ಸೂರ್ಯನ ಬಿಸಿಲು ಮೈ ಸೋಕಿದರೆ ಎಷ್ಟು ಲಾಭ ಇದೆ ಗೊತ್ತಾ..!!

ಮನುಜನ ದೇಹದ ಮೇಲೆ ಆಗಾಗ ಸೂರ್ಯನ ಕಿರಣಗಳು ಬೀಳುತ್ತಿರಬೇಕು ಸಂಜೆ ವೇಳೆಯ ಸೂರ್ಯ ರಶ್ಮೀಯಲ್ಲಿ ಡಿ ವಿಟಮಿನ್ ಹೆಚ್ಚಾಗಿರುತ್ತದೆ ಆದ ಕಾರಣದಿಂದ ಸಂಜೆ ವೇಳೆಯಲ್ಲಿ ಅರ್ಥ ಗಂಟೆಯಾದರೂ ಸೂರ್ಯನ ಕಿರಣಗಳು ಮನುಷ್ಯನ ದೇಹದ ಮೇಲೆ ಬೀಳುವಂತೆ ಮಾಡಿಕೊಳ್ಳಬೇಕು ಸೂರ್ಯ ರಶ್ಮಿಯು ಮನುಜನ ದೇಹದ ಮೇಲೆ ಆಗಾಗ ಬೀಳುತ್ತಿದ್ದರೆ ಅದರ ಪ್ರತಿಫಲವಾಗಿ ಮನುಜನಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಜೊತೆಗೆ ಮನುಜನಲ್ಲಿ ಹಸಿವು ಹೆಚ್ಚಾಗುತ್ತದೆ ನಿದ್ರೆಯು ಸಮೃದ್ಧಿಯಾಗಿ ಬರಲು ಹೆಚ್ಚು ಸಹಾಯಕಾರಿ ಆಗುತ್ತದೆ ಅಂಟು ರೋಗಗಳು ಬಾರದಂತೆ ತಡೆಯುವ ಶಕ್ತಿಯೂ ನಮ್ಮ ದೇಹಕ್ಕೆ ಹೆಚ್ಚಾಗುತ್ತದೆ ನಮ್ಮ ದೇಹದ ಮೇಲೆ ಆಗಾಗ ಸೂರ್ಯನ ರಶ್ಮಿಯು ಬಿಳುವುದರಿಂದ ನಮ್ಮ ದೇಹದಲ್ಲಿ ಕೆಲವು ಕ್ರಿಮಿಗಳು ನಾಶವಾಗುತ್ತವೆ.

ಸೂರ್ಯ ರಶ್ಮಿಯು ದೇಹದ ಮೇಲೆ ಬೀಳದೆ ಇದ್ದರೆ ಮನುಜನನ್ನು ಬಗೆ ಬಗೆಯ ರೋಗಗಳು ಆವರಿಸುತ್ತದೆ ಪ್ರಮುಖವಾಗಿ ಚರ್ಮದ ರೋಗವು ಹೆಚ್ಚಾಗಿ ಆವರಿಸುತ್ತದೆ ಸೂರ್ಯ ರಶ್ಮಿಯೂ ಹೆಚ್ಚಾಗಿ ಬೀಳುವುದರಿಂದ ಚರ್ಮವು ಕಪ್ಪಾಗುತ್ತದೆ ಎಂದು ಕೆಲವರು ಭಾವಿಸುತ್ತಾರೆ ಆ ಭಾವನೆ ಅಸತ್ಯವೇನಲ್ಲ ಸೂರ್ಯ ರಶ್ಮಿಯೂ ಬಹಳ ಹೆಚ್ಚಾಗಿ ದೇಹದ ಮೇಲೆ ಬೀಳುವ ಕಾರಣದಿಂದ ದೇಹದ ಬಣ್ಣ ಕಪ್ಪಗಾಗಬಹುದು ಆದರೆ ಸೂರ್ಯ ರಶ್ಮಿಯೇ ಬೀಳದೆ ಇದ್ದಲ್ಲಿ ದೇಹದ ಚರ್ಮವು ಕಡ್ಡಾಯವಾಗಿ ಅನಾರೋಗ್ಯಕ್ಕೆ ಒಳಗಾಗುತ್ತದೆ.

ಸೂರ್ಯ ರಶ್ಮಿಯೂ ದೇಹದ ಮೇಲೆ ಬೀಳದಿದ್ದರೆ ನಿದ್ರಾಹೀನತೆ ಚರ್ಮರೋಗ ಅಜೀರ್ಣ ಮುಂತಾದ ರೋಗಗಳು ಆವರಿಸುತ್ತದೆ ಹಾಗೆಂದು ಸೂರ್ಯ ರಶ್ಮಿಯು ಯಥೇಚ್ಛವಾಗಿ ನಮ್ಮ ದೇಹದ ಮೇಲೆ ಬೀಳುವಂತೆ ನಾವು ಮಾಡಿಕೊಂಡುರೂ ಸಹ ನಮ್ಮ ದೇಹದ ಚರ್ಮವು ಕೆಡುತ್ತದೆ ಆಯಾಸ ಹೆಚ್ಚಾಗುತ್ತದೆ ಆದುದರಿಂದ ಸೂರ್ಯ ರಶ್ಮಿಯು ನಮ್ಮ ದೇಹದ ಮೇಲೆ ಬೀಳದೇ ಇರುವಂತೆ ನಾವು ಪ್ರವರ್ತಿಸಬಾರದು ಹೆಚ್ಚಾಗಿ ಬೀಳುವಂತೆಯೂ ಮಾಡಿಕೊಳ್ಳಬಾರದು ದಿನಕ್ಕೆ ಅರ್ಧ ಗಂಟೆಯಾದರೂ ಸೂರ್ಯನ ಕಿರಣಗಳು ನಮ್ಮ ದೇಹದ ಮೇಲೆ ಬೀಳುವಂತೆ ನಾವು ಜಾಗ್ರತೆ ವಹಿಸಬೇಕು ಆ ಸೂರ್ಯ ಕಿರಣಗಳು ಸಂಜೆ 5 ಗಂಟೆಯ ಸೂರ್ಯ ಕಿರಣಗಳಾಗಿರಬೇಕು ಆಗ ನಮ್ಮಗೆ ವಿಟಮಿನ್ ಡಿ ದೊರೆಯುತ್ತದೆ ನಮ್ಮ ಚರ್ಮದ ಆರೋಗ್ಯವು ಸುರಕ್ಷಿತವಾಗಿರುತ್ತದೆ ನಮಗೆ ನಿದ್ರೆಯು ಸಮೃದ್ಧಿಯಾಗಿ ಬರುತ್ತದೆ ನಮಗೆ ಗಾಳಿ ನೀರು ಆಹಾರ ವ್ಯಾಯಾಮ ಹೇಗೆ ಮುಖ್ಯವೋ ಅದೇ ರೀತಿ ಸೂರ್ಯನ ಕಿರಣಗಳು ದೇಹದ ಮೇಲೆ ಪ್ರತಿನಿತ್ಯ ಅರ್ಧ ಗಂಟೆಯಾದರೂ ಬೀಳುವುದು ನಮ್ಮ ಆರೋಗ್ಯ ದೃಷ್ಟಿಯಿಂದ ಬಹಳ ಮುಖ್ಯ.

Leave a comment

Your email address will not be published. Required fields are marked *

%d bloggers like this: