ಚಿಕ್ಕವರಿದ್ದಾಗ ಇದೊಂದು ಆಟವಾಡಿದ್ದರೆ ನಿಮಗೆ ಈ ರೋಗಗಳು ಬರುವುದಿಲ್ಲ..!!

ಸದಾ ಕೈಯಲ್ಲಿ ಮೊಬೈಲ್ ಹಿಡಿದೋ ಅಥವಾ ಟಿವಿ ಮುಂದು ಕುಳಿತೋ ಮಕ್ಕಳನ್ನು ಮನೆಯಿಂದ ಹೊರ ಕಳುಹಿಸಿ, ಆಡಲು ಉತ್ತೇಜಿಸಿ ಅವರು ಬಾಲ್ಯದಲ್ಲಿ ಆಡಲಿಲ್ಲವೆಂದರೆ ದೊಡ್ಡವರಾದ ಮೇಲೆ ನೂರಾರು ಕಾಯಿಲೆಗಳು ಬರುವುದು ಗ್ಯಾರಂಟಿ ಎಂದು ಸಂಶೋಧನೆಗಳು ದೃಢಪಡಿಸಿವೆ.

ಸಂಶೋಧನೆಗಳು ಬಾಲ್ಯ ಬಹಳ ಸ್ಟ್ರೆಸ್‌ನಿಂದ ಕೂಡಿದ್ದರೆ ದೊಡ್ಡವರಾದ್ಮೇಲೆ ಒಬೇಸಿಟಿ ಬರುವ ಸಾಧ್ಯತೆ ಅಧಿಕ, ಎಂದು ಸಾಬೀತಪಡಿಸಿವೆ.

ಇತ್ತೀಚೆಗೆ ಅಮೆರಿಕಾದಲ್ಲಿ ಬೊಜ್ಜಿನ ಸಮಸ್ಯೆಯಿಂದ ನರಳುತ್ತಿರುವವರ ಕುರಿತು ಮಹತ್ವದ ಸಮೀಕ್ಷೆಯೊಂದು ನಡೆಯಿತು, ಅದರಲ್ಲಿ ಬೊಜ್ಜಿರುವ ಹೆಚ್ಚಿನ ವಯಸ್ಕರ ಬಾಲ್ಯ ಕಹಿಯಾಗಿರುವುದು ಸಾಬೀತಾಗಿದೆ, ಹೆತ್ತವರ ಡಿವೋರ್ಸ್, ಪನಿಶ್‌ಮೆಂಟ್ ಭೀತಿ, ಮಾದಕ ವ್ಯಸನದಂಥ ಸಮಸ್ಯೆಗಳಿದ್ದವರು ಕೊನೆಯತನಕವೂ ಸಂತೋಷವನ್ನು ಕಂಡುಕೊಳ್ಳಲು ವಿಫಲ ಯತ್ನ ನಡೆಸುತ್ತಾರೆ, ಆದರೆ ಅದು ಅವರ ಕೈಗೆಟಕುವುದಿಲ್ಲ, ಹಾಗಾಗಿ ನಿಮ್ಮ ಮಗುವಿನ ಮೇಲೆ ಒತ್ತಡ ಹೇರಬೇಡಿ.

ಅದು ಹಾಯಾಗಿ ಆರಾಮವಾಗಿ ಬದುಕುವಂತೆ ಮಾಡಿ, ತಪ್ಪಿಯೂ ಕೂತು ಆಡುವ ಅಭ್ಯಾಸ ಮಾಡಿಸಬೇಡಿ, ಮಗು ಓಡಾಡಲಿ, ಹೊರಗೆ ಆಟವಾಡಲಿ, ಖುಷಿ ಖುಷಿಯಾಗಿರಲಿ.

ಸೊಳ್ಳೆ ಕೈಯಲ್ಲಿ ಒಡೆದು ಸಾಯಿಸಿದರೆ ಇದೆ ಭಯಾನಕ ಅಪಾಯ.

ಹೌದು ಸೊಳ್ಳೆ ಅನ್ನೋದು ತುಂಬ ಡೇಂಜರ್ ಕೀಟ ಸೊಳ್ಳೆಗಳು ಬದುಕಿದ್ದಾಗ ಮಾತ್ರವಲ್ಲ ಸತ್ತ ಮೇಲೂ ಅಪಾಯಕಾರಿ ಸೊಳ್ಳೆಗಳು ಮನುಷ್ಯನನ್ನು ಕಚ್ಚಿ ಡೆಂಗೆಯಂತಹ ಅಪಾಯಕಾರಿ ರೋಗಗಳನ್ನು ಹರಡಿದರೆ, ಸತ್ತ ಮೇಲೆ ಅಸ್ತಮಾ, ಅಲರ್ಜಿ ಸಮಸ್ಯೆಯನ್ನು ಹರಡುತ್ತದೆ ದಿಲ್ಲಿಯ ವಿಶ್ವವಿದ್ಯಾನಿಲಯದ ವಲ್ಲಾಬಬಾಯ್‌ ಪಟೇಲ್ ಹೃದ್ರೋಗ ಚಿಕಿತ್ಸಾ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

ರೋಗಿಗಳಲ್ಲಿ ಅಲರ್ಜಿ, ಅಸ್ತಮಾ ಸಮಸ್ಯೆ ಉಲ್ಬಣಗೊಳ್ಳಲು ಎರಡನೇ ಅತ್ಯಂತ ಪ್ರಮುಖ ಕಾರಣ ಇದೇ ಆಗಿದೆ ಎಂದು ಈ ಅಧ್ಯಯನದಲ್ಲಿ ತಿಳಿದು ಬಂದಿದೆ.

ಈ ಅಧ್ಯಯನದ ಮುಂದಾಳತ್ವ ವಹಿಸಿದ ಡಾ ರಾಜ್‌ ಕುಮಾರ್‌ ಸೊಳ್ಳೆಯ ರೋಮ, ಎಂಜಲು ಹಾಗೂ ದೇಹದ ಇತರ ಭಾಗಗಳು ವಾತಾವರಣದ ಗಾಳಿ ಜತೆ ಸೇರಿ ಉಸಿರಾಟದ ಮೂಲಕ ನಮ್ಮ ದೇಹವನ್ನು ಸೇರುತ್ತದೆ ಇದರಿಂದ ಅಸ್ತಮಾ ಹಾಗೂ ಅಲರ್ಜಿ ಸಮಸ್ಯೆ ಮತ್ತಷ್ಟು ಉಲ್ಬಣವಾಗುವುದು ಎಂದಿದ್ದಾರೆ.

ಪ್ರತಿದಿನ ಕನಿಷ್ಠ 6 ಲೋಟ ನೀರು ಕುಡಿಯುವುದರಿಂದ ಮೂತ್ರನಾಳ ಸೋಂಕಿನಿಂದ ಮುಕ್ರಗಬಹುದಂತೆ ನೋಡಿ.

ಹೌದು ದಿನಕ್ಕೆ ಕನಿಷ್ಠ 6 ಗ್ಲಾಸ್ ನೀರು ಕುಡಿಯುವುದರಿಂದ ಮಹಿಳೆಯರಲ್ಲಿ ಮೂತ್ರಕೋಶದ ಸೋಂಕಾಗುವ ಸಾಧ್ಯತೆಗಳು ಕಡಿಮೆ ಎಂದು ಒಂದು ಸಂಶೋಧನೆಯೊಂದರಲ್ಲಿ ಪತ್ತೆಯಾಗಿದೆ.

ಮೂತ್ರವಿಸರ್ಜನೆ ಮಾಡುವಾಗ ನೋವು, ತೊಂದರೆ ಅಥವಾ ಮೂತ್ರಕೋಶ ತುಂಬಿದೆ ಎಂಬ ಭಾವ, ಮೂತ್ರ ವಿಸರ್ಜನೆಗೆ ತುರ್ತು ಅಥವಾ ಪದೇ ಪದೇ ಹೋಗಬೇಕೆನಿಸುವುದು, ಕಿಬ್ಬೊಟ್ಟೆಯ ಬಳಿ ಕಿರಿಕಿರಿ ಎನ್ನಿಸುವುದು, ಮೂತ್ರದಲ್ಲಿ ರಕ್ತ ಇವು ಮೂತ್ರಕೋಶಕ್ಕೆ ಸೋಂಕಾಗಿರುವ ಲಕ್ಷಣಗಳಾಗಿವೆ.

ಈ ಕುರಿತು ಇತ್ತೀಚೆಗೆ ನಡೆದ ಸಂಶೋಧನೆಯಲ್ಲಿ ಕಂಡು ಬಂದ ಫಲಿತಾಂಶದ ಪ್ರಕಾರ ದಿನಕ್ಕೆ ಕನಿಷ್ಠ 1.5 ಲೀಟರ್ ನೀರು ಕುಡಿಯುವ ಮಹಿಳೆಯರಲ್ಲಿ ಮೂತ್ರಕೋಶದ ಸೋಂಕು ತಗಲುವ ಸಾಧ್ಯತೆಗಳು ಶೇ 48% ಕಡಿಮೆ ನೀರು ಅಥವಾ ದ್ರವಾಹಾರ ಸೇವನೆ ಮೂತ್ರಕೋಶಕ್ಕೆ ತಗಲುವ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡಲು ಮತ್ತು ಆ ಬ್ಯಾಕ್ಟೀರಿಯಾಗಳ ಸಾಮರ್ಥ್ಯ ಕುಂದಿಸಲು ಸಹಾಯ ಮಾಡುತ್ತದೆ ಎಂದು ವೈದ್ಯರು ಸಂಶೋದನೆಯಲ್ಲಿ ತಿಳಿಸಿದ್ದಾರೆ.

Leave a comment

Your email address will not be published. Required fields are marked *

%d bloggers like this: