉಂಟು,.

ಅಡಿಕೆ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ಹಲ್ಲು ನೋವು ನಿಲ್ಲುವುದು, ಗಂಟಲು ಹುಣ್ಣು ಕಡಿಮೆಯಾಗುವುದು.

ಅಡಿಕೆಯನ್ನು ಅತಿಯಾಗಿ ಬಳಸುವುದರಿಂದ ರಕ್ತಹೀನತೆ ಮತ್ತು ಕಾಮಾಲೆ ರೋಗ ಕಡಿಮೆ ಯಾಗುವುದು.

ಹಲವು ಸಂಶೋಧನೆಯ ಪ್ರಕಾರ ಅಡಿಕೆಯಲ್ಲಿ ಜಂತುನಾಶಕ ಅಂಶವಿದ್ದು, ರಕ್ತವನ್ನು ಶುದ್ದಿಗೊಳಿಸುತ್ತದೆ.ಆದ್ದರಿಂದ ಜಠರ ಹಾಗೂ ಕರುಳಿನ ಹಲವು ಜಂತುಗಳಿಗೆ, ಇಸುಬು, ಫಂಗಸ್ ನ ಸೋಂಕುಗಳಲ್ಲಿ, ಹಲವು ಚರ್ಮವ್ಯಾಧಿಗೆ ಅಡಿಕೆಯ ಕಷಾಯ ರಾಮಬಾಣ.

ಆಡಿಕೆಯ ಚೂರ್ಣವನ್ನು ನಿಂಬೆಹಣ್ಣಿನ ರಸದೊಂದಿಗೆ ಬೆರೆಸಿ ಸೇವಿಸುವುದರಿಂದ ವಾಂತಿ ಮತ್ತು ವಾಂತಿ ಬಂದಂತಾಗುವ ಲಕ್ಷಣ ಕಡಿಮೆಯಾಗುತ್ತದೆ.

ಕೆಮ್ಮು ಮತ್ತು ಕಫರೋಗಗಳಲ್ಲಿ ಅಡಿಕೆಯನ್ನು ವೀಳ್ಯದೆಲೆಯೊಂದಿಗೆ ಸೇವಿಸುವುದರಿಂದ ಕಟ್ಟಿರುವ ಕಫ ಸಡಿಲಗೊಳ್ಳುತ್ತದೆ, ಕೆಮ್ಮು ನಿವಾರಣೆಯಾಗುತ್ತದೆ.

ಅಡಿಕೆಯಲ್ಲಿನ ಅರೆಕೋಲಿನ್ ಎಂಬ ಅಂಶವು ಅತಿಯಾದ ರಕ್ತದೊತ್ತಡ ಹಾಗೂ ಗೊರಕೆಯನ್ನು ನಿಯಂತ್ರಿಸುತ್ತದೆ.

ಹೃದಯಾಘಾತ ದಿಂದ ಶಾಶ್ವತ ಪರಿಹಾರ ಹೊಂದಲು ಕೊತ್ತಂಬರಿ ಬೀಜ ಬಳಸಿ ಹೀಗೆ ಮಾಡಿ.

ಎದೆನೋವು ಸಾಮಾನ್ಯವಾಗಿ ಎದೆಯ ಮದ್ಯಭಾಗದಲ್ಲಿ ಇರುತ್ತದೆ, ಎದೆಯ ಮದ್ಯಭಾಗವನ್ನು ಜೋರಾಗಿ ಯಾರೊ ವತ್ತಿದ ಹಾಗೆ ಅಥವಾ ಎದೆಯಯನ್ನು ಬಿಗಿಯಾಗಿ ಕಟ್ಟಿ ಹಾಕಿದ ಹಾಗೆ ಅನಿಸುತ್ತದೆ, ಎದೆನೋವುನ ಜೋತೆಗೆ ಕೈಗಳಲ್ಲಿಯು ನೋವು ಕಾಣಿಸಬಹುದು ಮತ್ತು ಉಸಿರಾಟದ ತೊಂದರೆಯು ಆಗಬಹುದು, ಜೋರಾಗಿ ಭೆವರು ಬರಬಹುದು, ಕೆಲವೊಮ್ಮೆ ಪ್ರಜ್ಞೆಯು ಹೋಗಬಹುದು.

ಇನ್ನು ಬಾರತೀಯರಾದ ನಾವು ಆಂಗ್ಲ ಔಷಧಿಗಳಿಗೆ ಮೊರೆಯೊಗಿರುವುದು ಹಾಗು ಭಾರತದ ಆಯುರ್ವೇದವನ್ನ ಮರೆತಿರುವುದು ಅಷ್ಟು ಒಳ್ಳೆಯ ವಿಷಯವೇನಲ್ಲಾ, ಆಂಗ್ಲ ಮದ್ದುಗಳು ಸ್ವಲ್ಪ ಬದಿಗಿಟ್ಟರೆ ನಾವು ಇಂದು ನಿಮಗೆ ಆಯುರ್ವೇದ ಒಂದು ಹೃದಯಾಘಾತಕ್ಕೆ ದಿವ್ಯ ಔಷಧವನ್ನ ಇಂದು ನಿಮಗೆ ತಿಳಿಸುತ್ತೇವೆ.

ಕೊತ್ತಂಬರಿ ಸೊಪ್ಪನ್ನು ಎಳೆನೀರಿನೊಂದಿಗೆ ರುಬ್ಬಿ, ಕಲ್ಲುಸಕ್ಕರೆ, ಏಲಕ್ಕಿ ಪುಡಿ ಸೇರಿಸಿ ದಿನವೂ ಒಂದು ಭಾರಿ ಸೇವಿಸುತ್ತಿದ್ದರೆ ಎದೆನೋವು ಕಡಿಮೆ ಆಗುವುದು.

ಕೊತ್ತಂಬರಿ ಬೀಜವನ್ನು ಕುಟ್ಟಿ ಪುಡಿ ಮಾಡಿ ಅದನ್ನು ನೀರಿನಲ್ಲಿ ನೆನೆಹಾಕಬೇಕು, ಚೆನ್ನಾಗಿ ಕಿವಿಚಿ ಸೋಸಬೇಕು, ಈ ಕಷಾಯಕ್ಕೆ ಹಾಲು, ಸಕ್ಕರೆ ಬೆರೆಸಿ ಸೇವಿಸಿದರೆ ಆಗಾಗ ಕಾಡುವ ಎದೆ ನೋವು ಕಡಿಮೆಯಾಗುತ್ತದೆ.

ಎಳೆಯ ಸೀಬೆಕಾಯಿಯ ಕಷಾಯವನ್ನು ಸಿದ್ಧಪಡಿಸಬೇಕು, ಇದನ್ನು ಮಜ್ಜಿಗೆಯೊಂದಿಗೆ ಮಿಶ್ರಣ ಮಾಡಿ ಕುಡಿದರೆ ಎದೆ ನೋವು ತಕ್ಷಣ ಕಡಿಮೆಯಾಗುತ್ತದೆ.

ದಾಳಿಂಬೆ ಹಣ್ಣನ್ನು ಸೇವಿಸುತ್ತಿದ್ದರೆ ಕೆಮ್ಮುಸಹಿತ ಉಂಟಾಗುವ ಎದೆನೋವು ಬರುವುದಿಲ್ಲ, ಸಾಧ್ಯವಾದರೆ ವಾರಕ್ಕೆ ಮೂರು ದಿನವಾದರೂ ದಾಳಿಂಬೆ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

ಒಂದು ಬಟ್ಟಲು ತಣ್ಣೀರಿಗೆ ನಿಂಬೆರಸವನ್ನು ಸೇರಿಸಿ ಒಂದು ವಾರ ಸೇವಿಸುತ್ತಿದ್ದರೆ ಎದೆನೋವು ಕಡಿಮೆ ಆಗುವುದು, ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ್ ಅಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಎಳನೀರಿಗೆ ಬೆಲ್ಲ ಮತ್ತು ಅರ್ಧ ಟೀ ಚಮಚ ಕೊತ್ತಂಬರಿ ಬೀಜದ ಸೇರಿಸಿ ಕುಡಿದರೆ ಏನಾಗುತ್ತೆ ಗೊತ್ತ..?

ತೆಂಗಿನಕಾಯಿ ಅತ್ಯಂತ ಪುಷ್ಟಿದಾಯಕ ಆಹಾರ ಇದು ಶ್ರಮಜೀವಿಗಳಿಗೆ ಬಲವರ್ಧಕ ತ್ರಾಣಿಕ, ಶಾರೀರಿಕ ದೋಷಗಳ ನಿವಾರಣೆಗೆ ಒಣ ಕೊಬ್ಬರಿ ಗಿಂತ ಹಸಿ ಕೊಬ್ಬರಿ ಹೆಚ್ಚು ಪರಿಣಾಮಕಾರಿ.

ಅಮೃತಪ್ರಾಯವಾದ ಎಳನೀರನ್ನು ಕುಡಿಯುವುದರಿಂದ ದಾಹ ಪರಿಹಾರವಾಗುವುದು ಬಳಲಿಕೆ ನಿವಾರಣೆಯಾಗುವುದು ಆಲಸ್ಯ ಕಳೆದು ಲವಲವಿಕೆ ಉಂಟಾಗುವುದು ಉರಿ ಮೂತ್ರ ಮತ್ತು ಕಟ್ಟು ಮೂತ್ರ ರೋಗಿಗಳಲ್ಲಿ ಎಳನೀರು ಸೇವಿಸುವುದರಿಂದ ಶೀಘ್ರ ಗುಣ ಕಂಡು ಬರುವುದು, ಆದರೆ ಅಜೀರ್ಣ ಕೆಮ್ಮು ಉಬ್ಬಸ ಈ ರೋಗಗಳಲ್ಲಿ ಎಳನೀರು ಸೇವಿಸುವುದರಿಂದ ಹಾನಿಉಂಟು.

ಗರ್ಭಿಣಿ ಸ್ತ್ರೀಯರಲ್ಲಿ ಮೂತ್ರ ವಿಸರ್ಜನೆಯ ಕಾಲದಲ್ಲಿ ತುಂಬಾ ಉರಿಯಾಗುತ್ತಿದ್ದರು ಎಳನೀರು ಮತ್ತು ಬಾರ್ಲಿ ನೀರನ್ನು ಸೇವಿಸುವುದರಿಂದ ಗುಣ ಕಂಡು ಬರುವುದು.

ಎಳನೀರಿಗೆ ಸ್ವಲ್ಪ ಬೆಲ್ಲ ಮತ್ತು ಅರ್ಧ ಟೀ ಚಮಚ ಕೊತ್ತಂಬರಿ ಬೀಜದ ಚೂರ್ಣ ಸೇರಿಸಿ ದಿನಕ್ಕೆ ಎರಡಾವರ್ತಿ ಸೇವಿಸುವುದರಿಂದ ಉರಿಮೂತ್ರ ರೋಗ ನಿವಾರಣೆಯಾಗುವುದು.

ಪ್ರತಿದಿನ ಏಳನೀರಿನಿಂದ ಮುಖ ತೊಳೆದುಕೊಂಡರೆ ಮೊಡವೆಗಳು ಮಾಯವಾಗುತ್ತದೆ, ಕಪ್ಪು ಕಲೆಗಳು ಮಾಸಿಹೋಗುತ್ತವೆ, ಮುಖದ ಚರ್ಮ ಕಾಂತಿಯುತವಾಗುತ್ತದೆ.

ಅಂಗಾಲು ಅಂಗೈ ಉರಿಯುತ್ತಿದ್ದರೆ ಎಳನೀರಿಗೆ ಮತ್ತು ಸುಣ್ಣದ ತಿಳಿಯನ್ನು ಸಮಪ್ರಮಾಣದಲ್ಲಿ ಮಿಶ್ರಮಾಡಿ, ಒಂದು ಚಿಟಿಕೆ ಅರಿಶಿನದ ಪುಡಿ ಸೇರಿಸಿ ಅಂಗಾಲು ಅಂಗೈಗಗಳಿಗೆ ಹಚ್ಚಿದರೆ ಗುಣ ಕಂಡುಬರುವುದು.

ಎಳನೀರು ತಂಪಾದ ಪಾನೀಯ ಹೃದಯ, ಪಿತ್ತಕೋಶ ಮತ್ತು ಮೂತ್ರ ಪಿಂಡಗಳಿಗೆ ಸಂಬಂಧಿಸಿದ ರೋಗಗಳಿಂದ ನರಳುವವರಿಗೆ ಎಳನೀರು ಕೊಡುವುದರಿಂದ ಗುಣ ಉಂಟು, ಎಳನೀರು ಕುಡಿದರೆ ಮೂತ್ರ ವಿಸರ್ಜನೆ ಚೆನ್ನಾಗಿ ಆಗುವುದು ಅತಿಸಾರ ವಾಂತಿಯಾಗುವಿಕೆ ಈ ಸಂದರ್ಭಗಳಲ್ಲಿ ದೇಹದಲ್ಲಿ ಜಲಾಂಶ ಕಡಿಮೆಯಾಗುವುದು, ಲವಣಯುಕ್ತ ಪೋಷಕಾಂಶಗಳ ಕೊರತೆ ಉಂಟಾಗುವುದು, ಆಗ ಎಳನೀರಿಗೆ ನಿಂಬೆ ಹಣ್ಣಿನ ರಸ ಹಿಂಡಿ ಕುಡಿಯುವುದು ಉತ್ತಮ, ಎಳೆಯ ಮಕ್ಕಳಿಗೂ ಈ ಪಾನೀಯ ಕೊಡಬಹುದು.

ಒಂದು ಬಟ್ಟಲು ಎಳನೀರಿಗೆ ಒಂದು ಊಟದ ಚಮಚ ಜೇನುತುಪ್ಪ ಸೇರಿಸಿ, ಪ್ರತಿದಿನ ಸೇವಿಸುತ್ತಿದ್ದರೆ ಪುಂಸತ್ವ ವೃದ್ಧಿಯಾಗುವುದು, ನರಗಳ ದೌರ್ಬಲ್ಯ ನಿವಾರಣೆಯಾಗುವುದು.

ಕುಡಿದ ಹಾಲನ್ನು ಕಕ್ಕುವ ಮಕ್ಕಳಿಗೆ ಹಾಲಿನೊಂದಿಗೆ ಸ್ವಲ್ಪ ಎಳನೀರು ಬೆರೆಸಿ ಕೊಟ್ಟರೆ ವಾಂತಿಯಾಗುವುದಿಲ್ಲ ಮತ್ತು ಕುಡಿದ ಹಾಲನ್ನು ಚೆನ್ನಾಗಿ ಜೀರ್ಣಿಸಿ ದೇಹಗತವಾಗುವ.

ಹಸಿ ತೆಂಗಿನ ತುರಿಯನ್ನು ಒಂದು ಬಟ್ಟಲು ಎಳನೀರಿನೊಂದಿಗೆ ನುಣ್ಣಗೆ ರುಬ್ಬಿ ಕಲ್ಲುಸಕ್ಕರೆ ಮತ್ತು ಏಲಕ್ಕಿ ಸೇರಿಸಿ ದಿನಕ್ಕೊಂದವರ್ತಿ ಸೇವಿಸಿದರೆ ಎದೆನೋವು, ಬಿಕ್ಕಳಿಕೆ, ನಿದ್ರಾನಾಶ ಹೊಟ್ಟೆ ಹುಣ್ಣು ಗುಣವಾಗುವುದು.

ವಾಯೋವೃದ್ಧರಿಗೆ ತೆಂಗಿನಹಾಲನ್ನು ಎಳನೀರಿನೊಂದಿಗೆ ಮಿಶ್ರಮಾಡಿ ಕೊಡುವುದರಿಂದ ಆರೋಗ್ಯ ವೃದ್ಧಿಯಾಗುವುದು, ಇದು ಅತ್ಯಮೂಲ್ಯ ದ್ರವರೂಪ ಆಹಾರ ಈ ಆಹಾರವನ್ನು ರಿಕೆಟ್ಸ್ ರೋಗ ಪೀಡಿತ ಮಕ್ಕಳಿಗೂ ಕೊಡಬಹುದು.

ಎಳನೀರಿನ ಒಳಗಿರುವ ದೋಸೆಯಂತಹ ತಿರುಳನ್ನು ಕಳಿತ ಬಾಳೆಹಣ್ಣಿನೊಂದಿಗೆ ಚೆನ್ನಾಗಿ ಮಸೆದು ಹಾಲಿನೊಂದಿಗೆ ಸೇರಿಸಿ ಸೇವಿಸಿದರೆ ಸುಲಭವಾಗಿ ಜೀರ್ಣವಾಗುವುದು ಈ ಆಹಾರವನ್ನು ಮಕ್ಕಳಿಗೂ ಜೀರ್ಣಾಂಗಗಳಿಗೆ ಸಂಬಂಧಿಸಿದ ರೋಗಗಳಿಂದ ನರಳುವ ರೋಗಿಗಳಿಗೂ ನಿರ್ಭಯವಾಗಿ ಕೊಡಬಹುದು ಇದು ಶಕ್ತಿದಾಯಕ ಆಹಾರ.

ಖಾಲಿ ಹೊಟ್ಟೆಯಲ್ಲಿ ಪ್ರತಿ ದಿನ ಸಂಜೆ ಒಂದು ಟೊಮೊಟೊ ತಿಂದರೆ ಏನಾಗುತ್ತೆ ಗೊತ್ತಾ..!!

ಪ್ರತಿದಿನ ಪ್ರಾತಃಕಾಲ 1 ಟೊಮೆಟೋ ಹಣ್ಣು ಸೇವಿಸುವುದು ಉತ್ತಮ, ಎರಡು ಮೂರು ತಿಂಗಳ ಕಾಲ ಈ ಪದ್ಧತಿ ಅನುಸರಿಸಿದರೆ ಆರೋಗ್ಯ ವೃದ್ಧಿಯಾಗುವುದು, ರಕ್ತ ಶುದ್ಧಿಯಾಗುವುದು, ಬೊಜ್ಜು ಕರಗುವುದು, ಮೂತ್ರ ವಿಸರ್ಜನೆ ದೋಷರಹಿತವಾಗುವುದು.

ಒಂದು ಬಟ್ಟಲು ತಾಜಾ ಟೊಮೆಟೊ ಹಣ್ಣಿನ ರಸಕ್ಕೆ ಚಿಟಿಕೆ ಉಪ್ಪು ಮತ್ತು ಸ್ವಲ್ಪ ಕಾಳುಮೆಣಸಿನ ಪುಡಿ ಸೇರಿಸಿ, ಪ್ರತಿದಿನ ಪ್ರಾತಃಕಾಲ ಸೇರಿಸುತ್ತಾ ಇದ್ದಲ್ಲಿಯೇ ಅನೇಕ ರೋಗಗಳು ನಿವಾರಣೆಯಾಗುವುದು, ಬಳಲಿಕೆ ಆಯಾಸ ಆಲಸ್ಯ ಅಜೀರ್ಣ ಹೊಟ್ಟೆ ತೊಳಸುವಿಕೆ ಮತ್ತು ಸಂಬಂಧಿಸಿದ ರೋಗಗಳು ನಿವಾರಣೆಯಾಗಿ ಜೀವನದಲ್ಲಿ ಹೊಸತನ ಕಂಡು ಬರುವುದು, ಸಿಹಿ ಮೂತ್ರ ರೋಗಿಗಳಿಗೆ ಟೊಮೆಟೋ ಹಣ್ಣು ವರಪ್ರಸಾದ.

ಟೊಮೆಟೊ ಹಣ್ಣನ್ನು ಪ್ರತಿದಿನವೂ ಸೇವಿಸುತ್ತಿದ್ದರೆ ಹಲ್ಲು ಮತ್ತು ವಸಡುಗಳು ದೃಢವಾಗುತ್ತದೆ.

ಮಾನಸಿಕ ಮತ್ತು ಶಾರೀರಿಕ ಶ್ರಮದಿಂದ ಬಳಲಿರುವ ಆಗ ಟೊಮೆಟೊ ಹಣ್ಣಿನ ರಸಕ್ಕೆ ಸಕ್ಕರೆ ಅಥವಾ ಗ್ಲೂಕೋಸ್ ಸೇರಿಸಿ ಸೇವಿಸುವುದು ಉತ್ತಮ, ಬೇಸಿಗೆ ಕಾಲದಲ್ಲಿ ಬಳಸುವ ಇದು ಶ್ರೇಷ್ಠ ರೀತಿಯ ತಂಪಾದ ಪಾನೀಯ, ಬೆಳೆಯುವ ಮಕ್ಕಳಿಗೆ ಗರ್ಭಿಣಿಯರಿಗೆ ಹಾಲುಣಿಸುವ ತಾಯಂದಿರಿಗೆ ಮಾನಸಿಕ ಶ್ರಮಜೀವಿಗಳಿಗೆ ಟೊಮೆಟೊ ಹಣ್ಣಿನ ರಸ ಸುಲಭ ಬೆಲೆಯ ಸರ್ವೋತ್ತಮ.

ಟೊಮೆಟೋ ಹಣ್ಣಿನ ತಿರುಳನ್ನು ಮುಖಕ್ಕೆ ಹಚ್ಚಿಕೊಂಡು ಸುಮಾರು ಒಂದು ಗಂಟೆಯ ನಂತರ ಬಿಸಿ ನೀರಿನಿಂದ ಮುಖ ತೊಳೆದುಕೊಂಡರೆ ಮುಖದ ಮೇಲಿನ ಗುಳ್ಳೆಗಳು ಮೊಡವೆಗಳು ಕ್ರಮೇಣ ಅಳಿಸಿ ಹೋಗಿ ಮುಖದ ಕಾಂತಿ ಹೆಚ್ಚುವುದು.

ಇತರ ಸೊಪ್ಪುಗಳನ್ನು ಉಪಯೋಗಿಸುವಂತೆ ಟೊಮೆಟೊ ಗಿಡದ ಸೊಪ್ಪನ್ನು ಬೇಯಿಸಿ ತಿನ್ನುವುದರಿಂದ ಸಂಧಿವಾತ ರೋಗದಲ್ಲಿ ಗುಣ ಕಂಡುಬರುವುದು, ಆದರೆ ಟೊಮೆಟೋ ಹಣ್ಣನ್ನು ಬೇಯಿಸಿ ಸೇವಿಸುವುದು ಯುಕ್ತವಲ್ಲ.

ಜೊತೆಯಲ್ಲಿ ಹೀರೇಕಾಯಿಯ ಅರೋಗ್ಯ ಗುಣಗಳು.

ತುಪ್ಪದ ಹಿರೇಕಾಯಿ ದೇಹಕ್ಕೆ ತಂಪು ಮೂಗು, ಬಾಯಿ, ಗುದದ್ವಾರ, ಇವುಗಳ ಮೂಲಕ ರಕ್ತ ಹೊರಬೀಳುತ್ತಿದ್ದರೆ ತುಪ್ಪದ ಹೀರೆಕಾಯಿ ಪಲ್ಯ ತಯಾರಿಸಿ ತಿನ್ನುವುದರಿಂದ ಪ್ರಯೋಜನವುಂಟು.

ಪೊಟಾಶಿಯಂ ಲವಣಗಳ ಕೊರತೆಯಿಂದ ಹಿರೇಕಾಯಿಯ ಬಳಕೆಯಿಂದ ನಿವಾರಿಸಬಹುದು, ಬೇಸಿಗೆಯಲ್ಲಿ ಬೆವರಿನ ಮೂಲಕ ಪೊಟ್ಯಾಸಿಯಂ ಲವಣಗಳು ನಷ್ಟವಾಗುವ ಕಾರಣ ಈ ತರಕಾರಿಯನ್ನು ಬಳಸುವುದರಿಂದ ಲಾಭವುಂಟು.

ಮಧುಮೇಹ ರೋಗಿಗಳಿಗೆ ಬೇಯಿಸಿದ ತುಪ್ಪದ ಹಿರೇಕಾಯಿ ನೀರುಪದ್ರವಿ ಆಹಾರ.

ತುಪ್ಪದ ಹಿರೇಕಾಯಿ ತಿನ್ನುವುದರಿಂದ ಮೂತ್ರ ವಿಸರ್ಜನೆ ಹೆಚ್ಚುವುದು ಇದು ಅಲ್ಪಾಂಶ ಮೂತ್ರ ರೋಗಿಗಳಿಗೆ ಉತ್ತಮ ಆಹಾರ.