ಮೊಳಕೆ ಬಂದ ಕಾಳಿನ ಅರೋಗ್ಯ ಉಪಯೋಗಗಳು..!!

ಹೌದು ಮೊಳಕೆಕಾಳಿನಲ್ಲಿ ಹಲುವು ರೋಗನಿರೋಧಕ ಶಕ್ತಿಗಳಿವೆ, ಮೊಳಕೆಕಾಳಿನಲ್ಲಿ ಹಲುವು ಆರೋಗ್ಯಕ ಅಂಶಗಳು ಇವೆ ಅದರಲ್ಲೂ ಮನುಷ್ಯನ ದೇಹಕ್ಕೆ ಮೊಳಕೆಕಾಳು ಇನ್ನು ಉತ್ತಮ ಹೇಗೆ ಅಂತೀರಾ ಇಲ್ಲಿದೆ ನೋಡಿ.

ಜೀರ್ಣಕ್ರಿಯೆಗೆ ಹೆಚ್ಚು ಸಹಾಯಕವಾಗಿದೆ : ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಮೊಳಕೆ ಕಾಳು ತಿನ್ನುವುದು ಒಳ್ಳೆಯದು ಇದರಲ್ಲಿರುವ ಪೋಷಕಾಂಶಗಳು ಆಹಾರವನ್ನು ಸರಿಯಾಗಿ ಜೀರ್ಣವಾಗಲು ಸಹಕರಿಸುತ್ತದೆ.

ರಕ್ತ ಪರಿಚಲನೆಗೆ ಉತ್ತಮವಾದ ಆಹಾರವಾಗಿದೆ : ರಕ್ತ ಪರಿಚಲನೆಗೆ ಮೊಳಕೆ ಕಾಳಿನ ಸೇವನೆ ಉತ್ತಮ ಇದರಲ್ಲಿ ಕಬ್ಬಿಣ ಮತ್ತು ತವರದ ಅಂಶ ಸಾಕಷ್ಟಿದ್ದು, ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಎಷ್ಟು ಬೇಕೋ ಅಷ್ಟು ಇರುವಂತೆ ನೋಡಿಕೊಳ್ಳುತ್ತದೆ.

ತೂಕ ಇಳಿಸುವರಿಗೆ ಇದು ಇನ್ನು ಉತ್ತಮ : ತೂಕ ಇಳಿಸಲು ಡಯಟ್ ಮಾಡುವವರಮ ಆಹಾರದಲ್ಲಿ ಮೊಳಕೆ ಕಾಳು ಇರಲೇ ಬೇಕು ಇದರಲ್ಲಿ ಫೈಬರ್ ಅಂಶ ಸಾಕಷ್ಟಿದ್ದು, ಹೊಟ್ಟೆ ತುಂಬಿರುವಂತೆ ಮಾಡುತ್ತದೆ ಇದರಿಂದಾಗಿ ಆಗಾಗ ತಿನ್ನಬೇಕಾಗುವುದಿಲ್ಲ ನಾಲಿಗೆ ಮೇಲೂ ಕಡಿವಾಣ ಹಾಕಬಹುದು.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ : ಮೊಳಕೆ ಕಾಳಿನಲ್ಲಿ ವಿಟಮಿನ್ ಸಿ ಅಂಶ ಸಾಕಷ್ಟಿರುವುದರಿಂದ ರೋಗ ನಿರೋಧಕ ಶಕ್ತಿಯಿದೆ ಅಂತೆಯೇ ಇದರಲ್ಲಿ ವಿಟಮಿನ್ ಎ ಅಂಶವೂ ಇದೆ.

Leave a comment

Your email address will not be published. Required fields are marked *

%d bloggers like this: