ತಾಯಿ ಲಕ್ಷ್ಮಿ ನಿಮ್ಮ ಜೊತೆ ಇರಬೇಕಾದರೆ ಈ ವಸ್ತುಗಳು ನಿಮ್ಮ ಜೊತೆಯಲ್ಲೇ ಇರಬೇಕು..!!

ಪ್ರತಿಯೊಬ್ಬರೂ ಐಶ್ವರ್ಯಕ್ಕಾಗಿ ಅಂದರೆ ಹಣಕ್ಕಾಗಿ ಸದಾಕಾಲ ಹಂಬಲಿಸುತ್ತಾರೆ, ಪ್ರಾಚೀನ ಕಾಲದಿಂದಲೂ ಐಶ್ವರ್ಯಕ್ಕಾಗಿ ಹಲವು ಮಾರ್ಗ ಅನುಸರಿಸುತ್ತ ಬಂದಿದ್ದಾರೆ, ನಮಗೆ ಐಶ್ವರ್ಯವನ್ನ ಕರುಣಿಸೋ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಏನು ಮಾಡ್ಬೇಕು ಎಂದು ಇಲ್ಲಿ ತಿಳಿಸುತ್ತೇವೆ.

ಸಂಪತ್ತು ಎಲ್ಲರ ಬಳಿ ಅಷ್ಟು ಸುಲಭವಾಗಿ ಉಳಿಯುವುದಿಲ್ಲ, ಕೆಲವರು ಮುಟ್ಟಿದ್ದೆಲ್ಲ ಚಿನ್ನ ವಾದರೆ ಇನ್ನು ಕೆಲವರು ಮುಟ್ಟಿದೆಲ್ಲಾ ಮಣ್ಣಾಗುತ್ತದೆ ಎಂಬಂತೆ ಯಾವ ರೀತಿಯಾಗಿ ಹಣ ಸಂಪಾದಿಸಿದರು ಕಾರಣ ವಿಲ್ಲದೆ ಖರ್ಚಾಗಿ ಹೋಗಿರುತ್ತದೆ.

ಕೆಲವೊಮ್ಮೆ ಒಳ್ಳೆಯ ಹಣ ಗಳಿಸುವ ಉದ್ಯೋಗ ಅಥವಾ ವಾಣಿಜ್ಯ ವಹಿವಾಟು ಇದ್ದರು ಮನೆಯಲ್ಲಿ ಹಣ ಉಳಿಯಲಾರದು, ಏಕೆಂದರೆ ಹಣ ಎಷ್ಟು ಮನೆಗೆ ಬರುತ್ತದೆಯೋ ಹೆಚ್ಚು ಕಡಿಮೆ ಅಷ್ಟೇ ಖರ್ಚು ಆಗಿ ಹೋಗುತ್ತದೆ, ಪರಿಣಾಮವಾಗಿ ಹಿಂದಿನ ದಿನಕ್ಕೂ ಇಂದಿನ ದಿನಕ್ಕೂ ಯಾವುದೇ ವೆತ್ಯಾಸ ಇರುವುದಿಲ್ಲ ಇದಕ್ಕೆಲ್ಲ ಮನೆಯ ವಸ್ತುಗಳು ಪ್ರಮುಖ ಕಾರಣ ವಾಗಿರ ಬಹುದು.

ಆಂಜನೇಯನ ಫೋಟೋ : ನಿಮ್ಮ ಮನೆಯಲ್ಲಿ ದಕ್ಷಿಣ ಭಾಗಕ್ಕೆ ಹನುಮನ ಪಂಚಮುಖಿ ರೂಪದ ವಿಗ್ರಹ ಅಥವಾ ಫೋಟೋವನ್ನು ಇಟ್ಟು ಪ್ರತಿದಿನ ಪೂಜಿಸಿದರೆ ಮನೆಯ ಅಭಿವೃದ್ಧಿ ಹಾಗು ಹಣ ಸಂಗ್ರಹಣೆಗೆ ಇರುವ ಅಡ್ಡಿಗಳನ್ನು ತಡೆಯಬಹುದು.

ಲಕ್ಷ್ಮಿ ಕುಬೇರ ಫೋಟೋ : ಮನೆಯ ಹೊಸ್ತಿಲು ದಾಟಿ ಕಾಲಿಡುತ್ತಿದ್ದಂತೆ ಮೊದಲು ಕಾಣುವ ಗೋಡೆಯ ಮೇಲೆ ಲಕ್ಷ್ಮಿ ಕುಬೇರರ ಒಂದು ಫೋಟೋ ಅಥವಾ ಇಬ್ಬರ ಪ್ರತ್ಯೇಕ ಫೋಟೋ ಇರಿಸಿ.

ಮಣ್ಣಿನ ಮಡಿಕೆ : ಮನೆಯ ಉತ್ತರ ಭಾಗದಲ್ಲಿ ಒಂದು ಮಣ್ಣಿನ ಮಡಿಕೆಯನ್ನು ಇರಿಸಿ, ಇದು ಅಪ್ಪಟ ಮಣ್ಣಿನಿಂದ ಮಾಡಿರಬೇಕು, ಯಾವುದೇ ಮಿಶ್ರಣ ಇರಬಾರದು, ಇದರಿಂದ ಮನೆಗೆ ಆಗಮಿಸಿದ ಧನ ಮನೆಯಲ್ಲೇ ಉಳಿದು ಕೊಳ್ಳಲು ಸಾಧ್ಯವಾಗುತ್ತದೆ.

Leave a Reply

Your email address will not be published. Required fields are marked *