ನೀವು ಕುಡಿಯುವ ನೀರಿನ್ನಲ್ಲಿ ಒಂದು ಸಣ್ಣ ಏಲಕ್ಕಿ ಮಿಶ್ರಣ ಮಾಡಿದರೆ ಏನಾಗುತ್ತೆ ಗೊತ್ತಾ..!!

ಸಾಮಾನ್ಯವಾಗಿ ಏಲಕ್ಕಿಯನ್ನು ಸಿಹಿ ಪದಾರ್ಥಗಳ ಸ್ವಾದವನ್ನ ಹೆಚ್ಚಿಸಲು ಬಳಸುತ್ತಾರೆ, ಆಹಾರಗಳ ರುಚಿಯನ್ನ ಹೆಚ್ಚಿಸುವ ಏಲಕ್ಕಿಯಲ್ಲಿ ಇದೆ ಅನೇಕ ರೋಗನಿರೋಧಕ ಗುಣಗಳು, ಈ ಏಲಕ್ಕಿಯನ್ನು ನಿಯಮಿತ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಇರುವ ಅನೇಕ ಉಪಯೋಗಗಳನ್ನ ಇಂದು ನಾವು ನಿಮಗೆ ತಿಳಿಸುತ್ತೇವೆ.

ತಾಜಾ ಉಸಿರು : ಬಾಯಿಯ ದುರ್ಗಂಧದ ಕಂಪ್ಲೇಂಟ್ ಏನಾದರೂ ನಿಮ್ಮ ಮೇಲೆ ಇದ್ದರೆ ಅಥವಾ ಬಾಯಿಯ ವಾಸನೆ ಬರುವ ನಿಮ್ಮ ಸ್ನೇಹಿತರಿಗೂ ನೀವು ಈ ಉಪಾಯವನ್ನ ತಿಳಿಸಬದು, ಒಂದು ಏಲಕ್ಕಿಯನ್ನ ಬಾಯಲ್ಲಿ ಇಟ್ಟುಕೊಂಡು ಸ್ವಲ್ಪ ಸಮಯ ಜಗಿದರೆ ಸಾಕು ನಿಮ್ಮ ಉಸಿರಿನಲ್ಲಿ ತಾಜಾತನ ತುಂಬುತ್ತದೆ.

ಲೈಂಗಿಕ ಆಸಕ್ತಿ : ಚೆನ್ನಾಗಿ ಕಾಯಿಸಿದ ಹಾಲಿಗೆ ಒಂದೆರಡು ಏಲಕ್ಕಿ ಹಾಗು ಸ್ವಲ್ಪ ಶುದ್ಧ ಜೇನನ್ನು ಸೇರಿಸಿ ಪ್ರತಿ ದಿನ ರಾತ್ರಿ ಮಲಗುವ ಮುನ್ನ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಲೈಂಗಿಕ ಶಕ್ತಿ ಅಥವಾ ಆಸಕ್ತಿ ಹೆಚ್ಚಾಗಿ ನಿಮ್ಮ ದಾಂಪತ್ಯ ಮಧುರವಾಗುತ್ತದೆ.

ಜೇರ್ಣಕ್ರಿಯೆ : ಕೆಲವು ಪಂಗಡಗಳಲ್ಲಿ ಆಹಾರ ಸೇವನೆಯ ನಂತರ ಏಲಕ್ಕೆಯನ್ನ ತಿನ್ನಲು ಕೊಡುವ ಅವ್ಯಾಸ ಈಗಲೂ ಇದೆ, ಕಾರಣ ನೀವು ತಿಂದ ಆಹಾರ ಸರಿಯಾದ ರೀತಿಯಲ್ಲಿ ಜೀರ್ಣವಾಗಲು ಏಲಕ್ಕಿ ಬಹಳ ಸಹಕಾರಿ.

ಗಂಟಲ ಸಮಸ್ಯೆ : ನಿಮಗೆ ಗಂಟಲ ನೋವಿನ ಸಮಸ್ಯೆ ಕಾಡುತ್ತಿದ್ದರೆ ನಾವು ನಿಮಗೆ ಮೇಲೆ ತಿಳಿಸಿದ ಹಾಗೆ ಕೇವಲ ಒಂದು ಏಲಕ್ಕಿಯನ್ನ ಬಾಯಲ್ಲಿ ಜಗಿದರೆ ಇದರ ರಸ ಗಂಟಲ ನೋವಿಗೆ ಕಾರಣವಾದ ಕೀಟಾಣುಗಳ ನಾಶ ಮಾಡಿ ನಿಮ್ಮ ಗಂಟಲಿಗೆ ತಾಜಾತನ ನೀಡುತ್ತದೆ.

ರಕ್ತ ಶುದ್ದಿ : ಫ್ರೀ ರೆಡಿಕಲ್ ಮತ್ತು ಇತರೆ ವಿಷಯುಕತ ತತ್ವಗಳನ್ನು ದೇಹದಿಂದ ಹೊರ ದೂಡುವ ಶಕ್ತಿ ಏಲಕ್ಕಿಗೆ ಅತಿ ಹೆಚ್ಚಿರುವುದರಿಂದ ನೀವು ಕುದಿಯು ನೀರಿಗೆ ಒಂದು ಏಲಕ್ಕಿಯನ್ನು ಅಥವಾ ಏಲಕ್ಕಿ ಪುಡಿಯನ್ನ ಮಿಶ್ರಣ ಮಾಡಿ ಕುಡಿಯಬೇಕು.

ಏಲಕ್ಕಿಯಾ ಇಷ್ಟೊಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Leave a comment

Your email address will not be published. Required fields are marked *

%d bloggers like this: